Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs SA: ಸೌತ್ ಆಫ್ರಿಕಾ ತಂಡಕ್ಕೆ ಬುಮ್ರಾ ಭಯ..!

India vs South Africa Test: ಭಾರತ ತಂಡವು ಇದುವರೆಗೆ 17 ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯಗಳನ್ನಾಡಿದೆ. ಈ ವೇಳೆ ಗೆದ್ದಿರುವುದು ಕೇವಲ 4 ಬಾರಿ ಮಾತ್ರ. ಇನ್ನುಳಿದ 10 ಪಂದ್ಯಗಳಲ್ಲಿ ಸೋಲನುಭವಿಸಿದ್ದರೆ, 3 ಮ್ಯಾಚ್ ಡ್ರಾನಲ್ಲಿ ಅಂತ್ಯ ಕಂಡಿತ್ತು.

IND vs SA: ಸೌತ್ ಆಫ್ರಿಕಾ ತಂಡಕ್ಕೆ ಬುಮ್ರಾ ಭಯ..!
Jasprit Bumrah
Follow us
TV9 Web
| Updated By: ಝಾಹಿರ್ ಯೂಸುಫ್

Updated on: Dec 26, 2023 | 9:03 AM

ಸೌತ್ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೆ ಟೀಮ್ ಇಂಡಿಯಾ (Team India) ಸಜ್ಜಾಗಿದೆ. ಸೆಂಚುರಿಯನ್​ನಲ್ಲಿನ ಸೂಪರ್​ಸ್ಪೋರ್ಟ್ ಪಾರ್ಕ್​ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯದ ಮೂಲಕ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಹಾಗೂ ಜಸ್​ಪ್ರೀತ್ ಬುಮ್ರಾ ಮತ್ತೆ ಸ್ಪರ್ಧಾತ್ಮಕ ಕ್ರಿಕೆಟ್​ಗೆ ಮರಳಲಿದ್ದಾರೆ. ಈ ಮೂವರು ದಿಗ್ಗಜರು ಏಕದಿನ ವಿಶ್ವಕಪ್ ಫೈನಲ್ ಸೋಲಿನ ಬಳಿಕ​ ಯಾವುದೇ ಪಂದ್ಯವಾಡಿಲ್ಲ. ಇದೀಗ ಮೂವರು ಆಟಗಾರರು ಹರಿಣರ ನಾಡಿನಲ್ಲಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ.

ವಿಶೇಷ ಎಂದರೆ ಈ ಮೂವರು ಆಟಗಾರರು ಸೌತ್ ಆಫ್ರಿಕಾದಲ್ಲಿ ಉತ್ತಮ ಪ್ರದರ್ಶನ ನೀಡಿದ ನಿದರ್ಶನಗಳಿವೆ. ಇದಾಗ್ಯೂ ತವರಿನಲ್ಲಿ ಟೀಮ್ ಇಂಡಿಯಾ ವಿರುದ್ಧ ಸೌತ್ ಆಫ್ರಿಕಾ ಮೇಲುಗೈ ಸಾಧಿಸುತ್ತಾ ಬಂದಿದೆ. ಆದರೆ ಈ ಬಾರಿ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯ ನಡೆಯುತ್ತಿರುವುದರಿಂದ ಫಲಿತಾಂಶದಲ್ಲಿ ಬದಲಾವಣೆ ನಿರೀಕ್ಷಿಸಬಹುದು.

ಏಕೆಂದರೆ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯಗಳ ಕಿಂಗ್ ಎಂದೇ ಗುರುತಿಸಿಕೊಂಡಿರುವ ಜಸ್​ಪ್ರೀತ್ ಬುಮ್ರಾ ಟೀಮ್ ಇಂಡಿಯಾಗೆ ಮರಳಿದ್ದಾರೆ. ಬುಮ್ರಾ ಇದುವರೆಗೆ 3 ಬಾಕ್ಸಿಂಗ್ ಡೇ ಪಂದ್ಯಗಳನ್ನಾಡಿದ್ದಾರೆ. ಈ ವೇಳೆ ಬರೋಬ್ಬರಿ 20 ವಿಕೆಟ್​ಗಳನ್ನು ಕಬಳಿಸಿರುವುದು ವಿಶೇಷ.

