RCB ಗೆಲುವಿಗೆ ಮಹಾನಾರ್ಯಮನ್ ಸಿಂಧಿಯಾ ಅಭಿನಂದನೆ
Madhya Pradesh League: ಮಧ್ಯಪ್ರದೇಶ ಪ್ರೀಮಿಯರ್ ಲೀಗ್ಗೆ (MPL 2025) ದಿನಗಣನೆ ಶುರುವಾಗಿದೆ. ಮಹಾನಾರ್ಯಮನ್ ಸಿಂಧಿಯಾ ಅಧ್ಯಕ್ಷರಾಗಿರುವ ಈ ಟೂರ್ನಿಯು ಜೂನ್ 12 ರಿಂದ ಶುರುವಾಗಿದೆ. ಅದಕ್ಕೂ ಮುನ್ನ ಎಂಪಿಎಲ್ನಲ್ಲಿರುವ ಆಟಗಾರ ರಜತ್ ಪಾಟಿದಾರ್ ನಾಯಕತ್ವದಲ್ಲಿ ಆರ್ಸಿಬಿ ತಂಡ ಕಪ್ ಗೆದ್ದಿರುವುದಕ್ಕೆ ಮಹಾನಾರ್ಯಮನ್ ಸಿಂಧಿಯಾ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

IPL 2025: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-18 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಅದು ಕೂಡ 18 ವರ್ಷಗಳ ದೀರ್ಘ ಕಾಯುವಿಕೆಯ ನಂತರ. ಈ ಐತಿಹಾಸಿಕ ಗೆಲುವಿನ ಬೆನ್ನಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಜಿಡಿಸಿಎ ಉಪಾಧ್ಯಕ್ಷ ಮತ್ತು ಮಧ್ಯಪ್ರದೇಶ ಕ್ರಿಕೆಟ್ ಲೀಗ್ ಅಧ್ಯಕ್ಷ ಮಹಾನಾರ್ಯಮನ್ ಸಿಂಧಿಯಾ ಅವರು ಅಭಿನಂದನೆ ಸಲ್ಲಿಸಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ ಕಪ್ ಗೆಲ್ಲಲು 18 ವರ್ಷಗಳನ್ನು ತೆಗೆದುಕೊಂಡಿದೆ. ಕೊನೆಗೂ ಮಧ್ಯ ಪ್ರದೇಶದವ ಆರ್ಸಿಬಿ ತಂಡಕ್ಕೆ ಟ್ರೋಫಿ ಗೆದ್ದುಕೊಡುವಲ್ಲಿ ಯಶಸ್ವಿಯಾಗಿದ್ದೇನೆ. ರಜತ್ ಪಾಟಿದಾರ್ ನೀವು ನಿಜವಾದ ನಾಯಕ! ಬೆಂಗಳೂರು ತಂಡಕ್ಕೆ ಅಭಿನಂದನೆಗಳು ಎಂದು ಮಹಾನಾರ್ಯಮನ್ ಸಿಂಧಿಯಾ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಮಹಾನಾರ್ಯಮನ್ ಸಿಂಧಿಯಾ ಪೋಸ್ಟ್
ಇಲ್ಲಿ ಮಹಾನಾರ್ಯಮನ್ ಸಿಂಧಿಯಾ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಕಪ್ ಗೆಲ್ಲಲು ಮಧ್ಯಪ್ರದೇಶದ ಯೋಧನ ಅಗತ್ಯವಿತ್ತು ಎಂದಿರುವುದು ರಜತ್ ಪಾಟಿದಾರ್ ಅವರನ್ನು ಪ್ರಸ್ತಾಪಿಸಿ. ಪಾಟಿದಾರ್ ಮಧ್ಯ ಪ್ರದೇಶದ ಆಟಗಾರ. ಇದನ್ನೇ ಪ್ರಸ್ತಾಪಿಸಿ ಆರ್ಸಿಬಿ ತಂಡಕ್ಕೆ ಕಪ್ ಗೆದ್ದುಕೊಡುವಲ್ಲಿ ಮಧ್ಯ ಪ್ರದೇಶದ ಆಟಗಾರನ ಕೊಡುಗೆಯನ್ನು ಸಿಂಧಿಯಾ ಕೊಂಡಾಡಿದ್ದಾರೆ.
ಇನ್ನು ಐಪಿಎಲ್ ಮುಕ್ತಾಯದ ಬೆನ್ನಲ್ಲೇ, ಅಂದರೆ ಜೂನ್ 12 ರಿಂದ ಮಧ್ಯ ಪ್ರದೇಶ್ ಪ್ರೀಮಿಯರ್ ಲೀಗ್ ಶುರುವಾಗಲಿದೆ. ಈ ಲೀಗ್ನ ಅಧ್ಯಕ್ಷರು ಮಹಾನಾರ್ಯಮನ್ ಸಿಂಧಿಯಾ. ಅಲ್ಲದೆ ಈ ಲೀಗ್ನಲ್ಲಿ ರಜತ್ ಪಾಟಿದಾರ್ ಗ್ವಾಲಿಯರ್ ಚೀತಾ ತಂಡಕ್ಕಾಗಿ ಆಡಲಿದ್ದಾರೆ.
ಇದನ್ನೂ ಓದಿ: MPL ತಂಡಗಳ ಜೆರ್ಸಿ ಅನಾವರಣಗೊಳಿಸಿದ ಮಹಾನಾರ್ಯಮನ್ ಸಿಂಧಿಯಾ
ಮಧ್ಯ ಪ್ರದೇಶ್ ಪ್ರೀಮಿಯರ್ ಲೀಗ್ನಲ್ಲಿ ಈ ವರ್ಷ 7 ಪುರುಷ ತಂಡಗಳು ಮತ್ತು 3 ಮಹಿಳಾ ತಂಡಗಳು ಕಣಕ್ಕಿಳಿಯಲಿವೆ. ಜೂನ್ 12 ರಿಂದ ಶುರುವಾಗಲಿರುವ ಈ ಟೂರ್ನಿಯ ಎಲ್ಲಾ ಪಂದ್ಯಗಳು ಗ್ವಾಲಿಯರ್‌ನ ಶ್ರೀಮಂತ್ ಮಾಧವರಾವ್ ಸಿಂಧಿಯಾ ಕ್ರೀಡಾಂಗಣದಲ್ಲಿ ನಡೆಯಲಿವೆ.
