
ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿರುದ್ಧದ ಕ್ವಾಲಿಫೈಯರ್-1 ಪಂದ್ಯದಲ್ಲಿ ಸೋಲಿನ ನಿರಾಶೆಯಿಂದ ಕಂಗೆಟ್ಟಿರುವ ಪಂಜಾಬ್ ಕಿಂಗ್ಸ್ (PBKS) ತಂಡ ಮತ್ತೆ ಗೆಲುವಿನ ಲಯಕ್ಕೆ ಮರಳುವ ಇರಾದೆಯಲ್ಲಿದೆ. ಮತ್ತೊಂದೆಡೆ, ಎಲಿಮಿನೇಟರ್‌ನಲ್ಲಿ ಗುಜರಾತ್ ಟೈಟನ್ಸ್ ತಂಡವನ್ನು ಸೋಲಿಸಿದ ಮುಂಬೈ ಇಂಡಿಯನ್ಸ್ ಕ್ವಾಲಿಫೈಯರ್ 2 ಗೆ ಸಜ್ಜಾಗಿದೆ. ಹೀಗಾಗಿ ಪಂಜಾಬ್ ಮತ್ತು ಮುಂಬೈ ಉಭಯ ತಂಡಗಳು ಫೈನಲ್ ತಲುಪಲು ಒಂದು ಹೆಜ್ಜೆ ದೂರದಲ್ಲಿದ್ದು, ನಾಳಿನ ಪಂದ್ಯವನ್ನು ಗೆಲ್ಲುವ ತಂಡವೂ ಬರುವ ಮಂಗಳವಾರ ಆರ್ಸಿಬಿ ವಿರುದ್ಧ ಪ್ರಶಸ್ತಿಗಾಗಿ ಸೆಣಸಾಡಲಿದೆ.
ಗುಂಪು ಹಂತದಲ್ಲಿ ಅಗ್ರಸ್ಥಾನ ಪಡೆದ ಪಂಜಾಬ್‌ಗೆ ಫೈನಲ್ ತಲುಪಲು ಎರಡನೇ ಅವಕಾಶ ಸಿಕ್ಕಿದೆ. ಇದು ಪಂಜಾಬ್ ಮತ್ತು ಮುಂಬೈ ಎರಡಕ್ಕೂ ಸೆಮಿಫೈನಲ್ ಪಂದ್ಯದಂತೆ. ಗುಜರಾತ್ ಟೈಟನ್ಸ್ ವಿರುದ್ಧದ ಎಲಿಮಿನೇಟರ್ ಪಂದ್ಯದಲ್ಲಿ ಮುಂಬೈ ತಂಡವು ಪ್ರತಿಯೊಂದು ವಿಭಾಗದಲ್ಲೂ ಉತ್ತಮ ಪ್ರದರ್ಶನ ನೀಡಿದ್ದರೂ, ಪ್ರಶಸ್ತಿ ಗೆಲ್ಲಲು ಪಂಜಾಬ್ ತಂಡವನ್ನು ಸೋಲಿಸಲೇಬೇಕು. ಮತ್ತೊಂದೆಡೆ, ಮುಂಬೈ ತಂಡವನ್ನು ಸೋಲಿಸುವುದು ಪಂಜಾಬ್‌ಗೆ ಕಠಿಣ ಸವಾಲಾಗಿದೆ.
ಏಕೆಂದರೆ ಲೀಗ್ ಹಂತದಲ್ಲಿ ಬಲಿಷ್ಠವಾಗಿ ಕಾಣುತ್ತಿದ್ದ ಪಂಜಾಬ್ ಕಿಂಗ್ಸ್ ತಂಡಕ್ಕೆ ಕೆಲವು ಆಟಗಾರರ ಅನುಪಸ್ಥಿತಿ ದೊಡ್ಡ ತಲೆನೋವಾಗಿದೆ. ವಿಶೇಷವಾಗಿ ಬೌಲಿಂಗ್ ವಿಭಾಗದಲ್ಲಿ ಉದ್ಭವಿಸಿರುವ ಸವಾಲುಗಳು ತಂಡವನ್ನು ಸಂಕಷ್ಟಕ್ಕೆ ತಳ್ಳಿದೆ. ಇದು ಮಾತ್ರವಲ್ಲದೆ, ಕಳೆದ ಪಂದ್ಯದಲ್ಲಿ ಪಂಜಾಬ್ ತಂಡದ ಬ್ಯಾಟಿಂಗ್ ಕೂಡ ತುಂಬಾ ಕಳಪೆಯಾಗಿತ್ತು. ಇಡೀ ತಂಡವು ಕೇವಲ 101 ರನ್‌ಗಳಿಗೆ ಆಲೌಟ್ ಆಗಿತ್ತು. ಹೀಗಾಗಿ ಮುಂಬೈ ವಿರುದ್ಧ ಪಂಜಾಬ್ ತನ್ನ ಬ್ಯಾಟಿಂಗ್ ವಿಭಾಗವನ್ನು ಬಲಿಷ್ಠ ಪಡಿಸಬೇಕಾಗಿದೆ. ಮಾರ್ಕೊ ಯಾನ್ಸೆನ್ ಅನುಪಸ್ಥಿತಿ ಮತ್ತು ಐಪಿಎಲ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಯುಜ್ವೇಂದ್ರ ಚಾಹಲ್ ಅವರ ಅಲಭ್ಯತೆಯು ತಂಡಕ್ಕೆ ಕಳವಳಕಾರಿಯಾಗಿದೆ ಏಕೆಂದರೆ ಈ ಆಟಗಾರರ ಬದಲಿಗೆ ಪ್ರಯತ್ನಿಸಿದ ಬದಲಿ ಆಟಗಾರರು ನಿರೀಕ್ಷೆಯಂತೆ ಪ್ರದರ್ಶನ ನೀಡಿಲ್ಲ. ಚಹಾಲ್ ಸಂಪೂರ್ಣವಾಗಿ ಫಿಟ್ ಆಗಿದ್ದರೆ, ಈ ಪಂದ್ಯದಲ್ಲಿ ಆಡುವುದು ಖಚಿತ, ಆದರೆ ಪಂದ್ಯಕ್ಕೂ ಮುನ್ನ ಅವರ ಲಭ್ಯತೆಯ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ.
