IPL ನ ಅತ್ಯಂತ ಯಶಸ್ವಿ ನಾಯಕ ಯಾರು?
Rohit Sharma vs MS Dhoni: ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 226 ಪಂದ್ಯಗಳಲ್ಲಿ ಮುನ್ನಡೆಸಿರುವ ಧೋನಿ 133 ಗೆಲುವು ತಂದುಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಹಾಗೆಯೇ ಎಂಎಸ್ಡಿ ನಾಯಕತ್ವದಲ್ಲಿ ಸಿಎಸ್ಕೆ ಸೋತಿರುವುದು 91 ಬಾರಿ ಮಾತ್ರ.
IPL 2024: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 17 ಗೂ ಮುನ್ನ ಮುಂಬೈ ಇಂಡಿಯನ್ಸ್ (Mumbai Indians) ತಂಡವು ತನ್ನ ನಾಯಕನನ್ನು ಬದಲಿಸಿದೆ. ರೋಹಿತ್ ಶರ್ಮಾ (Rohit Sharma) ಬದಲಿಗೆ ಹೊಸ ನಾಯಕನಾಗಿ ಹಾರ್ದಿಕ್ ಪಾಂಡ್ಯ ಆಯ್ಕೆಯಾಗಿದ್ದಾರೆ. ಇತ್ತ ಮುಂಬೈ ಇಂಡಿಯನ್ಸ್ ತಂಡವನ್ನು 6 ಬಾರಿ ಚಾಂಪಿಯನ್ ಪಟ್ಟಕ್ಕೇರಿಸಿದ್ದ ರೋಹಿತ್ ಶರ್ಮಾ ಅವರನ್ನು ಐಪಿಎಲ್ನ ಯಶಸ್ವಿ ನಾಯಕ ಎಂದು ವರ್ಣಿಸಲಾಗಿತ್ತು. ಆದರೆ ಫ್ರಾಂಚೈಸಿ ಲೀಗ್ ಇತಿಹಾಸದ ಅತ್ಯಂತ ಯಶಸ್ವಿ ನಾಯಕರುಗಳ ಪಟ್ಟಿಯಲ್ಲಿ ಈಗಲೂ ಮುಂಚೂಣಿಯಲ್ಲಿರುವುದು ಮಹೇಂದ್ರ ಸಿಂಗ್ ಧೋನಿ ಎಂಬುದು ವಿಶೇಷ.
- ರೋಹಿತ್ ಶರ್ಮಾ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್ 6 ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಅದರಲ್ಲಿ 5 ಬಾರಿ ಐಪಿಎಲ್ ಟ್ರೋಫಿ ಗೆದ್ದರೆ ಒಂದು ಬಾರಿ ಚಾಂಪಿಯನ್ಸ್ ಟ್ರೋಫಿ ಗೆದ್ದುಕೊಂಡಿತ್ತು.
- ಇದೇ ವೇಳೆ ಮಹೇಂದ್ರ ಸಿಂಗ್ ಧೋನಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಒಟ್ಟು 7 ಬಾರಿ ಚಾಂಪಿಯನ್ ಪಟ್ಟಕ್ಕೇರಿಸಿದ್ದಾರೆ. ಧೋನಿ ನಾಯಕತ್ವದಲ್ಲಿ ಸಿಎಸ್ಕೆ 5 ಐಪಿಎಲ್ ಟ್ರೋಫಿ ಗೆದ್ದುಕೊಂಡಿದೆ. ಹಾಗೆಯೇ 2 ಬಾರಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದೆ.
ಇದಲ್ಲದೆ ಪಂದ್ಯಗಳನ್ನು ಮುನ್ನಡೆಸಿದ ಲೆಕ್ಕಾಚಾರದಲ್ಲೂ ರೋಹಿತ್ ಶರ್ಮಾಗಿಂತ ಮಹೇಂದ್ರ ಸಿಂಗ್ ಧೋನಿ ಮುಂದಿದ್ದಾರೆ. ಹಿಟ್ಮ್ಯಾನ್ 158 ಪಂದ್ಯಗಳಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸಿದ್ದಾರೆ. ಈ ವೇಳೆ 87 ಮ್ಯಾಚ್ಗಳಲ್ಲಿ ಜಯ ಸಾಧಿಸಿದರೆ, 67 ಪಂದ್ಯಗಳಲ್ಲಿ ಸೋಲನುಭವಿಸಿದೆ.
