AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾನು 3 ವರ್ಷಗಳಿಂದ..; ಸಾರಾ ಜೊತೆಗಿನ ಬ್ರೇಕ್ ಅಪ್ ವದಂತಿಯ ನಡುವೆ ಮೌನ ಮುರಿದ ಶುಭ್​ಮನ್ ಗಿಲ್

Shubman Gill Breaks Silence on Dating Rumors: ಟೀಂ ಇಂಡಿಯಾದ ಭವಿಷ್ಯದ ನಾಯಕ ಶುಭ್ಮನ್ ಗಿಲ್ ಅವರು ಇತ್ತೀಚೆಗೆ ಹಲವಾರು ನಟಿಯರೊಂದಿಗಿನ ಡೇಟಿಂಗ್ ವದಂತಿಗಳಿಗೆ ತೆರೆ ಎಳೆದಿದ್ದಾರೆ. ಮೂರು ವರ್ಷಗಳಿಗೂ ಹೆಚ್ಚು ಕಾಲ ಒಂಟಿಯಾಗಿರುವುದಾಗಿ ಅವರು ಹೇಳಿದ್ದಾರೆ. ಐಪಿಎಲ್ 2025 ರಲ್ಲಿ ಅವರ ಅದ್ಭುತ ಪ್ರದರ್ಶನ ಮತ್ತು ಗುಜರಾತ್ ಟೈಟಾನ್ಸ್ ತಂಡದ ಯಶಸ್ಸಿನ ನಡುವೆಯೂ ಈ ವದಂತಿಗಳು ಹರಿದಾಡುತ್ತಿದ್ದವು. ಗಿಲ್ ಅವರ ಹೇಳಿಕೆಯಿಂದ ಈ ವದಂತಿಗಳಿಗೆ ತೆರೆ ಬಿದ್ದಿದೆ.

ನಾನು 3 ವರ್ಷಗಳಿಂದ..; ಸಾರಾ ಜೊತೆಗಿನ ಬ್ರೇಕ್ ಅಪ್ ವದಂತಿಯ ನಡುವೆ ಮೌನ ಮುರಿದ ಶುಭ್​ಮನ್ ಗಿಲ್
Shubman Gill
ಪೃಥ್ವಿಶಂಕರ
|

Updated on:Apr 26, 2025 | 5:16 PM

Share

ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ಶುಭ್​ಮನ್ ಗಿಲ್ (Shubman Gill) ಕ್ರಿಕೆಟ್ ಜೊತೆಗೆ ತಮ್ಮ ವೈಯಕ್ತಿಕ ಜೀವನದಿಂದಲೂ ಸುದ್ದಿಯಲ್ಲಿದ್ದಾರೆ. ವಾಸ್ತವವಾಗಿ ಕಳೆದ ಹಲವಾರು ವರ್ಷಗಳಿಂದ ಗಿಲ್ ಅವರ ಹೆಸರು ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ (Sachin Tendulkar) ಅವರ ಪುತ್ರಿ ಸಾರಾ ತೆಂಡೂಲ್ಕರ್ (Sara Tendulkar) ಅವರೊಂದಿಗೆ ತಳುಕು ಹಾಕಿಕೊಂಡಿದೆ. ಆದರೆ ಇಬ್ಬರೂ ಈ ಬಗ್ಗೆ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈಗ ಇಬ್ಬರೂ ಇನ್ಸ್ಟಾಗ್ರಾಮ್​ನಲ್ಲಿ ಒಬ್ಬರನ್ನೊಬ್ಬರು ಅನ್ ಫಾಲೋ ಮಾಡಿದ್ದಾರೆ. ಇದಾದ ನಂತರ ಇಬ್ಬರ ಪ್ರೀತಿ ಬ್ರೇಕ್ ಅಪ್ ಆಗಿರಬಹುದು ಎಂಬ ವದಂತಿಗಳು ಹರಿದಾಡುತ್ತಿವೆ. ಇದೆಲ್ಲದರ ನಡುವೆ, ಶುಭ್​ಮನ್ ಗಿಲ್ ಊಹಾಪೋಹಗಳ ಬಗ್ಗೆ ಮೊದಲ ಬಾರಿಗೆ ಮೌನ ಮುರಿದಿದ್ದಾರೆ.

