
ಐಪಿಎಲ್ 2025 (IPL 2025) ರಲ್ಲಿ ಇಂದು ಪಂಜಾಬ್ ಕಿಂಗ್ಸ್ ಮತ್ತು ಆರ್‌ಸಿಬಿ (PBKS vs RCB) ನಡುವೆ ಕ್ವಾಲಿಫೈಯರ್ 1 ಪಂದ್ಯ ನಡೆಯಲಿದೆ. ಈ ಮಹತ್ವದ ಪಂದ್ಯಕ್ಕೆ ಎರಡೂ ತಂಡಗಳು ಸಿದ್ಧವಾಗಿವೆ. ಕಳೆದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಸೋಲಿಸುವ ಮೂಲಕ ಆರ್‌ಸಿಬಿ ಅಗ್ರ-2 ರಲ್ಲಿ ತನ್ನ ಸ್ಥಾನವನ್ನು ಖಚಿತಪಡಿಸಿಕೊಂಡಿದೆ. ರಜತ್ ಪಾಟಿದಾರ್ ಗಾಯಗೊಂಡಿದ್ದು, ಇಂಪ್ಯಾಕ್ಟ್ ಪ್ಲೇಯರ್ ಆಗಿ ಆಡುತ್ತಿರುವುದರಿಂದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಜಿತೇಶ್ ಶರ್ಮಾ (Jitesh Sharma) ಕೊನೆಯ 2 ಪಂದ್ಯಗಳಿಗೆ ಆರ್‌ಸಿಬಿ ತಂಡವನ್ನು ಮುನ್ನಡೆಸುತ್ತಿದ್ದಾರೆ. ಈ ಪಂದ್ಯವನ್ನು ಗೆಲ್ಲುವ ಮೂಲಕ, ಎರಡೂ ತಂಡಗಳು ಇಂದು ಫೈನಲ್‌ಗೆ ತಮ್ಮ ಟಿಕೆಟ್ ಅನ್ನು ಖಚಿತಪಡಿಸುವ ಇರಾದೆಯಲ್ಲಿವೆ. ಇದರ ಜೊತೆಗೆ, ಸೋತ ತಂಡವು ಮತ್ತೆ ಕ್ವಾಲಿಫೈಯರ್ 2 ರಲ್ಲಿ ಆಡುವುದನ್ನು ಕಾಣಬಹುದು.
ಆದರೆ ಕ್ವಾಲಿಫೈಯರ್ 1 ರಲ್ಲಿಯೂ ಜಿತೇಶ್ ತಂಡದ ನಾಯಕತ್ವವಹಿಸಿಕೊಳ್ಳುತ್ತಾರಾ? ಅಥವಾ ಖಾಯಂ ನಾಯಕ ರಜತ್ ಪಾಟಿದರ್ ಮತ್ತೆ ನಾಯಕತ್ವದ ಚುಕ್ಕಾಣಿ ಹಿಡಿಯುತ್ತಾರಾ ಎಂಬುದು ಪ್ರಶ್ನೆಯಾಗಿದೆ. ಏಕೆಂದರೆ ಕಳೆದೆರಡು ಪಂದ್ಯಗಳಲ್ಲಿ ಜಿತೇಶ್ ಅವರ ನಾಯಕತ್ವ ಅಷ್ಟು ಪರಿಣಾಮಕಾರಿಯಾಗಿರಲಿಲ್ಲ. ತಂಡದ ಬೌಲರ್ಗಳು ತುಂಬಾ ದುಬಾರಿಯಾಗಿದ್ದರು. ಹೀಗಾಗಿ ಕ್ವಾಲಿಫೈಯರ್ ಪಂದ್ಯಕ್ಕೂ ಮುನ್ನ ಆರ್‌ಸಿಬಿಯ ನಾಯಕ ಮತ್ತೊಮ್ಮೆ ಬದಲಾಗಬಹುದು.
