AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2025: 7 ಆಟಗಾರರಿಗಾಗಿ ಬೇಡಿಕೆಯಿಟ್ಟ ಕಾವ್ಯ ಮಾರನ್

IPL 2025: 2025ರ ಐಪಿಎಲ್​ಗಾಗಿ ಈ ಬಾರಿ ಮೆಗಾ ಹರಾಜು ನಡೆಯಲಿದೆ. ಆದರೆ ಈ ಹರಾಜಿಗೂ ಎಲ್ಲಾ ತಂಡಗಳು ಕೆಲವೇ ಕೆಲವು ಆಟಗಾರರನ್ನು ಉಳಿಸಿಕೊಂಡು ಉಳಿದವರನ್ನು ಬಿಡುಗಡೆ ಮಾಡಬೇಕಿದೆ. ಇದೀಗ ಹೀಗೆ ಉಳಿಸಿಕೊಳ್ಳುವ ಆಟಗಾರರ ಸಂಖ್ಯೆಯನ್ನು ಹೆಚ್ಚಿಸಬೇಕೆಂದು ಎಸ್​ಆರ್​ಹೆಚ್ ಸೇರಿದಂತೆ ಫ್ರಾಂಚೈಸಿಗಳು ಬಿಸಿಸಿಐಗೆ ಮನವಿ ಸಲ್ಲಿಸಿದ್ದಾರೆ.

IPL 2025: 7 ಆಟಗಾರರಿಗಾಗಿ ಬೇಡಿಕೆಯಿಟ್ಟ ಕಾವ್ಯ ಮಾರನ್
SRH - Kavya Maran
ಝಾಹಿರ್ ಯೂಸುಫ್
|

Updated on: Aug 01, 2024 | 11:18 AM

Share

ಇಂಡಿಯನ್ ಪ್ರೀಮಿಯರ್ ಲೀಗ್ (IPL 2925)​ ಮೆಗಾ ಹರಾಜಿಗೂ ಮುನ್ನ ರಿಟೈನ್ ಆಟಗಾರರ ಸಂಖ್ಯೆಯನ್ನು ಹೆಚ್ಚಿಸಬೇಕೆಂದು ಸನ್​ರೈಸರ್ಸ್ ಹೈದರಾಬಾದ್ ತಂಡದ ಮಾಲಕಿ ಕಾವ್ಯ ಮಾರನ್ ಬಿಸಿಸಿಗೆ ಮನವಿ ಸಲ್ಲಿಸಿದ್ದಾರೆ. ಮುಂಬೈನಲ್ಲಿ ನಡೆದ ಬಿಸಿಸಿಐ-ಐಪಿಎಲ್ ಮಾಲೀಕರ ಸಭೆಯಲ್ಲಿ ಎಸ್​ಆರ್​ಹೆಚ್ ಫ್ರಾಂಚೈಸಿಯು ಕೆಲ ಬೇಡಿಕೆಗಳನ್ನು ಮುಂದಿಟ್ಟಿದ್ದು,  ಈ ಬೇಡಿಕೆಯಲ್ಲಿ ಮುಖ್ಯವಾಗಿ ರಿಟೈನ್ ಆಟಗಾರರ ಸಂಖ್ಯೆಯನ್ನು ಹೆಚ್ಚಿಸಬೇಕೆಂದು ತಿಳಿಸಲಾಗಿದೆ. ಅದರಂತೆ ಸನ್​ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಯು ಬಿಸಿಸಿಐಗೆ ಸಲ್ಲಿಸಿದ ಶಿಫಾರಸ್ಸು ಈ ಕೆಳಗಿನಂತಿದೆ…

