
ಐಪಿಎಲ್ 2025 (IPL 2025) ರ 52 ನೇ ಪಂದ್ಯ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB vs CSK) ತಂಡಗಳ ನಡುವೆ ಹಣಾಹಣಿ ನಡೆಯಲಿದೆ. ಪ್ಲೇಆಫ್ ರೇಸ್ ಪರಿಗಣಿಸಿ ಈ ಪಂದ್ಯ ಬಹಳ ಮುಖ್ಯವಾಗಲಿದೆ. ಸಿಎಸ್‌ಕೆ ಪ್ಲೇಆಫ್ ರೇಸ್‌ನಿಂದ ಹೊರಬಿದಿದ್ದರೂ, ಆರ್‌ಸಿಬಿ ಪ್ಲೇಆಫ್ ಲೆಕ್ಕಾಚಾರವನ್ನು ಬುಡಮೇಲು ಮಾಡಲು ಪ್ರಯತ್ನಿಸಲಿದೆ. ಅದೇ ಸಮಯದಲ್ಲಿ, ಆರ್‌ಸಿಬಿ ಈ ಪಂದ್ಯವನ್ನು ಗೆಲ್ಲುವ ಮೂಲಕ ಪ್ಲೇಆಫ್‌ನಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳುವ ಗುರಿಯನ್ನು ಹೊಂದಿದೆ. ಹೀಗಾಗಿ ಈ ಪಂದ್ಯದಲ್ಲಿ ಆರ್‌ಸಿಬಿ ಸೋಲಲಿ ಎಂದು 6 ತಂಡಗಳು ಪ್ರಾರ್ಥಿಸಲಾರಂಭಿಸಿವೆ.
ಇಲ್ಲಿಯವರೆಗೆ, ಸಿಎಸ್‌ಕೆ, ರಾಜಸ್ಥಾನ ಮತ್ತು ಹೈದರಾಬಾದ್ ತಂಡಗಳು ಐಪಿಎಲ್ 2025 ರ ಪ್ಲೇಆಫ್ ರೇಸ್‌ನಿಂದ ಹೊರಗುಳಿದಿವೆ. ಆರ್‌ಸಿಬಿ ಹೊರತುಪಡಿಸಿ, ಗುಜರಾತ್ ಟೈಟನ್ಸ್, ಮುಂಬೈ ಇಂಡಿಯನ್ಸ್, ಡೆಲ್ಲಿ ಕ್ಯಾಪಿಟಲ್ಸ್, ಪಂಜಾಬ್ ಕಿಂಗ್ಸ್, ಲಕ್ನೋ ಸೂಪರ್ ಜೈಂಟ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಇನ್ನೂ ಪ್ಲೇಆಫ್ ರೇಸ್‌ನಲ್ಲಿವೆ. ಅಂತಹ ಪರಿಸ್ಥಿತಿಯಲ್ಲಿ, ಆರ್‌ಸಿಬಿ ತಂಡ ಈ ಪಂದ್ಯವನ್ನು ಗೆದ್ದರೆ, ಅದು ಪ್ಲೇಆಫ್‌ಗೆ ಅರ್ಹತೆ ಪಡೆಯುವುದು ಬಹುತೇಕ ಖಚಿತ. ಇದರಿಂದಾಗಿ ಪ್ಲೇಆಫ್‌ಗೆ ಕೇವಲ 3 ಸ್ಥಾನಗಳು ಖಾಲಿ ಉಳಿಯಲಿದ್ದು, ಉಳಿದ ತಂಡಗಳಿಗೆ ಅರ್ಹತೆ ಪಡೆಯುವ ಸಾಧ್ಯತೆಗಳು ಕಡಿಮೆಯಾಗುತ್ತವೆ.