ವಾಸ್ತವವಾಗಿ, ಆರ್‌ಸಿಬಿಯ ನಿಯಮಿತ ನಾಯಕ ರಜತ್ ಪಾಟಿದಾರ್ ಬೆರಳಿನ ಗಾಯಕ್ಕೆ ತುತ್ತಾಗಿದ್ದಾರೆ. ಆದ್ದರಿಂದ ಪಂದ್ಯದ ಸಮಯದಲ್ಲಿ ಅವರು ಇಂಪ್ಯಾಕ್ಟ್ ಪ್ಲೇಯರ್ ಆಗಿ ಆಡುತ್ತಿದ್ದಾರೆ. ಹೀಗಾಗಿ ಅವರು ಕ್ಷೇತ್ರರಕ್ಷಣೆಗೆ ಬರುವುದಿಲ್ಲ. ಇದೇ ತಂಡಕ್ಕೆ ದೊಡ್ಡ ತಲೆನೋವಾಗಿರುವುದು. ಏಕೆಂದರೆ ಜಿತೇಶ್ ಶರ್ಮಾ ಕಳೆದೆರಡು ಪಂದ್ಯಗಳಲ್ಲಿ ಅಂತಹ ಪರಿಣಾಮಕಾರಿ ಕ್ಷೇತ್ರರಕ್ಷಣೆ ನಿಯೋಜಿಸುವಲ್ಲಿ ವಿಫಲರಾಗುತ್ತಿದ್ದಾರೆ. ಇದರಿಂದಲೇ ರನ್ಗಳು ಸರಾಗವಾಗಿ ಹರಿಯುತ್ತಿವೆ. ಆದ್ದರಿಂದ ಈ ಪಂದ್ಯದಲ್ಲಿ ರಜತ್ ಪಾಟಿದಾರ್ ಸಂಪೂರ್ಣವಾಗಿ ಫಿಟ್ ಆಗಿ ಮತ್ತೊಮ್ಮೆ ಆರ್‌ಸಿಬಿಗೆ ನಾಯಕತ್ವ ವಹಿಸಿಕೊಳ್ಳಲಿ ಎಂಬುದು ಅಭಿಮಾನಿಗಳ ಆಶಯ.
PBKS vs RCB, Qualifier 1: ಪಂಜಾಬ್-ಆರ್‌ಸಿಬಿ ಪಂದ್ಯದಲ್ಲಿ ಹವಾಮಾನ ಹೇಗಿರುತ್ತೆ?, ಪಿಚ್ ಯಾರಿಗೆ ಸಹಕಾರಿ?
ಕಳೆದ ಪಂದ್ಯದಲ್ಲಿ, ಜಿತೇಶ್ ಶರ್ಮಾ ಎಲ್‌ಎಸ್‌ಜಿ ವಿರುದ್ಧ ಅದ್ಭುತ ಪ್ರದರ್ಶನ ನೀಡುವ ಮೂಲಕ ಆರ್‌ಸಿಬಿಗೆ ಗೆಲುವು ತಂದುಕೊಟ್ಟರು. ಈ ಪಂದ್ಯದಲ್ಲಿ, ಜಿತೇಶ್ ಕೇವಲ 33 ಎಸೆತಗಳಲ್ಲಿ 85 ರನ್ ಗಳಿಸಿದರು. ಇದು ಅವರ ಐಪಿಎಲ್ ವೃತ್ತಿಜೀವನದ ಮೊದಲ ಅರ್ಧಶತಕ ಮತ್ತು ಅತ್ಯುತ್ತಮ ಇನ್ನಿಂಗ್ಸ್ ಆಗಿತ್ತು. ಅಂತಹ ಪರಿಸ್ಥಿತಿಯಲ್ಲಿ, ಇಂದು ಜಿತೇಶ್‌ಗೆ ಮತ್ತೆ ಅವಕಾಶ ಸಿಕ್ಕರೆ, ಅಭಿಮಾನಿಗಳು ಅವರಿಂದ ಇದೇ ರೀತಿಯ ಸ್ಫೋಟಕ ಇನ್ನಿಂಗ್ಸ್ ನಿರೀಕ್ಷಿಸುತ್ತಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:16 pm, Thu, 29 May 25