3 ವರ್ಷಗಳಿಂದ ನಾನು

ಸಾರಾ ತೆಂಡೂಲ್ಕರ್ ಅವರಲ್ಲದೆ, ರಿದ್ಧಿಮಾ ಪಂಡಿತ್, ಅನನ್ಯಾ ಪಾಂಡೆ, ಸೋನಮ್ ಬಾಜ್ವಾ ಮತ್ತು ಅವನೀತ್ ಕೌರ್ ಸೇರಿದಂತೆ ಅನೇಕ ನಟಿಯರೊಂದಿಗೆ ಶುಭಮನ್ ಗಿಲ್ ಅವರ ಹೆಸರು ಆಗಾಗ ಕೇಳಿಬರುತ್ತಿದೆ. ಆದರೆ, ಶುಭ್​ಮನ್ ಗಿಲ್ ಈಗ ಈ ವಿಷಯದ ಬಗ್ಗೆ ಮೌನ ಮುರಿದಿದ್ದು, ‘ನಾನು 3 ವರ್ಷಗಳಿಗೂ ಹೆಚ್ಚು ಸಮಯದಿಂದ ಒಂಟಿಯಾಗಿದ್ದೇನೆ. ಆದಾಗ್ಯೂ ನನ್ನ ಹೆಸರನ್ನು ಬೇರೆ ಬೇರೆ ಹುಡುಗಿಯರೊಂದಿಗೆ ತಳುಕು ಹಾಕುತ್ತಾ ವದಂತಿ ಸೃಷ್ಟಿಸಿರುತ್ತಾರೆ. ಅಷ್ಟಕ್ಕೂ ನನ್ನೊಂದಿಗೆ ಯಾರ ಹೆಸರನ್ನು ತಳುಕು ಹಾಕಿರುತ್ತಾರೋ ಅವರನ್ನು ನಾನು ಎಂದಿಗೂ ನೋಡಿಲ್ಲ ಅಥವಾ ಭೇಟಿಯೂ ಆಗಿಲ್ಲ ಎಂದಿದ್ದಾರೆ.

IPL 2025: ಸಿವಿಎಲ್ ಆಸ್ಪತ್ರೆಗೆ ಭಾರಿ ಮೊತ್ತದ ದೇಣಿಗೆ ನೀಡಿದ ಶುಭ್​ಮನ್ ಗಿಲ್

ಈ ಹೇಳಿಕೆಯೊಂದಿಗೆ ಶುಭ್​ಮನ್ ಗಿಲ್ ಎಲ್ಲಾ ವದಂತಿಗಳಿಗೆ ಅಂತ್ಯ ಹಾಡಿದ್ದು, ಪ್ರಸ್ತುತ ಅವರು ಒಂಟಿಯಾಗಿರುವುದಾಗಿ ಸ್ಪಷ್ಟಪಡಿಸಿದ್ದಾರೆ. ಆದಾಗ್ಯೂ, ಕೆಲವು ಸಮಯದ ಹಿಂದೆ ಶುಭ್​ಮನ್, ಅವನೀತ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿಯೂ ಬಂದಿತ್ತು. ಇದಕ್ಕೆ ಪೂರಕವಾಗಿ ಅವನೀತ್ ಮತ್ತು ಶುಭ್​ಮನ್ ತಮ್ಮ ಸ್ನೇಹಿತರೊಂದಿಗೆ ರಜೆ ದಿನಗಳನ್ನು ಕಳೆದಿದ್ದರು. ಅಲ್ಲದೆ ಅವನೀತ್, ಶುಭಮನ್ ಅವರ ಹುಟ್ಟುಹಬ್ಬಕ್ಕೂ ಶುಭ ಹಾರೈಸಿದ್ದರು. ಇಷ್ಟೇ ಅಲ್ಲ, ಟೀಂ ಇಂಡಿಯಾ ಪಂದ್ಯಗಳನ್ನು ವೀಕ್ಷಿಸಲು ಅವನೀತ್ ಹಲವು ಬಾರಿ ಕ್ರೀಡಾಂಗಣದಲ್ಲೂ ಕಾಣಿಸಿಕೊಂಡಿದ್ದರು.

ಐಪಿಎಲ್ 2025 ರಲ್ಲಿ ಗಿಲ್ ಭರ್ಜರಿ ಪ್ರದರ್ಶನ

ಶುಭ್​ಮನ್ ಗಿಲ್ ಪ್ರಸ್ತುತ ಐಪಿಎಲ್‌ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಅವರ ನಾಯಕತ್ವದಲ್ಲಿ ಗುಜರಾತ್ ತಂಡ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಆಡಿರುವ 8 ಪಂದ್ಯಗಳಲ್ಲಿ 6 ರಲ್ಲಿ ಗೆದ್ದಿದ್ದರೆ, ಕೇವಲ 2 ಪಂದ್ಯಗಳಲ್ಲಿ ಸೋಲನ್ನು ಎದುರಿಸಿದೆ. ಅದೇ ಸಮಯದಲ್ಲಿ, ಗಿಲ್ 43.57 ಸರಾಸರಿಯಲ್ಲಿ 305 ರನ್ ಗಳಿಸಿದ್ದು, ಇದರಲ್ಲಿ 3 ಅರ್ಧಶತಕಗಳು ಸೇರಿವೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:56 pm, Sat, 26 April 25

