IPL 2025: 5+3 ಪ್ಲ್ಯಾನ್: ಹೀಗಿರಲಿದೆ RCB ಬಲಿಷ್ಠ ಪ್ಲೇಯಿಂಗ್ 11

IPL 2025 DC vs RCB: ಇಂಡಿಯನ್ ಪ್ರೀಮಿಯರ್ ಲೀಗ್​ನ 46ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಲಿದೆ. ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಗೆಲ್ಲುವ ಮೂಲಕ ಆರ್​ಸಿಬಿ ತಂಡವು ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಬಹುದು.

IPL 2025: 5+3 ಪ್ಲ್ಯಾನ್: ಹೀಗಿರಲಿದೆ RCB ಬಲಿಷ್ಠ ಪ್ಲೇಯಿಂಗ್ 11
Rcb

Updated on: Apr 26, 2025 | 2:08 PM

IPL 2025: ಐಪಿಎಲ್​ ಸೀಸನ್-18ರ 46ನೇ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಹಾಗೂ ಡೆಲ್ಲಿ ಕ್ಯಾಪಿಟಲ್ಸ್ (DC) ತಂಡಗಳು ಮುಖಾಮುಖಿಯಾಗಲಿದೆ. ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಭಾನುವಾರ ನಡೆಯಲಿರುವ ಈ ಪಂದ್ಯದಲ್ಲಿ ಆರ್​ಸಿಬಿ ಬಲಿಷ್ಠ ಬಳಗವನ್ನು ಕಣಕ್ಕಿಳಿಸಲಿದೆ. ಏಕೆಂದರೆ ಕಳೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸೋಲನುಭವಿಸಿತ್ತು. ಹೀಗಾಗಿ ಈ ಪಂದ್ಯದ ಮೂಲಕ ಸೋಲಿನ ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ ಆರ್​ಸಿಬಿ.

ಇದಕ್ಕಾಗಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಕಣಕ್ಕಿಳಿದ ಬಳಗವನ್ನೇ ಮುಂದುವರೆಸಲಿದೆ. ಏಕೆಂದರೆ ಕಳೆದ ಪಂದ್ಯದಲ್ಲಿ ಆರ್​ಸಿಬಿ ಅತ್ಯುತ್ತಮ ಪ್ರದರ್ಶನ ನೀಡಿದೆ. ಹೀಗಾಗಿ ಈ ಆಡುವ ಬಳಗವನ್ನು ಡಿಸಿ ವಿರುದ್ಧ ಕಣಕ್ಕಿಳಿಸಲಿದೆ.

ದೆಹಲಿ ಪಿಚ್​ಗೆ ಬ್ಯಾಟಿಂಗ್​ಗೆ ಸಹಕಾರಿ. ಹಾಗಾಗಿ ಆರ್​ಸಿಬಿ 5+3 ಸೂತ್ರದೊಂದಿಗೆ ಮುಂದುವರೆಯುವುದು ಖಚಿತ. ಅದರಂತೆ RCB ಪರ ಐವರು ಬ್ಯಾಟರ್​ಗಳು ಹಾಗೂ ಮೂವರು ಆಲ್​ರೌಂಡರ್​ಗಳು ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ
PSL 2025: ಪಾಕಿಸ್ತಾನ್ ಸೂಪರ್ ಲೀಗ್​ನಲ್ಲಿ RCB ಮಾಜಿ ಆಟಗಾರರು
ಪ್ರಿಯಾಂಶ್ ಆರ್ಯನ ಆರ್ಭಟಕ್ಕೆ ವಿಶ್ವ ದಾಖಲೆಯೇ ಉಡೀಸ್
ಕ್ರಿಸ್​ ಗೇಲ್ ದಾಖಲೆ ಜಸ್ಟ್ ಮಿಸ್: ವಿಶ್ವ ದಾಖಲೆ ಬರೆದ ವಿರಾಟ್ ಕೊಹ್ಲಿ
ಉಲ್ಟಾ ಹೊಡೆದ RCB ಕಪ್ ಗೆಲ್ಲಬಾರದು ಎಂದಿದ್ದ ಅಂಬಾಟಿ ರಾಯುಡು

ಇಲ್ಲಿ ಆರ್​ಸಿಬಿ ಪರ ಆರಂಭಿಕರಾಗಿ ಫಿಲ್ ಸಾಲ್ಟ್ ಹಾಗೂ ವಿರಾಟ್ ಕೊಹ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಮೂರನೇ ಕ್ರಮಾಂಕದಲ್ಲಿ ದೇವದತ್ ಪಡಿಕ್ಕಲ್ ಕಣಕ್ಕಿಳಿಯಲಿದ್ದು, ನಾಲ್ಕನೇ ಕ್ರಮಾಂಕದಲ್ಲಿ ರಜತ್ ಪಾಟಿದಾರ್ ಬ್ಯಾಟ್ ಬೀಸಲಿದ್ದಾರೆ.

