IPL Mega Auction 2025 highlights: ಮೊದಲ ದಿನದ IPL ಹರಾಜು ಅಂತ್ಯ: ಯಾರು ಯಾವ ತಂಡದ ಪಾಲು?
IPL Auction 2025 highlights Updates in kannada: ಐಪಿಎಲ್ 2025 ರ ಮೆಗಾ ಹರಾಜು ನವೆಂಬರ್ 24 ಮತ್ತು 25 ರಂದು ಸೌದಿ ಅರೇಬಿಯಾದ ಜಿದ್ದಾದಲ್ಲಿ ನಡೆಯುತಿದೆ. ಈ ಮಹತ್ವದ ಕಾರ್ಯದಲ್ಲಿ ಎಲ್ಲಾ ಫ್ರಾಂಚೈಸಿಗಳು ತಮ್ಮ ತಂಡಗಳನ್ನು ಬಲಪಡಿಸಲು ಆಟಗಾರರನ್ನು ಖರೀದಿಸಲು ಸಜ್ಜಾಗಿದ್ದಾರೆ. ಮೆಗಾ ಹರಾಜು ಪ್ರಕ್ರಿಯೆಯ ನೇರಪ್ರಸಾರ ಇಲ್ಲಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ ಟಿ20 ಕ್ರಿಕೆಟ್ ಟೂರ್ನಿಯ 18ನೇ ಆವೃತ್ತಿಯ ಮಹಾ ಹರಾಜು ಪ್ರಕ್ರಿಯೆ ಶುರುವಾಗಿದೆ. ನವೆಂಬರ್ 24 ಮತ್ತು 25ರಂದು ನಡೆಯಲಿರುವ ಮೆಗಾ ಹರಾಜಿನ ಮೇಲೆ ಫ್ರಾಂಚೈಸಿಗಳು ಮತ್ತು ಅಭಿಮಾನಿಗಳ ಚಿತ್ತ ನೆಟ್ಟಿದೆ. ಸೌದಿ ಅರೇಬಿಯಾದ ಜಿದ್ಧಾದಲ್ಲಿ ಮಹಾ ಹರಾಜು ಪ್ರಕ್ರಿಯೆ ನಡೆಯಲಿದೆ. 2025ರ ಐಪಿಎಲ್ನಲ್ಲಿ ಕಪ್ ಗೆದ್ದು ಬೀಗುವುದಕ್ಕೆ ಪ್ರತಿ ತಂಡದ ಫ್ರಾಂಚೈಸಿ ಮಾಲೀಕರು ಮತ್ತು ಆಟಗಾರರು ಸಜ್ಜಾಗಿದ್ದಾರೆ. ಮೊದಲ ದಿನದ ಮಹಾ ಹರಾಜು ಪ್ರಕ್ರಿಯೆ ನೇರಪ್ರಸಾರದಲ್ಲಿ ವೀಕ್ಷಿಸಿ.
LIVE NEWS & UPDATES
-
IPL Mega Auction 2025 Live: ಆರ್‌ಸಿಬಿ ಸೇರಿದ ಸುಯೇಶ್ ಶರ್ಮಾ
2.6 ಕೋಟಿ ರೂ. ಸುಯೇಶ್ ಶರ್ಮಾರನ್ನು ಆರ್‌ಸಿಬಿ ಖರೀದಿಸಿದೆ.
Suyash Sharma will play for @RCBTweets 🙌🙌
He’s SOLD for INR 2.6 Crore 🔥#TATAIPLAuction | #TATAIPL
— IndianPremierLeague (@IPL) November 24, 2024
-
IPL Mega Auction 2025 Live: ವೈಶಾಖ್ ಪಂಜಾಬ್ ಪಾಲು
1.80 ಕೋಟಿ ರೂ. ಗೆ ಕನ್ನಡಿಗ ವೇಗದ ಬೌಲರ್ ವಿಜಯಕುಮಾರ್ ವೈಶಾಖ್ ಪಂಜಾಬ್ ಕಿಂಗ್ಸ್ ಪಾಲಾದರೆ, 6 ಕೋಟಿ ರೂ. ವೇಗದ ಬೌಲರ್ ರಸಿಕ್ ದರ್ ಆರ್‌ಸಿಬಿ ಪಾಲಾಗಿದ್ದಾರೆ.