ಇತ್ತ ಮುಂಬೈ ಇಂಡಿಯನ್ಸ್ ಬಗ್ಗೆ ಹೇಳುವುದಾದರೆ.. ಅನುಭವಿ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಫಾರ್ಮ್‌ಗೆ ಮರಳಿರುವುದು ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಗುಜರಾತ್ ವಿರುದ್ಧ ಸಿಕ್ಕ ಎರಡು ಜೀವದಾನಗಳನ್ನು ಸರಿಯಾಗಿ ಬಳಸಿಕೊಂಡ ರೋಹಿತ್ 82 ರನ್ಗಳ ಇನ್ನಿಂಗ್ಸ್ ಆಡಿದ್ದರು. ರೋಹಿತ್ ಮತ್ತೆ ಫಾರ್ಮ್‌ಗೆ ಮರಳಿದ್ದು, ಪಂಜಾಬ್ ಕಿಂಗ್ಸ್ ಬೌಲರ್‌ಗಳಿಗೆ ಅವರನ್ನು ತಡೆಯುವುದು ಅಷ್ಟು ಸುಲಭವಲ್ಲ. ಒಟ್ಟಾರೆಯಾಗಿ ನೋಡಿದರೆ, ಮುಂಬೈ ಇಂಡಿಯನ್ಸ್ ತಂಡದಲ್ಲಿ ಯಾವುದೇ ನ್ಯೂನತೆಗಳಿಲ್ಲ ಏಕೆಂದರೆ ಪ್ರತಿಯೊಂದು ವಿಭಾಗದಲ್ಲೂ ಮುಂಬೈ ಪಡೆ ಉತ್ತಮ ಪ್ರದರ್ಶನ ನೀಡಿದೆ.
IPL 2025: ಆರ್ಸಿಬಿ ಕಪ್ ಗೆಲ್ಲಬೇಕೆಂದರೆ ಮುಂಬೈ ಫೈನಲ್ಗೇರಲೇಬಾರದು..!
ಪಂಜಾಬ್ ಕಿಂಗ್ಸ್: ಪ್ರಿಯಾಂಶ್ ಆರ್ಯ, ಪ್ರಭ್ಸಿಮ್ರಾನ್ ಸಿಂಗ್, ಜೋಶ್ ಇಂಗ್ಲಿಸ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್ (ನಾಯಕ), ನೆಹಾಲ್ ವಧೇರಾ, ಶಶಾಂಕ್ ಸಿಂಗ್, ಮಾರ್ಕಸ್ ಸ್ಟೊಯಿನಿಸ್, ಅಜ್ಮತುಲ್ಲಾ ಒಮರ್ಜೈ, ಹರ್ಪ್ರೀತ್ ಬ್ರಾರ್, ಕೈಲ್ ಜೇಮಿಸನ್, ಅರ್ಶ್ದೀಪ್ ಸಿಂಗ್.
ಮುಂಬೈ ಇಂಡಿಯನ್ಸ್: ಜಾನಿ ಬೈರ್ಸ್ಟೋವ್ (ವಿಕೆಟ್ ಕೀಪರ್), ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ (ನಾಯಕ), ನಮನ್ ಧೀರ್, ಮಿಚೆಲ್ ಸ್ಯಾಂಟ್ನರ್, ರಾಜ್ ಬಾವಾ, ಟ್ರೆಂಟ್ ಬೌಲ್ಟ್, ಜಸ್ಪ್ರೀತ್ ಬುಮ್ರಾ, ರಿಚರ್ಡ್ ಗ್ಲೀಸನ್.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