ಆ ಮ್ಯಾಜಿಕ್ ನಡೆದರೆ ಮಾತ್ರ ಹೈದರಾಬಾದ್​​ಗೆ ಚಾನ್ಸ್; ಟಾಪ್ 2ನಲ್ಲಿರಲು ಆರ್​​ಸಿಬಿ ಏನು ಮಾಡಬೇಕು?

ಐಪಿಎಲ್ ಪ್ಲೇಆಫ್ ಟಾಪ್-2 ಸ್ಥಾನಕ್ಕಾಗಿ RCB, SRH, GT ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟಿದೆ. GT ಈಗಾಗಲೇ ಟಾಪ್-2 ಭದ್ರಪಡಿಸಿಕೊಂಡಿದೆ. ಶುಕ್ರವಾರದ RCB vs SRH ಪಂದ್ಯ ನಿರ್ಣಾಯಕವಾಗಿದ್ದು, SRH ಗೆ ಟಾಪ್-2 ತಲುಪಲು ಬೃಹತ್ ಅಂತರದ ಗೆಲುವು ಅನಿವಾರ್ಯವಾಗಿದೆ. RCB ಬೌಲಿಂಗ್ ಬಲದಿಂದ ತನ್ನ ಸ್ಥಾನ ಉಳಿಸಿಕೊಳ್ಳುವ ಆಶಾಭಾವದಲ್ಲಿದೆ.

ಆ ಮ್ಯಾಜಿಕ್ ನಡೆದರೆ ಮಾತ್ರ ಹೈದರಾಬಾದ್​​ಗೆ ಚಾನ್ಸ್; ಟಾಪ್ 2ನಲ್ಲಿರಲು ಆರ್​​ಸಿಬಿ ಏನು ಮಾಡಬೇಕು?
ಎಸ್​​ಆರ್​​ಎಚ್​​-ಆರ್​​ಸಿಬಿ

Updated on: May 22, 2026 | 7:41 AM

ಐಪಿಎಲ್‌ನ ಪ್ಲೇಆಫ್ ರೇಸ್ ರೋಚಕ ಹಂತ ತಲುಪಿದ್ದು, ಟಾಪ್-2 ಸ್ಥಾನವನ್ನು ಅಲಂಕರಿಸಲು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB), ಗುಜರಾತ್ ಟೈಟನ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಶುಕ್ರವಾರ ಹೈದರಾಬಾದ್‌ನಲ್ಲಿ ನಡೆಯಲಿರುವ ಇವೆರಡೂ ತಂಡಗಳ ನಡುವಿನ ಮುಖಾಮುಖಿ ಪಂದ್ಯವೇ ಈ ಸ್ಥಾನವನ್ನು ನಿರ್ಧರಿಸಲಿದೆ.

ಗುರುವಾರ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗುಜರಾತ್ ಟೈಟಾನ್ಸ್ ತಂಡ 89 ರನ್‌ಗಳ ಬೃಹತ್ ಜಯ ದಾಖಲಿಸಿದೆ. ಈ ಭರ್ಜರಿ ಗೆಲುವಿನೊಂದಿಗೆ ಜಿಟಿ ತಂಡ +0.695 ನೆಟ್ ರನ್ ರೇಟ್ ಹೊಂದುವ ಮೂಲಕ ಪ್ಲೇಆಫ್‌ನಲ್ಲಿ ಅಗ್ರ ಎರಡು ಸ್ಥಾನಗಳಲ್ಲಿ ಒಂದನ್ನು ಖಚಿತಪಡಿಸಿಕೊಂಡಿದೆ. ಜಿಟಿಯ ಈ ಗೆಲುವಿನಿಂದಾಗಿ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಟಾಪ್ 2 ಪ್ರವೇಶಿಸುವ ಅವಕಾಶ ಕೈತಪ್ಪಿದ್ದು, ಮುಂಬೈ ಇಂಡಿಯನ್ಸ್ ವಿರುದ್ಧ ಗೆದ್ದು 3 ಅಥವಾ 4ನೇ ತಂಡವಾಗಿ ಪ್ಲೇಆಫ್ ಪ್ರವೇಶಿಸುವತ್ತ ಮಾತ್ರ ಗಮನ ನೀಡಬೇಕಿದೆ.

