
ಕ್ರಿಕೆಟ್‌ನ ಮೂರು ಸ್ವರೂಪಗಳಲ್ಲಿ ಅತ್ಯಂತ ಅಪಾಯಕಾರಿ ಬೌಲರ್ ಯಾರಾದರೂ ಇದ್ದರೆ, ಅದು ಭಾರತದ ವೇಗಿ ಜಸ್ಪ್ರೀತ್ ಬುಮ್ರಾ (Jasprit Bumrah). ನಿರಂತರವಾಗಿ ಬ್ಯಾಟ್ಸ್‌ಮನ್‌ಗಳನ್ನು ತೊಂದರೆಗೊಳಿಸುವುದು ಮತ್ತು ವಿಕೆಟ್ ಪಡೆಯುವುದು ಬುಮ್ರಾಗೆ ಅಭ್ಯಾಸವಾಗಿದೆ. ಬ್ಯಾಟ್ಸ್‌ಮನ್‌ಗಳು ಅವರ ವಿರುದ್ಧ ರನ್ ಗಳಿಸಲು ಹೆಣಗಾಡುತ್ತಾರೆ. ಆದರೆ ಈ ಬಾರಿಯ ಐಪಿಎಲ್‌ನಲ್ಲಿ (IPL 2026) ಮಾತ್ರ ಬುಮ್ರಾಗೆ ವಿಕೆಟ್ ಬರ ಎದುರಾಗಿದೆ. ಈ ಐಪಿಎಲ್‌ನಲ್ಲಿ ಇದುವರೆಗೆ 4 ಪಂದ್ಯಗಳನ್ನಾಡಿರುವ ಬುಮ್ರಾಗೆ ಖಾತೆಯಲ್ಲಿ ಒಂದೇ ಒಂದು ವಿಕೆಟ್ ಇಲ್ಲ. ಇದನ್ನು ಕೇಳಿದವರಿಗೆ ಅಚ್ಚರಿಯಾಗಬಹುದು. ಆದರೆ ಇದು ನಿಜ. ಮುಂಬೈ ಇಂಡಿಯನ್ಸ್‌ನ ಅನುಭವಿ ವೇಗಿ ಬುಮ್ರಾ ಸತತ ಐದು ಪಂದ್ಯಗಳಲ್ಲಿ ಬರಿಗೈಯಲ್ಲಿ ಮರಳಿದ್ದಾರೆ.
ಐಪಿಎಲ್ 2026 ರ 20ನೇ ಪಂದ್ಯವು ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ನಡೆಯಿತು. ಈ ಪಂದ್ಯದಲ್ಲಿ ಆರ್ಸಿಬಿ ತಂಡ ಮೊದಲು ಬ್ಯಾಟ್ ಮಾಡಿ 240 ರನ್‌ಗಳ ಬೃಹತ್ ಮೊತ್ತವನ್ನು ಗಳಿಸಿತು. ಆರ್ಸಿಬಿ ಬ್ಯಾಟ್ಸ್‌ಮನ್‌ಗಳು ಪಂದ್ಯದಲ್ಲಿ ಬಹುತೇಕ ಎಲ್ಲಾ ಮುಂಬೈ ಬೌಲರ್‌ಗಳ ವಿರುದ್ಧ ಸರಾಗವಾಗಿ ರನ್ ಕಲೆಹಾಕಿದರು. ಆದಾಗ್ಯೂ, ಎಂದಿನಂತೆ ರನ್ಗೆ ಕಡಿವಾಣ ಹಾಕುವಲ್ಲಿ ಯಶಸ್ವಿಯಾದ ಬುಮ್ರಾ ತಮ್ಮ ನಾಲ್ಕು ಓವರ್‌ಗಳಲ್ಲಿ 35 ರನ್‌ಗಳನ್ನು ಬಿಟ್ಟುಕೊಟ್ಟರು.
ಅತ್ಯಂತ ಅಚ್ಚರಿಯ ಅಂಶವೆಂದರೆ ಈ ಪಂದ್ಯದಲ್ಲಿಯೂ ಬುಮ್ರಾ ವಿಕೆಟ್ ಪಡೆಯಲಿಲ್ಲ ಎಂಬುದು. ಮೇಲೆ ಹೇಳಿದಂತೆ ಬುಮ್ರಾ ಅವರು ಈ ಆವೃತ್ತಿಯಲ್ಲಿ ವಿಕೆಟ್ ಪಡೆಯದೆ ಇರುವುದು ಇದೇ ಮೊದಲಲ್ಲ. ಮುಂಬೈನ ಅತ್ಯಂತ ಯಶಸ್ವಿ ಬೌಲರ್‌ಗಳಲ್ಲಿ ಒಬ್ಬರಾದ ಜಸ್ಪ್ರೀತ್ ಬುಮ್ರಾ, ಐಪಿಎಲ್ 2026 ರ ನಾಲ್ಕು ಪಂದ್ಯಗಳಲ್ಲಿಯೂ ವಿಕೆಟ್ ಪಡೆಯುವಲ್ಲಿ ವಿಫಲರಾಗಿದ್ದಾರೆ.
IND vs SA: ಟಿ20 ವಿಶ್ವಕಪ್ನಲ್ಲಿ ಹೊಸ ದಾಖಲೆ ಬರೆದ ಜಸ್ಪ್ರೀತ್ ಬುಮ್ರಾ
ಈ ನಾಲ್ಕು ಪಂದ್ಯಗಳ ಜೊತೆಗೆ ಕಳೆದ ಆವೃತ್ತಿಯ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿಯೂ ಬುಮ್ರಾಗೆ ಒಂದೇ ಒಂದು ವಿಕೆಟ್ ಸಿಕ್ಕಿರಲಿಲ್ಲ. ಪಂಜಾಬ್ ವಿರುದ್ಧದ ಆ ಪಂದ್ಯದಲ್ಲಿ ಬುಮ್ರಾ ನಾಲ್ಕು ಓವರ್‌ಗಳಲ್ಲಿ 40 ರನ್‌ಗಳನ್ನು ಬಿಟ್ಟುಕೊಟ್ಟರು ಆದರೆ ವಿಕೆಟ್ ಪಡೆಯಲಿಲ್ಲ. ಇನ್ನು ಈ ಆವೃತ್ತಿಯಲ್ಲಿ, ಬುಮ್ರಾ ಕೋಲ್ಕತ್ತಾ, ದೆಹಲಿ, ರಾಜಸ್ಥಾನ ಮತ್ತು ಬೆಂಗಳೂರು ವಿರುದ್ಧ ವಿಕೆಟ್ ಪಡೆಯುವಲ್ಲಿ ವಿಫಲರಾಗಿದ್ದಾರೆ. ಸತತ ಐದು ಪಂದ್ಯಗಳಲ್ಲಿ, ಅವರು ಒಟ್ಟು 19 ಓವರ್‌ಗಳನ್ನು ಬೌಲಿಂಗ್ ಮಾಡಿ 163 ರನ್‌ಗಳನ್ನು ಬಿಟ್ಟುಕೊಟ್ಟಿದ್ದಾರೆ. ಅಂದರೆ ಬುಮ್ರಾ 8.5 ರ ಎಕಾನಮಿ ದರದಲ್ಲಿ ರನ್‌ಗಳನ್ನು ಬಿಟ್ಟುಕೊಟ್ಟಿದ್ದು, ಇದರಲ್ಲಿ ಒಂದೇ ಒಂದು ವಿಕೆಟ್ ಪಡೆದಿಲ್ಲ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:27 pm, Sun, 12 April 26