MPL ತಂಡಗಳ ಜೆರ್ಸಿ ಅನಾವರಣಗೊಳಿಸಿದ ಮಹಾನಾರ್ಯಮನ್ ಸಿಂಧಿಯಾ
Madhya Pradesh League: 2024 ರಲ್ಲಿ ಶುರುವಾದ ಮಧ್ಯಪ್ರದೇಶ ಪ್ರೀಮಿಯರ್ ಲೀಗ್ನ (MPL 2025) 2ನೇ ಸೀಸನ್ಗೆ ಸಿದ್ಧತೆಗಳು ಶುರುವಾಗಿದೆ. ಇದರ ಮೊದಲ ಹೆಜ್ಜೆಯಾಗಿ ಇದೀಗ ಮಧ್ಯಪ್ರದೇಶ ಪ್ರೀಮಿಯರ್ ಲೀಗ್ನ ಅಧ್ಯಕ್ಷರಾದ ಮಹಾನಾರ್ಯಮನ್ ಸಿಂಧಿಯಾ ಅವರು 10 ತಂಡಗಳ ನೂತನ ಜೆರ್ಸಿಗಳನ್ನು ಅನಾವರಣಗೊಳಿಸಿದ್ದಾರೆ.

ಜೂನ್ 12 ರಂದು ಆರಂಭವಾಗಲಿರುವ ಮಧ್ಯಪ್ರದೇಶ ಪ್ರೀಮಿಯರ್ ಲೀಗ್ನ (MPL) 10 ತಂಡಗಳ ಜೆರ್ಸಿಗಳನ್ನು ಎಂಪಿಎಲ್ನ ಅಧ್ಯಕ್ಷರಾದ ಮಹಾನಾರ್ಯಮನ್ ಸಿಂಧಿಯಾ ಅನಾವರಣಗೊಳಿಸಿದ್ದಾರೆ. ಗ್ವಾಲಿಯರ್‌ನ ಶಂಕರ್‌ಪುರದಲ್ಲಿರುವ ಶ್ರೀಮಂತ್ ಮಾಧವರಾವ್ ಸಿಂಧಿಯಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಫ್ರಾಂಚೈಸಿಗಳ ಮಾಲೀಕರು ಹಾಗೂ ಮಧ್ಯ ಪ್ರದೇಶ್ ಕ್ರಿಕೆಟ್ ಅಸೋಸಿಯೇಷನ್ನ ಅಧಿಕಾರಿಗಳು ಉಪಸ್ಥಿತರಿದ್ದರು.
2024 ರಲ್ಲಿ ನಡೆದ ಮಧ್ಯಪ್ರದೇಶ ಪ್ರೀಮಿಯರ್ ಲೀಗ್ ಅನ್ನು ಗ್ವಾಲಿಯರ್ನಲ್ಲಿ ಆಯೋಜಿಸಲಾಗಿತ್ತು. ಇದೀಗ ಎರಡನೇ ಆವೃತ್ತಿಯನ್ನು ಸಹ ಅಲ್ಲೇ ಆಯೋಜಿಸಲು ನಿರ್ಧರಿಸಲಾಗಿದೆ. ಇದೀಗ ಸೀಸನ್-2ರ ಸಿದ್ಧತೆಗಳು ಆರಂಭವಾಗಿದ್ದು, ಅದರ ಮೊದಲ ಹೆಜ್ಜೆಯಾಗಿ ಇದೀಗ 10 ತಂಡಗಳ ಜೆರ್ಸಿಗಳನ್ನು ಅನಾವರಣಗೊಳಿಸಲಾಗಿದೆ.
ಮಧ್ಯಪ್ರದೇಶ ಲೀಗ್ ಮತ್ತು ತಂಡಗಳ ಜೆರ್ಸಿಗಳ ಬಗ್ಗೆ ಮಾತನಾಡಿದ ಎಂಪಿಎಲ್ನ ಅಧ್ಯಕ್ಷ ಮಹಾನಾರ್ಯಮನ್ ಸಿಂಧಿಯಾ, ಜೆರ್ಸಿ ಅನಾವರಣವು ಮುಂಬರುವ ರೋಮಾಂಚಕಾರಿ ಸೀಸನ್ಗೆ ನಾಂದಿ ಹಾಡುತ್ತದೆ. ಮಧ್ಯಪ್ರದೇಶ ಲೀಗ್ ಕ್ರಿಕೆಟ್ ಪ್ರತಿಭೆ ಮತ್ತು ಪ್ರಾದೇಶಿಕ ಹೆಮ್ಮೆಯ ಆಚರಣೆಯಾಗಿ ಹೊರಹೊಮ್ಮಿದೆ. ಈ ವರ್ಷ, ನಾವು ಲೀಗ್ ಅನ್ನು ವಿಸ್ತರಿಸುವುದಲ್ಲದೆ, ಮಹಿಳಾ ಸ್ಪರ್ಧೆಯನ್ನು ಸಹ ಪರಿಚಯಿಸುತ್ತಿದ್ದೇವೆ, ಇದು ಒಳಗೊಳ್ಳುವಿಕೆ ಮತ್ತು ಬೆಳವಣಿಗೆಗೆ ನಮ್ಮ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದರು.