  • ಕನಿಷ್ಠ 7 ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ನೀಡಬೇಕು.
  • 7 ಆಟಗಾರರಲ್ಲಿ ಯಾರನ್ನು ಬೇಕಿದ್ದರೂ ಆಯ್ಕೆ ಮಾಡಲು ಅವಕಾಶ ಇರಬೇಕು.
  • ಭಾರತೀಯ, ವಿದೇಶಿ, ಅನ್​ಕ್ಯಾಪ್ಡ್ ಆಟಗಾರರನ್ನು ರಿಟೈನ್ ಮಾಡಿಕೊಳ್ಳಲು ಮಿತಿ ಇರಿಸಬೇಡಿ.
  • ರಿಟೈನ್ ಮಾಡಿಕೊಳ್ಳಲು ಮತ್ತು ಆರ್​ಟಿಎಂ ಕಾರ್ಡ್ ಬಳಸಲು ಆಟಗಾರರೊಂದಿಗೆ ಚರ್ಚಿಸಲು ಅವಕಾಶ ನೀಡಬೇಕು.
  • ಪ್ರತಿ 5 ವರ್ಷಗಳಿಗೊಮ್ಮೆ ಮೆಗಾ ಹರಾಜು ನಡೆಸಬೇಕು.

ಸನ್​ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಯು ಈ ಬೇಡಿಕೆಗಳನ್ನು ಮುಂದಿಡಲು ಮುಖ್ಯ ಕಾರಣ ಕಳೆದ ಸೀಸನ್​ನಲ್ಲಿ ಎಸ್​ಆರ್​ಹೆಚ್ ತಂಡವು ಫೈನಲ್​ಗೆ ಪ್ರವೇಶಿಸಿರುವುದು. ಅಂದರೆ ಪ್ರಸ್ತುತ ಸನ್​ರೈಸರ್ಸ್​ ಹೈದರಾಬಾದ್ ತಂಡವು ಉತ್ತಮ ಬಳಗವನ್ನು ಹೊಂದಿದೆ. ಹೀಗಾಗಿ ಕನಿಷ್ಠ 7 ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ನೀಡಬೇಕೆಂದು ಕಾವ್ಯ ಮಾರನ್ ಮನವಿ ಮಾಡಿದ್ದಾರೆ.

ಹೀಗೆ ರಿಟೈನ್ ಮಾಡಿಕೊಳ್ಳಲು ಸಂಖ್ಯೆಯನ್ನು ನಿಗದಿ ಮಾಡುವಂತಿಲ್ಲ ಎಂದು ಕೂಡ ತಿಳಿಸಲಾಗಿದೆ. ಇದಕ್ಕೆ ಕಾರಣ ಈ ಹಿಂದಿನ ಹರಾಜಿನ ರಿಟೈನ್ ಸಂದರ್ಭಗಳಲ್ಲಿ ಮೂವರು ಭಾರತೀಯರು ಹಾಗೂ ಒಬ್ಬ ವಿದೇಶಿ ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ನೀಡಲಾಗುತ್ತಿತ್ತು. ಆದರೆ ಈ ಬಾರಿ ವಿದೇಶಿ, ಭಾರತೀಯ ಹಾಗೂ ಅನ್​ಕ್ಯಾಪ್ಡ್​ ಎಂಬಂತೆ ಆಟಗಾರರ ಪ್ರಯಾಣವನ್ನು ನಿಗದಿ ಮಾಡುವುದನ್ನು ಕೈ ಬಿಡಬೇಕೆಂದು ಎಸ್​ಆರ್​ಹೆಚ್ ಫ್ರಾಂಚೈಸಿ ಆಗ್ರಹಿಸಿದೆ.

