AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

PSL 2025: ‘ನಾನು ಎಂದಿಗೂ ಪಾಕಿಸ್ತಾನಕ್ಕೆ ಹೋಗುವುದಿಲ್ಲ’; ಮಗುವಿನಂತೆ ಕಣ್ಣೀರಿಟ್ಟ ವಿದೇಶಿ ಕ್ರಿಕೆಟಿಗರು

PSL 2025: ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆಯಿಂದಾಗಿ ಪಾಕಿಸ್ತಾನ ಸೂಪರ್ ಲೀಗ್ ರದ್ದಾಗಿದೆ. ಆದಾಗ್ಯೂ ಈ ದಾಳಿಯಿಂದ ಹೈರಾಣಾಗಿರುವ ವಿದೇಶಿ ಆಟಗಾರರು ಮತ್ತೊಂದು ಪಾಕಿಸ್ತಾನಕ್ಕೆ ಹೋಗುವುದಿಲ್ಲ ಎಂದು ಹೇಳಿಕೊಂಡಿದ್ದಾರೆ. ಅದರಲ್ಲೂ ಇಂಗ್ಲೆಂಡ್ ಕ್ರಿಕೆಟಿಗ ಟಾಮ್ ಕರನ್ ಮಕ್ಕಳಂತೆ ಕಣ್ಣೀರಿಟ್ಟರು ಎಂದು ಬಾಂಗ್ಲಾ ಕ್ರಿಕೆಟಿಗ ರಿಷದ್ ಹೊಸೇನ್ ಹೇಳಿದ್ದಾರೆ.

PSL 2025: ‘ನಾನು ಎಂದಿಗೂ ಪಾಕಿಸ್ತಾನಕ್ಕೆ ಹೋಗುವುದಿಲ್ಲ’; ಮಗುವಿನಂತೆ ಕಣ್ಣೀರಿಟ್ಟ ವಿದೇಶಿ ಕ್ರಿಕೆಟಿಗರು
Psl
ಪೃಥ್ವಿಶಂಕರ
|

Updated on:May 10, 2025 | 10:10 PM

Share

ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆಯಿಂದಾಗಿ ಉಭಯ ದೇಶಗಳ ನಡುವೆ ಯುದ್ಧದ ವಾತಾವರಣ ಸೃಷ್ಟಿಯಾಗಿದೆ. ಎರಡೂ ದೇಶಗಳು ಪರಸ್ಪರ ನಿರಂತರವಾಗಿ ಕ್ಷಿಪಣಿ ಮತ್ತು ಡ್ರೋನ್‌ಗಳ ದಾಳಿ ನಡೆಸುತ್ತಿವೆ. ಹೀಗಾಗಿ ಎರಡು ದೇಶಗಳಲ್ಲಿ ನಡೆಯುತ್ತದ್ದ ಟಿ20 ಲೀಗ್​ಗಳನ್ನು ರದ್ದುಗೊಳಿಸಲಾಗಿತ್ತು. ಭಾರತದಲ್ಲಿ ಐಪಿಎಲ್ (IPL 2025) ಅನ್ನು ಮುಂದೂಡಿದ್ದರೆ, ಅತ್ತ ಪಾಕಿಸ್ತಾನದಲ್ಲಿ ಪಾಕ್ ಸೂಪರ್ ಲೀಗ್ (PSL) ಅನ್ನು ಸ್ಥಗಿತಗೊಳಿಸಲಾಗಿತ್ತು. ಹೀಗಾಗಿ ಪಾಕ್ ಲೀಗ್​ನಲ್ಲಿ ಆಡುತ್ತಿದ್ದ ವಿದೇಶಿ ಆಟಗಾರರು ತಮ್ಮ ತಮ್ಮ ದೇಶಕ್ಕೆ ವಾಪಸ್ಸಾಗಲು ಹೆಣಗಾಡಬೇಕಾಯಿತು. ಹಾಗೋ ಹೀಗೋ ಪಾಕಿಸ್ತಾನವನ್ನು ತೊರೆದಿರುವ ವಿದೇಶಿ ಆಟಗಾರರು ಪಾಕ್ ನೆಲದಲ್ಲಿ ತಮಗಾದ ಅನುಭವವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ಆಘಾತಕ್ಕೊಳಗಾಗಿದ್ದ ವಿದೇಶಿ ಆಟಗಾರರು