ರಾಜಶೇಖರ್​​ ಕುಟುಂಬಕ್ಕೆ 25 ಲಕ್ಷ ರೂ ಪರಿಹಾರ: ಸಚಿವ ಜಮೀರ್ ವಿರುದ್ಧ ದೂರು
ರಾಜಶೇಖರ್​​ ಕುಟುಂಬಕ್ಕೆ 25 ಲಕ್ಷ ರೂ ಪರಿಹಾರ: ಸಚಿವ ಜಮೀರ್ ವಿರುದ್ಧ ದೂರು
ಸ್ಪಂದನಾ ಫ್ಯಾಮಿಲಿಗೆ ಗಿಲ್ಲಿ ಇಷ್ಟ ಆಗಿದ್ದೇ ಈ ಕಾರಣಕ್ಕೆ; ವಿವರಿಸಿದ ನಟಿ
ಸ್ಪಂದನಾ ಫ್ಯಾಮಿಲಿಗೆ ಗಿಲ್ಲಿ ಇಷ್ಟ ಆಗಿದ್ದೇ ಈ ಕಾರಣಕ್ಕೆ; ವಿವರಿಸಿದ ನಟಿ
ಪ್ರಸಿದ್ಧ ಆಭರಣ ಮಳಿಗೆಯಲ್ಲಿ 14 ಲಕ್ಷದ ಜ್ಯುವೆಲರಿ ಕದ್ದ ಮಹಿಳೆಯರು
ಪ್ರಸಿದ್ಧ ಆಭರಣ ಮಳಿಗೆಯಲ್ಲಿ 14 ಲಕ್ಷದ ಜ್ಯುವೆಲರಿ ಕದ್ದ ಮಹಿಳೆಯರು
ಗುಡ್ ಲಕ್; ಸಿದ್ದರಾಮಯ್ಯಗೆ ಡಿಸಿಎಂ ಡಿಕೆ ಶಿವಕುಮಾರ್ ಅಭಿನಂದನೆ
ಗುಡ್ ಲಕ್; ಸಿದ್ದರಾಮಯ್ಯಗೆ ಡಿಸಿಎಂ ಡಿಕೆ ಶಿವಕುಮಾರ್ ಅಭಿನಂದನೆ
ಸಾಕ್ಷಿ ನಾಶ ಹಿನ್ನೆಲೆ ರಾಜಶೇಖರ್​ ಶವ ಸುಟ್ಟು ಹಾಕಿದ್ದಾರೆ ಎಂದ ಶ್ರೀರಾಮುಲು
ಸಾಕ್ಷಿ ನಾಶ ಹಿನ್ನೆಲೆ ರಾಜಶೇಖರ್​ ಶವ ಸುಟ್ಟು ಹಾಕಿದ್ದಾರೆ ಎಂದ ಶ್ರೀರಾಮುಲು
ಕೊಡಗು ಜಿಲ್ಲೆಯ ನಂಬರ್ ಒನ್ ಟ್ಯಾಕ್ಸ್ ಪೇಯರ್ ರಶ್ಮಿಕಾ ಮಂದಣ್ಣ
ಕೊಡಗು ಜಿಲ್ಲೆಯ ನಂಬರ್ ಒನ್ ಟ್ಯಾಕ್ಸ್ ಪೇಯರ್ ರಶ್ಮಿಕಾ ಮಂದಣ್ಣ
ರಕ್ಷಿತಾ ಬೆಂಬಲಕ್ಕೆ ಬಂದ ಗಿಲ್ಲಿ, ರಾಶಿಕಾ ಜೊತೆ ಜಗಳ: ವಿಡಿಯೋ
ರಕ್ಷಿತಾ ಬೆಂಬಲಕ್ಕೆ ಬಂದ ಗಿಲ್ಲಿ, ರಾಶಿಕಾ ಜೊತೆ ಜಗಳ: ವಿಡಿಯೋ
ಸಿದ್ದರಾಮಯ್ಯ ಇಲ್ಲ ಅಂದ್ರೆ ಕಾಂಗ್ರೆಸ್ ಪಕ್ಷ ಇಲ್ಲ: ರಾಜಣ್ಣ ಖಡಕ್​​ ಮಾತು
ಸಿದ್ದರಾಮಯ್ಯ ಇಲ್ಲ ಅಂದ್ರೆ ಕಾಂಗ್ರೆಸ್ ಪಕ್ಷ ಇಲ್ಲ: ರಾಜಣ್ಣ ಖಡಕ್​​ ಮಾತು
ರಾಜಶೇಖರ್​ ತಾಯಿಗೆ ಡಿಕೆ ಶಿವಕುಮಾರ್​ ಸಾಂತ್ವನ: ಸರ್ಕಾರದಿಂದ ನೆರವು ಭರವಸೆ
ರಾಜಶೇಖರ್​ ತಾಯಿಗೆ ಡಿಕೆ ಶಿವಕುಮಾರ್​ ಸಾಂತ್ವನ: ಸರ್ಕಾರದಿಂದ ನೆರವು ಭರವಸೆ
ಸನ್​ರೂಫ್ ಬಳಿ ನಿಂತು ಕೈ ಬೀಸುತ್ತಿದ್ದಾಗ ಬ್ರೇಕ್ ಹಾಕಿದ ಕಾರು
ಸನ್​ರೂಫ್ ಬಳಿ ನಿಂತು ಕೈ ಬೀಸುತ್ತಿದ್ದಾಗ ಬ್ರೇಕ್ ಹಾಕಿದ ಕಾರು