AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟೀಮ್ ಇಂಡಿಯಾ ನಾಯಕತ್ವ ಬೇಡವೆಂದ ಜಸ್​ಪ್ರೀತ್ ಬುಮ್ರಾ..!

IND vs ENG: ಭಾರತ ಮತ್ತು ಇಂಗ್ಲೆಂಡ್ ನಡುವಣ ಟೆಸ್ಟ್ ಸರಣಿಯು ಜೂನ್ 20 ರಿಂದ ಶುರುವಾಗಲಿದೆ. ಈ ಸರಣಿಯಲ್ಲಿ ಟೀಮ್ ಇಂಡಿಯಾ ಒಟ್ಟು 5 ಪಂದ್ಯಗಳನ್ನಾಡಲಿದೆ. ವಿಶೇಷ ಎಂದರೆ ಈ ಸರಣಿಯ ಮೂಲಕ ಯುವ ದಾಂಡಿಗ ಶುಭ್​​ಮನ್ ಗಿಲ್ ಭಾರತ ಟೆಸ್ಟ್ ತಂಡದ ನಾಯಕರಾಗಿ ಪಾದಾರ್ಪಣೆ ಮಾಡಲಿದ್ದಾರೆ. ಇದಕ್ಕೂ ಮುನ್ನ ಈ ಸರಣಿಗೆ ಬುಮ್ರಾ ಕ್ಯಾಪ್ಟನ್ ಆಗಲಿದ್ದಾರೆ ಎನ್ನಲಾಗಿತ್ತು.

ಟೀಮ್ ಇಂಡಿಯಾ ನಾಯಕತ್ವ ಬೇಡವೆಂದ ಜಸ್​ಪ್ರೀತ್ ಬುಮ್ರಾ..!
Jasprit Bumrah
ಝಾಹಿರ್ ಯೂಸುಫ್
|

Updated on:Jun 18, 2025 | 8:53 AM

Share

ರೋಹಿತ್ ಶರ್ಮಾ ಟೆಸ್ಟ್ ನಿವೃತ್ತಿಯ ಬಳಿಕ ಟೀಮ್ ಇಂಡಿಯಾದ ಮುಂದಿನ ನಾಯಕ ಯಾರೆಂಬ ಪ್ರಶ್ನೆಗೆ ಕೇಳಿಬಂದ ಮೊದಲ ಉತ್ತರ ಜಸ್​ಪ್ರೀತ್ ಬುಮ್ರಾ. ಹಿಟ್​ಮ್ಯಾನ್ ಅನುಪಸ್ಥಿತಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದರಿಂದ ಬುಮ್ರಾಗೆ ಟೆಸ್ಟ್ ತಂಡದ ಕ್ಯಾಪ್ಟನ್ಸಿ ಒಲಿಯುವುದು ಖಚಿತ ಎನ್ನಲಾಗಿತ್ತು. ಆದರೆ ಇಂಗ್ಲೆಂಡ್ ವಿರುದ್ಧದ ಸರಣಿಗೆ ತಂಡವನ್ನು ಘೋಷಿಸಿದಾಗ ಶುಭ್​ಮನ್ ಗಿಲ್ ಅವರಿಗೆ ಕ್ಯಾಪ್ಟನ್ ಪಟ್ಟ ಕಟ್ಟಲಾಗಿತ್ತು. ಇದರ ಬೆನ್ನಲ್ಲೇ ಬುಮ್ರಾ ಅವರನ್ನು ಕಡೆಗಣಿಸಿರುವ ಬಗ್ಗೆ ಪ್ರಶ್ನೆಗಳೆದ್ದಿದ್ದವು. ಈ ಪ್ರಶ್ನೆಗಳಿಗೆ ಇದೀಗ ಜಸ್​ಪ್ರೀತ್ ಬುಮ್ರಾ ಅವರೇ ಉತ್ತರ ನೀಡಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ನಿಮಿತ್ತ ಇಂಗ್ಲಿಷ್ ಮಾಧ್ಯಮಕ್ಕೆ ಸಂದರ್ಶನ ನೀಡಿರುವ ಜಸ್​ಪ್ರೀತ್ ಬುಮ್ರಾ, ನಾನೇ ನಾಯಕತ್ವ ಬೇಡ ಎಂದಿರುವ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ರೋಹಿತ್  ಶರ್ಮಾ ಮತ್ತು ವಿರಾಟ್ ಕೊಹ್ಲಿ ನಿವೃತ್ತರಾಗುವ ಮೊದಲು, ಐಪಿಎಲ್ ಸಮಯದಲ್ಲಿ ನಾನು ಬಿಸಿಸಿಐ ಜೊತೆ ಮಾತನಾಡಿದ್ದೆ. ಅಲ್ಲದೆ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿನ ಕೆಲಸದ ಹೊರೆಯ ಬಗ್ಗೆ ಚರ್ಚಿಸಿದ್ದೆ.