ಅದರಲ್ಲೂ 2018 ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಬಾಕ್ಸಿಂಗ್ ಡೇ ಟೆಸ್ಟ್​ನಲ್ಲಿ ಜಸ್​ಪ್ರೀತ್ ಬುಮ್ರಾ ಕೇವಲ 33 ರನ್​ ನೀಡಿ 6 ವಿಕೆಟ್ ಕಬಳಿಸಿದ್ದರು. ಅಷ್ಟೇ ಅಲ್ಲದೆ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿಯನ್ನು ಕೂಡ ಪಡೆದಿದ್ದರು.

ಹಾಗೆಯೇ ಸೌತ್ ಆಫ್ರಿಕಾ ವಿರುದ್ಧ ಆಡಿದ 6 ಟೆಸ್ಟ್ ಪಂದ್ಯಗಳಿಂದ ಬುಮ್ರಾ ಒಟ್ಟು 26 ವಿಕೆಟ್ ಉರುಳಿಸಿದ್ದಾರೆ. ಈ ಎಲ್ಲಾ ಕಾರಣಹಳಿಂದಾಗಿ ಇದೀಗ ಸೌತ್ ಆಫ್ರಿಕಾ ತಂಡಕ್ಕೆ ಬೂಮ್ ಬೂಮ್ ಬುಮ್ರಾ ಚಿಂತೆ ಶುರುವಾಗಿದೆ.

ಬಾಕ್ಸಿಂಗ್​ ಡೇ ಟೆಸ್ಟ್​ನಲ್ಲಿ ಟೀಮ್ ಇಂಡಿಯಾ ಪ್ರದರ್ಶನ:

ಭಾರತ ತಂಡವು ಇದುವರೆಗೆ 17 ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯಗಳನ್ನಾಡಿದೆ. ಈ ವೇಳೆ ಗೆದ್ದಿರುವುದು ಕೇವಲ 4 ಬಾರಿ ಮಾತ್ರ. ಇನ್ನುಳಿದ 10 ಪಂದ್ಯಗಳಲ್ಲಿ ಸೋಲನುಭವಿಸಿದ್ದರೆ, 3 ಮ್ಯಾಚ್ ಡ್ರಾನಲ್ಲಿ ಅಂತ್ಯ ಕಂಡಿತ್ತು.

ಇದಾಗ್ಯೂ 2021 ರಲ್ಲಿ ಸೆಂಚುರಿಯನ್​ನಲ್ಲಿ ಸೌತ್ ಆಫ್ರಿಕಾ ವಿರುದ್ಧ ನಡೆದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ 113 ರನ್​ಗಳ ಭರ್ಜರಿ ಜಯ ಸಾಧಿಸಿತ್ತು. ಹೀಗಾಗಿ ಈ ಬಾರಿ ಕೂಡ ಇತಿಹಾಸ ಪುನರಾವರ್ತನೆಯಾಗುವ ನಿರೀಕ್ಷೆಯಿದೆ.

ಇದನ್ನೂ ಓದಿ: Rohit Sharma: ಧೋನಿಯ ದಾಖಲೆ ಮುರಿಯುವ ಹೊಸ್ತಿಲಲ್ಲಿ ರೋಹಿತ್ ಶರ್ಮಾ

ಬಾಕ್ಸಿಂಗ್ ಡೇ ಟೆಸ್ಟ್​ನಲ್ಲಿ ಭಾರತ ತಂಡ ಫಲಿತಾಂಶ:

  • 1985 vs ಆಸ್ಟ್ರೇಲಿಯಾ – ಪಂದ್ಯ ಡ್ರಾ (ಮೆಲ್ಬೋರ್ನ್)
  • 1987 vs ವೆಸ್ಟ್ ಇಂಡೀಸ್ – ಪಂದ್ಯ ಡ್ರಾ (ಈಡನ್ ಗಾರ್ಡನ್ಸ್)
  • 1991 vs ಆಸ್ಟ್ರೇಲಿಯಾ – 8 ವಿಕೆಟ್‌ಗಳ ಸೋಲು (ಮೆಲ್ಬೋರ್ನ್)
  • 1992 vs ಸೌತ್ ಆಫ್ರಿಕಾ – 9 ವಿಕೆಟ್‌ಗಳ ಸೋಲು (ಗ್ಕೆಬರ್ಹಾ)
  • 1996 vs ದಕ್ಷಿಣ ಆಫ್ರಿಕಾ – 328 ರನ್‌ಗಳ ಸೋಲು (ಡರ್ಬನ್)
  • 1998 vs ನ್ಯೂಝಿಲೆಂಡ್ – 4 ವಿಕೆಟ್‌ಗಳ ಸೋಲು (ವೆಲ್ಲಿಂಗ್ಟನ್)
  • 1999 ವಿರುದ್ಧ ಆಸ್ಟ್ರೇಲಿಯಾ – 180 ರನ್‌ಗಳ ಸೋಲು (ಮೆಲ್ಬೋರ್ನ್)
  • 2003 vs ಆಸ್ಟ್ರೇಲಿಯಾ – 9 ವಿಕೆಟ್‌ಗಳ ಸೋಲು (ಮೆಲ್ಬೋರ್ನ್)
  • 2006 vs ಸೌತ್ ಆಫ್ರಿಕಾ – 174 ರನ್‌ಗಳ ಸೋಲು (ಡರ್ಬನ್)
  • 2007 ವಿರುದ್ಧ ಆಸ್ಟ್ರೇಲಿಯಾ – 337 ರನ್‌ಗಳಿಂದ ಸೋಲು (ಮೆಲ್ಬೋರ್ನ್)
  • 2009 vs ಸೌತ್ ಆಫ್ರಿಕಾ – 87 ರನ್‌ಗಳಿಂದ ಗೆಲುವು (ಡರ್ಬನ್)
  • 2011 vs ಆಸ್ಟ್ರೇಲಿಯಾ – 122 ರನ್‌ಗಳ ಸೋಲು (ಮೆಲ್ಬೋರ್ನ್)
  • 2013 vs ಸೌತ್ ಆಫ್ರಿಕಾ – 10 ವಿಕೆಟ್‌ಗಳ ಸೋಲು (ಡರ್ಬನ್)
  • 2014 vs ಆಸ್ಟ್ರೇಲಿಯಾ – ಪಂದ್ಯ ಡ್ರಾ (ಮೆಲ್ಬೋರ್ನ್)
  • 2018 vs ಆಸ್ಟ್ರೇಲಿಯಾ – 137 ರನ್‌ಗಳಿಂದ ಗೆಲುವು (ಮೆಲ್ಬೋರ್ನ್)
  • 2020 vs ಆಸ್ಟ್ರೇಲಿಯಾ – 8 ವಿಕೆಟ್‌ಗಳ ಗೆಲುವು (ಮೆಲ್ಬೋರ್ನ್)
  • 2021 vs ಸೌತ್ ಆಫ್ರಿಕಾ – 113 ರನ್‌ಗಳ ಗೆಲುವು (ಸೆಂಚುರಿಯನ್)
ಪುನೀತ್ ರಾಜ್​ಕುಮಾರ್ ನಿಧನರಾದ ವಿಷಯ ಸೋದರತ್ತೆಗೆ ಇನ್ನೂ ತಿಳಿದಿಲ್ಲ ಯಾಕೆ?
ಪುನೀತ್ ರಾಜ್​ಕುಮಾರ್ ನಿಧನರಾದ ವಿಷಯ ಸೋದರತ್ತೆಗೆ ಇನ್ನೂ ತಿಳಿದಿಲ್ಲ ಯಾಕೆ?