ಮುಂಬೈ ಇಂಡಿಯನ್ಸ್ ತಂಡವು ಆಡಿರುವ 11 ಪಂದ್ಯಗಳಲ್ಲಿ 7 ಗೆಲುವುಗಳೊಂದಿಗೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಅದೇ ಸಮಯದಲ್ಲಿ, ಗುಜರಾತ್ 10 ಪಂದ್ಯಗಳಲ್ಲಿ 7 ಗೆಲುವುಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಮತ್ತೊಂದೆಡೆ, ಆರ್‌ಸಿಬಿ 14 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದರೆ, ಪಂಜಾಬ್ 13 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ಇವುಗಳಲ್ಲದೆ, ಡೆಲ್ಲಿ ಕ್ಯಾಪಿಟಲ್ಸ್ 12 ಅಂಕ, ಲಕ್ನೋ ಸೂಪರ್ ಜೈಂಟ್ಸ್ 10 ಅಂಕ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ 9 ಅಂಕಗಳನ್ನು ಹೊಂದಿವೆ. ಮುಂಬೈ ಹೊರತುಪಡಿಸಿ, ಉಳಿದೆಲ್ಲ ತಂಡಗಳು ತಲಾ 4 ಪಂದ್ಯಗಳನ್ನು ಆಡಬೇಕಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಈ ತಂಡಗಳಲ್ಲಿ ಯಾವುದಾದರೂ ಪ್ಲೇಆಫ್‌ಗೆ ಅರ್ಹತೆ ಪಡೆಯಬಹುದು.
IPL 2025: ಆರ್‌ಸಿಬಿ- ಸಿಎಸ್‌ಕೆ ಲಾಸ್ಟ್ ಫೈಟ್; ಪಂದ್ಯ ಎಲ್ಲಿ ಯಾವಾಗ ಎಷ್ಟು ಗಂಟೆಗೆ ಆರಂಭ?
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಪ್ರಸ್ತುತ ಉತ್ತಮ ಫಾರ್ಮ್‌ನಲ್ಲಿದೆ. ಒಂದೆಡೆ ಆರ್‌ಸಿಬಿ ಕಳೆದ ಮೂರು ಪಂದ್ಯಗಳನ್ನು ಗೆದ್ದಿದ್ದರೆ, ಇನ್ನೊಂದೆಡೆ ಸಿಎಸ್‌ಕೆ ತನ್ನ ಕೊನೆಯ ಮೂರು ಪಂದ್ಯಗಳನ್ನು ಸೋತಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಆರ್‌ಸಿಬಿ ಮೇಲುಗೈ ಸಾಧಿಸುವ ಸಾಧ್ಯತೆಗಳಿವೆ. ಆದ್ದರಿಂದ ಉಳಿದ 6 ತಂಡಗಳಿಗೂ ಇದು ಆತಂಕವನ್ನುಂಟು ಮಾಡಿದೆ.
ಆರ್‌ಸಿಬಿ ಈ ಸೀಸನ್‌ನಲ್ಲಿ ಈಗಾಗಲೇ ಸಿಎಸ್‌ಕೆ ತಂಡವನ್ನು ಸೋಲಿಸಿದೆ. ಈ ಎರಡೂ ತಂಡಗಳ ನಡುವಿನ ಮೊದಲ ಮುಖಾಮುಖಿ ಮಾರ್ಚ್ 28 ರಂದು ಚೆನ್ನೈನಲ್ಲಿ ನಡೆಯಿತು. ಆ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 50 ರನ್‌ಗಳಿಂದ ಜಯಗಳಿಸಿತ್ತು. ಆದಾಗ್ಯೂ ಐಪಿಎಲ್ ಇತಿಹಾಸದಲ್ಲಿ ಆರ್‌ಸಿಬಿಗೆ ಒಂದೇ ಸೀಸನ್‌ನಲ್ಲಿ ಸಿಎಸ್‌ಕೆ ತಂಡವನ್ನು ಎರಡು ಲೀಗ್ ಪಂದ್ಯಗಳಲ್ಲಿ ಸೋಲಿಸಲು ಸಾಧ್ಯವಾಗಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಈ ಪಂದ್ಯವನ್ನು ಗೆಲ್ಲುವುದು ರಜತ್ ಪಡೆಗೆ ದೊಡ್ಡ ಸವಾಲಾಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