ಇನ್ನು ರಿಟೈನ್​ಗೂ ಮುನ್ನ ಆಟಗಾರರೊಂದಿಗೆ ಫ್ರಾಂಚೈಸಿಗಳು ಚರ್ಚಿಸಲು ಮುಕ್ತ ಅವಕಾಶ ನೀಡಬೇಕೆಂದು ಸನ್​ರೈಸರ್ಸ್​ ಹೈದರಾಬಾದ್ ಮಾಲೀಕರು ಒತ್ತಾಯಿಸಿದ್ದಾರೆ. ಇದರಿಂದ ಕೆಲ ಸ್ಟಾರ್ ಆಟಗಾರರು ಹರಾಜಿನಲ್ಲಿ ಕಾಣಿಸಿಕೊಳ್ಳಲು ಬಯಸಿದರೂ ಅವರನ್ನು ಮನವೊಲಿಸಿ ತಂಡದಲ್ಲೇ ಉಳಿಸಿಕೊಳ್ಳಲು ಅವಕಾಶ ಸಿಗುತ್ತದೆ. ಹೀಗಾಗಿಯೇ ಎಸ್​ಆರ್​ಹೆಚ್ ಫ್ರಾಂಚೈಸಿಯು ಈ ವಿಶೇಷ ಬೇಡಿಕೆಯನ್ನು ಬಿಸಿಸಿಐ ಮುಂದಿಟ್ಟಿದೆ.

ಇದೀಗ ಐಪಿಎಲ್ ಮಾಲೀಕರ ಎಲ್ಲಾ ಶಿಫಾರಸ್ಸುಗಳನ್ನು ಪಡೆದುಕೊಂಡಿರುವ ಬಿಸಿಸಿಐ ಮುಂದಿನ ಒಂದು ವಾರದೊಳಗೆ ಐಪಿಎಲ್ ಮೆಗಾ ಹರಾಜಿಗೆ ಅಂತಿಮ ರೂಪುರೇಷೆಯನ್ನು ಸಿದ್ಧಪಡಿಸುವುದಾಗಿ ತಿಳಿಸಿದೆ. ಅದರಂತೆ ಈ ಬಾರಿಯ ಮೆಗಾ ಹರಾಜಿನಲ್ಲಿ ಕೆಲ ನಿಯಮಗಳು ಬದಲಾಗುವುದು ಬಹುತೇಕ ಖಚಿತ ಎನ್ನಬಹುದು.

ಇದನ್ನೂ ಓದಿ: IPL 2025: RCB ತಂಡದಿಂದ ಗ್ಲೆನ್ ಮ್ಯಾಕ್ಸ್​ವೆಲ್ ಔಟ್?

ಸನ್‌ರೈಸರ್ಸ್ ಹೈದರಾಬಾದ್ ತಂಡ: ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ರಾಹುಲ್ ತ್ರಿಪಾಠಿ, ಐಡೆನ್ ಮರ್ಕ್ರಾಮ್, ನಿತೀಶ್ ರೆಡ್ಡಿ, ಹೆನ್ರಿಚ್ ಕ್ಲಾಸೆನ್ (ವಿಕೆಟ್ ಕೀಪರ್), ಅಬ್ದುಲ್ ಸಮದ್, ಪ್ಯಾಟ್ ಕಮಿನ್ಸ್ (ನಾಯಕ), ಭುವನೇಶ್ವರ್ ಕುಮಾರ್, ಟಿ ನಟರಾಜನ್, ಜಯದೇವ್ ಉನಾದ್ಕಟ್, ಶಹಬಾಝ್ ಅಹ್ಮದ್, ಉಮ್ರಾನ್ ಮಲಿಕ್, ಸನ್ವಿರ್ ಸಿಂಗ್, ಗ್ಲೆನ್ ಫಿಲಿಪ್ಸ್, ಮಯಾಂಕ್ ಮಾರ್ಕಂಡೆ, ಮಯಾಂಕ್ ಅಗರ್ವಾಲ್, ವಾಷಿಂಗ್ಟನ್ ಸುಂದರ್, ಅನ್ಮೋಲ್ಪ್ರೀತ್ ಸಿಂಗ್, ಉಪೇಂದ್ರ ಯಾದವ್, ಜಾತವೇಧ್ ಸುಬ್ರಹ್ಮಣ್ಯನ್, ವಿಜಯಕಾಂತ್ ವ್ಯಾಸ್ಕಂತ್, ಫಝಲ್ಹಕ್ ಫಾರೂಕಿ, ಮಾರ್ಕೊ ಯಾನ್ಸೆನ್, ಆಕಾಶ್ ಮಹಾರಾಜ್ ಸಿಂಗ್.

ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