ನನಗೆ ಬೆನ್ನು ನೋವಿನ ಸಮಸ್ಯೆಯಿರುವ ಕಾರಣ ಅದರ ಬಗ್ಗೆ ನಾನು ಎಚ್ಚರಿವಹಿಸಬೇಕಿದೆ. ಹೀಗಾಗಿ ಈ ಬಗ್ಗೆ ನಾನು ಬಿಸಿಸಿಐನ ಪ್ರಮುಖ ಅಧಿಕಾರಿಗಳ ಜೊತೆ ಮಾತನಾಡಿದ್ದೆ. ಇದೇ ವೇಳೆ ನಾನು ಮುಂಬರುವ ಸರಣಿಗೆ ನನ್ನನ್ನು ನಾಯಕನಾಗಿ ಪರಿಗಣಿಸಬಾರದು ಎಂದು ತಿಳಿಸಿದ್ದೆ. ಇದಕ್ಕೆ ಮುಖ್ಯ ಕಾರಣ ನನ್ನ ಕೆಲಸದ ಹೊರೆ. ಏಕೆಂದರೆ ಇಂಗ್ಲೆಂಡ್ ವಿರುದ್ಧದ ಸರಣಿಯ ಎಲ್ಲಾ 5 ಪಂದ್ಯಗಳಲ್ಲಿ ನಾನು ಕಣಕ್ಕಿಳಿಯುವುದು ಖಚಿತವಿಲ್ಲ.

ನಾನು ಈ ಸರಣಿಯಲ್ಲಿ 3 ಪಂದ್ಯಗಳಲ್ಲಿ ಮಾತ್ರ ಕಣಕ್ಕಿಳಿದು, ಭಾರತ ತಂಡವನ್ನು ಮುನ್ನಡೆಸುವುದು ಸರಿಯಾದ ನಿರ್ಧಾರವಲ್ಲ.  ಇದು ನ್ಯಾಯಯುತವಲ್ಲ ಎಂಬುದು ನನ್ನ ಭಾವನೆ. ನಾನು ಯಾವಾಗಲೂ ತಂಡ ಮೊದಲು ಎಂದು ಪರಿಗಣಿಸುವ ಆಟಗಾರ. ಹೀಗಾಗಿ ನನಗೆ ನಾಯಕತ್ವಕ್ಕಿಂತ ತಂಡದ ಹಿತ ಮುಖ್ಯ, ಇದೇ ಕಾರಣದಿಂದಾಗಿ ನಾನು ನಾಯಕತ್ವ ಬೇಡ ಎಂದಿದ್ದೆ ಎಂದು ಜಸ್​ಪ್ರೀತ್ ಬುಮ್ರಾ ಹೇಳಿದ್ದಾರೆ.

ಇದನ್ನೂ ಓದಿ: ಬರೋಬ್ಬರಿ 13 ಭರ್ಜರಿ ಸಿಕ್ಸ್​… ಮ್ಯಾಕ್ಸ್​ವೆಲ್​ ಬ್ಯಾಟ್​ನಿಂದ ತೂಫಾನ್ ಸೆಂಚುರಿ

ಅಂದಹಾಗೆ ಜಸ್​ಪ್ರೀತ್ ಬುಮ್ರಾ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಕೊನೆಯ ಪಂದ್ಯದ ವೇಳೆ ಬೆನ್ನು ನೋವಿನ ಸಮಸ್ಯೆಗೆ ಸಿಲುಕಿದ್ದರು. ಹೀಗಾಗಿ ಅವರು ಚಾಂಪಿಯನ್ಸ್ ಟ್ರೋಫಿಯಲ್ಲಿ ಕಣಕ್ಕಿಳಿದಿರಲಿಲ್ಲ. ಆ ಬಳಿಕ ಐಪಿಎಲ್​ನಲ್ಲಿ ಕಾಣಿಸಿಕೊಂಡರೂ ಬೆನ್ನಿನ ಭಾಗಕ್ಕೆ ಹೆಚ್ಚಿನ ಒತ್ತಡ ಹಾಕದಂತೆ ವೈದ್ಯರು ಸೂಚಿಸಿದ್ದಾರೆ. ಇದೇ ಕಾರಣದಿಂದಾಗಿ ಜಸ್​ಪ್ರೀತ್ ಬುಮ್ರಾ ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳಲ್ಲೂ ಕಣಕ್ಕಿಳಿಯುವ ಸಾಧ್ಯತೆಯಿಲ್ಲ.

Published On - 8:53 am, Wed, 18 June 25

ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