ಐದನೇ ಕ್ರಮಾಂಕದಲ್ಲಿ ಹೊಡಿಬಡಿ ದಾಂಡಿಗ ರೊಮೊರಿಯೊ ಶೆಫರ್ಡ್​ ಕಾಣಿಸಿಕೊಳ್ಳಲಿದ್ದಾರೆ. ಆರನೇ ಕ್ರಮಾಂಕದಲ್ಲಿ ವಿಕೆಟ್ ಕೀಪರ್ ಬ್ಯಾಟರ್ ಜಿತೇಶ್ ಶರ್ಮಾಗೆ ಕಣಕ್ಕಿಳಿಯಲಿದ್ದಾರೆ. ಏಳು ಮತ್ತು ಎಂಟನೇ ಕ್ರಮಾಂಕಗಳಲ್ಲಿ ಟಿಮ್ ಡೇವಿಡ್ ಹಾಗೂ ಕೃನಾಲ್ ಪಾಂಡ್ಯ ಬ್ಯಾಟ್ ಬೀಸಲಿದ್ದಾರೆ.

ಇನ್ನು ಬೌಲರ್​ಗಳಾಗಿ ಜೋಶ್ ಹ್ಯಾಝಲ್​ವುಡ್, ಯಶ್ ದಯಾಳ್ ಹಾಗೂ ಭುವನೇಶ್ವರ್ ಕುಮಾರ್ ಕಣಕ್ಕಿಳಿಯಲಿದ್ದಾರೆ. ಅದರಂತೆ ಆರ್​ಸಿಬಿ ತಂಡದ ಸಂಭಾವ್ಯ ಪ್ಲೇಯಿಂಗ್ ಇಲೆವೆನ್ ಈ ಕೆಳಗಿನಂತಿರಲಿದೆ…

  • 1. ಫಿಲ್ ಸಾಲ್ಟ್ (ಬ್ಯಾಟರ್)
  • 2. ವಿರಾಟ್ ಕೊಹ್ಲಿ (ಬ್ಯಾಟರ್)
  • 3. ದೇವದತ್ ಪಡಿಕ್ಕಲ್ (ಬ್ಯಾಟರ್)
  • 4. ರಜತ್ ಪಾಟಿದಾರ್ (ನಾಯಕ, ಬ್ಯಾಟರ್)
  • 5. ರೊಮಾರಿಯೊ ಶೆಫರ್ಡ್​ (ಆಲ್​ರೌಂಡರ್)
  • 6. ಜಿತೇಶ್ ಶರ್ಮಾ (ಬ್ಯಾಟರ್)
  • 7. ಟಿಮ್ ಡೇವಿಡ್ (ಆಲ್-ರೌಂಡರ್)
  • 8. ಕೃನಾಲ್ ಪಾಂಡ್ಯ (ಆಲ್-ರೌಂಡರ್)
  • 9. ಭುವನೇಶ್ವರ್ ಕುಮಾರ್ (ಬೌಲರ್)
  • 10. ಜೋಶ್ ಹ್ಯಾಝಲ್‌ವುಡ್ (ಬೌಲರ್)
  • 11. ಯಶ್ ದಯಾಳ್ (ಬೌಲರ್)

ಇದನ್ನೂ ಓದಿ: IPL 2025: ಅಣ್ಣಾ ಬಿಟ್ ಬಿಡಣ್ಣ… RCB ತಂಡದಲ್ಲಿ ಎಲ್ಲವೂ ಸರಿಯಿಲ್ವಾ?

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ: ಫಿಲಿಪ್ ಸಾಲ್ಟ್, ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್ (ನಾಯಕ), ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಜೋಶ್ ಹ್ಯಾಝಲ್‌ವುಡ್, ಯಶ್ ದಯಾಳ್, ಸುಯಶ್ ಶರ್ಮಾ, ಸ್ವಪ್ನಿಲ್ ಸಿಂಗ್, ರಾಸಿಖ್ ದರ್ ಸಲಾಮ್, ಜೇಕಬ್ ಬೆಥೆಲ್, ರೊಮಾರಿಯೊ ಶೆಫರ್ಡ್, ಲುಂಗಿ ಎನ್‌ಗಿಡಿ, ನುವಾನ್ ತುಷಾರ, ಮೋಹಿತ್ ರಾಠಿ, ಸ್ವಸ್ತಿಕ್ ಚಿಕಾರ, ಅಭಿನಂದನ್ ಸಿಂಗ್.

 

 

Published On - 2:04 pm, Sat, 26 April 25