-
IPL Mega Auction 2025 Live: ಅನುಜ್ ರಾವತ್ 30 ಲಕ್ಷಕ್ಕೆ ಗುಜರಾತ್ ಪಾಲು
ಗುಜರಾತ್ ಟೈಟಾನ್ಸ್ ತಂಡ ಅನುಜ್ ರಾವತ್ ರನ್ನು 30 ಲಕ್ಷ ರೂ. ಖರೀದಿಸಿದ್ದು, ಆರ್ಯನ್ ಜುಯಾಲ್ ಅದೇ ಬೆಲೆಗೆ ಲಕ್ನೋ ಸೂಪರ್ ಜೈಂಟ್ಸ್ ತಂಡದ ಪಾಲಾಗಿದ್ದಾರೆ.
IPL Mega Auction 2025 Live: ಪಂಜಾಬ್ ಕಿಂಗ್ಸ್ ತಂಡ ಸೇರಿದ ಹರ್ಪ್ರೀತ್ ಬ್ರಾರ್
ಲಕ್ನೋ ಸೂಪರ್ ಜೈಂಟ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವಿನ ಜಿದ್ದಾಜಿದ್ದಿ ಹರಾಜು ಪ್ರಕ್ರಿಯೆಯಲ್ಲಿ ಕೊನೆಗೆ ಹರ್ಪ್ರೀತ್ ಬ್ರಾರ್ 1.5 ಕೋಟಿಗೆ ಪಂಜಾಬ್ ಕಿಂಗ್ಸ್ ತಂಡದ ಪಾಲಾಗಿದ್ದಾರೆ.
IPL Mega Auction 2025 Live: 30 ಲಕ್ಷಕ್ಕೆ ಗುಜರಾತ್ ಪಾಲಾದ ನಿಶಾಂತ್ ಸಿಂಧು
ಆರ್‌ಸಿಬಿ ತಂಡ ಕರುಣ್ ನಾಯರ್ನ್ನು 50 ಲಕ್ಷ ರೂ. ಮತ್ತು ಗುಜರಾತ್ ಟೈಟಾನ್ಸ್ ತಂಡ ನಿಶಾಂತ್ ಸಿಂಧುರನ್ನು 30 ಲಕ್ಷ ರೂ. ಗೆ ಖರೀದಿಸಿದೆ.
IPL Mega Auction 2025 Live: ಪಂಜಾಬ್ ಪಾಲಾದ ನೇಹಲ್ ವದೇರ
ಪಂಜಾಬ್ ತಂಡ 4.2 ಕೋಟಿ ರೂ. ನೇಹಲ್ ವದೇರ ಅವರನ್ನು ಖರೀದಿಸಿದೆ. ಆ ಮೂಲಕ ತಂಡದ ಉತ್ತಮ ಆಯ್ಕೆಗಳಲ್ಲಿ ಒಂದಾಗಿದೆ. 3 ಕೋಟಿಗೆ ಆಂಗ್ಕ್ರಿಶ್ ರಘುವಂಶಿ ಕೋಲ್ಕತ್ತಾ ತಂಡದ ಪಾಲಾಗಿದ್ದಾರೆ.
IPL Mega Auction 2025 Live: ಚೆನ್ನೈ ಪಾಲಾದ ನೂರ್ ಅಹಮದ್
ಅಫ್ಘಾನಿಸ್ತಾನ ಆಟಗಾರ ನೂರ್ ಅಹ್ಮದ್ 10 ಕೋಟಿ ರೂ.ಗೆ ಚೆನ್ನೈ ತಂಡದ ಪಾಲಾಗಿದ್ದಾರೆ. ಆ್ಯಡಂ ಝಂಪಾ 2.4 ಕೋಟಿ ರೂ.ಗೆ ಹೈದರಾಬಾದ್ ತಂಡ ಖರೀದಿಸಿದೆ.
