AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅನುಷ್ಕಾ ಶರ್ಮಾ ಜೊತೆ ಕಾಣಿಸಿಕೊಳ್ಳುವ ಈ ಮಹಿಳೆ ಯಾರು ಗೊತ್ತೇ?

IPL 2025: ಇಂಡಿಯನ್ ಪ್ರೀಮಿಯರ್ ಲೀಗ್​ನ ಮೊದಲ ಕ್ವಾಲಿಫೈಯರ್​ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ 8 ವಿಕೆಟ್​ಗಳ ಜಯ ಸಾಧಿಸಿ ಆರ್​ಸಿಬಿ ತಂಡ ಫೈನಲ್​ಗೇರಿದೆ. ಅದರಂತೆ ಜೂನ್ 3 ರಂದು ನಡೆಯಲಿರುವ ಫೈನಲ್ ಮ್ಯಾಚ್​ನಲ್ಲಿ ಆರ್​ಸಿಬಿ ತಂಡವು ಮುಂಬೈ ಇಂಡಿಯನ್ಸ್ ಅಥವಾ ಪಂಜಾಬ್ ಕಿಂಗ್ಸ್ ಅಥವಾ ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಲಿದೆ.

ಅನುಷ್ಕಾ ಶರ್ಮಾ ಜೊತೆ ಕಾಣಿಸಿಕೊಳ್ಳುವ ಈ ಮಹಿಳೆ ಯಾರು ಗೊತ್ತೇ?
Anushka Sharma - Malvika Nayak
ಝಾಹಿರ್ ಯೂಸುಫ್
|

Updated on:May 30, 2025 | 1:56 PM

Share

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಪಂದ್ಯಗಳ ವೇಳೆ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ (Anushka Sharma) ಕಾಣಿಸಿಕೊಳ್ಳುವುದು ಮಾಮೂಲು. ಈ ಪರಿಪಾಠವು ಕಳೆದ ಕೆಲ ವರ್ಷಗಳಿಂದ ಮುಂದುವರೆದಿದೆ. ಆದರೆ ಇದರ ನಡುವೆ ಅನುಷ್ಕಾ ಶರ್ಮಾ ಜೊತೆ ಮತ್ತೋರ್ವ ಮಹಿಳೆ ಕೂಡ ಕಾಣಿಸಿಕೊಳ್ಳುತ್ತಿದ್ದಾರೆ. ಮುಲ್ಲನ್​ಪುರ್​ನಲ್ಲಿ ನಡೆದ ಐಪಿಎಲ್​ 2025ರ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್​ ವಿರುದ್ಧ ಆರ್​ಸಿಬಿ ಬೌಲರ್​ಗಳು ಬ್ಯಾಕ್ ಟು ಬ್ಯಾಕ್ ವಿಕೆಟ್ ಕಬಳಿಸುತ್ತಿದ್ದರೆ, ಅತ್ತ ಗ್ಯಾಲರಿಯಲ್ಲಿದ್ದ ಅನುಷ್ಕಾ ಶರ್ಮಾ ತಮ್ಮ ಗೆಳೆತಿಯ ಜೊತೆ ಸಂಭ್ರಮಿಸುತ್ತಿದ್ದರು.

ಈ ಸಂಭ್ರಮದ ಬೆನ್ನಲ್ಲೇ ಅನುಷ್ಕಾ ಶರ್ಮಾ ಜೊತೆ ಕಾಣಿಸಿಕೊಳ್ಳುತ್ತಿರುವ ಮಹಿಳೆ ಯಾರೆಂಬ ಪ್ರಶ್ನೆ ಅನೇಕರಲ್ಲಿ ಹುಟ್ಟಿಕೊಂಡಿದೆ. ಈ ಪ್ರಶ್ನೆಗೆ ಉತ್ತರ ಮಾಳವಿಕಾ ನಾಯಕ್.

