IPL 2025: ಜೋಶ್ ಹೇಝಲ್​ವುಡ್ ರಿಟರ್ನ್​… ಆದರೆ

IPL 2025 RCB vs KKR: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್​-18 ಗೆ ಮೇ 17 ರಂದು ಮತ್ತೆ ಚಾಲನೆ ದೊರೆಯಲಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗಲಿದೆ. ಆದರೆ ಈ ಪಂದ್ಯಕ್ಕೆ ಆರ್​ಸಿಬಿ ತಂಡದ ಪ್ರಮುಖ ವೇಗಿ ಅಲಭ್ಯರಾಗುವುದು ಖಚಿತವಾಗಿದೆ.

IPL 2025: ಜೋಶ್ ಹೇಝಲ್​ವುಡ್ ರಿಟರ್ನ್​... ಆದರೆ
Josh Hazelwood

Updated on: May 15, 2025 | 12:59 PM

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ವೇಗಿ ಜೋಶ್ ಹೇಝಲ್​ವುಡ್ (Josh Hazelwood) ಶ್ರೀಘ್ರದಲ್ಲೇ ಭಾರತಕ್ಕೆ ಮರಳಲಿದ್ದಾರೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ. ಮೇ 8 ರಂದು ಐಪಿಎಲ್ ಸ್ಥಗಿತಗೊಂಡಿದ್ದರಿಂದ ಅವರು ತವರಿಗೆ ತೆರಳಿದ್ದರು. ಇದೀಗ ಹೇಝಲ್​ವುಡ್​ ಅವರ ಆಪ್ತ ಮೂಲಗಳು ಅವರು ಐಪಿಎಲ್​ನ ಉಳಿದ ಪಂದ್ಯಗಳಿಗಾಗಿ ಆಗಮಿಸಲಿದ್ದಾರೆ ಎಂದು ದೃಢಪಡಿಸಿದೆ. ಇದಾಗ್ಯೂ ಅವರು ಯಾವಾಗ ಬರಲಿದ್ದಾರೆ ಎಂಬುದರ ಬಗ್ಗೆ ಯಾವುದೇ ಖಚಿತತೆ ಇಲ್ಲ.

ಏಕೆಂದರೆ ಭುಜದ ನೋವಿನ ಕಾರಣ ಈ ಹಿಂದೆ ಜೋಶ್ ಹೇಝಲ್​ವುಡ್ ಐಪಿಎಲ್​ನ ಉಳಿದ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ ಎಂದು ವರದಿಯಾಗಿತ್ತು. ಇದೀಗ ಅವರು ಆರ್​ಸಿಬಿ ತಂಡವನ್ನು ಕೂಡಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ. ಆದರೆ ಅವರ ಫಿಟ್​ನೆಸ್ ಬಗ್ಗೆ ಯಾವುದೇ ಮಾಹಿತಿ ಹೊರಬಿದ್ದಿಲ್ಲ.

ಅಂದರೆ ಜೋಶ್ ಹೇಝಲ್​ವುಡ್ ಸಂಪೂರ್ಣ ಗುಣಮುಖರಾಗಿದ್ದರೆ ಮಾತ್ರ ಐಪಿಎಲ್​ನ ಉಳಿದ ಪಂದ್ಯಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಒಂದು ವೇಳೆ ಭುಜದ ನೋವಿನ ಸಮಸ್ಯೆಯಿದ್ದರೆ, ಅವರು ಪ್ಲೇಆಫ್ ಪಂದ್ಯದ ವೇಳೆ ಕಣಕ್ಕಿಳಿಯಬಹುದು. ಹೀಗಾಗಿ ಹೇಝಲ್​ವುಡ್ ಆಗಮಿಸಿದರೂ ಲೀಗ್ ಹಂತದ ಪಂದ್ಯಗಳಲ್ಲಿ ಕಣಕ್ಕಿಳಿಯಲಿದ್ದಾರೆ ಎಂದು ಹೇಳಲಾಗುವುದಿಲ್ಲ.

ಇನ್ನು ಶನಿವಾರ ನಡೆಯಲಿರುವ ಲೀಗ್​ ಹಂತದ 58ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯದಲ್ಲಿ ಜೋಶ್ ಹೇಝಲ್​ವುಡ್ ಕಣಕ್ಕಿಳಿಯಬೇಕಿದ್ದರೆ ಅವರು ಶುಕ್ರವಾರ ತಂಡವನ್ನು ಕೂಡಿಕೊಳ್ಳಬೇಕು.