IPL Mega Auction 2025 Live: ವೇಗದ ಬೌಲರ್ ಟ್ರೆಂಟ್ ಬೌಲ್ಟ್ ಮುಂಬೈ ಪಾಲು
ನ್ಯೂಜಿಲೆಂಡ್ನ ಅನುಭವಿ ವೇಗದ ಬೌಲರ್ ಟ್ರೆಂಟ್ ಬೌಲ್ಟ್ 12.5 ಕೋಟಿ ರೂ.ಗೆ ಮುಂಬೈ ತಂಡದ ಪಾಲಾಗಿದ್ದಾರೆ. ಇನ್ನು ಮಹೇಶ್ ತೀಕ್ಷನಾ 4.4 ಕೋಟಿ ರೂ.ಗೆ ರಾಜಸ್ಥಾನ ತಂಡಕ್ಕೆ ಸೇರಿದ್ದಾರೆ.
IPL Mega Auction 2025 Live: 12.5 ಕೋಟಿ ರೂ.ಗೆ ರಾಜಸ್ಥಾನ ಪಾಲಾದ ಅರ್ಚರ್
ಈ ಹಿಂದಿನ ಐಪಿಎಲ್ಗಳಲ್ಲಿ ಮುಂಬೈ ಇಂಡಿಯನ್ಸ್ ಮತ್ತು ರಾಜಸ್ಥಾನ ರಾಯಲ್ಸ್ ತಂಡಗಳಲ್ಲಿ ಆಡಿದ್ದ ಜೋಫ್ರಾ ಅರ್ಚರ್ ಇದೀಗ 12.5 ಕೋಟಿ ರೂ.ಗೆ ರಾಜಸ್ಥಾನ ತಂಡದ ಪಾಲಾಗಿದ್ದಾರೆ.
IPL Mega Auction 2025 Live: ಲಖನೌ ಪಾಲಾದ ಅವೇಶ್ ಖಾನ್
ಪ್ರಸಿದ್ಧ್ ಕೃಷ್ಣ 9.5 ಕೋಟಿ ರೂ.ಗೆ ಗುಜರಾತ್ ತಂಡ ಖರೀದಿಸಿದ್ದು, 9.75 ಕೋಟಿ ರೂ.ಗೆ ಅವೇಶ್ ಖಾನ್ ಲಖನೌ ತಂಡದ ಪಾಲಾಗಿದ್ದಾರೆ. ಅದೇ ರೀತಿಯಾಗಿ 6.5 ಕೋಟಿ ರೂ.ಗೆ ಅನ್ರಿಚ್ ನಾರ್ಟ್ಜೆ ಕೋಲ್ಕತ್ತಾ ತಂಡದ ಪಾಲಾಗಿದ್ದಾರೆ.
IPL Mega Auction 2025 Live: ಆರ್‌ಸಿಬಿ ಪಾಲಾದ ಜೋಶ್ ಹ್ಯಾಜಲ್‌ವುಡ್
ಆಸೀಸ್ ವೇಗಿ ಜೋಶ್ ಹ್ಯಾಜಲ್‌ವುಡ್ ಆರ್‌ಸಿಬಿ ತಂಡದ ಪಾಲಾಗಿದ್ದಾರೆ. ಕೆಕೆಆರ್ ಮತ್ತು ಎಲ್ಎಸ್ಜಿ ನಡುವಿನ ಜಿದ್ದಾಜಿದ್ದಿನ ಮಧ್ಯೆ ಆರ್‌ಸಿಬಿ 12.5 ಕೋಟಿಕೆ ಖರೀದಿಸಿದೆ.
IPL Mega Auction 2025 Live: ಆರ್ಸಿಬಿಗೆ ಜಿತೇಶ್ ಶರ್ಮಾ
11.25 ಕೋಟಿಗೆ ಇಶಾನ್ ಕಿಶನ್ರನ್ನು ಹೈದರಾಬಾದ್ ತಂಡ ಖರೀದಿಸಿದ್ದು, 11 ಕೋಟಿಗೆ ಜಿತೇಶ್ ಶರ್ಮಾ ಆರ್‌ಸಿಬಿ ಪಾಲಾಗಿದ್ದಾರೆ.
Jitesh Sharma will play BOLD for @RCBTweets 🙌🙌
He’s acquired for INR 11 Crore! 💪#TATAIPLAuction | #TATAIPL
— IndianPremierLeague (@IPL) November 24, 2024
IPL Mega Auction 2025 Live: 11.5 ಕೋಟಿಗೆ ಪಿಲ್ ಸಾಲ್ಟ್ ಆರ್ಸಿಬಿಗೆ
ಕೆಕೆಆರ್ ಮತ್ತು ಆರ್‌ಸಿಬಿ ನಡುವಿನ ಜಿದ್ದಾಜಿದ್ದಿ ಹರಾಜಿನಲ್ಲಿ 11.5 ಕೋಟಿಗೆ ಪಿಲ್ ಸಾಲ್ಟ್ ಆರ್‌ಸಿಬಿ ಪಾಲಾಗಿದ್ದಾರೆ.
