ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ; ಮುಂಬೈ ಮಾಜಿ ಆಟಗಾರನ ವಿರುದ್ಧ ಯುವತಿ ದೂರು
IPL Cricketer Shivalik Sharma: ಐಪಿಎಲ್ ಮಾಜಿ ಆಟಗಾರ ಶಿವಾಲಿಕ್ ಶರ್ಮಾ ಅವರ ವಿರುದ್ಧ ಜೋಧ್‌ಪುರದಲ್ಲಿ ಅತ್ಯಾಚಾರ ಮತ್ತು ಮೋಸದ ಆರೋಪ ದಾಖಲಾಗಿದೆ. ಯುವತಿಯೊಬ್ಬಳು ಶಿವಾಲಿಕ್ ಅವರು ಮದುವೆಯ ಭರವಸೆ ನೀಡಿ ದೈಹಿಕ ಸಂಬಂಧ ಬೆಳೆಸಿ ಮೋಸ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಯುವತಿಯ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ.

ಭಾರತದ ಮತ್ತೊಬ್ಬ ಯುವ ಕ್ರಿಕೆಟಿಗ ಹಾಗೂ ಮುಂಬೈ ಇಂಡಿಯನ್ಸ್ ತಂಡದ ಮಾಜಿ ಆಟಗಾರ ಶಿವಾಲಿಕ್ ಶರ್ಮಾ ವಿರುದ್ಧ ಅತ್ಯಾಚಾರದ ಆರೋಪ ಕೇಳಿಬಂದಿದೆ. ಶಿವಾಲಿಕ್ ಶರ್ಮಾ ನನ್ನನ್ನು ಮದುವೆಯಾಗುವುದಾಗಿ ನಂಬಿಸಿ, ನನ್ನೊಂದಿಗೆ ದೈಹಿಕ ಸಂಬಂಧ ಬೆಳೆಸಿ ಇದೀಗ ನನಗೆ ಮೋಸ ಮಾಡಿರುವುದಾಗಿ ಯುವತಿಯೊಬಳು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ಇದೀಗ ರಾಜಸ್ಥಾನದ ಜೋಧ್‌ಪುರದಲ್ಲಿ ಗುಜರಾತ್ ಮೂಲಕ ಐಪಿಎಲ್ ಕ್ರಿಕೆಟಿಗ ಶಿವಾಲಿಕ್ ಶರ್ಮಾ ವಿರುದ್ಧ ವಿರುದ್ಧ ವಂಚನೆ ಮತ್ತು ಅತ್ಯಾಚಾರ ಪ್ರಕರಣ ದಾಖಲಾಗಿದೆ. ಕ್ರಿಕೆಟರ್ ಶಿವಾಲಿಕ್ ಶರ್ಮಾ ತನಗೆ ಮೋಸ ಮಾಡಿದ್ದಾರೆ ಎಂದು ಯುವತಿ ಆರೋಪಿಸಿದ್ದಾರೆ.
ನನ್ನೊಂದಿಗೆ ದೈಹಿಕ ಸಂಬಂಧ
ಎರಡು ವರ್ಷಗಳ ಹಿಂದೆ ಪ್ರವಾಸಕ್ಕೆಂದು ಬರೋಡಾಗೆ ಹೋಗಿದ್ದಾಗ ಐಪಿಎಲ್ ಆಟಗಾರ ಶಿವಾಲಿಕ್ ಶರ್ಮಾ ಅವರ ಪರಿಚಯವಾಗಿತ್ತು. ಇಬ್ಬರು ಸ್ನೇಹಿತರಾದೆವು. ನಾನು ಜೋಧ್‌ಪುರಕ್ಕೆ ಹಿಂದಿರುಗಿದ ಬಳಿಕ ಇಬ್ಬರು ಫೋನ್ ಸಂಭಾಷಣೆ ಮುಂದುವರೆಸಿದೆವು. ಸುಮಾರು 7 ತಿಂಗಳ ನಂತರ ಇಬ್ಬರೂ ಜೋಧ್‌ಪುರದಲ್ಲಿ ತಮ್ಮ ಕುಟುಂಬಗಳ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡೆವು. ಸ್ವಲ್ಪ ಸಮಯದ ನಂತರ ಅಂದರೆ ಮೇ 2024 ರಲ್ಲಿ ಜೋಧ್‌ಪುರದಲ್ಲಿರುವ ನನ್ನ ಮನೆಗೆ ಬಂದಿದ್ದ ಶಿವಾಲಿಕ್, ನನ್ನ ನಿರಾಕರಣೆಯ ಹೊರತಾಗಿಯೂ, ನನ್ನನ್ನು ಮದುವೆಯಾಗುವುದಾಗಿ ಭರವಸೆ ನೀಡಿ ನನ್ನೊಂದಿಗೆ ದೈಹಿಕ ಸಂಬಂಧ ಬೆಳೆಸಿದರು. ಸಾಕಷ್ಟು ದಿನ ಹೀಗೆಯೇ ಮುಂದುವರೆಯಿತು.