ಆದರೆ ಶನಿವಾರದೊಳಗೆ ಹೇಝಲ್​ವುಡ್ ಆಗಮಿಸುವ ಬಗ್ಗೆ ಯಾವುದೇ ಖಚಿತ ಮಾಹಿತಿ ಹೊರಬಿದ್ದಿಲ್ಲ. ಹೀಗಾಗಿ ಕೆಕೆಆರ್ ವಿರುದ್ಧದ ಪಂದ್ಯಕ್ಕೆ ಅವರು ಅಲಭ್ಯರಾಗುವ ಸಾಧ್ಯತೆಯಿದೆ. ಅಲ್ಲದೆ ಪ್ಲೇಆಫ್ ಹಂತದ ಪಂದ್ಯಕ್ಕೂ ಮುನ್ನ ಆರ್​ಸಿಬಿ ತಂಡವನ್ನು ಕೂಡಿಕೊಳ್ಳಬಹುದು.

ಆರ್​ಸಿಬಿ ಮುಂದಿದೆ 3 ಪಂದ್ಯ:

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈವರೆಗೆ 11 ಪಂದ್ಯಗಳನ್ನಾಡಿದೆ. ಈ ವೇಳೆ 3 ಪಂದ್ಯಗಳಲ್ಲಿ ಸೋತರೆ 8 ಮ್ಯಾಚ್​ಗಳಲ್ಲಿ ಜಯ ಸಾಧಿಸಿದೆ. ಈ ಗೆಲುವುಗಳೊಂದಿಗೆ ಆರ್​ಸಿಬಿ ಪಡೆ ಅಂಕ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿದೆ. ಒಂದು ವೇಳೆ ಮುಂದಿನ ಮೂರು ಪಂದ್ಯಗಳಲ್ಲಿ ಒಂದು ಜಯ ಸಾಧಿಸಿದರೆ ಪ್ಲೇಆಫ್ ಹಂತಕ್ಕೇರುವುದು ಖಚಿತ.

ಇನ್ನು ಮೊದಲ ಕ್ವಾಲಿಫೈಯರ್ ಪಂದ್ಯವಾಡಬೇಕಿದ್ದರೆ ಆರ್​ಸಿಬಿ ತಂಡವು ಮುಂದಿನ ಮೂರು ಪಂದ್ಯಗಳಲ್ಲೂ ಜಯ ಸಾಧಿಸಬೇಕು. ಈ ಮೂಲಕ 22 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಬಹುದು. ಅಲ್ಲದೆ ಈ ಅಗ್ರಸ್ಥಾನದೊಂದಿಗೆ ಪ್ಲೇಆಫ್ ಹಂತದಲ್ಲಿ ಮೊದಲ ಕ್ವಾಲಿಫೈಯರ್ ಪಂದ್ಯವಾಡಬಹುದು.

ಇದನ್ನೂ ಓದಿ: IPL 2025: RCB ಪರ ಕಣಕ್ಕಿಳಿಯಲು ಸೌತ್ ಆಫ್ರಿಕಾ ವೇಗಿಗೆ ಗ್ರೀನ್ ಸಿಗ್ನಲ್

ಮೊದಲ ಕ್ವಾಲಿಫೈಯರ್ ಪಂದ್ಯವಾಡಿ ಗೆಲ್ಲುವ ತಂಡವು ನೇರವಾಗಿ ಫೈನಲ್​ಗೆ ಪ್ರವೇಶಿಸುತ್ತದೆ. ಇನ್ನು ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಸೋತರೆ 2ನೇ ಕ್ವಾಲಿಫೈಯರ್ ಪಂದ್ಯವಾಡಲು ಅವಕಾಶ ದೊರೆಯುತ್ತದೆ. ಹೀಗಾಗಿ ಆರ್​ಸಿಬಿ ತಂಡವು ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನ ಅಥವಾ ದ್ವಿತೀಯ ಸ್ಥಾನ ಅಲಂಕರಿಸುವ ಇರಾದೆಯನ್ನು ಹೊಂದಿದೆ. ಈ ಮೂಲಕ ಮೊದಲ ಕ್ವಾಲಿಫೈಯರ್ ಪಂದ್ಯವಾಡಿ ಫೈನಲ್​ಗೇರುವ ವಿಶ್ವಾಸದಲ್ಲಿದೆ.