Phil Salt will play for @RCBTweets 🙌🙌
He is SOLD for INR 11.5 Crore 👌👌 #TATAIPLAuction | #TATAIPL
— IndianPremierLeague (@IPL) November 24, 2024
IPL Mega Auction 2025 Live: ಪಂಜಾಬ್ ಪಾಲಾದ ಗ್ಲೆನ್ ಮ್ಯಾಕ್ಸ್ವೆಲ್
ಗ್ಲೆನ್ ಮ್ಯಾಕ್ಸ್ವೆಲ್ 4.2 ಕೋಟಿಗೆ ಪಂಜಾಬ್ ಪಾಲಾಗಿದ್ದಾರೆ. ಆ ಮೂಲಕ ಮೂರನೇ ಬಾರಿಗೆ ಅವರು ಮತ್ತೆ ಪಂಜಾಬ್ ತಂಡದ ಪರ ಆಡಲಿದ್ದಾರೆ.
Glenn Maxwell will play for @PunjabKingsIPL 🙌🙌
He’s SOLD for INR 4.2 Crore 👏#TATAIPLAuction | #TATAIPL
— IndianPremierLeague (@IPL) November 24, 2024
IPL Mega Auction 2025 Live: ಮಿಚೆಲ್ ಮಾರ್ಷ್ ಲಖನೌ ತಂಡಕ್ಕೆ
11 ಕೋಟಿಗೆ ಮಾರ್ಕಸ್ ಸ್ಟೊಯಿನಿಸ್ ಪಂಜಾಬ್ ಪಾಲಾಗಿದ್ದು, 3.4 ಕೋಟಿಗೆ ಮಿಚೆಲ್ ಮಾರ್ಷ್ ಲಖನೌ ಪಾಲಾಗಿದ್ದಾರೆ.
Mitchell Marsh is SOLD to @LucknowIPL for INR 3.4 Crore 🙌🙌#TATAIPLAuction | #TATAIPL
— IndianPremierLeague (@IPL) November 24, 2024
IPL Mega Auction 2025 Live: 9.75 ಕೋಟಿಗೆ ಚೆನ್ನೈ ಪಾಲಾದ ಆರ್.ಅಶ್ವಿನ್
ಆರ್. ಅಶ್ವಿನ್ 9.75 ಕೋಟಿ ರೂ. ಗೆ ಖರೀದಿಯಾಗಿದ್ದಾರೆ. ಆ ಮೂಲಕ ಅವರು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪಾಲಾಗಿದ್ದಾರೆ. 3.20 ಕೋಟಿಗೆ ರಚಿನ್ ರವೀಂದ್ರ ಚೆನ್ನೈ ಪಾಲಾಗಿದ್ದಾರೆ.
IPL Mega Auction 2025 Live: ಹೈದರಾಬಾದ್ ಪಾಲಾದ ಹರ್ಷಲ್ ಪಟೇಲ್
ಆಲ್ರೌಂಡರ್ಗಳಲ್ಲಿ ಮೊದಲನೇ ಸ್ಥಾನದಲ್ಲಿರುವ ಹರ್ಷಲ್ ಪಟೇಲ್, 8 ಕೋಟಿ ರೂ.ಗೆ ಹೈದರಾಬಾದ್ ತಂಡದ ಪಾಲಾಗಿದ್ದಾರೆ. ಇನ್ನು 9 ಕೋಟಿ ರೂ.ಗೆ ಫ್ರೇಸರ್ ಮ್ಯಾಕ್‌ಗುರ್ಕ್ ದೆಹಲಿ ತಂಡದ ಪಾಲಾದರು.
