
ಐಪಿಎಲ್ 2026 ಕ್ವಾಲಿಫೈಯರ್ 1 (IPL 2026 Qualifier 1) ಪಂದ್ಯವು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ (RCB vs GT) ನಡುವೆ ನಡೆಯುತ್ತಿದೆ. ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ಟೈಟಾನ್ಸ್ ತಂಡ ಮೊದಲು ಬೌಲಿಂಗ್ ಆಯ್ದುಕೊಂಡಿತು. ಹೀಗಾಗಿ ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ ಮೊದಲ 6 ಓವರ್ಗಳಲ್ಲಿ ಅಂದರೆ ಪವರ್ಪ್ಲೇನಲ್ಲಿ ಒಂದು ವಿಕೆಟ್ ಕಳೆದುಕೊಂಡು 76 ರನ್ ಕಲೆಹಾಕಿದೆ. ಈ 76 ರನ್ಗಳಲ್ಲಿ ಆರ್ಸಿಬಿ ಕೇವಲ ಬೌಂಡರಿ ಹಾಗೂ ಸಿಕ್ಸರ್ಗಳಿಂದಲೇ 60 ರನ್ ಕಲೆಹಾಕಿತು.
ವಾಸ್ತವವಾಗಿ ಇಂದಿನ ಪಂದ್ಯದಲ್ಲಿ ಫಿಲ್ ಸಾಲ್ಟ್ ಆಡುತ್ತಾರೆ ಎಂಬ ನಿರೀಕ್ಷೆ ಇತ್ತು. ಆದರೆ ಸಾಲ್ಟ್ ಚೇತರಿಸಿಕೊಂಡಿದ್ದರೂ ವೈದ್ಯಕೀಯ ವಿಭಾಗದಿಂದ ಗ್ರೀನ್ ಸಿಗ್ನಲ್ ಸಿಗದ ಕಾರಣ ಸಾಲ್ಟ್ ಈ ಪಂದ್ಯದಲ್ಲಿ ಆಡಲು ಸಾಧ್ಯವಾಗಲಿಲ್ಲ. ಹೀಗಾಗಿ ಕಳೆದ ಪಂದ್ಯದಂತೆ ಈ ಪಂದ್ಯದಲ್ಲೂ ಕೊಹ್ಲಿ ಹಾಗೂ ವೆಂಕಟೇಶ್ ಅಯ್ಯರ್ ಬ್ಯಾಟಿಂಗ್ ಆರಂಭಿಸಿದರು. ಗುಜರಾತ್ ಪರ ಬೌಲಿಂಗ್ ಆರಂಭಿಸಿದ ಸಿರಾಜ್ ಅವರ ಮೊದಲ ಓವರ್ನಲ್ಲೇ ಅಯ್ಯರ್ 3 ಬೌಂಡರಿಗಳನ್ನು ಬಾರಿಸಿದರು. ರಬಾಡ ಎಸೆತದ ಎರಡನೇ ಓವರ್ನಲ್ಲೂ ಅಯ್ಯರ್ ಒಂದು ಸಿಕ್ಸರ್ ಬಾರಿಸಿದರು. ಆದರೆ ಓವರ್ನ ಕೊನೆಯ ಎಸೆತದಲ್ಲಿ ಕ್ಯಾಚಿತ್ತು ಔಟಾದರು.
Fighting 𝗳𝗶𝗿𝗲 𝘄𝗶𝘁𝗵 𝗳𝗶𝗿𝗲💥
🎥 Devdutt Padikkal and Virat Kohli bringing the heat amidst the cold 💪 🏔️
Updates ▶️ https://t.co/9rs6u5obOw#TATAIPL | #Qualifier1 | #TheFinalLeap | #RCBvGT | @RCBTweets pic.twitter.com/LnXDuLACwa
— IndianPremierLeague (@IPL) May 26, 2026
ಹೀಗಾಗಿ ಅಯ್ಯರ್ 7 ಎಸೆತಗಳಲ್ಲಿ 3 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 19 ರನ್ ಬಾರಿಸಿ ಔಟಾದರು. ಆ ಬಳಿಕ ಜೊತೆಯಾದ ವಿರಾಟ್ ಕೊಹ್ಲಿ ಹಾಗೂ ದೇವದತ್ ಪಡಿಕ್ಕಲ್ ಉತ್ತಮ ಜೊತೆಯಾಟ ಕಟ್ಟಿದರು. ಇವರಿಬ್ಬರು ಪವರ್ಪ್ಲೇನಲ್ಲಿ ತಂಡವನ್ನು 70ರನ್ಗಳ ಗಡಿ ದಾಟಿಸಿದರು. ಸಿರಾಜ್ ಬೌಲ್ ಮಾಡಿದ 4ನೇ ಓವರ್ನಲ್ಲಿ ಪಡಿಕ್ಕಲ್ 4 ಬೌಂಡರಿಗಳನ್ನು ಬಾರಿಸಿದರು. ರಬಾಡ ಬೌಲ್ ಮಾಡಿದ ಪವರ್ಪ್ಲೇನ ಕೊನೆಯ ಓವರ್ನಲ್ಲಿ ವಿರಾಟ್ ಕೊಹ್ಲಿ 2 ಬೌಂಡರಿ ಹಾಗೂ 1 ಸಿಕ್ಸರ್ ಕೂಡ ಬಾರಿಸಿದರು. ಈ ಮೂಲಕ ಇವರಿಬ್ಬರು ಅರ್ಧಶತಕದ ಜೊತೆಯಟವನ್ನು ಕಟ್ಟಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:06 pm, Tue, 26 May 26