‘ಕನ್ನಡ್ ಅಲ್ಲ ಕನ್ನಡ’…: ಹಿಂದಿವಾಲನಿಗೆ ಕನ್ನಡ ಪಾಠ ಮಾಡಿದ ಕೆಎಲ್ ರಾಹುಲ್; ವಿಡಿಯೋ ವೈರಲ್
KL Rahul: ಐಪಿಎಲ್ ಆರಂಭಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇರುವ ಕಾರಣ ಪಂದ್ಯಾವಳಿಯ ಪ್ರಯೋಜಕತ್ವದ ಜವಬ್ದಾರಿ ಹೊತ್ತಿರುವ ಸ್ಟಾರ್ ಸ್ಫೋಟ್ರ್ಸ್ ಭಿನ್ನ ವಿಭಿನ್ನವಾದ ಪ್ರೋಮೋಗಳ ಮೂಲಕ ಜನರನ್ನು ಆಕರ್ಷಿಲು ಮುಂದಾಗಿದೆ. ಇದೆ ವೇಳೆ ಪ್ರೋಮೋ ಶೂಟ್ನಲ್ಲಿ ಭಾಗಿಯಾಗಿದ್ದ ಕನ್ನಡಿಗ ಕೆಎಲ್ ರಾಹುಲ್ ಶೂಟಿಂಗ್ ಸೆಟ್ನಲ್ಲಿ ಕೋಪಗೊಂಡ ಘಟನೆಯೂ ನಡೆದಿದೆ.
2024 ರ ಐಪಿಎಲ್ಗೆ (IPL 2024) ದಿನಗಣನೆ ಆರಂಭವಾಗಿದೆ. 17ನೇ ಆವೃತ್ತಿಯ ಮಿಲಿಯನ್ ಡಾಲರ್ ಟೂರ್ನಿ ಮುಂದಿನ ತಿಂಗಳು ಅಂದರೆ ಮಾರ್ಚ್ 22 ರಿಂದ ಆರಂಭವಾಗಲಿದೆ. ಇತ್ತೀಚೆಗಷ್ಟೆ ಬಿಸಿಸಿಐ (BCCI) ಮೊದಲ ಚರಣದ ಐಪಿಎಲ್ನ ವೇಳಾಪಟ್ಟಿಯನ್ನು ಸಹ ಬಿಡುಗಡೆ ಮಾಡಿದೆ. ವೇಳಾಪಟ್ಟಿಯ ಪ್ರಕಾರ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (CSK vs RCB) ತಂಡಗಳು ಮುಖಾಮುಖಿಯಾಗುತ್ತಿವೆ. ಈ ಪಂದ್ಯಕ್ಕೆ ಚೆನ್ನೈ ಚೆಪಾಕ್ ಕ್ರೀಡಾಂಗಣ ಆತಿಥ್ಯವಹಿಸುತ್ತಿದೆ. ಲೀಗ್ ಆರಂಭಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇರುವ ಕಾರಣ ಪಂದ್ಯಾವಳಿಯ ಪ್ರಯೋಜಕತ್ವದ ಜವಬ್ದಾರಿ ಹೊತ್ತಿರುವ ಸ್ಟಾರ್ ಸ್ಫೋಟ್ರ್ಸ್ ಭಿನ್ನ ವಿಭಿನ್ನವಾದ ಪ್ರೋಮೋಗಳ ಮೂಲಕ ಜನರನ್ನು ಆಕರ್ಷಿಲು ಮುಂದಾಗಿದೆ. ಇದೆ ವೇಳೆ ಪ್ರೋಮೋ ಶೂಟ್ನಲ್ಲಿ ಭಾಗಿಯಾಗಿದ್ದ ಕನ್ನಡಿಗ ಕೆಎಲ್ ರಾಹುಲ್ (KL Rahul) ಶೂಟಿಂಗ್ ಸೆಟ್ನಲ್ಲಿ ಕೋಪಗೊಂಡ ಘಟನೆಯೂ ನಡೆದಿದೆ.
ರಿಹ್ಯಾಬ್ನಲ್ಲಿರುವ ರಾಹುಲ್
ವಾಸ್ತವವಾಗಿ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ಮೊದಲ ಟೆಸ್ಟ್ ಪಂದ್ಯದ ವೇಳೆ ಇಂಜುರಿಗೊಂಡು ಭಾರತ ತಂಡದಿಂದ ಹೊರಗುಳಿದಿರುವ ಕೆಎಲ್ ರಾಹುಲ್ ಪ್ರಸ್ತುತ ಎನ್ಸಿಎನಲ್ಲಿ ರಿಹ್ಯಾಬ್ನಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಇಂಜುರಿಯಿಂದಾಗಿ ಎರಡನೇ ಟೆಸ್ಟ್ನಿಂದ ಹೊರಬಿದ್ದಿದ್ದ ರಾಹುಲ್, ಮೂರನೇ ಟೆಸ್ಟ್ಗೆ ತಂಡಕ್ಕೆ ಮರಳಲಿದ್ದಾರೆ ಎಂದು ಹೇಳಲಾಗಿತ್ತು. ಅದಾಗ್ಯೂ ರಾಹುಲ್ ಮೂರನೇ ಟೆಸ್ಟ್ ಜೊತೆಗೆ ಇದೀಗ ನಾಲ್ಕನೇ ಟೆಸ್ಟ್ ಪಂದ್ಯದಿಂದಲೂ ಹೊರಗುಳಿದಿದ್ದಾರೆ. ಪ್ರಸ್ತುತ ಸಿಕ್ಕಿರುವ ಮಾಹಿತಿ ಪ್ರಕಾರ ಇಂಜುರಿಯಿಂದ ಚೇತರಿಸಿಕೊಂಡಿರುವ ರಾಹುಲ್, ಅಂತಿಮ ಟೆಸ್ಟ್ ಪಂದ್ಯಕ್ಕೆ ಆಯ್ಕೆಗೆ ಲಭ್ಯರಿರಲಿದ್ದಾರೆ ಎಂದು ಹೇಳಲಾಗುತ್ತಿದೆ.