ಎಂಪಿಎಲ್ ಜೆರ್ಸಿ ಅನಾವರಣ
ಇನ್ನು ಮಧ್ಯಪ್ರದೇಶ ಲೀಗ್ ಸೀಸನ್ 2 ರ ಮೇಲೆ ಸಾಕಷ್ಟು ನಿರೀಕ್ಷೆ ಇದೆ. ತಂಡಗಳ ಜೆರ್ಸಿಗಳು ಆಯಾ ಪ್ರದೇಶಗಳ ಉತ್ಸಾಹವನ್ನು ಪ್ರತಿನಿಧಿಸುತ್ತವೆ. ಅಲ್ಲದೆ ಲೀಗ್ ಅಭಿಮಾನಿಗಳಿಗೆ ರೋಮಾಂಚಕ ಕ್ರಿಕೆಟ್ ನೀಡುತ್ತದೆ. ಇವೆಲ್ಲಕ್ಕಿಂತ ಮುಖ್ಯವಾಗಿ ರಾಜ್ಯದ ಹೊಸ ಪ್ರತಿಭೆಗಳನ್ನು ಬೆಳಕಿಗೆ ತರಲಿದೆ ಎಂಬ ವಿಶ್ವಾಸ ನಮಗಿದೆ’ ಎಂದು ಜಿಡಿಸಿಎ ಅಧ್ಯಕ್ಷ ಪ್ರಶಾಂತ್ ಮೆಹ್ತಾ ಹೇಳಿದರು.
ಅಂದಹಾಗೆ ಎಂಪಿಎಲ್ ಅನ್ನು ಮಧ್ಯ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಆಶ್ರಯದಲ್ಲಿ ಗ್ವಾಲಿಯರ್ ಡಿವಿಷನ್ ಕ್ರಿಕೆಟ್ ಅಸೋಸಿಯೇಷನ್ (ಜಿಡಿಸಿಎ) ಆಯೋಜಿಸಲಾಗುತ್ತದೆ. ಈ ಟೂರ್ನಿಯಲ್ಲಿ ಕಳೆದ ಬಾರಿ 5 ಪುರುಷರ ತಂಡಗಳು ಕಣಕ್ಕಿಳಿದರೆ, ಈ ಬಾರಿ 7 ತಂಡಗಳು ಆಡಲಿವೆ.
ಮಹಿಳಾ ಟೂರ್ನಿ ಆಯೋಜನೆ:
ಈ ಬಾರಿ ಪುರುಷರ ಲೀಗ್ನೊಂದಿಗೆ ಮಹಿಳಾ ಟಿ20 ಟೂರ್ನಿಯನ್ನು ಆಯೋಜಿಸಲು ಸಹ ನಿರ್ಧರಿಸಲಾಗಿದೆ. ಇದಕ್ಕಾಗಿ ಒಟ್ಟು ಮೂರು ತಂಡಗಳನ್ನು ಪರಿಚಯಿಸಲಾಗುತ್ತದೆ. ಅದರಲ್ಲಿ ಒಂದು ತಂಡ ರಾಜಧಾನಿ ಭೋಪಾಲ್ ಅನ್ನು ಪ್ರತಿನಿಧಿಸುತ್ತದೆ.
ಮಧ್ಯಪ್ರದೇಶ ಪ್ರೀಮಿಯರ್ ಲೀಗ್ನ ತಂಡಗಳು:
ಪುರುಷರ ತಂಡಗಳು : ಗ್ವಾಲಿಯರ್ ಚೀತಾಸ್, ಭೋಪಾಲ್ ಲೆಪರ್ಡ್ಸ್, ಜಬಲ್ಪುರ್ ರಾಯಲ್ ಲಯನ್ಸ್, ರೇವಾ ಜಾಗ್ವಾರ್ಸ್, ಇಂದೋರ್ ಪಿಂಕ್ ಪ್ಯಾಂಥರ್ಸ್, ಚಂಬಲ್ ಘರಿಯಾಲ್ಸ್, ಬುಂದೇಲ್‌ಖಂಡ್ ಬುಲ್ಸ್.
ಇದನ್ನೂ ಓದಿ: TV9 ನೆಟ್ವರ್ಕ್ನ ಇಂಡಿಯನ್ ಟೈಗರ್ಸ್-ಟೈಗ್ರೆಸಸ್ ಟ್ಯಾಲೆಂಟ್ ಹಂಟ್ಗೆ ಮಹಾನಾರ್ಯಮನ್ ಸಿಂಧಿಯಾ ರಾಯಭಾರಿ
ಮಹಿಳಾ ತಂಡಗಳು : ಚಂಬಲ್ ಘರಿಯಾಲ್ಸ್, ಭೋಪಾಲ್ ವುಲ್ವ್ಸ್, ಬುಂದೇಲ್‌ಖಂಡ್ ಬುಲ್ಸ್
Published On - 9:34 am, Wed, 28 May 25