ಹೌದು, ಅನುಷ್ಕಾ ಶರ್ಮಾ ಜೊತೆ ಕಾಣಿಸಿಕೊಳ್ಳುವ ಮಹಿಳೆಯ ಹೆಸರು ಮಾಳವಿಕಾ. ಇವರು ನಿಖಿಲ್ ಸೋಸಲೆ ಅವರ ಪತ್ನಿ. ಈಗ ನಿಖಿಲ್ ಸೋಸಲೆ ಯಾರು ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಿರಬಹುದು.

ನಿಖಿಲ್ ಸೋಸಲೆ ಆರ್​ಸಿಬಿ ತಂಡದ ಫ್ರಾಂಚೈಸಿ ಸಂಸ್ಥೆ ಡಯಾಜಿಯೊ ಇಂಡಿಯಾದ ಮಾರ್ಕೆಟಿಂಗ್ ಮತ್ತು  ರೆವೆನ್ಯೂ ವಿಭಾಗದ ಮುಖ್ಯಸ್ಥ. ಹೀಗಾಗಿಯೇ ಮಾಳವಿಕಾ ನಾಯಕ್ ಆರ್​ಸಿಬಿ ತಂಡದ ಪಂದ್ಯಗಳ ವೇಳೆ ವಿಐಪಿ ಸೀಟ್​ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಇನ್ನು ಮಾಳವಿಕಾ ನಾಯಕ್ ಬಗ್ಗೆ ಹೇಳುವುದಾದರೆ, ಅವರು ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್‌ನಿಂದ ಎಂಬಿಎ ಪದವೀಧರೆ. ಪ್ರಸ್ತುತ ಇನ್ನೋಝ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್‌ನಲ್ಲಿ ಬಿಸಿನೆಸ್ ಡೆವೆಲೆಪ್​​ಮೆಂಟ್ ಅ್ಯಂಡ್ ಪಾರ್ಟನರ್​​ಶಿಪ್​ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಇತ್ತ ಕ್ರಿಕೆಟ್ ಮೇಲೂ ಒಲವು ಹೊಂದಿರುವ ಮಾಳವಿಕಾ ಆರ್​ಸಿಬಿ ತಂಡದ ಪ್ರತಿ ಪಂದ್ಯಗಳನ್ನು ವೀಕ್ಷಿಸಲು ಆಗಮಿಸುತ್ತಿದ್ದಾರೆ. ಇದರಿಂದಾಗಿ ಅನುಷ್ಕಾ ಶರ್ಮಾ ಹಾಗೂ ಮಾಳವಿಕಾ ನಡುವೆ ಕೂಡ ಉತ್ತಮ  ಒಡನಾಟ ಬೆಳೆದಿದೆ. ಇದೇ ಕಾರಣದಿಂದಾಗಿ ಎಲ್ಲಾ ಪಂದ್ಯಗಳ ವೇಳೆ ಇಬ್ಬರು ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: IPL 2025: ಫೈನಲ್ ಪಂದ್ಯಕ್ಕೂ ಮುನ್ನ RCB ಅಭಿಮಾನಿಗಳಿಗೆ ಗುಡ್ ನ್ಯೂಸ್

ಸದ್ಯ ಆರ್​ಸಿಬಿ ತಂಡವು ಐಪಿಎಲ್​ನ ಫೈನಲ್​ಗೆ ಪ್ರವೇಶಿಸಿದೆ. ಅದರಂತೆ ಜೂನ್ 3 ರಂದು ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಅಂತಿಮ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಣಕ್ಕಿಳಿಯಲಿದೆ. ಈ ವೇಳೆಯೂ ಅನುಷ್ಕಾ ಶರ್ಮಾ ಜೊತೆ ಮಾಳವಿಕಾ ನಾಯಕ್ ಅವರನ್ನು ಎದುರು ನೋಡಬಹುದು.

