IPL 2025: 36 ಎಸೆತಗಳಲ್ಲೇ RCB vs PBKS ಪಂದ್ಯದ ಫಲಿತಾಂಶ ನಿರ್ಧಾರ..!
IPL 2025 PBKS vs RCB: ಇಂಡಿಯನ್ ಪ್ರೀಮಿಯರ್ ಲೀಗ್ನ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಹಾಗೂ ಪಂಜಾಬ್ ಕಿಂಗ್ಸ್ (PBKS) ತಂಡಗಳು ಮುಖಾಮುಖಿಯಾಗಲಿದೆ. ಚಂಡೀಗಢ್ನ ಮುಲ್ಲನ್ಪುರ್ನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಗೆಲ್ಲುವ ತಂಡ ನೇರವಾಗಿ ಫೈನಲ್ಗೆ ಪ್ರವೇಶಿಸಲಿದೆ.

IPL 2025: ಇಂಡಿಯನ್ ಪ್ರೀಮಿಯರ್ ಲೀಗ್ನ ಮೊದಲ ಕ್ವಾಲಿಫೈಯರ್ ಪಂದ್ಯಕ್ಕೆ ವೇದಿಕೆ ಸಿದ್ಧವಾಗಿದೆ. ಅದು ಕೂಡ ದೂರದ ಮುಲ್ಲನ್ಪುರ್ನಲ್ಲಿ. ಇಂದು ನಡೆಯಲಿರುವ ಪ್ಲೇಆಫ್ ಹಂತದ ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ಮುಖಾಮುಖಿಯಾಗಲಿದೆ. ಉಭಯ ತಂಡಗಳು ಸಮಬಲ ಹೊಂದಿರುವ ಕಾರಣ ಯಾರು ಗೆಲ್ಲಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲಿದೆ.
ಇದರ ನಡುವೆ ಪವರ್ಪ್ಲೇನ ಲೆಕ್ಕಾಚಾರ ಕೂಡ ಶುರುವಾಗಿದೆ. ಏಕೆಂದರೆ ಈ ಬಾರಿಯ ಐಪಿಎಲ್ನಲ್ಲಿ ಪವರ್ಪ್ಲೇನಲ್ಲಿ ಹೆಚ್ಚು ರನ್ ಕಲೆಹಾಕಿದ ತಂಡಗಳೇ ಬಹುತೇಕ ಜಯಗಳಿಸಿದೆ. ಇತ್ತ ಪಂಜಾಬ್ ಕಿಂಗ್ಸ್ ಪಡೆ ಪವರ್ಪ್ಲೇನಲ್ಲಿ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸುತ್ತಾ ಬಂದಿದ್ದಾರೆ.
ಆದರೆ ಪವರ್ನಲ್ಲೇ ಅತ್ಯುತ್ತಮ ದಾಳಿ ಸಂಘಟಿಸಿದ ತಂಡವೆಂದರೆ ಅದು ರಾಯಲ್ ಚಾಲೆಂಜರ್ಸ್ ಬೆಂಗಳೂರು. ಹೀಗಾಗಿಯೇ ಈ ಪಂದ್ಯದ ಫಲಿತಾಂಶ ಹೇಗಿರಲಿದೆ ಎಂಬುದು 36 ಎಸೆತಗಳಲ್ಲೇ ನಿರ್ಧಾರವಾಗಲಿದೆ.
ಮೊದಲ 36 ಎಸೆತಗಳು:
ಮೊದಲೇ ಹೇಳಿದಂತೆ ಈ ಬಾರಿಯ ಐಪಿಎಲ್ನಲ್ಲಿ ಪವರ್ಪ್ಲೇನಲ್ಲಿ ಪವರ್ ತೋರಿಸಿದ ತಂಡವೆಂದರೆ ಅದು ಪಂಜಾಬ್ ಕಿಂಗ್ಸ್. ಲೀಗ್ ಹಂತದ ಪಂದ್ಯಗಳಲ್ಲಿ ಪವರ್ಪ್ಲೇನಲ್ಲಿ ಪ್ರತಿ ಓವರ್‌ಗೆ 10.02 ಸರಾಸರಿಯಲ್ಲಿ ರನ್‌ಗಳಿಸಿದ್ದಾರೆ. ವಿಶೇಷ ಎಂದರೆ ಪಂಜಾಬ್ ಕಿಂಗ್ಸ್ ತಂಡವನ್ನು ಹೊರತುಪಡಿಸಿ, ಯಾವುದೇ ತಂಡದ ಪವರ್ಪ್ಲೇನಲ್ಲಿ ಈ ಇಷ್ಟೊಂದು ಸರಾಸರಿ ಹೊಂದಿಲ್ಲ.
