IND vs ENG: 2ನೇ ದಿನದಾಟದಂತ್ಯಕ್ಕೆ ಭಾರತ 219/7; ಇಂಗ್ಲೆಂಡ್ ಮೇಲುಗೈ
IND vs ENG: ಭಾರತ ಮತ್ತು ಇಂಗ್ಲೆಂಡ್ ನಡುವಿನ ರಾಂಚಿ ಟೆಸ್ಟ್ ಪಂದ್ಯದ ಎರಡು ದಿನಗಳು ಪೂರ್ಣಗೊಂಡಿದ್ದು, ಪ್ರಸ್ತುತ ಇಂಗ್ಲೆಂಡ್ ತಂಡ ಈ ಪಂದ್ಯದಲ್ಲಿ ಮೇಲುಗೈ ಸಾಧಿಸಿದೆ. ಎರಡನೇ ದಿನದಾಟದ ಅಂತ್ಯಕ್ಕೆ ಟೀಂ ಇಂಡಿಯಾ 7 ವಿಕೆಟ್ ಕಳೆದುಕೊಂಡು 219 ರನ್ ಕಲೆಹಾಕಿದೆ. ಈ ಮೂಲಕ ಇಂಗ್ಲೆಂಡ್ ಸ್ಕೋರ್‌ಗಿಂತ ಇನ್ನೂ 134 ರನ್ ಹಿಂದಿದೆ.
ಭಾರತ ಮತ್ತು ಇಂಗ್ಲೆಂಡ್ (India vs England) ನಡುವಿನ ರಾಂಚಿ ಟೆಸ್ಟ್ ಪಂದ್ಯದ ಎರಡು ದಿನಗಳು ಪೂರ್ಣಗೊಂಡಿದ್ದು, ಪ್ರಸ್ತುತ ಇಂಗ್ಲೆಂಡ್ ತಂಡ ಈ ಪಂದ್ಯದಲ್ಲಿ ಮೇಲುಗೈ ಸಾಧಿಸಿದೆ. ಎರಡನೇ ದಿನದಾಟದ ಅಂತ್ಯಕ್ಕೆ ಟೀಂ ಇಂಡಿಯಾ 7 ವಿಕೆಟ್ ಕಳೆದುಕೊಂಡು 219 ರನ್ ಕಲೆಹಾಕಿದೆ. ಈ ಮೂಲಕ ಇಂಗ್ಲೆಂಡ್ ಸ್ಕೋರ್‌ಗಿಂತ ಇನ್ನೂ 134 ರನ್ ಹಿಂದಿದೆ. ಹಠಾತ್ ವಿಕೆಟ್ ಪತನದಿಂದಾಗಿ ಹಿನ್ನಡೆ ಅನುಭವಿಸಿದ್ದ ಟೀಂ ಇಂಡಿಯಾದ ಇನ್ನಿಂಗ್ಸ್ಗೆ ಧ್ರುವ್ ಜುರೈಲ್ ಮತ್ತು ಕುಲ್ದೀಪ್ ಯಾದವ್ 42 ರನ್‌ಗಳ ಅಜೇಯ ಜೊತೆಯಾಟ ಆಡುವ ಮೂಲಕ ಜೀವ ತುಂಬಿದ್ದಾರೆ. ಟೀಂ ಇಂಡಿಯಾ ಪರ ಯಶಸ್ವಿ ಜೈಸ್ವಾಲ್ (Yashasvi Jaiswal) 73 ರನ್ ಗಳಿಸಿದರೆ, ಇಂಗ್ಲೆಂಡ್ ಪರ ಶೋಯೆಬ್ ಬಶೀರ್ (Shoaib Bashir) 4 ವಿಕೆಟ್ ಪಡೆದರು. ಇದಕ್ಕೂ ಮುನ್ನ ಇಂಗ್ಲೆಂಡ್ನ ಮೊದಲ ಇನಿಂಗ್ಸ್ 353 ರನ್ಗಳಿಗೆ ಅಂತ್ಯಗೊಂಡಿತ್ತು. ತಂಡದ ಪರ ಜೋ ರೂಟ್ 122 ರನ್ ಗಳಿಸಿ ಅಜೇಯರಾಗಿ ಉಳಿದರೆ, ಒಲಿ ರಾಬಿನ್ಸನ್ ಕೂಡ 58 ರನ್ ಕಲೆಹಾಕಿದರು. ಭಾರತದ ಪರ ರವೀಂದ್ರ ಜಡೇಜಾ 4 ವಿಕೆಟ್ ಪಡೆದರು.