Published On - 1:54 pm, Fri, 30 May 25

ಚಿತ್ರದುರ್ಗ ಬಸ್ ದುರಂತದ ಬಳಿಕವೂ ಎಚ್ಚೆತ್ತುಕೊಳ್ಳದ RTO ಅಧಿಕಾರಿಗಳು
ಚಿತ್ರದುರ್ಗ ಬಸ್ ದುರಂತದ ಬಳಿಕವೂ ಎಚ್ಚೆತ್ತುಕೊಳ್ಳದ RTO ಅಧಿಕಾರಿಗಳು
ಹೊಸ ವರ್ಷದ ಕೊಡುಗೆ: ನೀವು ಬೆಳಗ್ಗೆ ಹಲ್ಲು ಉಜ್ಜೋ ಮುಂಚೆಯೇ ಬಾರ್ ಓಪನ್!
ಹೊಸ ವರ್ಷದ ಕೊಡುಗೆ: ನೀವು ಬೆಳಗ್ಗೆ ಹಲ್ಲು ಉಜ್ಜೋ ಮುಂಚೆಯೇ ಬಾರ್ ಓಪನ್!
ಚಿತ್ರರಂಗಕ್ಕೆ ಬಂದಿದ್ದು ಗಲಾಟೆ ಮಾಡೋಕಲ್ಲ, ನಟಿಸೋಕೆ; ಸುದೀಪ್
ಚಿತ್ರರಂಗಕ್ಕೆ ಬಂದಿದ್ದು ಗಲಾಟೆ ಮಾಡೋಕಲ್ಲ, ನಟಿಸೋಕೆ; ಸುದೀಪ್
ತಮಿಳು ನಟ ನವೀನ್ ಚಂದ್ರಗೆ ಅಷ್ಟು ಸ್ಪಷ್ಟ ಕನ್ನಡ ಹೇಗೆ ಬರುತ್ತೆ?
ತಮಿಳು ನಟ ನವೀನ್ ಚಂದ್ರಗೆ ಅಷ್ಟು ಸ್ಪಷ್ಟ ಕನ್ನಡ ಹೇಗೆ ಬರುತ್ತೆ?
ವಿಶ್ವ ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ಏಕೈಕ ಮಹಿಳಾ ಆಟಗಾರ್ತಿ ದೀಪ್ತಿ
ವಿಶ್ವ ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ಏಕೈಕ ಮಹಿಳಾ ಆಟಗಾರ್ತಿ ದೀಪ್ತಿ
ಕರ್ನಾಟಕದಲ್ಲಿ ಸಿಎಂ ಬದಲಾವಣೆ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ
ಕರ್ನಾಟಕದಲ್ಲಿ ಸಿಎಂ ಬದಲಾವಣೆ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ
ನಾನು ಸಿನಿಮಾ ಡೈಲಾಗ್ ಮೂಲಕ ಟಾಂಟ್ ಕೊಡಲ್ಲ ಎಂದ ಸುದೀಪ್
ನಾನು ಸಿನಿಮಾ ಡೈಲಾಗ್ ಮೂಲಕ ಟಾಂಟ್ ಕೊಡಲ್ಲ ಎಂದ ಸುದೀಪ್
ಅವರೇ ಮೇಳದಲ್ಲಿ ಡಿಕೆಶಿಗೆ ಮಹಿಳೆ ಕೇಳಿದ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಜನ
ಅವರೇ ಮೇಳದಲ್ಲಿ ಡಿಕೆಶಿಗೆ ಮಹಿಳೆ ಕೇಳಿದ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಜನ
ಮುಸ್ಲಿಂ ಕುಟುಂಬಗಳಿಗೆ ಬೇರೆ ಜಾಗ ನೀಡುತ್ತೇವೆ
ಮುಸ್ಲಿಂ ಕುಟುಂಬಗಳಿಗೆ ಬೇರೆ ಜಾಗ ನೀಡುತ್ತೇವೆ
‘ಮಾರ್ಕ್’ ಮೊದಲ ದಿನದ ಕಲೆಕ್ಷನ್ 15 ಕೋಟಿ ನಾ? ಸುದೀಪ್ ಕಡೆಯಿಂದ ಸ್ಪಷ್ಟನೆ
‘ಮಾರ್ಕ್’ ಮೊದಲ ದಿನದ ಕಲೆಕ್ಷನ್ 15 ಕೋಟಿ ನಾ? ಸುದೀಪ್ ಕಡೆಯಿಂದ ಸ್ಪಷ್ಟನೆ