AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

“ನಾವೇನು ಫಿಲಂ ಸ್ಟಾರ್ಸ್ ಅಲ್ಲ”: ರಿಯಾನ್​ನತ್ತ ವೈಭವ್ ಓರೆಗಣ್ಣಿನ  ನೋಟ!

IPL 2026 RR vs SRH: ಇಂಡಿಯನ್ ಪ್ರೀಮಿಯರ್ ಲೀಗ್​ನ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗಲಿದೆ. ಮುಲ್ಲನ್​ಪುರ್​ನಲ್ಲಿ ನಡೆಯಲಿರುವ ಈ ಪಂದ್ಯವುದು ಉಭಯ ತಂಡಗಳ ಪಾಲಿಗೆ ನಿರ್ಣಾಯಕ. ಅಂದರೆ ಗೆಲ್ಲುವ ತಂಡ ದ್ವಿತೀಯ ಸುತ್ತಿಗೆ ಪ್ರವೇಶಿಸಿದರೆ, ಸೋಲುವ ತಂಡ ಟೂರ್ನಿಯಿಂದಲೇ ಹೊರಬೀಳಲಿದೆ.

ನಾವೇನು ಫಿಲಂ ಸ್ಟಾರ್ಸ್ ಅಲ್ಲ: ರಿಯಾನ್​ನತ್ತ ವೈಭವ್ ಓರೆಗಣ್ಣಿನ  ನೋಟ!
Vaibhav - RiyanImage Credit source: (Screengrab/IG)
ಝಾಹಿರ್ ಯೂಸುಫ್
|

Updated on: May 26, 2026 | 1:40 PM

Share

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ ಎಲಿಮಿನೇಟರ್ ಪಂದ್ಯಕ್ಕಾಗಿ ರಾಜಸ್ಥಾನ್ ರಾಯಲ್ಸ್ ತಂಡವು ಮುಲ್ಲನ್​ಪುರ್​ಗೆ ಬಂದಿಳಿದಿದೆ. ನಾಳೆ (ಮೇ 27) ನಡೆಯಲಿರುವ ಈ ಪಂದ್ಯಕ್ಕಾಗಿ ಮುಂಬೈ ವಿಮಾನ ನಿಲ್ದಾಣದಿಂದ ಹೊರಡುವ ಮುನ್ನ ಆರ್​ಆರ್ ಆಟಗಾರರ ಫೋಟೋ ಕ್ಲಿಕ್ಕಿಸಲು ಪಾಪರಾಜಿಗಳು (ಛಾಯಾಗ್ರಾಹಕರು) ಸುತ್ತುವರಿದಿದ್ದರು. ಇದೇ ವೇಳೆ ಆಗಮಿಸಿದ ರಿಯಾನ್ ಪರಾಗ್​ಗೆ ಫೋಟೋ ಪೋಸ್ ನೀಡುವಂತೆ ಸೂಚಿಸಿದ್ದಾರೆ.

“ರಿಯಾನ್ ಭಾಯ್, ವೈಭವ್ ಜೊತೆ ಒಂದು ಫೋಟೋ ಪ್ಲೀಸ್, ಇಬ್ಬರೂ ಒಟ್ಟಿಗೆ ನಿಲ್ಲಿ” ಎಂದು ಛಾಯಾಗ್ರಾಹಕರೊಬ್ಬರು ಮನವಿ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ರಿಯಾನ್ ಪರಾಗ್, “ನಾವು ಫಿಲಂ ಸ್ಟಾರ್​ಗಳಲ್ಲ” ಎಂದು ಹೇಳುತ್ತಾ ಮುಂದೆ ಸಾಗಿದ್ದಾರೆ.

ಆದರೆ ಇದೇ ವೇಳೆ ಅತ್ತ ವೈಭವ್ ಸೂರ್ಯವಂಶಿ ಪಾಪರಾಜಿಗಳಿಗೆ ಪೋಸ್ ನೀಡಲು ಸಜ್ಜಾಗುತ್ತಿದ್ದರು. ಇದರ ನಡುವೆ ರಿಯಾನ್ ಪರಾಗ್ ಹೇಳಿದ ಡೈಲಾಗ್ ಕೇಳಿ ವೈಭವ್ ಸೂರ್ಯವಂಶಿ ಒಂದು ಕ್ಷಣ ತಬ್ಬಿಬ್ಬಾದರು. ಅಲ್ಲದೆ ರಾಜಸ್ಥಾನ್ ರಾಯಲ್ಸ್  ನಾಯಕನನ್ನೇ ಒಂದು ವಿಚಿತ್ರ ಹಾಗೂ  ಓರೆಗಣ್ಣಿನ ನೋಟದಿಂದ ದಿಟ್ಟಿಸಿ ನೋಡಿದರು.

