IPL 2025: ಎಲ್ಲಾ ಹಣ ವಾಪಸ್; ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ ಆರ್‌ಸಿಬಿ
RCB Ticket Refunds: ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆಯಿಂದಾಗಿ ಐಪಿಎಲ್ 2025 ಅನ್ನು ಒಂದು ವಾರ ಮುಂದೂಡಲಾಗಿದೆ. ಇದರಿಂದಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತನ್ನ ಮುಂದಿನ ಎರಡು ಪಂದ್ಯಗಳ ಟಿಕೆಟ್‌ಗಳ ಹಣವನ್ನು ಮರುಪಾವತಿಸುವುದಾಗಿ ಘೋಷಿಸಿದೆ. ಸನ್‌ರೈಸರ್ಸ್ ಹೈದರಾಬಾದ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ಕೂಡ ಟಿಕೆಟ್‌ಗಳ ಹಣವನ್ನು ಮರುಪಾವತಿಸುತ್ತಿವೆ. ಟಿಕೆಟ್ ಮರುಪಾವತಿ ಕುರಿತು ಹೆಚ್ಚಿನ ಮಾಹಿತಿಯನ್ನು ಆರ್‌ಸಿಬಿ ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದೆ.

ಭಾರತ ಮತ್ತು ಪಾಕಿಸ್ತಾನ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯನ್ನು ಗಮನದಲ್ಲಿಟ್ಟುಕೊಂಡು ಬಿಸಿಸಿಐ (BCCI), ಐಪಿಎಲ್ 2025 (IPL 2025) ಅನ್ನು ಒಂದು ವಾರದವರೆಗೆ ಸ್ಥಗಿತಗೊಳಿಸಿದೆ. ಆದ್ದರಿಂದ ಈ ವಾರ ನಿಗದಿಯಾಗಿದ್ದ ಎಲ್ಲಾ ಪಂದ್ಯಗಳನ್ನು ಮುಂದೂಡಲಾಗಿದೆ. ಮಂಡಳಿಯ ಈ ನಿರ್ಧಾರದ ನಂತರ, ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಫ್ರಾಂಚೈಸಿ ದೊಡ್ಡ ನಿರ್ಧಾರವನ್ನು ತೆಗೆದುಕೊಂಡಿದ್ದು, ಪ್ರೇಕ್ಷಕರ ಹಣವನ್ನು ಮರುಪಾವತಿಸುವುದಾಗಿ ಘೋಷಿಸಿದೆ. ವಾಸ್ತವವಾಗಿ ಆರ್‌ಸಿಬಿ, ಮೇ 13 ರಂದು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಮತ್ತು ಮೇ 17 ರಂದು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯವನ್ನು ಆಡಬೇಕಿತ್ತು. ಆದರೆ ಈಗ ಪಂದ್ಯಾವಳಿಯನ್ನು ಸ್ಥಗಿತಗೊಳಿಸಲಾಗಿರುವುದರಿಂದ ಈ ಪಂದ್ಯಗಳನ್ನು ಆಡಲಾಗುವುದಿಲ್ಲ. ಆದ್ದರಿಂದ, ಫ್ರಾಂಚೈಸಿ ಈ ಎರಡು ಪಂದ್ಯಗಳ ಟಿಕೆಟ್‌ಗಳ ಸಂಪೂರ್ಣ ಮೊತ್ತವನ್ನು ಮರುಪಾವತಿಸುವ ನಿರ್ಧಾರಕ್ಕೆ ಬಂದಿದ್ದೆ. ಆರ್ಸಿಬಿಗೂ ಮೊದಲು ಕಾವ್ಯಾ ಮಾರನ್ ಒಡೆತನದ ಸನ್‌ರೈಸರ್ಸ್ ಹೈದರಾಬಾದ್ ಕೂಡ ಪೂರ್ಣ ಹಣವನ್ನು ಮರುಪಾವತಿಸುವುದಾಗಿ ಘೋಷಿಸಿತ್ತು.
ಹಣ ವಾಪಸ್ ಪಡೆಯಲು ಏನು ಮಾಡಬೇಕು?
