
ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆಯಿಂದಾಗಿ 2025 ರ ಐಪಿಎಲ್ (IPL 2025) ಅನ್ನು ಒಂದು ವಾರ ಮುಂದೂಡಲಾಗಿತ್ತು. ಆದರೀಗ ಉಭಯ ದೇಶಗಳ ನಡುವೆ ಕದನ ವಿರಾಮ ಘೋಷಣೆಯಾಗಿರುವುದರಿಂದ ಐಪಿಎಲ್ ದ್ವಿತೀಯಾರ್ಧ ಮುಂದಿನ ವಾರದಿಂದ ಆರಂಭವಾಗುವ ಸಾಧ್ಯತೆಗಳಿದೆ. ಮೇ 10 ರಂದು ಅಮೇರಿಕಾದ ಮಧ್ಯಸ್ಥಿತಿಕೆಯಲ್ಲಿ ಭಾರತ ಹಾಗೂ ಪಾಕಿಸ್ತಾನ ಕದನ ವಿರಾಮ ಘೋಷಿಸಿವೆ. ಆದಾಗ್ಯೂ ಯಾವುದೇ ಸಂದರ್ಭದಲ್ಲೂ ಮತ್ತೆ ಸೇನಾ ಕಾರ್ಯಾಚರಣೆ ಶುರುವಾಗುವ ಆತಂಕವಿರುವ ಕಾರಣ ಈ ಮೊದಲು ನಿಗದಿಪಡಿಸಿದ್ದ ಸ್ಥಳಗಳಲ್ಲಿ ಉಳಿದ 16 ಪಂದ್ಯಗಳನ್ನು ನಡೆಸುವ ಸಾಧ್ಯತೆಗಳು ತೀರ ಕಡಿಮೆ. ಹಾಗಾಗಿ ಬೇರೆಯದ್ದೇ ಯೋಜನೆ ಮಾಡಿಕೊಂಡಿರುವ ಬಿಸಿಸಿಐ (BCCI), ಉಳಿದ ಎಲ್ಲಾ ಪಂದ್ಯಗಳನ್ನು ದಕ್ಷಿಣ ಭಾರತದ ಮೂರು ನಗರಗಳಲ್ಲಿ ನಡೆಸಲು ತೀರ್ಮಾನಿಸಿದೆ ಎಂದು ಇಎಸ್‌ಪಿಎನ್ ವರದಿ ಮಾಡಿದೆ.
ಐಪಿಎಲ್ 2025 ರಲ್ಲಿ ಇಲ್ಲಿಯವರೆಗೆ 57 ಪಂದ್ಯಗಳು ನಡೆದಿವೆ. 58 ನೇ ಪಂದ್ಯವು ಮೇ 8 ರಂದು ಧರ್ಮಶಾಲಾದಲ್ಲಿ ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ನಡೆಯುತ್ತಿತ್ತು. ಆದರೆ ಭಾರತ ಮತ್ತು ಪಾಕಿಸ್ತಾನದ ನಡುವೆ ಶಸ್ತ್ರಾಸ್ತ್ರ ದಾಳಿ ಆರಂಭವಾದ ಕಾರಣ ಪಂದ್ಯವನ್ನು ಅರ್ಧಕ್ಕೆ ನಿಲ್ಲಿಸಲಾಯಿತು. ಆ ಬಳಿಕ ಸಭೆ ನಡೆಸಿದ್ದ ಬಿಸಿಸಿಐ ಪಂದ್ಯಾವಳಿಯನ್ನು ಒಂದು ವಾರ ಮುಂದೂಡಲು ನಿರ್ಧರಿಸಿತ್ತು.
🚨 IPL 2025 RESUMPTION. 🚨
– The BCCI has shortlisted Bengaluru, Chennai and Hyderabad as the 3 venues to host the remaining 16 matches of IPL 2025. (Espncricinfo). pic.twitter.com/NtVyUIlXXn
— Mufaddal Vohra (@mufaddal_vohra) May 10, 2025
ಟೂರ್ನಿಯಲ್ಲಿ ಇನ್ನೂ 12 ಲೀಗ್ ಪಂದ್ಯಗಳು ಬಾಕಿ ಉಳಿದಿದ್ದು, ನಂತರ ನಾಲ್ಕು ಪ್ಲೇಆಫ್ ಪಂದ್ಯಗಳು ನಡೆಯಲಿವೆ. ಆರಂಭದಲ್ಲಿ ಮೊದಲ ಕ್ವಾಲಿಫೈಯರ್ ಮತ್ತು ಎಲಿಮಿನೇಟರ್ ಪಂದ್ಯಗಳನ್ನು ಹೈದರಾಬಾದ್‌ನಲ್ಲಿ ನಡೆಸಲು ನಿರ್ಧರಿಸಲಾಗಿತ್ತು. ಹಾಗೆಯೇ ಎರಡನೇ ಕ್ವಾಲಿಫೈಯರ್ ಮತ್ತು ಫೈನಲ್ ಪಂದ್ಯವನ್ನು ಕೋಲ್ಕತ್ತಾದಲ್ಲಿ ನಡೆಸಲು ನಿರ್ಧರಿಸಲಾಗಿತ್ತು. ಆದರೆ ಐಪಿಎಲ್ ಅರ್ಧಕ್ಕೆ ನಿಂತ ಕಾರಣ ಬಿಸಿಸಿಐ, ಇದೀಗ ನೂತನ ವೇಳಾಪಟ್ಟಿಯನ್ನು ಸಿದ್ಧಗೊಳಿಸಬೇಕಾಗಿದೆ.
IPL 2025: ಎಲ್ಲಾ ಹಣ ವಾಪಸ್; ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ ಆರ್ಸಿಬಿ
ಇದೀಗ ಉಭಯ ದೇಶಗಳ ನಡುವಿನ ಉದ್ವಿಗ್ನತೆಯನ್ನು ಗಮನದಲ್ಲಿಟ್ಟುಕೊಂಡಿರುವ ಬಿಸಿಸಿಐ ಉಳಿದ ಐಪಿಎಲ್ ಪಂದ್ಯಗಳನ್ನು ದಕ್ಷಿಣ ಭಾರತದ 3 ಪ್ರಮುಖ ನಗರಗಳಾದ ಬೆಂಗಳೂರು, ಚೆನ್ನೈ ಮತ್ತು ಹೈದರಾಬಾದ್‌ನಲ್ಲಿ ನಡೆಸಲು ತೀರ್ಮಾನಿಸಿದೆ ಎಂದು ಇಎಸ್‌ಪಿಎನ್ ವರದಿ ಮಾಡಿದೆ. ಈ ಮೂರು ನಗರಗಳಲ್ಲಿ ಯಾವ ಮೈದಾನದಲ್ಲಿ ಎಷ್ಟು ಪಂದ್ಯಗಳು ನಡೆಯಲಿವೆ. ನಾಕೌಟ್ ಪಂದ್ಯಗಳು ಹಾಗೂ ಪೈನಲ್ ಪಂದ್ಯ ಎಲ್ಲಿ ನಡೆಯಲಿದೆ ಎಂಬುದು ಇನ್ನಷ್ಟೇ ಹೊರಬೀಳಬೇಕಿದೆ. ಆದಾಗ್ಯೂ ಕದನ ವಿರಾಮ ಘೋಷಣೆಯಾಗಿರುವುದರಿಂದ ಬೇರೆ ಸ್ಥಳಗಳ ಬಗ್ಗೆಯೂ ಬಿಸಿಸಿಐ ಯೋಚಿಸಲಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