ಪಾಕಿಸ್ತಾನ ಸೂಪರ್ ಲೀಗ್​ನಲ್ಲಿ ಭಾಗವಹಿಸಿದ್ದ ಬಾಂಗ್ಲಾದೇಶದ ಲೆಗ್-ಸ್ಪಿನ್ನರ್ ರಿಷದ್ ಹೊಸೇನ್ ತಮಗಾದ ನೋವಿನ ಅನುಭವವನ್ನು ಹಂಚಿಕೊಂಡಿದ್ದಾರೆ. ಈ ಬಗ್ಗೆ ಹೇಳಿಕೊಂಡಿರುವ ಅವರು, ‘ಅಪಾಯಕಾರಿ ಪರಿಸ್ಥಿತಿಯಿಂದ ದೂರವಾಗಿ ದುಬೈ ತಲುಪಿದ ನಂತರ ತಮಗೆ ನಿರಾಳವಾಯಿತು. ಪಾಕಿಸ್ತಾನದ ಪರಿಸ್ಥಿತಿ ನೋಡಿ ಅನೇಕ ವಿದೇಶಿ ಆಟಗಾರರು ಬೆಚ್ಚಿಬಿದ್ದಿದ್ದರು. ಇಂಗ್ಲೆಂಡ್ ಆಟಗಾರ ಟಾಮ್ ಕರನ್ ತುಂಬಾ ಭಯಭೀತರಾಗಿ ಮಗುವಿನಂತೆ ಅಳಲು ಪ್ರಾರಂಭಿಸಿದ್ದರು. ಪಾಕಿಸ್ತಾನಕ್ಕೆ ಹೋಗಿ ಪಿಎಸ್‌ಎಲ್‌ನಲ್ಲಿ ಆಡಿದ್ದಕ್ಕೆ ವಿಷಾದಿಸಿದರು.

IPL 2025: ದಕ್ಷಿಣ ಭಾರತದ ಈ 3 ನಗರಗಳಲ್ಲಿ ನಡೆಯಲಿದೆ ಐಪಿಎಲ್ ದ್ವಿತೀಯಾರ್ಧ

ಮಗುವಿನಂತೆ ಅತ್ತ ಕರನ್

ಸ್ಯಾಮ್ ಬಿಲ್ಲಿಂಗ್ಸ್, ಡ್ಯಾರಿಲ್ ಮಿಚೆಲ್, ಕುಸಲ್ ಪೆರೆರಾ, ಡೇವಿಡ್ ವಿಜೆ ಮತ್ತು ಟಾಮ್ ಕರನ್ ಅವರಂತಹ ವಿದೇಶಿ ಆಟಗಾರರು ತುಂಬಾ ಭಯಭೀತರಾಗಿದ್ದರು. ಲಾಹೋರ್ ಖಲಂದರ್ಸ್‌ ಪರ ಆಡುತ್ತಿದ್ದ ಟಾಮ್ ಕರನ್ ಅವರ ದುಃಸ್ಥಿತಿಯನ್ನು ನೆನಪಿಸಿಕೊಂಡ ರಿಷದ್, ‘ಉದ್ವಿಗ್ನತೆ ಉಂಟಾದ ನಂತರ ಕರನ್ ತಮ್ಮ ದೇಶಕ್ಕೆ ಮರಳಲು ವಿಮಾನ ನಿಲ್ದಾಣಕ್ಕೆ ಹೋಗಿದ್ದರು. ಆದರೆ ವಿಮಾನ ನಿಲ್ದಾಣ ಮುಚ್ಚಲ್ಪಟ್ಟಿದೆ ಎಂದು ತಿಳಿದ ಬಳಿಕ ಅವರು ತುಂಬಾ ಹೆದರಿ ಚಿಕ್ಕ ಮಗುವಿನಂತೆ ಅಳಲು ಪ್ರಾರಂಭಿಸಿದರು. ಆ ನಂತರ ಎರಡು-ಮೂರು ಸಹ ಕ್ರಿಕೆಟಿಗರು ಅವರನ್ನು ಸಮಾಧಾನ ಪಡಿಸಿದರು. ನಾವು ದುಬೈಗೆ ಬಂದಿಳಿದ ತಕ್ಷಣ, ನ್ಯೂಜಿಲೆಂಡ್ ಕ್ರಿಕೆಟಿಗ ಮಿಚೆಲ್ ಅವರು ಇನ್ನು ಮುಂದೆ ಪಾಕಿಸ್ತಾನಕ್ಕೆ ಹೋಗುವುದಿಲ್ಲ ಎಂದು ಹೇಳಿದರು ಎಂದು ರಿಷದ್ ಹೊಸೇನ್ ಹೇಳಿಕೊಂಡಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:07 pm, Sat, 10 May 25

