
ಭಾರತದ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಆತಿಥೇಯ ಐರ್ಲೆಂಡ್ (India vs Ireland) ನಿರೀಕ್ಷೆಗೂ ಮೀರಿದ ಪ್ರದರ್ಶನ ನೀಡಿದೆ. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಐರ್ಲೆಂಡ್ ನಿಯಮಿತ ಅಂತರದಲ್ಲಿ ವಿಕಟ್ ಕಳೆದುಕೊಂಡರೂ, ಬಂದ ಬಂದವರೆಲ್ಲ ಹೊಡಿಬಡಿ ಆಟವನ್ನು ಪ್ರದರ್ಶಿಸಿದರು. ಇದರ ಫಲವಾಗಿ ಭಾರತದ ಬಲಿಷ್ಠ ಬೌಲಿಂಗ್ನೆಂದರು ಐರ್ಲೆಂಡ್ 20 ಓವರ್ಗಳಲ್ಲಿ 183 ರನ್ ಕಲೆಹಾಕಿತು. ಭಾರತದ ಬಲಿಷ್ಠ ಬ್ಯಾಟಿಂಗ್ ವಿಭಾಗವನ್ನು ನೋಡಿದವರು ಇದು ಸುಲಭ ಗುರಿಯಾಗುತ್ತದೆ ಎಂದೇ ಭಾವಿಸಿದ್ದರು. ಆದರೆ ಇದಕ್ಕೆ ಐರ್ಲೆಂಡ್ ಅವಕಾಶ ಮಾಡಿಕೊಡಲಿಲ್ಲ. ಐರ್ಲೆಂಡ್ ಪರ ಅಂತರರಾಷ್ಟ್ರೀಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ ಭಾರತದ ಮೂಲದ ಜೈ ಮುಂಧ್ರಾ (Jai Moondra) ತಾವು ಬೌಲ್ ಮಾಡಿದ ಮೊದಲ ಓವರ್ ಮೊದಲ ಎಸೆತದಲ್ಲೇ ಭಾರತಕ್ಕೆ ಶಾಕ್ ನೀಡಿದರು.
ರಾಜಸ್ಥಾನ ಮೂಲದ ಬೌಲಿಂಗ್ ಆಲ್‌ರೌಂಡರ್ ಜೈ ಮುಂಧ್ರಾ ತಮ್ಮ ಮೊದಲ ಎಸೆತದಲ್ಲೇ ಇತಿಹಾಸ ನಿರ್ಮಿಸಿ ಭಾರತದ ಅನುಭವಿ ಆರಂಭಿಕ ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್ ಅವರನ್ನು ಬೌಲ್ಡ್ ಮಾಡಿದರು. ಇನ್ನಿಂಗ್ಸ್‌ನ ಎರಡನೇ ಓವರ್ ಮತ್ತು ಅವರ ಅಂತರರಾಷ್ಟ್ರೀಯ ವೃತ್ತಿಜೀವನದ ಮೊದಲ ಓವರ್ ಬೌಲಿಂಗ್ ಮಾಡಲು ಬಂದ ಜೈ ಮುಂಧ್ರಾ, ಸಂಜು ಸ್ಯಾಮ್ಸನ್ ಅವರ ವಿಕೆಟ್ ಪಡೆದು ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ತಮ್ಮ ವಿಕೆಟ್ಗಳ ಖಾತೆಯನ್ನು ತೆರೆದರು.
ಇದರೊಂದಿಗೆ, ಜೈ ಮುಂಧ್ರಾ ತಮ್ಮ ಚೊಚ್ಚಲ ಅಂತರರಾಷ್ಟ್ರೀಯ ಟಿ20 ಪಂದ್ಯದ ಮೊದಲ ಎಸೆತದಲ್ಲೇ ವಿಕೆಟ್ ಪಡೆದ ಎರಡನೇ ಐರಿಶ್ ಬೌಲರ್ ಎನಿಸಿಕೊಂಡರು. ಇದಕ್ಕೂ ಮೊದಲು, ಮ್ಯಾಥ್ಯೂ ಹಂಫ್ರೀಸ್ ಈ ಸಾಧನೆ ಮಾಡಿದ್ದರು. ಪಂಜಾಬ್ ಮೂಲದ ಸಿಮಿ ಸಿಂಗ್ ನಂತರ ಐರ್ಲೆಂಡ್ ಪರ ಆಡಿದ ಎರಡನೇ ಭಾರತೀಯ ಮೂಲದ ಕ್ರಿಕೆಟಿಗ ಜೈ ಮುಂಧ್ರಾ ಎಂಬುದು ಇಲ್ಲಿ ಗಮನಿಸಬೇಕಾದ ಸಂಗತಿಯಾಗಿದೆ.
IND vs IRE: 34 ರನ್ಗಳಿಂದ ಹೀನಾಯವಾಗಿ ಸೋಲಿಸಿ ಟೀಂ ಇಂಡಿಯಾದ ಅಹಂ ಮುರಿದ ಐರ್ಲೆಂಡ್
ಜನವರಿ 10, 1997 ರಂದು ರಾಜಸ್ಥಾನದ ಟೋಂಕ್‌ನಲ್ಲಿ ಜನಿಸಿದ ಜೇ ಮುಂಧ್ರಾ ಬಾಲ್ಯದಿಂದಲೂ ಕ್ರಿಕೆಟ್ ಬಗ್ಗೆ ಒಲವು ಹೊಂದಿದ್ದರು. ಹೀಗಾಗಿ ಅವರು ರಾಜಸ್ಥಾನ ಪರ 14 ವರ್ಷದೊಳಗಿನವರ ಕ್ರಿಕೆಟ್ ಕೂಡ ಆಡಿದ್ದು, ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾವಳಿಗಳಲ್ಲಿ ಆಡಿದ್ದರು. ನಂತರ ತಮ್ಮ ಎಂ.ಟೆಕ್ ಅನ್ನು ಮುಂದುವರಿಸಲು ವಿದ್ಯಾರ್ಥಿ ವೀಸಾದಲ್ಲಿ ಐರ್ಲೆಂಡ್‌ಗೆ ತೆರಳಿದ ಜೇ ಮುಂಧ್ರಾ ಅಲ್ಲಿ ಕ್ರಿಕೆಟ್ ಆಡುವುದನ್ನು ಮುಂದುವರೆಸಿದರು. ಡಬ್ಲಿನ್‌ನಲ್ಲಿರುವ ಪ್ರಸಿದ್ಧ ಲೀನ್‌ಸ್ಟರ್ ಕ್ರಿಕೆಟ್ ಕ್ಲಬ್ ಪರ ಆಡಲು ಪ್ರಾರಂಭಿಸಿದ ಜೇ ಮುಂಧ್ರಾ 2023 ರಲ್ಲಿ ಐರಿಶ್ ಸೀನಿಯರ್ ಕಪ್ ವಿಜೇತ ತಂಡದ ಭಾಗವಾಗಿದ್ದರು.
Published On - 9:23 pm, Fri, 26 June 26