ಮೇ 13 ಮತ್ತು 17 ರಂದು ನಡೆಯಬೇಕಿದ್ದ ಪಂದ್ಯಗಳ ಟಿಕೆಟ್ ಪೂರ್ಣ ಹಣವನ್ನು ಮರುಪಾವತಿಸಲಾಗುವುದು ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮೇ 10 ರಂದು ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ತಿಳಿಸಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಆರ್‌ಸಿಬಿ vs ಎಸ್ಆರ್ಹೆಚ್ ಮತ್ತು ಆರ್‌ಸಿಬಿ vs ಕೆಕೆಆರ್ ನಡುವಿನ ಪಂದ್ಯಗಳ ಮೂಲ ಟಿಕೆಟ್ ಹೊಂದಿರುವವರು ನಿಯಮಗಳು ಮತ್ತು ಷರತ್ತುಗಳ ಪ್ರಕಾರ ಪೂರ್ಣ ಹಣವನ್ನು ಪಡೆಯಲು ಅರ್ಹರಾಗಿರುತ್ತಾರೆ. ಆದರೆ ಹಣ ವಾಪಸ್ ಪಡೆಯಬೇಕೆಂದರೆ ಆಫ್ಲೈನ್ ಟಿಕೆಟ್ ಖರೀದಿಸಿರುವವರು ಟಿಕೆಟ್ ಅನ್ನು ಇಟ್ಟುಕೊಂಡಿರಬೇಕು. ಹಾಗೆಯೇ ಡಿಜಿಟಲ್ ಟಿಕೆಟ್‌ಗಳನ್ನು ಖರೀದಿಸಿದವರಿಗೆ ಮುಂದಿನ ಪ್ರಕ್ರಿಯೆಯ ಬಗ್ಗೆ ಅಗತ್ಯ ಮಾಹಿತಿಯನ್ನು ಅವರ ನೋಂದಾಯಿತ ಇಮೇಲ್ ಅಥವಾ ಫೋನ್ ಸಂಖ್ಯೆಯ ಮೂಲಕ ನೀಡಲಾಗುವುದು ಎಂದು ಆರ್‌ಸಿಬಿ ತಿಳಿಸಿದೆ.
🚨 𝐓𝐢𝐜𝐤𝐞𝐭𝐬 𝐑𝐞𝐟𝐮𝐧𝐝 𝐔𝐩𝐝𝐚𝐭𝐞: #𝐑𝐂𝐁𝐯𝐒𝐑𝐇 𝐚𝐧𝐝 #𝐑𝐂𝐁𝐯𝐊𝐊𝐑🚨
Original Ticket holders of #RCBvSRH and #RCBvKKR at the Chinnaswamy stadium, originally scheduled on the 13th and 17th of May 2025, are eligible for a full refund, subject to terms and… pic.twitter.com/TlffO1r0ks
— Royal Challengers Bengaluru (@RCBTweets) May 10, 2025
IPL 2025: ಭಾರತ-ಪಾಕ್ ನಡುವೆ ಕದನ ವಿರಾಮ; ನಾಳೆಯಿಂದ ಶುರುವಾಗುತ್ತಾ ಐಪಿಎಲ್?
ಲಕ್ನೋ ಕೂಡ ಮರುಪಾವತಿಸಿದೆ
ಆರ್‌ಸಿಬಿ ಹಾಗೂ ಹೈದರಾಬಾದ್ನಂತೆ, ಲಕ್ನೋ ಸೂಪರ್ ಜೈಂಟ್ಸ್ ಕೂಡ ಮೇ 9 ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ನಡೆಯಬೇಕಿದ್ದ ತನ್ನ ತವರು ಪಂದ್ಯವನ್ನು ರದ್ದುಗೊಳಿಸಿದ ಬಗ್ಗೆ ತಿಳಿಸಿತ್ತು. ಏಕಾನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಪಂದ್ಯವನ್ನು ರದ್ದಾಗೊಳಿಸಿರುವ ಕಾರಣ ಪ್ರೇಕ್ಷಕರಿಗೆ ಹಣವನ್ನು ಮರುಪಾವತಿಸುವುದಾಗಿ ತಿಳಿಸಿತ್ತು.
ಅಗ್ರ 2 ರಲ್ಲಿ ಆರ್‌ಸಿಬಿ
ಐಪಿಎಲ್ 2025 ಅಮಾನತುಗೊಳ್ಳುವ ಮೊದಲು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ನಾಯಕ ರಜತ್ ಪತಿದಾರ್ ಅವರ ನಾಯಕತ್ವದಲ್ಲಿ ಅದ್ಭುತ ಪ್ರದರ್ಶನ ನೀಡಿತ್ತು. ಈ ಸೀಸನ್‌ನಲ್ಲಿ ಇಲ್ಲಿಯವರೆಗೆ 11 ಪಂದ್ಯಗಳನ್ನು ಆಡಿರುವ ಆರ್‌ಸಿಬಿ 8 ಪಂದ್ಯಗಳನ್ನು ಗೆದ್ದಿದ್ದು, ಕೇವಲ 3 ಪಂದ್ಯಗಳಲ್ಲಿ ಸೋಲನ್ನು ಎದುರಿಸಿದೆ. ಈ ಮೂಲಕ 16 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದು, ಪ್ಲೇಆಫ್‌ಗೆ ಅರ್ಹತೆ ಪಡೆಯಲು ಪ್ರಬಲ ಸ್ಪರ್ಧಿಯಾಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:15 pm, Sat, 10 May 25