IPL Mega Auction 2025 Live: ಡೇವಿಡ್ ವಾರ್ನರ್ ಅನ್‌ಸೋಲ್ಡ್
ಐಪಿಎಲ್ 2025 ಮೆಗಾ ಹರಾಜಿನಲ್ಲಿ ಐಪಿಎಲ್ ಲೆಜೆಂಡ್ ಎಂದು ಕರೆಯಲ್ಪಡುವ ಆಸ್ಟ್ರೇಲಿಯಾ ಆಟಗಾರ ಡೇವಿಡ್ ವಾರ್ನರ್ ಕೂಡ ಅನ್‌ಸೋಲ್ಡ್ ಆಗಿದ್ದಾರೆ. ಅವರ ಮೂಲ ಬೆಲೆಯಾದ 2 ಕೋಟಿ ರೂಪಾಯಿಗೆ ಯಾವುದೇ ಬಿಡ್ ಬಂದಿಲ್ಲ.
IPL Mega Auction 2025 Live: ಅನ್‌ಸೋಲ್ಡ್ ಆದ ಕನ್ನಡಿಗ ದೇವದತ್ ಪಡಿಕ್ಕಲ್
ವಿರಾಮದ ಬಳಿಕ ಐಪಿಎಲ್ ಟೂರ್ನಿ-2025ರ ಮೆಗಾ ಹರಾಜು ಪ್ರಕ್ರಿಯೆ ಮುಂದುವರೆದಿದ್ದು, ಕನ್ನಡಿಗ ದೇವದತ್ ಪಡಿಕ್ಕಲ್ ಅನ್‌ಸೋಲ್ಡ್ ಆಗಿದ್ದಾರೆ. 6.25 ಕೋಟಿಗೆ ಹ್ಯಾರಿ ಬ್ರೂಕ್ ದೆಹಲಿ ತಂಡದ ಪಾಲಾದರೆ, 2 ಕೋಟಿಗೆ ಐಡೆನ್ ಮಾರ್ಕ್ರಾಮ್ ಲಖನೌ ತಂಡದ ಪಾಲಾಗಿದ್ದಾರೆ.
IPL Mega Auction 2025 Live: ಮೆಗಾ ಹರಾಜು ಪ್ರಕ್ರಿಯೆಯಲ್ಲಿ ವಿರಾಮ
ಐಪಿಎಲ್ ಟೂರ್ನಿ-2025ರ ಆಟಗಾರರ ಮೆಗಾ ಹರಾಜು ಪ್ರಕ್ರಿಯೆ ಸಾಕಷ್ಟು ಕುತೂಹಲಕಾರಿ ಆಗಿದ್ದು, ಒಂದೊಂದೇ ದಾಖಲೆಗಳು ಉಡೀಸ್ ಆಗುತ್ತಿವೆ. ಸದ್ಯ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ವಿರಾಮ ತೆಗೆದುಕೊಳ್ಳಲಾಗಿದೆ.
IPL Mega Auction 2025 Live: ಹರಾಜುಗೊಂಡ ಆಟಗಾರರ ಪಟ್ಟಿ ಹೀಗಿದೆ
ಐಪಿಎಲ್ ಟೂರ್ನಿ-2025ರ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಹರಾಜುಗೊಂಡ ಆಟಗಾರರ ಪಟ್ಟಿ ಹೀಗಿದೆ.