ಪೊಲೀಸ್ ಕಸ್ಟಡಿಗೆ ತೆರಳುವಾಗ ಮಂಕಾಗಿ ಕುಳಿತ ರಜತ್ ಕಿಶನ್, ವಿನಯ್ ಗೌಡ
ಪೊಲೀಸ್ ಕಸ್ಟಡಿಗೆ ತೆರಳುವಾಗ ಮಂಕಾಗಿ ಕುಳಿತ ರಜತ್ ಕಿಶನ್, ವಿನಯ್ ಗೌಡ
ಹಳೆಯ ಸಂಪ್ರದಾಯ ಮುಂದುವರೆಸಿದ ಸಂಜು
ಹಳೆಯ ಸಂಪ್ರದಾಯ ಮುಂದುವರೆಸಿದ ಸಂಜು
ಯತ್ನಾಳ್ ಉಚ್ಛಾಟನೆ: ವಿಜಯಪುರದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಕಾಳಿ ಪೂಜೆ
ಯತ್ನಾಳ್ ಉಚ್ಛಾಟನೆ: ವಿಜಯಪುರದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಕಾಳಿ ಪೂಜೆ
ದೆಹಲಿಯಲ್ಲಿ ಹೆಚ್​ಡಿಕೆ ಮತ್ತು ದೇವೇಗೌಡರನ್ನು ಭೇಟಿಯಾಗಿರುವ ಜಾರಕಿಹೊಳಿ
ದೆಹಲಿಯಲ್ಲಿ ಹೆಚ್​ಡಿಕೆ ಮತ್ತು ದೇವೇಗೌಡರನ್ನು ಭೇಟಿಯಾಗಿರುವ ಜಾರಕಿಹೊಳಿ
‘ಅವಕಾಶ ಕೊಡಿ, ನಾನು ಕೆಟ್ಟ ನಟ ಅಲ್ಲ’ ಹೀಗೆಂದರ್ಯಾಕೆ ಮೋಹನ್​ಲಾಲ್
‘ಅವಕಾಶ ಕೊಡಿ, ನಾನು ಕೆಟ್ಟ ನಟ ಅಲ್ಲ’ ಹೀಗೆಂದರ್ಯಾಕೆ ಮೋಹನ್​ಲಾಲ್
ಸದ್ಯಕ್ಕೆ ವಾಪಸ್ಸು ಹೋಗುತ್ತಿದ್ದೇನೆ ಎಂದಷ್ಟೇ ಹೇಳಿದ ಬಸನಗೌಡ ಯತ್ನಾಳ್
ಸದ್ಯಕ್ಕೆ ವಾಪಸ್ಸು ಹೋಗುತ್ತಿದ್ದೇನೆ ಎಂದಷ್ಟೇ ಹೇಳಿದ ಬಸನಗೌಡ ಯತ್ನಾಳ್
ಯುವ ಕ್ರಿಕೆಟಿಗನ ಕ್ವಾಟ್ಲೆ ನೋಡಿ ಶಾಕ್ ಆದ ಇಡೀ ಆರ್​ಸಿಬಿ ತಂಡ
ಯುವ ಕ್ರಿಕೆಟಿಗನ ಕ್ವಾಟ್ಲೆ ನೋಡಿ ಶಾಕ್ ಆದ ಇಡೀ ಆರ್​ಸಿಬಿ ತಂಡ
ನಮ್ಮ ಸಿಎಂ ಕಚೇರಿಯೂ ಇಷ್ಟು ಭವ್ಯವಾಗಿಲ್ಲವೆಂದು ಉದ್ಗರಿಸಿದ ಪರಮೇಶ್ವರ್!
ನಮ್ಮ ಸಿಎಂ ಕಚೇರಿಯೂ ಇಷ್ಟು ಭವ್ಯವಾಗಿಲ್ಲವೆಂದು ಉದ್ಗರಿಸಿದ ಪರಮೇಶ್ವರ್!
ಬಿಜೆಪಿ ಶಾಸಕರು ಪೀಠಕ್ಕೆ ಅಗೌರವ ತೋರಿಲ್ಲ,ಸದನ ದೇಗುಲವಿದ್ದಂತೆ: ಸುರೇಶ್ ಗೌಡ
ಬಿಜೆಪಿ ಶಾಸಕರು ಪೀಠಕ್ಕೆ ಅಗೌರವ ತೋರಿಲ್ಲ,ಸದನ ದೇಗುಲವಿದ್ದಂತೆ: ಸುರೇಶ್ ಗೌಡ