IPL 2023: ಡಿ. 16 ರಂದು ಐಪಿಎಲ್​ ಮಿನಿ ಹರಾಜು; ಫ್ರಾಂಚೈಸಿಗಳ ಪರ್ಸ್​ಗೆ ಅಧಿಕವಾಗಿ 5 ಕೋಟಿ ಸೇರ್ಪಡೆ

IPL 2023: ಡಿಸೆಂಬರ್ 16 ರಂದು ಮಿನಿ ಹರಾಜು ನಡೆಯುವ ಸಾಧ್ಯತೆ ಇದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಈ ಹರಾಜಿಗೆ ಎಲ್ಲಾ ತಂಡಗಳ ಪರ್ಸ್ ಗಾತ್ರ ಕೂಡ ಹೆಚ್ಚಾಗಲಿದೆ.

IPL 2023: ಡಿ. 16 ರಂದು ಐಪಿಎಲ್​ ಮಿನಿ ಹರಾಜು; ಫ್ರಾಂಚೈಸಿಗಳ ಪರ್ಸ್​ಗೆ ಅಧಿಕವಾಗಿ 5 ಕೋಟಿ ಸೇರ್ಪಡೆ
ಐಪಿಎಲ್ ಟ್ರೋಫಿ
Follow us
TV9 Web
| Updated By: ಪೃಥ್ವಿಶಂಕರ

Updated on:Sep 24, 2022 | 5:01 PM

ಇಂಡಿಯನ್ ಪ್ರೀಮಿಯರ್ ಲೀಗ್ 2023 (Indian Premier League 2023) ಆರಂಭಕ್ಕೂ ಮೊದಲು ಮಿನಿ ಹರಾಜು (mini auction) ನಡೆಯಲಿದೆ. ಆದರೆ ಈ ಕಿರು ಹರಾಜಿಗೂ ಮುನ್ನ ಎಲ್ಲಾ ತಂಡಗಳು ಟ್ರೇಡ್ ವಿಂಡೋವನ್ನು ತೆರೆದಿವೆ. ಅಂದರೆ ಮಿನಿ ಹರಾಜಿಗೂ ಮುನ್ನ ಎಲ್ಲಾ ತಂಡಗಳು ತಮ್ಮ ತಮ್ಮ ತಂಡಗಳಿಂದ ಬೇಡವಾದ ಆಟಗಾರನನ್ನು ಬಿಡುಗಡೆ ಮಾಡುವುದರ ಜೊತೆಗೆ, ಇತರ ತಂಡಗಳಲ್ಲಿರುವ ಆಟಗಾರರನ್ನು ತಂಡಕ್ಕೆ ಸೇರಿಸಿಕೊಳ್ಳಲು ಈ ಟ್ರೇಡ್ ವಿಂಡೋದಡಿಯಲ್ಲಿ ಅವಕಾಶವಿದೆ. ಮಾಧ್ಯಮ ವರದಿಗಳ ಪ್ರಕಾರ, ಈ ಮಿನಿ ಹರಾಜನ್ನು ಡಿಸೆಂಬರ್ 16 ಕ್ಕೆ ನಡೆಸಲು ತೀರ್ಮಾನಿಸಲಾಗಿದ್ದು, ಇದರ ಜೊತೆಗೆ ಐಪಿಎಲ್‌ನ ಎಲ್ಲಾ 10 ತಂಡಗಳ ಪರ್ಸ್ ಭಾರ ಕೂಡ ಹೆಚ್ಚಾಗಲಿದೆ.

ಡಿಸೆಂಬರ್ 16ಕ್ಕೆ ಮಿನಿ ಹರಾಜು?

ಡಿಸೆಂಬರ್ 16 ರಂದು ಮಿನಿ ಹರಾಜು ನಡೆಯುವ ಸಾಧ್ಯತೆ ಇದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಈ ಹರಾಜಿಗೆ ಎಲ್ಲಾ ತಂಡಗಳ ಪರ್ಸ್ ಗಾತ್ರ ಕೂಡ ಹೆಚ್ಚಾಗಲಿದೆ. ಐಪಿಎಲ್‌ನ ಎಲ್ಲಾ 10 ತಂಡಗಳ ಪರ್ಸ್‌ಗೆ 5 ಕೋಟಿ ಅಧಿಕವಾಗಿ ನೀಡಲು ಐಪಿಎಲ್ ಮಂಡಳಿ ನಿರ್ಧರಿಸಿದೆ. ಪ್ರಸ್ತುತ ಐಪಿಎಲ್ ತಂಡಗಳ ಗರಿಷ್ಠ ಪರ್ಸ್ ರೂ.90 ಕೋಟಿಗಳಾಗಿದ್ದು, ಶೀಘ್ರದಲ್ಲೇ ಈ ಪರ್ಸ್ ರೂ.95 ಕೋಟಿಗೆ ಏರಿಕೆಯಾಗಲಿದೆ. ವಾಸ್ತವವಾಗಿ, ಕಳೆದ ವರ್ಷ ಮೆಗಾ ಹರಾಜಿಗೂ ಮುನ್ನ ಎಲ್ಲಾ ತಂಡಗಳು ವ್ಯಯಿಸಬಹುದಾದ ಹಣದ ಬಗ್ಗೆ ನೀಲ ನಕ್ಷೆ ತಯಾರಿಸಿದ್ದ ಬಿಸಿಸಿಐ, ಎಲ್ಲಾ ತಂಡಗಳು ಗರಿಷ್ಠ ರೂ. 90 ಕೋಟಿ ಖರ್ಚು ಮಾಡಬಹುದು ಎಂಬ ನಿಯಮ ಹೊರಡಿಸಿತ್ತು.