ವೈಭವ್ ಓರೆಗಣ್ಣಿನ  ನೋಟ!

ಇದೀಗ ಈ ವಿಡಿಯೋ ವೈರಲ್ ಆಗಿದ್ದು, ಕೆಲವರು ರಿಯಾನ್ ಪರಾಗ್ ನಡೆಯನ್ನು ಸಮರ್ಥಿಸಿಕೊಂಡರೆ, ಇನ್ನೂ ಕೆಲವರು ಇಷ್ಟೊಂದು ಅಹಂ ಒಳ್ಳೆದಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

ಎಲಿಮಿನೇಟರ್ ಪಂದ್ಯ:

ಇಂಡಿಯನ್ ಪ್ರೀಮಿಯರ್ ಲೀಗ್​ನ 72ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಹಾಗೂ ಸನ್​ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಲಿದೆ. ಮೇ 27 ರಂದು ಮುಲ್ಲನ್​ಪುರ್​ನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಗೆಲ್ಲುವ ತಂಡ ದ್ವಿತೀಯ ಕ್ವಾಲಿಫೈಯರ್​ಗೆ ಅರ್ಹತೆ ಪಡೆಯಲಿದೆ. ಇನ್ನು ಸೋಲುವ ತಂಡದ ಐಪಿಎಲ್ ಅಭಿಯಾನ ಅಂತ್ಯವಾಗಲಿದೆ.

ಅಂದರೆ ನಾಳೆ ನಡೆಯಲಿರುವ ಮ್ಯಾಚ್​ನಲ್ಲಿ ಒಂದು ತಂಡ ಹೊರಬೀಳುವುದು ಖಚಿತ. ಇನ್ನು ಗೆಲ್ಲುವ ತಂಡ ಮೊದಲ ಕ್ವಾಲಿಫೈಯರ್​ನಲ್ಲಿ ಸೋಲುವ ತಂಡದ ವಿರುದ್ಧ ದ್ವಿತೀಯ ಕ್ವಾಲಿಫೈಯರ್ ಮ್ಯಾಚ್ ಆಡಲಿದೆ.

ಇದನ್ನೂ ಓದಿ: ಟ್ರೋಲ್ ಮಾಡಿದವರಿಗೆ ಶ್ರೇಷ್ಠಾ ಅಯ್ಯರ್ ತಿರುಗೇಟು!

ಪ್ಲೇಆಫ್ ಸುತ್ತಿನ ವೇಳಾಪಟ್ಟಿ:

ಪಂದ್ಯ ದಿನಾಂಕ ಮುಖಾಮುಖಿ ಕ್ರೀಡಾಂಗಣ / ಸ್ಥಳ
ಕ್ವಾಲಿಫೈಯರ್ 1  ಮೇ 26, ಮಂಗಳವಾರ  ರಾಯಲ್ ಚಾಲೆಂಜರ್ಸ್​ ಬೆಂಗಳೂರು vs ಗುಜರಾತ್ ಟೈಟಾನ್ಸ್ ಹೆಚ್​ಪಿಸಿಎ ಸ್ಟೇಡಿಯಂ, ಧರ್ಮಶಾಲಾ
ಎಲಿಮಿನೇಟರ್  ಮೇ 27, ಬುಧವಾರ ಸನ್​ರೈಸರ್ಸ್ ಹೈದರಾಬಾದ್ vs ರಾಜಸ್ಥಾನ್ ರಾಯಲ್ಸ್ ಮುಲ್ಲನ್‌ಪುರ್ ಸ್ಟೇಡಿಯಂ, ನ್ಯೂ ಚಂಡೀಗಢ್
ಕ್ವಾಲಿಫೈಯರ್ 2  ಮೇ 29, ಶುಕ್ರವಾರ ಕ್ವಾಲಿಫೈಯರ್ 1 ರಲ್ಲಿ ಸೋತ ತಂಡ vs ಎಲಿಮಿನೇಟರ್ ವಿಜೇತ ತಂಡ ಮುಲ್ಲನ್‌ಪುರ್ ಸ್ಟೇಡಿಯಂ, ನ್ಯೂ ಚಂಡೀಗಢ್
ಫೈನಲ್  ಮೇ 31, ಭಾನುವಾರ ಕ್ವಾಲಿಫೈಯರ್ 1 ವಿಜೇತರು vs ಕ್ವಾಲಿಫೈಯರ್ 2 ವಿಜೇತರು ನರೇಂದ್ರ ಮೋದಿ ಸ್ಟೇಡಿಯಂ, ಅಹಮದಾಬಾದ್
Follow Us
Zahir Yusuf
Zahir Yusuf

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More