ಸ್ವಲ್ಪ ಸಮಯದ ನಂತರ ನನ್ನ ಮನೆಯವರನ್ನು ಮದುವೆಯ ಬಗ್ಗೆ ಮಾತನಾಡಲು ಶಿವಾಲಿಕ್ ಮುನೆಯವರು ಬರೋಡಾಗೆ ಬರುವಂತೆ ಹೇಳಿದರು. ಆ ಪ್ರಕಾರ ನಮ್ಮ ಕುಟುಂಬದವರು ಮದುವೆ ಮಾತುಕತೆಗೆಂದು ಬರೋಡಾಗೆ ಹೋದಾಗ ಶಿವಾಲಿಕ ಪೋಷಕರು ನಮ್ಮನ್ನು ಗದರಿಸಿ, ನಮ್ಮ ಮಗ ಐಪಿಎಲ್ ಆಟಗಾರ. ಅವನಿಗೆ ಅನೇಕ ಹುಡುಗಿಯರಿಂದ ಪ್ರಪೋಸಲ್‌ಗಳು ಬರುತ್ತಿವೆ. ಹೀಗಾಗಿ ನಿಮ್ಮ ಮಗಳನ್ನು ಮದುವೆ ಮಾಡಿಕೊಳ್ಳಲು ಸಾಧ್ಯವಿಲ್ಲವೆಂದು ಹೇಳಿ ನಮ್ಮನ್ನು ಅವಮಾನಿಸಿ ಮನೆಯಿಂದ ಹೊರಗೆ ಹಾಕಿದರು. ಆ ಬಳಿಕ ನಾನು ಶಿವಾಲಿಕ್ ಬಳಿ ಮದುವೆ ಬಗ್ಗೆ ಮಾತನಾಡಲು ಹೋದಾಗ, ನೀನು ಇದರ ಬಗ್ಗೆ ಯಾರಿಗಾದರೂ ಹೇಳಿದರೆ, ನಾನು ನಿಮ್ಮ ಖ್ಯಾತಿಯನ್ನು ಹಾಳು ಮಾಡುತ್ತೇನೆ ಎಂದು ನನ್ನನ್ನು ಶಿವಾಲಿಕ್ ಬೆದರಿಸಿದರು ಎಂದು ಯುವತಿ ದೂರಿನಲ್ಲಿ ಉಲ್ಲೇಖ ಮಾಡಿದ್ದಾಳೆ ಎಂದು ವರದಿಯಾಗಿದೆ.
ಹೆಚ್ಚಿನ ತನಿಖೆ ನಡೆಯುತ್ತಿದೆ
ಜೋಧಪುರದ ಕುಡಿ ಭಗತ್ಸುನಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ಎಸಿಪಿ ಆನಂದ್ ರಾಜ್‌ಪುರೋಹಿತ್ ಮಾತನಾಡಿ, ಯುವತಿಯೊಬ್ಬಳು ಕ್ರಿಕೆಟಿಗ ಶಿವಾಲಿಕ್ ವಿರುದ್ಧ ಪ್ರಕರಣ ದಾಖಲಿಸಿದ್ದಾಳೆ. ಮದುವೆಯ ಸುಳ್ಳು ಭರವಸೆ ನೀಡಿ ದೈಹಿಕ ಸಂಪರ್ಕ ನಡೆಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಹೀಗಾಗಿ ಯುವಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಈ ವಿಷಯದಲ್ಲಿ ಹೆಚ್ಚಿನ ತನಿಖೆ ನಡೆಯುತ್ತಿದೆ. ನಿಶ್ಚಿತಾರ್ಥಕ್ಕೆ 20 ಲಕ್ಷ ರೂಪಾಯಿ ಖರ್ಚು ಮಾಡಲಾಗಿದೆ ಎಂದು ಹುಡುಗಿ ಹೇಳಿದ್ದಾಳೆ ಎಂಬ ಮಾಹಿತಿ ನೀಡಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