ಭಾರತಕ್ಕೆ ಆರಂಭಿಕ ಆಘಾತ
ಮೊದಲ ಇನ್ನಿಂಗ್ಸ್ನಲ್ಲಿ ಇಂಗ್ಲೆಂಡ್ ನೀಡಿದ 353 ರನ್ ಗುರಿ ಬೆನ್ನಟ್ಟಿದ ಟೀಂ ಇಂಡಿಯಾಗೆ ಉತ್ತಮ ಆರಂಭ ಸಿಗಲಿಲ್ಲ. ನಾಯಕ ರೋಹಿತ್ ಶರ್ಮಾ ಕೇವಲ 2 ರನ್ ಗಳಿಸಿ ಔಟಾಗುವ ಮೂಲಕ ತಂಡವನ್ನು ಒತ್ತಡಕ್ಕೆ ಸಿಲುಕಿಸಿದರು. ನಂತರ ಜೊತೆಯಾದ ಯಶಸ್ವಿ ಜೈಸ್ವಾಲ್ ಮತ್ತು ಶುಭ್ಮನ್ ಗಿಲ್ ಎರಡನೇ ವಿಕೆಟ್‌ಗೆ 82 ರನ್‌ಗಳ ಜೊತೆಯಾಟ ನೀಡಿದರು. ಈ ಹಂತದಲ್ಲಿ ಶುಭ್ಮನ್ ಗಿಲ್ 38 ರನ್ಗಳಿಗೆ ವಿಕೆಟ್ ಒಪ್ಪಿಸಿದರೆ, ಸತತ ವೈಫಲ್ಯ ಅನುಭವಿಸಿರುವ ರಜತ್ ಪಾಟಿದರ್ ಕೇವಲ 17 ರನ್ಗಳಿಗೆ ಸುಸ್ತಾದರು. ಆದರೆ ಔಟಾಗುವುದಕ್ಕೂ ಮುನ್ನ ಯಶಸ್ವಿಗೆ ಉತ್ತಮ ಸಾಥ್ ನೀಡಿದ್ದರಿಂದ ಜೈಸ್ವಾಲ್ ಅರ್ಧಶತಕ ಪೂರ್ಣಗೊಳಿಸಿದರು.
Stumps on Day 2 in Ranchi!
A valuable unbeaten partnership between Dhruv Jurel and Kuldeep Yadav helps #TeamIndia move to 219/7 👏
Scorecard ▶️ https://t.co/FUbQ3MhXfH#INDvENG | @IDFCFIRSTBank pic.twitter.com/fhnl0yrMbP
— BCCI (@BCCI) February 24, 2024
73 ರನ್ ಕಲೆಹಾಕಿದ ಜೈಸ್ವಾಲ್
ರಜತ್ ಪಾಟಿದಾರ್ ವಿಕೆಟ್ ಬಳಿಕ ಬಂದ ರವೀಂದ್ರ ಜಡೇಜಾ 12 ರನ್ಗಳಿಗೆ ಪೆವಿಲಿಯನ್ ಸೇರಿಕೊಂಡರೆ, ಸರ್ಫರಾಜ್ ಖಾನ್ ಕೇವಲ 14 ರನ್ಗಳಿಗೆ ಸುಸ್ತಾದರು. ಅದಕ್ಕೂ ಮುನ್ನ 73 ರನ್ ಕಲೆಹಾಕಿ ಮತ್ತೊಂದು ಶತಕ ಸಿಡಿಸುವ ಸುಳಿವು ನೀಡಿದ್ದ ಯಶಸ್ವಿ ಅವರನ್ನು ಔಟ್ ಮಾಡುವ ಮೂಲಕ ಇಂಗ್ಲೆಂಡ್ ದೊಡ್ಡ ವಿಕೆಟ್ ಪಡೆಯಿತು. ಯಶಸ್ಸಿನ ನಂತರ, ಸರ್ಫರಾಜ್ ಖಾನ್ ಮತ್ತು ಆರ್ ಅಶ್ವಿನ್ ಇಬ್ಬರೂ ಬೇಗನೇ ಔಟಾದರು. ಇಬ್ಬರಿಂದಲೂ ದೊಡ್ಡ ಭರವಸೆ ಇತ್ತು. ಆದರೆ ಇಬ್ಬರೂ ನಿರಾಸೆ ಮೂಡಿಸಿದರು. ಆ ಬಳಿಕ ಧ್ರುವ್ ಜುರೆಲ್ ಹಾಗೂ ಕುಲ್ದೀಪ್ ಯಾದವ್ ಟೀಂ ಇಂಡಿಯಾ ಇನ್ನಿಂಗ್ಸ್ ನಿಭಾಯಿಸಿದರು.
ಧ್ರುವ್ ಮತ್ತು ಕುಲ್ದೀಪ್ ಜೊತೆಯಾಟ
ಧ್ರುವ್ ಮತ್ತು ಕುಲ್ದೀಪ್ ಎರಡನೆ ದಿನದಾಟದ ಅಂತ್ಯದವರೆಗೆ ಎಂಟನೇ ವಿಕೆಟ್‌ಗೆ 42 ರನ್‌ಗಳ ಅಜೇಯ ಜೊತೆಯಾಟ ನಡೆಸಿದರು. ಧ್ರುವ್ ಜುರೆಲ್ 58 ಎಸೆತಗಳಲ್ಲಿ 30 ರನ್ ಗಳಿಸಿ ಔಟಾಗದೆ ಉಳಿದರೆ, ಕುಲ್ದೀಪ್ ಯಾದವ್ 72 ಎಸೆತಗಳಲ್ಲಿ 17 ರನ್ ಗಳಿಸಿ ಅಜೇಯರಾಗಿದ್ದಾರೆ. ಇಂಗ್ಲೆಂಡ್ ಪರ 20 ವರ್ಷದ ಶೋಯೆಬ್ ಬಶೀರ್ ಅತಿ ಹೆಚ್ಚು 4 ವಿಕೆಟ್ ಪಡೆದರೆ, ಟಾಮ್ ಹಾರ್ಟ್ಲಿ 1 ವಿಕೆಟ್, ಅನುಭವಿ ಜೇಮ್ಸ್ ಆಂಡರ್ಸನ್ 1 ವಿಕೆಟ್ ಪಡೆದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:11 pm, Sat, 24 February 24