- 18 ಕೋಟಿಗೆ ಪಂಜಾಬ್ ಪಾಲಾದ ಅರ್ಷ್ದೀಪ್ ಸಿಂಗ್
- 10.75ಕೋಟಿಗೆ ಗುಜರಾತ್ ತಂಡದ ಪಾಲಾದ ರಬಾಡಾ
- 26.75 ಕೋಟಿಗೆ ಪಂಜಾಬ್ ತಂಡದ ಪಾಲಾದ ಶ್ರೇಯಸ್ ಅಯ್ಯರ್
- 15.75 ಕೋಟಿಗೆ ಗುಜರಾತ್ ತಂಡದ ಪಾಲಾದ ಜೋಸ್ ಬಟ್ಲರ್
- 11.75 ಕೋಟಿಗೆ ದೆಹಲಿ ತಂಡದ ಪಾಲಾದ ಮಿಚಲ್ ಸ್ಟಾರ್ಕ್
- 27 ಕೋಟಿಗೆ ಲಖನೌ ತಂಡದ ಪಾಲಾದ ರಿಷಭ್ ಪಂತ್
- 10 ಕೋಟಿಗೆ ಸನ್‌ರೈಸರ್ಸ್ ಪಾಲಾದ ಮೊಹ್ಮದ್ ಶಮಿ
- 7.50 ಕೋಟಿಗೆ ಲಖನೌ ಸೂಪರ್ ಜೈಂಟ್ಸ್ ಪಾಲಾದ ಡೆವಿಡ್ ಮಿಲ್ಲರ್
- 18 ಕೋಟಿಗೆ ಪಂಜಾಬ್ ಕಿಂಗ್ಸ್ ಪಾಲಾದ ಯಜುವೇಂದ್ರ ಚಹಲ್
- 12.25 ಕೋಟಿಗೆ ಗುಜರಾತ್ ಟೈಟಾನ್ಸ್ ಪಾಲಾದ ಮೊಹ್ಮದ್ ಸಿರಾಜ್
- 14 ಕೋಟಿಗೆ ದೆಹಲಿ ತಂಡದ ಪಾಲಾದ ಕನ್ನಡಿಗ ಕೆಎಲ್ ರಾಹುಲ್
- 8.75 ಕೋಟಿಗೆ ಆರ್‌ಸಿಬಿ ಪಾಲಾದ ಲಿಯಾಮ್ ಲಿವಿಂಗ್‌ಸ್ಟೋನ್
IPL Mega Auction 2025 Live: 14 ಕೋಟಿಗೆ ಕೆ.ಎಲ್.ರಾಹುಲ್ ಹರಾಜು
14 ಕೋಟಿ ರೂ. ಗೆ ಕೆ.ಎಲ್.ರಾಹುಲ್ ದೆಹಲಿ ಕ್ಯಾಪಿಟಲ್ಸ್ ತಂಡದ ಪಾಲಾಗಿದ್ದಾರೆ. ಆ ಮೂಲಕ ಆರ್‌ಸಿಬಿ ಕನ್ನಡಿಗನ ಕೈಬಿಟ್ಟಿದೆ.
KLASSSSS 👌👌
KL Rahul is acquired by @DelhiCapitals for INR 14 Crore💥💥#TATAIPLAuction | #TATAIPL
— IndianPremierLeague (@IPL) November 24, 2024
IPL Mega Auction 2025 Live: ಮೊಹ್ಮದ್ ಸಿರಾಜ್ 12.25 ಕೋಟಿಗೆ ಗುಜರಾತ್ ಪಾಲು
18 ಕೋಟಿ ರೂ.ಗೆ ಯಜುವೇಂದ್ರ ಚಹಲ್ ಪಂಜಾಬ್ ಕಿಂಗ್ಸ್ ಪಾಲಾಗಿದ್ದು, ಮೊಹ್ಮದ್ ಸಿರಾಜ್ 12.25 ಕೋಟಿ ರೂಗೆ ಗುಜರಾತ್ ಟೈಟಾನ್ಸ್ ತಂಡ ಖರೀದಿಸಿದೆ.
IPL Mega Auction 2025 Live: 10 ಕೋಟಿಗೆ ಸನ್‌ರೈಸರ್ಸ್ ಪಾಲಾದ ಮೊಹ್ಮದ್ ಶಮಿ
ಮೊಹ್ಮದ್ ಶಮಿ 10 ಕೋಟಿ ರೂ. ಸನ್‌ರೈಸರ್ಸ್ ಪಾಲಾಗಿದ್ದು, ಡೆವಿಡ್ ಮಿಲ್ಲರ್ 7.50 ಕೋಟಿ ರೂ.ಗೆ ಲಖನೌ ಸೂಪರ್ ಜೈಂಟ್ಸ್ ಪಾಲಾಗಿದ್ದಾರೆ.
IPL Mega Auction 2025 Live: ಐಪಿಎಲ್ ಇತಿಹಾಸದಲ್ಲೇ ದಾಖಲೆ ಮೊತ್ತಕ್ಕೆ ಖರೀದಿಯಾದ ಪಂತ್
ಐಪಿಎಲ್ ಟೂರ್ನಿ-2025ರ ಆಟಗಾರರ ಮೆಗಾ ಹರಾಜು ಪ್ರಕ್ರಿಯೆ ನಡೆದಿದ್ದು, 27 ಕೋಟಿ ರೂ. ಗೆ ರಿಷಭ್ ಪಂತ್ ಲಖನೌ ತಂಡದ ಪಾಲಾಗಿದ್ದಾರೆ. ಆ ಮೂಲಕ ಐಪಿಎಲ್ ಇತಿಹಾಸದಲ್ಲೇ ದಾಖಲೆ ಮೊತ್ತಕ್ಕೆ ಖರೀದಿಯಾಗಿದ್ದಾರೆ.