ಅತ್ತ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 226 ಪಂದ್ಯಗಳಲ್ಲಿ ಮುನ್ನಡೆಸಿರುವ ಧೋನಿ 133 ಗೆಲುವು ತಂದುಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಹಾಗೆಯೇ ಎಂಎಸ್ಡಿ ನಾಯಕತ್ವದಲ್ಲಿ ಸಿಎಸ್ಕೆ ಸೋತಿರುವುದು 91 ಬಾರಿ ಮಾತ್ರ.
- ಇಲ್ಲಿ ಗೆಲುವಿನ ಶೇಕಡಾವಾರು ನೋಡಿದ್ರೆ ಮಹೇಂದ್ರ ಸಿಂಗ್ ಧೋನಿ 59.37% ಹೊಂದಿದ್ದಾರೆ. ಇದೇ ವೇಳೆ ರೋಹಿತ್ ಶರ್ಮಾ 56.32% ಮಾತ್ರ ಯಶಸ್ಸು ಸಾಧಿಸಿದ್ದಾರೆ. ಹೀಗಾಗಿಯೇ ಐಪಿಎಲ್ನ ಅತ್ಯಂತ ಯಶಸ್ವಿ ನಾಯಕರಾಗಿ ಇಂದಿಗೂ ಮಹೇಂದ್ರ ಸಿಂಗ್ ಧೋನಿ ಗುರುತಿಸಿಕೊಂಡಿದ್ದಾರೆ.
ರೋಹಿತ್ ಶರ್ಮಾ ನಾಯಕತ್ವದಲ್ಲಿ ಗೆದ್ದಿರುವ ಟ್ರೋಫಿಗಳು:
- 2013- ಐಪಿಎಲ್ ಟ್ರೋಫಿ
- 2013- ಚಾಂಪಿಯನ್ಸ್ ಟ್ರೋಫಿ
- 2015- ಐಪಿಎಲ್ ಟ್ರೋಫಿ
- 2017- ಐಪಿಎಲ್ ಟ್ರೋಫಿ
- 2019- ಐಪಿಎಲ್ ಟ್ರೋಫಿ
- 2020- ಐಪಿಎಲ್ ಟ್ರೋಫಿ
ಇದನ್ನೂ ಓದಿ: IPL 2024 Auction: ಹರಾಜಿನಲ್ಲಿ ಕಾಣಿಸಿಕೊಳ್ಳಲಿರುವ 333 ಆಟಗಾರರ ಪಟ್ಟಿ ಇಲ್ಲಿದೆ
ಧೋನಿ ನಾಯಕತ್ವದಲ್ಲಿ ಗೆದ್ದಿರುವ ಟ್ರೋಫಿಗಳು:
- 2010-ಐಪಿಎಲ್ ಟ್ರೋಫಿ
- 2010- ಚಾಂಪಿಯನ್ಸ್ ಟ್ರೋಫಿ
- 2011-ಐಪಿಎಲ್ ಟ್ರೋಫಿ
- 2014- ಚಾಂಪಿಯನ್ಸ್ ಟ್ರೋಫಿ
- 2018-ಐಪಿಎಲ್ ಟ್ರೋಫಿ
- 2021-ಐಪಿಎಲ್ ಟ್ರೋಫಿ
- 2023-ಐಪಿಎಲ್ ಟ್ರೋಫಿ
ಐಪಿಎಲ್ನಲ್ಲಿ ಧೋನಿ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 5 ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದರೆ, ಅತ್ತ ಮುಂಬೈ ಇಂಡಿಯನ್ಸ್ ರೋಹಿತ್ ಶರ್ಮಾ ನಾಯಕತ್ವದಲ್ಲಿ 5 ಬಾರಿ ಕಿರೀಟ ಮುಡಿಗೇರಿಸಿಕೊಂಡಿದೆ. ಇದಾಗ್ಯೂ ಚಾಂಪಿಯನ್ಸ್ ಟ್ರೋಫಿಯಲ್ಲಿ ಸಿಎಸ್ಕೆ 2 ಬಾರಿ ವಿನ್ನರ್ ಆಗಿ ಹೊರಹೊಮ್ಮಿದೆ. ಅತ್ತ ಮುಂಬೈ ಇಂಡಿಯನ್ಸ್ ಗೆದ್ದಿರುವುದು ಕೇವಲ 1 ಬಾರಿ ಮಾತ್ರ. ಅಂದರೆ ಇಲ್ಲಿ ಧೋನಿ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಒಟ್ಟು 7 ಪ್ರಶಸ್ತಿ ಪಡೆದಿದ್ದರೆ, ರೋಹಿತ್ ಶರ್ಮಾ ಕ್ಯಾಪ್ಟನ್ಸಿಯಲ್ಲಿ ಮುಂಬೈ ಇಂಡಿಯನ್ಸ್ 6 ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.