AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Jasprit Bumrah: ಭಾರತದ ಬೌಲಿಂಗ್ ವಿಭಾಗದಲ್ಲಿ ದೊಡ್ಡ ಬದಲಾವಣೆ: 2ನೇ ಟಿ20ಗೆ ಆ ಆಟಗಾರ ಎಂಟ್ರಿ

IND vs AUS 2nd T20I: ಇಂಜುರಿಯಿಂದಾಗಿ ಬಹುದಿನಗಳ ಬಳಿಕ ಟೀಮ್ ಇಂಡಿಯಾದಿಂದ ಹೊರಬಿದ್ದಿದ್ದ ಯಾರ್ಕರ್ ಕಿಂಗ್ ಜಸ್​ಪ್ರೀತ್ ಬುಮ್ರಾ ಅವರನ್ನು ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟಿ20 ಯಲ್ಲಿ ಕಣಕ್ಕಿಳಿಸಲು ಬಿಸಿಸಿಐ ಮುಂದಾಗಿದೆ.

Jasprit Bumrah: ಭಾರತದ ಬೌಲಿಂಗ್ ವಿಭಾಗದಲ್ಲಿ ದೊಡ್ಡ ಬದಲಾವಣೆ: 2ನೇ ಟಿ20ಗೆ ಆ ಆಟಗಾರ ಎಂಟ್ರಿ
IND vs AUS 2nd T20I
TV9 Web
| Updated By: Vinay Bhat|

Updated on:Sep 22, 2022 | 9:35 AM

Share

ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಬೆಟ್ಟದಂತಹ ಮೊತ್ತ ಕಲೆಹಾಕಿದರೂ ಭಾರತ (India vs Australia) ತಂಡಕ್ಕೆ ಗೆಲ್ಲಲು ಸಾಧ್ಯವಾಗಲಿಲ್ಲ. 208 ರನ್ ಗಳಿಸಿದರೂ ಗೆಲುವು ಕಾಣಲು ವಿಫಲವಾಯಿತು. ಬೌಲಿಂಗ್​ನಲ್ಲಿ ಸಂಪೂರ್ಣ ಕಳಪೆ ಪ್ರದರ್ಶನ ತೋರಿದ ರೋಹಿತ್ (Rohit Sharma) ಪಡೆ ಸೋಲು ಕಾಣಬೇಕಾಯಿತು. ಸ್ವತಃ ಟೀಮ್ ಇಂಡಿಯಾದ ಸ್ಟಾರ್ ಬೌಲರ್​ಗಳಾದ ಭುವನೇಶ್ವರ್ ಕುಮಾರ್, ಯುಜ್ವೇಂದ್ರ ಚಹಲ್, ಹರ್ಷಲ್ ಪಟೇಲ್ ಅವರೇ ದುಬಾರಿ ಆದರು. ಟಿ20 ವಿಶ್ವಕಪ್​ಗೆ ಕೆಲವೇ ದಿನವಿರುವಾಗ ಭಾರತೀಯ ಬೌಲರ್​ಗಳ ಈ ಕಳಪೆ ಪ್ರದರ್ಶನ ಬಿಸಿಸಿಐಗೆ (BCCI) ತಲೆನೋವಾಗಿ ಪರಿಣಮಿಸಿದೆ. ಇದರ ನಡುವೆ ನಾಳೆ (ಸೆ. 23) ನಾಗ್ಪುರದ ವಿದರ್ಭ ಕ್ರಿಕೆಟ್ ಕ್ರೀಡಾಂಗಣದಲ್ಲಿ ದ್ವಿತೀಯ ಟಿ20 ಕದನ ನಡೆಯಲಿದೆ. ಇದಕ್ಕಾಗಿ ಬೌಲಿಂಗ್ ವಿಭಾಗದಲ್ಲಿ ದೊಡ್ಡ ಬದಲಾವಣೆ ತರಲು ಮ್ಯಾನೇಜ್ಮೆಂಟ್ ಮುಂದಾಗಿದೆ.

ಇಂಜುರಿಯಿಂದಾಗಿ ಬಹುದಿನಗಳ ಬಳಿಕ ಟೀಮ್ ಇಂಡಿಯಾದಿಂದ ಹೊರಬಿದ್ದಿದ್ದ ಯಾರ್ಕರ್ ಕಿಂಗ್ ಜಸ್​ಪ್ರೀತ್ ಬುಮ್ರಾ ಅವರನ್ನು ಎರಡನೇ ಟಿ20 ಯಲ್ಲಿ ಕಣಕ್ಕಿಳಿಸಲು ಬಿಸಿಸಿಐ ಮುಂದಾಗಿದೆ. ಶೇ. 100 ರಷ್ಟು ಫಿಟ್ ಇರದ ಕಾರಣ ಬುಮ್ರಾ ಮೊದಲ ಪಂದ್ಯದಲ್ಲಿ ಆಡಿರಲಿಲ್ಲ. ಇದೀಗ ಕಣಕ್ಕಿಳಿಯಲು ತಯಾರಾಗಿರುವ ಇವರು ಉಮೇಶ್ ಯಾದವ್ ಜಾಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. ಬುಮ್ರಾ ಆಡದ ಕಳೆದ ಐದು ಪಂದ್ಯಗಳ ಪೈಕಿ ಭಾರತ ಮೂರರಲ್ಲಿ ಸೋಲು ಕಂಡಿದೆ. ಈಗ ಇವರ ಕಮ್​ಬ್ಯಾಕ್ ತಂಡದ ಬೌಲಿಂಗ್ ವಿಭಾಗದಲ್ಲಿ ಸಂಚಲನ ಮೂಡಿಸುವುದು ಖಚಿತ.