ಆದರೆ ಈ ಬಾರಿ ಪಂಜಾಬ್ ಕಿಂಗ್ಸ್ ಪವರ್ ತೋರಿಸಬೇಕಿರುವುದು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಎಂಬುದು ಇಲ್ಲಿ ಉಲ್ಲೇಖಾರ್ಹ. ಏಕೆಂದರೆ ಈ ಬಾರಿಯ ಐಪಿಎಲ್ನಲ್ಲಿ ಪವರ್ಪ್ಲೇನಲ್ಲಿ ಅತೀ ಕಡಿಮೆ ರನ್ ನೀಡಿರುವುದು ಆರ್ಸಿಬಿ ಬೌಲರ್ಗಳು.
14 ಪಂದ್ಯಗಳಲ್ಲಿ ಮೊದಲ 6 ಓವರ್ಗಳಲ್ಲಿ ಆರ್ಸಿಬಿ ಬೌಲರ್ಗಳು ಪ್ರತಿ ಓವರ್‌ಗೆ 8.79 ಎಕಾನಮಿ ದರದಲ್ಲಿ ಮಾತ್ರ ರನ್ ನೀಡಿದ್ದಾರೆ. ಅಲ್ಲದೆ ಪವರ್ಪ್ಲೇನಲ್ಲಿ ಆರ್ಸಿಬಿ ಬೌಲಿಂಗ್ ಶೇ 43.5 ರಷ್ಟು ಡಾಟ್ ಬಾಲ್ಗಳನ್ನು ಮಾಡಿದ್ದಾರೆ.
ಅಂದರೆ ಮೊದಲ ಕ್ವಾಲಿಫೈಯರ್ನಲ್ಲಿ ಪವರ್ಪ್ಲೇನಲ್ಲಿ ಅತೀ ರನ್ ಗಳಿಸಿದ ಪಂಜಾಬ್ ಕಿಂಗ್ಸ್ ಹಾಗೂ ಅತೀ ಕಡಿಮೆ ರನ್ ನೀಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮುಖಾಮುಖಿಯಾಗುತ್ತಿದೆ. ಹೀಗಾಗಿ ಪವರ್ಪ್ಲೇನಲ್ಲಿ ಯಾರು ಮೇಲುಗೈ ಸಾಧಿಸುತ್ತಾರೋ ಅವರೇ ಈ ಪಂದ್ಯದಲ್ಲಿ ಜಯ ಸಾಧಿಸಲಿದ್ದಾರೆ ಎಂಬ ಅಭಿಪ್ರಾಯಗಳು ಕೇಳಿ ಬರುತ್ತಿದೆ.
ಇದನ್ನೂ ಓದಿ: ಕ್ರಿಕೆಟ್ ನಿಯಮವೇ ಗೊತ್ತಿಲ್ದೆ ಕ್ರೀಡಾ ಸ್ಫೂರ್ತಿ ಮೆರೆಯುತ್ತಿರುವ ಕ್ರಿಕೆಟಿಗರು
ಒಟ್ಟಿನಲ್ಲಿ ಐಪಿಎಲ್ ಇತಿಹಾಸದಲ್ಲಿ ಈವರೆಗೆ ಕಪ್ ಗೆಲ್ಲದ ತಂಡಗಳು ಇದೀಗ ಪವರ್ಫುಲ್ ಮುಖಾಮುಖಿಗೆ ಸಜ್ಜಾಗಿ ನಿಂತಿದೆ. ಈ ಪವರ್ಫುಲ್ ಮುಖಾಮುಖಿಯಲ್ಲಿ ಪವರ್ ತೋರಿಸುವವರು ಯಾರು? ಆರ್ಸಿಬಿ ಪವರ್ ತೋರಿಸಿದರೆ, 8 ವರ್ಷಗಳ ಬಳಿಕ ಫೈನಲ್ಗೆ ಪ್ರವೇಶಿಸಲಿದೆ. ಪಂಜಾಬ್ ಕಿಂಗ್ಸ್ ಪವರ್ಫುಲ್ ಆಟವಾಡಿದರೆ, 10 ವರ್ಷಗಳ ಬಳಿಕ ಫೈನಲ್ಗೆ ಎಂಟ್ರಿ ಕೊಡಲಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ರಣರೋಚಕ ಪೈಪೋಟಿಯನ್ನಂತು ನಿರೀಕ್ಷಿಸಬಹುದು.
Published On - 1:54 pm, Thu, 29 May 25