ಐಪಿಎಲ್ 2024 ರ ಪರ್ಸ್ ರೂ. 100 ಕೋಟಿ?

ಐಪಿಎಲ್ 2024ರ ಪರ್ಸ್ ಗಾತ್ರ 95 ಕೋಟಿ ರೂ.ನಿಂದ 100 ಕೋಟಿ ರೂ.ಗೆ ಹೆಚ್ಚಾಗಲಿದೆ ಎಂದು ಮಾಧ್ಯಮ ವರದಿಯಲ್ಲಿ ತಿಳಿದುಬಂದಿದೆ. ಆದಾಗ್ಯೂ, 2024 ರ ಆವೃತ್ತಿಯಲ್ಲಿ ಫ್ರ್ಯಾಂಚೈಸಿಗಳ ಸಂಬಳದ ಪರ್ಸ್ ಹೆಚ್ಚಾಗಲೂಬಹುದು ಅಥವಾ ಕಡಿಮೆಯಾಗಲುಬಹುದು. ಇದು ಟ್ರೇಡ್-ಇನ್  ಮೇಲೆ ಆಧಾರಿತವಾಗಿದೆ. ಆದಾಗ್ಯೂ, ಮಿನಿ ಹರಾಜಿನಲ್ಲಿ ಎಲ್ಲಾ ತಂಡಗಳ ಪರ್ಸ್ ಅನ್ನು ಬಿಸಿಸಿಐ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಅಂದರೆ ಎಜಿಎಂನಲ್ಲಿ ನಿರ್ಧರಿಸಲಾಗುತ್ತದೆ. ಇದಲ್ಲದೆ, ಐಪಿಎಲ್ 2023 ಪಂದ್ಯಗಳು ನಡೆಯುವ ಸ್ಥಳಗಳನ್ನು ಸಹ ಈ ಸಭೆಯಲ್ಲಿ ನಿರ್ಧರಿಸಲಾಗುತ್ತದೆ.

ಗಂಗೂಲಿ ಹೇಳಿದ್ದೇನು?

ಸುದ್ದಿಗೋಷ್ಠಿಯಲ್ಲಿ ಐಪಿಎಲ್ ಕುರಿತು ಮಾತನಾಡಿದ್ದ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಐಪಿಎಲ್‌ನ ಹದಿನಾರನೇ ಆವೃತ್ತಿಯನ್ನು ಸಾಮಾನ್ಯ ಹೋಮ್-ಅವೇ ಸ್ವರೂಪದಲ್ಲಿ ಆಡಲಾಗುವುದು ಎಂಬ ಮಾಹಿತಿ ನೀಡಿದ್ದರು. ಇದರರ್ಥ ಈ ಬಾರಿಯ ಐಪಿಎಲ್​ನ ಪಂದ್ಯಗಳನ್ನು 10 ಸ್ಥಳಗಳಲ್ಲಿ ಆಯೋಜಿಸಲಾಗುತ್ತಿದೆ. ಅಂದರೆ ಈ ಹಿಂದಿನಂತೆ ತಂಡಗಳು ತವರು ಮೈದಾನದಲ್ಲಿ ಹಾಗೂ ಎದುರಾಗಳಿ ತಂಡಗಳ ತವರು ಮೈದಾನದಲ್ಲಿ ಪಂದ್ಯಗಳನ್ನು ಆಡಲಿವೆ. ಅದರಂತೆ ಮುಂದಿನ ಸೀಸನ್​ ಐಪಿಎಲ್​ ಬೆಂಗಳೂರಿನಲ್ಲೂ ನಡೆಯಲಿದ್ದು, ಆರ್​ಸಿಬಿ ಅಭಿಮಾನಿಗಳಿಗೆ ಸ್ಟೇಡಿಯಂನಲ್ಲಿ ಪಂದ್ಯ ವೀಕ್ಷಿಸುವ ಅವಕಾಶ ದೊರೆಯಲಿದೆ.

Published On - 4:57 pm, Sat, 24 September 22

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್