ಇನ್ನು ದ್ವಿತೀಯ ಟಿ20 ಪಂದ್ಯಕ್ಕೆ ಟೀಮ್ ಇಂಡಿಯಾದ ಬ್ಯಾಟಿಂಗ್ ವಿಭಾದಲ್ಲೂ ಬದಾವಣೆ ಆದರೆ ಅಚ್ಚರಿ ಪಡಬೇಕಿಲ್ಲ. ದಿನೇಶ್ ಕಾರ್ತಿಕ್​​ಗೆ ಸರಿಯಾದ ಸ್ಥಾನ ಸಿಗುತ್ತಿಲ್ಲ. ಸಿಕ್ಕ ಸ್ಥಾನದಲ್ಲಿ ಅವರು ಕೆಲ ಪಂದ್ಯಗಳಲ್ಲಿ ವೈಫಲ್ಯ ಕೂಡ ಅನುಭವಿಸುತ್ತಿದ್ದಾರೆ. ಹೀಗಾಗಿ ಇವರ ಜಾಗದಲ್ಲಿ ರಿಷಭ್ ಪಂತ್ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಅಲ್ಲದೆ ಪ್ಲೇಯಿಂಗ್ ಇಲೆವೆನ್​ನಲ್ಲಿ ಅಕ್ಷರ್ ಪಟೇಲ್ ಬಿಟ್ಟರೆ ಎಡಗೈ ಬ್ಯಾಟರ್​ ಮತ್ಯಾರು ಇಲ್ಲ. ಪಂತ್ ಬಂದರೆ ತಂಡಕ್ಕೆ ಇದುಕೂಡ ಒಂದು ಪ್ಲಸ್ ಪಾಯಿಂಟ್ ಆಗಲಿದೆ.

ಇದನ್ನೂ ಓದಿ
Image
Harmanpreet Kaur: ಆಂಗ್ಲರ ನಾಡಲ್ಲಿ ಕೌರ್ ಘರ್ಜನೆ: 23 ವರ್ಷಗಳ ಬಳಿಕ ಇತಿಹಾಸ ನಿರ್ಮಿಸಿದ ಭಾರತೀಯ ವನಿತೆಯರು
Image
Harmanpreet Kaur: 18 ಬೌಂಡರಿ, 4 ಸಿಕ್ಸರ್, 143 ರನ್; ಆಂಗ್ಲರ ನಾಡಿನಲ್ಲಿ ಹರ್ಮನ್‌ಪ್ರೀತ್ ಕೌರ್ ರೌದ್ರಾವತಾರ..!
Image
Smriti Mandhana: ಏಕದಿನ ಕ್ರಿಕೆಟ್​ನಲ್ಲಿ ಮಿಥಾಲಿ ದಾಖಲೆ ಮುರಿದ ಸ್ಮೃತಿ ಮಂಧಾನ! ವಿಶ್ವ ಕ್ರಿಕೆಟ್​ನಲ್ಲಿ 3ನೇ ಸ್ಥಾನ
Image
World Test Championship: 2023 ಮತ್ತು 2025 ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಸ್ಥಳ ನಿಗದಿ

ನಾಗ್ಪುರದ ವಿದರ್ಭ ಕ್ರಿಕೆಟ್ ಕ್ರೀಡಾಂಗಣದಲ್ಲಿ ಭಾರತ ಇದುವರೆಗೆ ನಾಲ್ಕು ಪಂದ್ಯಗಳನ್ನು ಆಡಿದೆ. ಈ ಪೈಕಿ ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರೆ ಎರಡು ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. ಆದರೆ, ಆಸ್ಟ್ರೇಲಿಯಾ ಈ ತಾಣದಲ್ಲಿ ಈವರೆಗೆ ಒಂದೂ ಪಂದ್ಯವನ್ನು ಆಡಿಲ್ಲ. ಹೀಗಾಗಿ ಈ ವಾತಾವರಣ ಭಾರತಕ್ಕೆ ಪ್ಲಸ್ ಆದರೂ ಆಗಬಹುದು. ಇನ್ನು ನಾಗ್ಪುರ ಪಿಚ್ ಸಾಮಾನ್ಯವಾಗಿ ಬ್ಯಾಟ್ ಮತ್ತು ಬಾಲ್ ನಡುವೆ ಸ್ವಲ್ಪ ಸಮತೋಲನವನ್ನು ಹೊಂದಿರುತ್ತದೆ. ಆದರೆ ಸಾಮಾನ್ಯವಾಗಿ ಮೊದಲು ಬ್ಯಾಟಿಂಗ್ ಮಾಡುವ ತಂಡಕ್ಕೆ ಹೆಚ್ಚಿನ ಸಹಾಯ ಮಾಡುತ್ತದೆ. ಯಾಕೆಂದರೆ ಇಲ್ಲಿ ಚೇಸಿಂಗ್ ಮಾಡುವುದು ಕಠಿಣ ಎಂಬುದು ಹಿಂದಿನ ದಾಖಲೆಗಳು ಹೇಳುತ್ತಿವೆ.

ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವಿಚಂದ್ರನ್ ಅಶ್ವಿನ್, ಯುಜ್ವೇಂದ್ರ ಚಹಾಲ್, ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್ , ಮೊಹಮ್ಮದ್ ಶಮಿ, ಹರ್ಷಲ್ ಪಟೇಲ್, ದೀಪಕ್ ಚಹಾರ್, ಜಸ್ಪ್ರೀತ್ ಬುಮ್ರಾ.

Published On - 9:35 am, Thu, 22 September 22