Follow Us
ಪೃಥ್ವಿಶಂಕರ
ಪೃಥ್ವಿಶಂಕರ

ಪೃಥ್ವಿಶಂಕರ ಅವರ ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ. ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ಕೆಲಸ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ಇವರು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ಇವರ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
‘ಪ್ರೇಮದ ಊರಲಿ’ ಸಿನಿಮಾ ಸಂಗೀತ ನಿರ್ದೇಶಕರಿಗೆ ಸಿಕ್ಕ ಸಂಭಾವನೆ ಎಷ್ಟು?
‘ಪ್ರೇಮದ ಊರಲಿ’ ಸಿನಿಮಾ ಸಂಗೀತ ನಿರ್ದೇಶಕರಿಗೆ ಸಿಕ್ಕ ಸಂಭಾವನೆ ಎಷ್ಟು?
ದೊಡ್ಡಬಳ್ಳಾಪುರ ಬೆನ್ನಲ್ಲೇ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲೂ ಲಘು ಭೂಕಂಪನ
ದೊಡ್ಡಬಳ್ಳಾಪುರ ಬೆನ್ನಲ್ಲೇ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲೂ ಲಘು ಭೂಕಂಪನ
ಸುದೀಪ್ ಮಾತಿಗೆ ಕಣ್ಣೀರಿಟ್ಟ ತಾಂಡವ್, ಕುಣಿದಾಡಿದ ಸೌಂದರ್ಯಾ: ವಿಡಿಯೋ
ಸುದೀಪ್ ಮಾತಿಗೆ ಕಣ್ಣೀರಿಟ್ಟ ತಾಂಡವ್, ಕುಣಿದಾಡಿದ ಸೌಂದರ್ಯಾ: ವಿಡಿಯೋ
ದೊಡ್ಡಬಳ್ಳಾಪುರ ತಾಲೂಕಿನ ಹಲವೆಡೆ ಮತ್ತೆ ಭೂಕಂಪನ; ಸ್ಥಳೀಯರಲ್ಲಿ ಆತಂಕ
ದೊಡ್ಡಬಳ್ಳಾಪುರ ತಾಲೂಕಿನ ಹಲವೆಡೆ ಮತ್ತೆ ಭೂಕಂಪನ; ಸ್ಥಳೀಯರಲ್ಲಿ ಆತಂಕ
ಭೀಕರ ಬರದಿಂದ ಬತ್ತಿದ ಭತ್ತದ ನಾಡು: ಇಡೀ ರಾಜ್ಯಕ್ಕೆ ಅಕ್ಕಿ ದರ ಏರಿಕೆಯ ಬಿಸಿ
ಭೀಕರ ಬರದಿಂದ ಬತ್ತಿದ ಭತ್ತದ ನಾಡು: ಇಡೀ ರಾಜ್ಯಕ್ಕೆ ಅಕ್ಕಿ ದರ ಏರಿಕೆಯ ಬಿಸಿ
ರೆಸ್ಯೂಮ್​​ನಲ್ಲಿ ಕನ್ನಡ ಇದ್ರೆ ರಿಜೆಕ್ಟ್​: ಅಳಲು ತೋಡಿಕೊಂಡ ಯುವತಿ
ರೆಸ್ಯೂಮ್​​ನಲ್ಲಿ ಕನ್ನಡ ಇದ್ರೆ ರಿಜೆಕ್ಟ್​: ಅಳಲು ತೋಡಿಕೊಂಡ ಯುವತಿ
ಹಿಂಗಾರು ಮಳೆ ಅಬ್ಬರಕ್ಕೆ ಹಚ್ಚ ಹಸಿರಾದ ಹಿಮವದ್ ಗೋಪಾಲಸ್ವಾಮಿ ಬೆಟ್ಟ
ಹಿಂಗಾರು ಮಳೆ ಅಬ್ಬರಕ್ಕೆ ಹಚ್ಚ ಹಸಿರಾದ ಹಿಮವದ್ ಗೋಪಾಲಸ್ವಾಮಿ ಬೆಟ್ಟ
2 ವರ್ಷ 10 ತಿಂಗಳ ಕಂದನಿಂದ ತಬಲಾ ವಾದನ
2 ವರ್ಷ 10 ತಿಂಗಳ ಕಂದನಿಂದ ತಬಲಾ ವಾದನ
40 ದಿನ ನಂತರ ಪತ್ತೆಯಾದ ಕೆಆರ್‌ಐಡಿಎಲ್ ಎಇಇ ಪರ್ವೀಜ್​ಗೆ ಈಗ ಪೊಲೀಸರ ಗ್ರಿಲ್
40 ದಿನ ನಂತರ ಪತ್ತೆಯಾದ ಕೆಆರ್‌ಐಡಿಎಲ್ ಎಇಇ ಪರ್ವೀಜ್​ಗೆ ಈಗ ಪೊಲೀಸರ ಗ್ರಿಲ್
ಡೈಮಂಡ್ ಟಾಸ್ಕ್​ ವಿಷಯದಲ್ಲಿ ಪಂಚಾಯ್ತಿ ಮಾಡಲು ಬಂದ ಸುದೀಪ್
ಡೈಮಂಡ್ ಟಾಸ್ಕ್​ ವಿಷಯದಲ್ಲಿ ಪಂಚಾಯ್ತಿ ಮಾಡಲು ಬಂದ ಸುದೀಪ್