🚨 𝗠𝗼𝘀𝘁 𝗘𝘅𝗽𝗲𝗻𝘀𝗶𝘃𝗲 𝗣𝗹𝗮𝘆𝗲𝗿 𝗔𝗹𝗲𝗿𝘁 🚨
𝙇𝙚𝙩 𝙏𝙝𝙚 𝘿𝙧𝙪𝙢𝙧𝙤𝙡𝙡𝙨 𝘽𝙚𝙜𝙞𝙣 🥁 🥁
𝗥𝗶𝘀𝗵𝗮𝗯𝗵 𝗣𝗮𝗻𝘁 to 𝗟𝘂𝗰𝗸𝗻𝗼𝘄 𝗦𝘂𝗽𝗲𝗿 𝗚𝗶𝗮𝗻𝘁𝘀 for a gigantic 𝗜𝗡𝗥 𝟮𝟳 𝗖𝗿𝗼𝗿𝗲 🔝⚡️ #TATAIPLAuction | #TATAIPL | @RishabhPant17 | @LucknowIPL |… pic.twitter.com/IE8DabNn4V
— IndianPremierLeague (@IPL) November 24, 2024
IPL Mega Auction 2025 Live: ಗುಜರಾತ್ ತಂಡ ಪಾಲಾದ ಜೋಸ್ ಬಟ್ಲರ್
15.75 ಕೋಟಿಗೆ ಜೋಸ್ ಬಟ್ಲರ್ ಗುಜರಾತ್ ತಂಡದ ಪಾಲಾದರೆ, ಮಿಚೆಲ್ ಸ್ಟಾರ್ಕ್ 11.75 ಕೋಟಿಗೆ ದೆಹಲಿ ತಂಡದ ಪಾಲಾಗಿದ್ದಾರೆ.
IPL Mega Auction 2025 Live: 26.75 ಕೋಟಿಗೆ ಪಂಜಾಬ್ ತಂಡಕ್ಕೆ ಶ್ರೇಯಸ್ ಅಯ್ಯರ್ ಸೇಲ್
26.75 ಕೋಟಿ ರೂ. ಮೊತ್ತಕ್ಕೆ ಶ್ರೇಯಸ್ ಅಯ್ಯರ್ ಪಂಜಾಬ್ ತಂಡದ ಪಾಲಾಗಿದ್ದಾರೆ. ಇದು IPL ಇತಿಹಾಸದಲ್ಲೇ ಅತಿಹೆಚ್ಚು ಮೊತ್ತಕ್ಕೆ ಖರೀದಿಯಾದ ಆಟಗಾರರಾಗಿದ್ದಾರೆ.
𝙃𝙞𝙨𝙩𝙤𝙧𝙞𝙘 𝙎𝙞𝙜𝙣𝙞𝙣𝙜 𝙐𝙣𝙡𝙤𝙘𝙠𝙚𝙙 🔓
Say hello 👋 to the 𝙈𝙤𝙨𝙩 𝙀𝙭𝙥𝙚𝙣𝙨𝙞𝙫𝙚 𝙋𝙡𝙖𝙮𝙚𝙧 in the history of #TATAIPL 🔝
Punjab Kings have Shreyas Iyer on board for a handsome 𝗜𝗡𝗥 𝟮𝟲.𝟳𝟱 𝗖𝗿𝗼𝗿𝗲#TATAIPLAuction | @ShreyasIyer15 | @PunjabKingsIPL pic.twitter.com/z0A1M9MD1Z
— IndianPremierLeague (@IPL) November 24, 2024
IPL Mega Auction 2025 Live: ಗುಜರಾತ್ ಪಾಲಾದ ಕಗಿಸೊ ರಬಾಡಾ
10.75 ಕೋಟಿ ರೂ. ಗುಜರಾತ್ ಟೈಟಾನ್ಸ್ ತಂಡದ ಪಾಲಾದ ಕಗಿಸೊ ರಬಾಡಾ.
