MPL 2025: ಭೋಪಾಲ್ vs ಜಬಲ್ಪುರ್ ನಡುವಣ ಪಂದ್ಯ ರದ್ದು

MPL 2025: 2024 ರಲ್ಲಿ ಆರಂಭವಾದ ಮಧ್ಯಪ್ರದೇಶ್ ಪ್ರೀಮಿಯರ್ ಲೀಗ್​ನ 2ನೇ ಸೀಸನ್ ಶುರುವಾಗಿದೆ. ಈ ಬಾರಿಯ ಟೂರ್ನಿಯಲ್ಲಿ ಗ್ವಾಲಿಯರ್ ಚೀತಾಸ್, ಭೋಪಾಲ್ ಲೆಪರ್ಡ್ಸ್, ಜಬಲ್ಪುರ್ ರಾಯಲ್ ಲಯನ್ಸ್, ರೇವಾ ಜಾಗ್ವಾರ್ಸ್, ಇಂದೋರ್ ಪಿಂಕ್ ಪ್ಯಾಂಥರ್ಸ್, ಚಂಬಲ್ ಘರಿಯಾಲ್ಸ್, ಬುಂದೇಲ್‌ಖಂಡ್ ಬುಲ್ಸ್ ತಂಡಗಳು ಕಣಕ್ಕಿಳಿಯುತ್ತಿವೆ.

MPL 2025: ಭೋಪಾಲ್ vs ಜಬಲ್ಪುರ್ ನಡುವಣ ಪಂದ್ಯ ರದ್ದು
Mpl

Updated on: Jun 14, 2025 | 10:50 AM

ಮಧ್ಯಪ್ರದೇಶ್ ಪ್ರೀಮಿಯರ್ ಲೀಗ್‌ನ ಎರಡನೇ ಪಂದ್ಯ ಮಳೆಯಿಂದ ರದ್ದಾಗಿದೆ. ಶ್ರೀಮಂತ್ ಮಾಧವರಾವ್ ಸಿಂಧಿಯಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಜಬಲ್ಪುರ್ ರಾಯಲ್ ಲಯನ್ಸ್ ಮತ್ತು ಭೋಪಾಲ್ ಲೆಪರ್ಡ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಮ್ಯಾಚ್​ನಲ್ಲಿ​ ಟಾಸ್ ಗೆದ್ದ ಜಬಲ್ಪುರ್ ರಾಯಲ್ ಲಯನ್ಸ್ ಸರನ್ಶ್ ಜೈನ್ ಬೌಲಿಂಗ್ ಆಯ್ದುಕೊಂಡಿದ್ದರು.

ಅದರಂತೆ ಮೊದಲು ಬ್ಯಾಟ್ ಮಾಡಿದ ಭೋಪಾಲ್ ಲೆಪರ್ಡ್ಸ್ ಪರ ವಿಕೆಟ್ ಕೀಪರ್ ಬ್ಯಾಟರ್ ಯಶ್ ದುಬೆ 35 ರನ್ ಬಾರಿಸಿದರು. ಇನ್ನು ಮಧ್ಯಮ ಕ್ರಮಾಂಕದಲ್ಲಿ ಮಾಧವ್ ತಿವಾರಿ 31 ರನ್​ಗಳ ಕೊಡಗೆ ನೀಡಿದರು. ಈ ಮೂಲಕ ಭೋಪಾಲ್ ಲೆಪರ್ಡ್ಸ್ ತಂಡವು 16 ಓವರ್​ಗಳಲ್ಲಿ 130 ರನ್ ಕಲೆಹಾಕಿತು.

ಈ ವೇಳೆ ಮಳೆ ಬರಲಾರಂಭಿಸಿದ್ದು, ಹೀಗಾಗಿ ಪಂದ್ಯದವನ್ನು ಅರ್ಧದಲ್ಲೇ ಸ್ಥಗಿತಗೊಳಿಸಲಾಯಿತು. ಇನ್ನು  ಒಂದೂವರೆ ಗಂಟೆಗಳಿಗಿಂತ ಹೆಚ್ಚು ಕಾಲ ನಿರಂತರ ಸುರಿದ ಮಳೆಯಿಂದಾಗಿ ಮೈದಾನದಲ್ಲಿ ನೀರು ತುಂಬಿಕೊಂಡಿತು. ಹೀಗಾಗಿ ಪಂದ್ಯವನ್ನು ರದ್ದಗೊಳಿಸಲು ನಿರ್ಧರಿಸಲಾಗಿದೆ. ಇತ್ತ ಮಳೆಯಿಂದಾಗಿ ಪಂದ್ಯ ರದ್ದಾದ ಕಾರಣ, ಉಭಯ ತಂಡಗಳು ತಲಾ ಒಂದೊಂದು ಅಂಕಗಳನ್ನು ಹಂಚಿಕೊಂಡಿದೆ.

ಜಬಲ್ಪುರ್ ರಾಯಲ್ ಲಯನ್ಸ್ ಪ್ಲೇಯಿಂಗ್ 11: ಆಕರ್ಷ್ ಸಿಂಗ್ , ಧರ್ಮೇಶ್ ಪಟೇಲ್ , ಅಭಿಷೇಕ್ ಭಂಡಾರಿ ( ವಿಕೆಟ್ ಕೀಪರ್ ) , ಅನುಭವ್ ಅಗರ್ವಾಲ್ , ಸರನ್ಶ್ ಜೈನ್ (ನಾಯಕ) , ರಿತೇಶ್ ಶಾಕ್ಯಾ , ಸಂಜೋಗ್ ನಿಜ್ಜರ್ , ರಿತಿಕ್ ತಾಡಾ , ರಾಹುಲ್ ಬಾಥಮ್ , ಸಿದ್ಧಾರ್ಥ್ ಪಾಟಿದಾರ್ , ಪಂಕಜ್ ಪಟೇಲ್.

ಇದನ್ನೂ ಓದಿ: ಬವುಮಾ ಭರ್ಜರಿ ಬ್ಯಾಟಿಂಗ್​ಗೆ ಬಾಬರ್ ವಿಶ್ವ ದಾಖಲೆಯೇ ಬ್ರೇಕ್

ಭೋಪಾಲ್ ಲೆಪರ್ಡ್ಸ್ ಪ್ಲೇಯಿಂಗ್ 11: ಯಶ್ ದುಬೆ (ವಿಕೆಟ್ ಕೀಪರ್) , ಶಿವಂಗ್ ಕುಮಾರ್ , ಹರ್ಷ್ ದೀಕ್ಷಿತ್ , ಅನಿಕೇತ್ ವರ್ಮಾ , ಗೌತಮ್ ರಘುವಂಶಿ , ಹಿಮಾಂಶು ಶಿಂಧೆ , ಮಾಧವ್ ತಿವಾರಿ , ಅರ್ಷದ್ ಖಾನ್ (ನಾಯಕ) , ಕಮಲ್ ತ್ರಿಪಾಠಿ , ಆಯುಷ್ ಮಾನ್ಕರ್ , ಅಕ್ಷಯ್ ಸಿಂಗ್.

 

 

Published On - 10:49 am, Sat, 14 June 25