ಪ್ರಸ್ತುತ ಆರ್‌ಸಿಬಿ ತಂಡ 18 ಅಂಕಗಳು ಮತ್ತು +1.065 ನೆಟ್ ರನ್ ರೇಟ್‌ನೊಂದಿಗೆ ಟಾಪ್-2 ತಲುಪುವ ಬಲಿಷ್ಠ ರೇಸ್‌ನಲ್ಲಿದೆ. ಆದರೆ 16 ಅಂಕ ಹೊಂದಿರುವ ಸನ್‌ರೈಸರ್ಸ್‌ಗೆ (+0.350 NRR) ಆರ್‌ಸಿಬಿಯನ್ನು ಹಿಂದಿಕ್ಕಲು ಒಂದು ಸಣ್ಣ ಅವಕಾಶವಿದೆ. ಎಸ್‌ಆರ್‌ಹೆಚ್ ಟಾಪ್-2 ತಲುಪಬೇಕಾದರೆ ಆರ್‌ಸಿಬಿ ವಿರುದ್ಧ ಜಿಟಿ ಮಾದರಿಯಲ್ಲೇ ಬೃಹತ್ ಗೆಲುವು ಸಾಧಿಸಬೇಕಾಗುತ್ತದೆ.

ಲೆಕ್ಕಾಚಾರ ಹೀಗಿದೆ:

ಮೊದಲು ಬ್ಯಾಟಿಂಗ್ ಮಾಡಿದರೆ: ಎಸ್‌ಆರ್‌ಹೆಚ್ 180 ರಿಂದ 240 ರನ್ ಗಳಿಸಿದರೆ, ಆರ್‌ಸಿಬಿ ವಿರುದ್ಧ 87 ರಿಂದ 89 ರನ್‌ಗಳ ಅಂತರದ ದೊಡ್ಡ ಜಯ ಸಾಧಿಸಬೇಕು.

ಚೇಸಿಂಗ್ ಮಾಡಿದರೆ: ಆರ್‌ಸಿಬಿ ನೀಡುವ ಗುರಿಯನ್ನು ಕೇವಲ 11 ರಿಂದ 11.4 ಓವರ್‌ಗಳ ಒಳಗಾಗಿ ಬೆನ್ನಟ್ಟಬೇಕಾಗುತ್ತದೆ.

ಇದನ್ನೂ ಓದಿ: ಶಾಪದ ನಂಬರ್​ ಆಯ್ತಾ 49? ಆರ್​​ಸಿಬಿ ಟ್ರೋಲ್ ಮಾಡಿದವರಿಗೆ ಕಾಡುತ್ತಿದೆ ಶನಿ

ಆರ್​​ಸಿಬಿ ಬೌಲಿಂಗ್ ಪರಿಣಾಮಕಾರಿಯಾಗಿದೆ. ಇಂದಿನ ಪಂದ್ಯದಲ್ಲಿ ಹೈದರಾಬಾದ್ ವಿರುದ್ಧ ಸಾಧಾರಣ ಗೆಲುವು ಕಂಡರೆ ಅಥವಾ ನೆಕ್ ಟು ನೆಕ್ ಫೈಟ್ ಕೊಟ್ಟು ಸೋತರೂ ಮೊದಲು ಅಥವಾ ಎರಡನೇ ಸ್ಥಾನವನ್ನು ಆರ್​​ಸಿಬಿ ಉಳಿಸಿಕೊಳ್ಳಲಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:40 am, Fri, 22 May 26

Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow Us