𝗔𝗱𝗱𝗶𝗻𝗴 𝘀𝗼𝗺𝗲 𝗽𝗮𝗰𝗲 𝘁𝗼 𝗶𝘁𝘀 𝗮𝗿𝘀𝗲𝗻𝗮𝗹 𝗶𝘀 #GT! ⚡️⚡️
Kagiso Rabada goes the #GT way ✈️
SOLD for INR 10.75 Crore 👍 👍#TATAIPLAuction | #TATAIPL | @KagisoRabada25 | @gujarat_titans pic.twitter.com/GqcLeXbSAl
— IndianPremierLeague (@IPL) November 24, 2024
IPL Mega Auction 2025 Live: ಪಂಜಾಬ್ ಪಾಲಾದ ಅರ್ಷದೀಪ್ ಸಿಂಗ್
ಹರಾಜು ಪ್ರಕ್ರಿಯೆಗೆ ಮೊದಲ ಆಟಗಾರರನಾಗಿ ಆಗಮಿಸಿದ ವೇಗದ ಬೌಲರ್ ಅರ್ಷದೀಪ್ ಸಿಂಗ್ರನ್ನು ಪಂಜಾಬ್ ಕಿಂಗ್ಸ್ ತಂಡ 18 ಕೋಟಿ ರೂ ಗೆ ಖರೀದಿಸಿದೆ.
IPL Mega Auction 2025 Live: ಅಧ್ಯಕ್ಷ ಅರುಣ್ ಧುಮಾಲ್ ಸ್ವಾಗತ ಭಾಷಣ
2025ರ IPL ಟೂರ್ನಿಯ ಮೆಗಾ ಹರಾಜು ಆರಂಭವಾಗಿದ್ದು, ಐಪಿಎಲ್ ಆಡಳಿತ ಮಂಡಳಿ ಅಧ್ಯಕ್ಷ ಅರುಣ್ ಧುಮಾಲ್ ಸ್ವಾಗತ ಭಾಷಣ ಮಾಡಿದರು. ಐಪಿಎಲ್ ಯಶಸ್ಸಿಗೆ ಕಾರಣರಾದ ಬೆಂಬಲಿಗರು ಮತ್ತು ಪ್ರಾಯೋಜಕರಿಗೆ ಧನ್ಯವಾದ ತಿಳಿಸಿದರು.
IPL Mega Auction 2025 Live: 10 ಐಪಿಎಲ್ ಫ್ರಾಂಚೈಸ್ಗಳು, 577 ಆಟಗಾರರು
ಸೌದಿ ಅರೇಬಿಯಾದ ಜಿದ್ಧಾದಲ್ಲಿ ಮಹಾ ಹರಾಜು ಪ್ರಕ್ರಿಯೆ ನಡೆಯುತ್ತಿದ್ದು, 10 ಐಪಿಎಲ್ ಫ್ರಾಂಚೈಸ್‌ಗಳಿಂದ 577 ಆಟಗಾರರ ಪಟ್ಟಿಯಲ್ಲಿನ ಆಟಗಾರರಿಗಾಗಿ ಹರಾಜು ನಡೆಯುತ್ತಿದೆ.
IPL Mega Auction 2025 Live: ತಮ್ಮ ಮೂಲ ಬೆಲೆ ಘೋಷಿಸಿಕೊಂಡ ಆಟಗಾರರು
ಈಗಾಗಲೇ ಕನ್ನಡಿಗ ಕೆ.ಎಲ್.ರಾಹುಲ್, ಮತ್ತೊಬ್ಬರ ಡೆಲ್ಲಿ ಹಿಟ್ಟರ್ ರಿಷಬ್ ಪಂತ್ ಹಾಗೂ ಚಾಂಪಿಯನ್ ಕ್ಯಾಪ್ಟನ್ ಶ್ರೇಯಸ್ ಅಯ್ಯರ್ ಈ ಮೂವರು ಕೂಡ ಐಪಿಎಲ್ ಹರಾಜಿಗೆ ತಮ್ಮ ಮೂಲ ಬೆಲೆ ಘೋಷಿಸಿಕೊಂಡಿದ್ದಾರೆ.
Published On - Nov 24,2024 3:19 PM