ಐಪಿಎಲ್ ಪ್ರೋಮೋ ಶೂಟ್
ಈ ನಡುವೆ ಐಪಿಎಲ್ ಪ್ರೋಮೋ ಶೂಟ್ನಲ್ಲಿ ಬಾಗಿಯಾಗಿದ್ದ ಕನ್ನಡಿಗ ಕೆಎಲ್ ರಾಹುಲ್ಗೆ ಹಿಂದಿವಾಲನ ಕನ್ನಡ ಉಚ್ಚರಣೆ ಕೋಪ ತರಿಸಿದೆ. ಹಿಂದಿವಾಲ ಕನ್ನಡ ಉಚ್ಚರಣೆಯಲ್ಲಿ ಮಾಡಿದ ತಪ್ಪುಗಳನ್ನು ತಿದ್ದಿ ತಿದ್ದಿ ಸಾಕಾದ ರಾಹುಲ್ ನಿನಗೆ ಎಷ್ಟು ಸಾರಿ ಹೇಳುವುದು ಅದು ಕನ್ನಡ್ ಅಲ್ಲ ಕನ್ನಡ ಎಂದು ಹಿಂದಿವಾಲನ ಮೇಲೆ ರೇಗಿದ್ದಾರೆ.
Leaked footage from Star Sports IPL shoot – KL Rahul faces a googly pic.twitter.com/Pm18i3YRel
— Kausthub Gudipati (@kaustats) February 23, 2024
ಅದು ಕನ್ನಡ ಬಾಯ್, ಕನ್ನಡ್ ಅಲ್ಲ…
ವಾಸ್ತವವಾಗಿ ಐಪಿಎಲ್ ಪ್ರೋಮೋ ಶೂಟ್ ವೇಳೆ ಅಸಿಸ್ಟೆಂಟ್ ಡೈರೆಕ್ಟರ್ ಕೆಎಲ್ ರಾಹುಲ್ಗೆ ಪ್ರೋಮೋ ಶೂಟ್ನ ಸ್ಕ್ರೀಪ್ಟ್ವೊಂದನ್ನು ನೀಡುತ್ತಾನೆ. ಈ ವೇಳೆ ಸ್ಕ್ರೀಪ್ಟ್ ಓದಲು ಆರಂಭಿಸಿದ ರಾಹುಲ್ ಅಸಿಸ್ಟೆಂಟ್ ಡೈರೆಕ್ಟರ್ಗೆ ಇದನ್ನೆಲ್ಲ ಹೇಗೆ ನೆನಪಿಸಿಕೊಳ್ಳಲಿ ಅಣ್ಣ? ಕಂಠಪಾಠ ಮಾಡಲು ಬಂದರೆ ಸೀರಿಯಸ್ಸಾಗಿ ಮಾಡ್ತಿದ್ದೆ. ಆದರೆ ಇದೆಲ್ಲವನ್ನು ನೆನಪಿನಲ್ಲಿಟ್ಟುಕೊಳ್ಳುವುದು ಹೇಗೆ? ಎಂದು ಆತನನ್ನು ಗದರಿದ್ದಾರೆ. ಇದೇ ವೇಳೆ ಕನ್ನಡದಲ್ಲಿ ಪ್ರೋಮೋ ಶೂಟ್ ಬಗ್ಗೆ ಮಾತನಾಡುವಾಗ ರಾಹುಲ್ ಕನ್ನಡ ಎಂಬ ಪದವನ್ನು ಉಚ್ಚರಣೆ ಮಾಡುತ್ತಾರೆ. ಈ ವೇಳೆ ಅಲ್ಲೇ ಇದ್ದ ಅಸಿಸ್ಟೆಂಟ್ ಡೈರೆಕ್ಟರ್ ಕನ್ನಡ ಎಂಬ ಪದವನ್ನ ಕನ್ನಡ್ ಎಂದು ಉಚ್ಚರಿಸುತ್ತಾರೆ. ಇದನ್ನು ಕೇಳಿದ ರಾಹುಲ್, ಏನಂದೆ? ಅದು ಕನ್ನಡ ಬಾಯ್, ಕನ್ನಡ್ ಅಲ್ಲ… ನಿಮಗೆಲ್ಲ ಎಷ್ಟು ಸಾರಿ ಹೇಳೋದು. ಎಲ್ಲಿ ನೀನು ಮತ್ತೊಮ್ಮೆ ಹೇಳು ಕನ್ನಡ ಎಂದು ರಾಹುಲ್ ಆತನಿಗೆ ಹೇಳಿದ್ದಾರೆ. ಆ ಬಳಿಕ ತನ್ನ ಉಚ್ಚರಣೆಯನ್ನು ಸರಿಪಡಿಸಿಕೊಂಡ ಆತ ‘ಕ್ಷಮಿಸಿ ಸರ್ ಕನ್ನಡ’ ಎಂದು ಸರಿಯಾಗಿ ಉಚ್ಚರಿಸಿದ್ದಾನೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