IPL 2025: ಆರ್‌ಸಿಬಿ ಚಾಂಪಿಯನ್ ಆಗದಿದ್ದರೆ ನಾನು ವಿಚ್ಛೇದನ ಪಡೆಯುತ್ತೇನೆ..! ಇದೆಂಥಾ ಅಭಿಮಾನ..?

RCB Qualifies for IPL 2025 Finals: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಐಪಿಎಲ್ 2025ರ ಕ್ವಾಲಿಫೈಯರ್ 1ರಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಸೋಲಿಸಿ ಫೈನಲ್ ಪ್ರವೇಶಿಸಿದೆ. ಈ ಗೆಲುವಿನ ಸಂಭ್ರಮದ ನಡುವೆ, ಆರ್‌ಸಿಬಿ ಅಭಿಮಾನಿಯೊಬ್ಬರು ತಮ್ಮ ಪತಿಗೆ ಆರ್‌ಸಿಬಿ ಫೈನಲ್ ಗೆಲ್ಲದಿದ್ದರೆ ವಿಚ್ಛೇದನ ನೀಡುವುದಾಗಿ ಹೇಳಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

IPL 2025: ಆರ್‌ಸಿಬಿ ಚಾಂಪಿಯನ್ ಆಗದಿದ್ದರೆ ನಾನು ವಿಚ್ಛೇದನ ಪಡೆಯುತ್ತೇನೆ..! ಇದೆಂಥಾ ಅಭಿಮಾನ..?
Rcb

Updated on: May 30, 2025 | 6:41 PM

2025 ರ ಐಪಿಎಲ್ (IPL 2025) ಕ್ವಾಲಿಫೈಯರ್ 1 ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಏಕಪಕ್ಷೀಯ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ (PBKS) ತಂಡವನ್ನು ಎಂಟು ವಿಕೆಟ್‌ಗಳಿಂದ ಸೋಲಿಸುವ ಮೂಲಕ ಫೈನಲ್ ಪ್ರವೇಶಿಸಿದೆ. ರಜತ್ ಪಾಟಿದಾರ್ ನೇತೃತ್ವದ ತಂಡವು 18 ವರ್ಷಗಳಲ್ಲಿ ನಾಲ್ಕನೇ ಬಾರಿಗೆ ಫೈನಲ್ ತಲುಪಿದೆ. ಇದಕ್ಕೂ ಮೊದಲು, ತಂಡವು 2009, 2011 ಮತ್ತು 2016 ರಲ್ಲಿ ಪ್ರಶಸ್ತಿ ಪಂದ್ಯವನ್ನು ಆಡಿತು. ಈಗ ಆರ್‌ಸಿಬಿ ಪ್ರಶಸ್ತಿ ಗೆಲ್ಲಲು ಕೇವಲ ಒಂದು ಹೆಜ್ಜೆ ದೂರದಲ್ಲಿದೆ. ಆದರೆ ಈ ಫೈನಲ್ ಪಂದ್ಯಕ್ಕೂ ಮುನ್ನ ಆರ್​ಸಿಬಿಯ ಮಹಿಳಾ ಅಭಿಮಾನಿಯೊಬ್ಬರು ತನ್ನ ಪತಿಗೆ ವಿಚ್ಛೇದನ ನೀಡುವುದಾಗಿ ಬರೆದಿರುವ ಪೋಸ್ಟ್ ಹಿಡಿದಿರುವ ಫೋಟೋವೊಂದು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.

ಪತಿಗೆ ವಿಚ್ಛೇದನ ನೀಡುತ್ತೇನೆ

ಐಪಿಎಲ್ 2025 ರ ಕ್ವಾಲಿಫೈಯರ್-1 ಪಂದ್ಯ ಪಂಜಾಬ್​ನ ತವರು ನೆಲವಾದ ಮುಲ್ಲನ್‌ಪುರದಲ್ಲಿ ಆಡಲಾಯಿತು. ಈ ಪಂದ್ಯದಲ್ಲಿ ಆರ್​ಸಿಬಿ ಮಹಿಳಾ ಅಭಿಮಾನಿಯೊಬ್ಬರು, ‘ಆರ್‌ಸಿಬಿ ಫೈನಲ್ ಗೆಲ್ಲದಿದ್ದರೆ, ನಾನು ನನ್ನ ಗಂಡನಿಗೆ ವಿಚ್ಛೇದನ ನೀಡುತ್ತೇನೆ.’ ಎಂದು ಬರೆದಿರುವ ಪ್ಲಕಾರ್ಡ್​ ಹಿಡಿದಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ. ಅಷ್ಟಕ್ಕೂ ಈ ಮಹಿಳೆ ಯಾರು? ಈ ಪೋಸ್ಟರನ್ನ ಸತ್ಯಾಂಶವೇನು ಎಂಬುದನ್ನು ನೋಡುವುದಾದರೆ..

ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ವೈರಲ್ ಫೋಟೋ ಮತ್ತು ಪ್ಲಕಾರ್ಡ್​ ಮೇಲೆ ಬರೆಯಲಾದ ಹೇಳಿಕೆಯ ಹಿಂದಿನ ಸತ್ಯವೇನು? ಆರ್‌ಸಿಬಿ ಫೈನಲ್ ಗೆಲ್ಲದಿದ್ದರೆ ಆ ಮಹಿಳೆ ನಿಜವಾಗಿಯೂ ತನ್ನ ಗಂಡನಿಗೆ ವಿಚ್ಛೇದನ ನೀಡುತ್ತಾರಾ?. ಎಂಬುದರ ಹಿಂದೆ ಬಿದ್ದಾಗ ತಿಳಿದು ಬಂದ ವಿಷಯವೆಂದರೆ, ಈಕೆ ಸೋಶಿಯಲ್ ಮೀಡಿಯಾ ಕಂಟೆಂಟ್ ಕ್ರಿಯೇಟರ್ ಆಗಿದ್ದು, ಆರ್​ಸಿಬಿಯ ಹುಚ್ಚು ಅಭಿಮಾನಿಯಾಗಿದ್ದಾರೆ. ಇವರು ಚಿರೈಯಾ ಎಂಬ ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯನ್ನು ಹೊಂದಿದ್ದಾರೆ. ಈ ಖಾತೆಯಲ್ಲೂ ಅವರು ಇದೇ ಫೋಟೋವನ್ನು ಹಿಡಿದು ನಿಂತಿರುವ ಫೋಟೋವನ್ನು ಪೊಸ್ಟ್ ಮಾಡಿದ್ದಾರೆ.

ಐಪಿಎಲ್‌ನಲ್ಲಿ ಈ ದಾಖಲೆ ಮಾಡಿದ ಏಕೈಕ ತಂಡ ನಮ್ಮ ಆರ್​ಸಿಬಿ

ಆರ್‌ಸಿಬಿಗೆ ನಾಲ್ಕನೇ ಫೈನಲ್

ಕಳೆದ 18 ಸೀಸನ್​ಗಳಿಂದ ಆರ್‌ಸಿಬಿ ಅಭಿಮಾನಿಗಳು ಟ್ರೋಫಿಗಾಗಿ ಕಾಯುತ್ತಿದ್ದಾರೆ. ಹೀಗಾಗಿ ಈ ಬಾರಿ ಆ ಕಾಯುವಿಕೆಗೆ ಅಂತ್ಯ ಸಿಗಲಿದೆ ಎಂಬ ಭರವಸೆ ಎಲ್ಲರಲ್ಲೂ ಮೂಡಿದೆ. ಇದೀಗ ಕಾರಣ ಇಡೀ ಸೀಸನ್‌ನಲ್ಲಿ ಆರ್​ಸಿಬಿ ತಂಡ ನೀಡಿರುವ ಸಾಂಘೀಕ ಪ್ರದರ್ಶನ. ತಂಡದ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗಗಳೂ ಬಲಿಷ್ಠವಾಗಿ ಕಾಣುತ್ತಿವೆ. ಪ್ರತಿ ಪಂದ್ಯದಲ್ಲೂ ಬೇರೆ ಬೇರೆ ಆಟಗಾರರು ಉತ್ತಮ ಪ್ರದರ್ಶನ ನೀಡುತ್ತಿರುವ ಕಾರಣದಿಂದಾಗಿ, ಈ ಬಾರಿ ತಂಡ ಯಾವ ಆಟಗಾರನ ಮೇಲು ಹೆಚ್ಚು ಅವಲಂಬಿತವಾಗಿಲ್ಲ. ಹೀಗಾಗಿ ಈ ಸಲ ಕಪ್ ನಮ್ದೆ ಎಂಬ ಕೂಗಿಗೆ ಮತ್ತಷ್ಟು ಬಲ ಸಿಕ್ಕಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:39 pm, Fri, 30 May 25