RCB Playing XI: ಆರ್ಸಿಬಿ ಪರ ಇಂದು ಪದಾರ್ಪಣೆ ಮಾಡಲಿದ್ದಾರ ಈ ಸ್ಟಾರ್ ಆಟಗಾರ: ಯಾರು ಗೊತ್ತೇ?
RCB Probable Playing 11 vs CSK: ಇಂದಿನ ಪಂದ್ಯದ ಮೂಲಕ ಸ್ಟಾರ್ ಆಟಗಾರನೊಬ್ಬ ಆರ್ಸಿಬಿ ಪರ ಪದಾರ್ಪಣೆ ಮಾಡಲು ಸಜ್ಜಾಗಿದ್ದಾರೆ. ಅವರೇ ಜೋಶ್ ಹ್ಯಾಸಲ್‌ವುಡ್. ಹಾಗಾದ್ರೆ ಸಿಎಸ್ಕೆ ವಿರುದ್ಧದ ಪಂದ್ಯಕ್ಕೆ ಆರ್ಸಿಬಿ ಪ್ಲೇಯಿಂಗ್ ಇಲೆವೆನ್ ಹೇಗಿರಲಿದೆ ಎಂಬುದನ್ನು ನೋಡೋಣ.
ಸತತ ಮೂರು ಗೆಲುವಿನೊಂದಿಗೆ ಐಪಿಎಲ್ 2022 ರಲ್ಲಿ (IPL 2022) ಭರ್ಜರಿ ಆರಂಭ ಪಡೆದುಕೊಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇಂದು ಸತತ ಸೋಲಿನಿಂದ ಕಂಗೆಟ್ಟಿರುವ ಚೆನ್ನೈ ಸೂಪರ್ ಕಿಂಗ್ಸ್ (CSK vs RCB) ತಂಡವನ್ನ ಎದುರಿಸಲಿದೆ. ಈಗಿನ ಫಾರ್ಮ್ ಗಮನಿಸಿದರೆ ಮೇಲ್ನೋಟಕ್ಕೆ ಆರ್ಸಿಬಿಯೇ ಅತ್ಯಂತ ಬಲಿಷ್ಠವಾಗಿದೆ. ಆದರೆ, ಐಪಿಎಲ್ ಇತಿಹಾಸದಲ್ಲಿ ಉಭಯ ತಂಡಗಳ ಮುಖಾಮುಖಿ ಗಮನಿಸಿದರೆ ಚೆನ್ನೈ ಶಕ್ತಿಯುತವಾಗಿದೆ. 28 ಪಂದ್ಯಗಳ ಮುಖಾಮುಖಿಯಲ್ಲಿ ಸಿಎಸ್ಕೆ 18 ಪಂದ್ಯಗಳಲ್ಲಿ ಜಯ ಸಾಧಿಸಿದ್ದರೆ, ಬೆಂಗಳೂರು ಗೆಲುವು ಕಂಡಿದ್ದು ಕೇವಲ 9 ಪಂದ್ಯಗಳಲ್ಲಿ ಮಾತ್ರ. ಹೀಗಾಗಿ ಜಡೇಜಾ ಪಡೆ ಈ ಪಂದ್ಯದ ಮೂಲಕವೇ ಗೆಲುವಿನ ಆರಂಭ ಶುರು ಮಾಡುತ್ತಾ ಎಂಬುದು ಕುತೂಹಲ. ಅಲ್ಲದೆ ಚೆನ್ನೈ ವೀಕ್ನೆಸ್ ಅನ್ನು ಸಂಪೂರ್ಣವಾಗಿ ಅರಿತಿರುವ ಆರ್ಸಿಬಿ ನಾಯಕ ಫಾಫ್ ಡುಪ್ಲೆಸಿಸ್ (Faf Duplessis) ಏನು ಮಾಸ್ಟರ್ ಪ್ಲಾನ್ ಮಾಡುತ್ತಾರೆ ಎಂಬುದು ನೋಡಬೇಕಿದೆ. ಹೀಗೆ ಅನೇಕ ಕಾರಣಗಳಿಂದ ಈ ಪಂದ್ಯ ರೋಚಕತೆ ಸೃಷ್ಟಿಸಿದೆ.
ಇದರ ನಡುವೆ ಇಂದಿನ ಪಂದ್ಯದ ಮೂಲಕ ಸ್ಟಾರ್ ಆಟಗಾರನೊಬ್ಬ ಆರ್ಸಿಬಿ ಪರ ಪದಾರ್ಪಣೆ ಮಾಡಲು ಸಜ್ಜಾಗಿದ್ದಾರೆ. ಅವರೇ ಜೋಶ್ ಹ್ಯಾಸಲ್‌ವುಡ್. ತಮ್ಮ ಕಡ್ಡಾಯ ಕ್ವಾರಂಟೈನ್ ಮುಗಿಸಿ ಮೈದಾನದಲ್ಲಿ ಭರ್ಜರಿ ಬೌಲಿಂಗ್ ಅಭ್ಯಾಸ ನಡೆಸುತ್ತಿರುವ ಇವರು ಇಂದು ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ಈ ಆಸ್ಟ್ರೇಲಿಯಾ ವೇಗಿ ಡೇವಿಡ್ ವಿಲ್ಲಿ ಬದಲು ಆಡುವ ಸಾಧ್ಯತೆ ಇದೆ. ಹೀಗಾಗಿ ಆರ್ಸಿಬಿಯ ಬೌಲಿಂಗ್ ವಿಭಾಗ ಇದೀಗ ಮತ್ತಷ್ಟು ಬಲಿಷ್ಠವಾಗಿದೆ. ಇವರ ಜೊತೆಗೆ ಸಹೋದರಿ ಸಾವಿನಿಂದ ತಂಡ ತೊರೆದಿರುವ ಹರ್ಷಲ್ ಪಟೇಲ್ ಬದಲಿಗೆ ಸಿದ್ದಾರ್ಥ್ ಕೌಲ್ ಆಡುವ ಸಾಧ್ಯತೆಯಿದೆ. ಹರ್ಷಲ್ ಬಯೋಬಬಲ್‌ಗೆ ವಾಪಸಾದರೂ 3 ದಿನ ಕಡ್ಡಾಯ ಕ್ವಾರಂಟೈನ್‌ನಲ್ಲಿ ಇರಬೇಕಿದೆ.
ಉಳಿದಂತೆ ಚೊಚ್ಚಲ ಅರ್ಧಶತಕ ಗಳಿಸಿರುವ ಆರಂಭಿಕ ಬ್ಯಾಟರ್ ಅನುಜ್ ರಾವತ್ ಮತ್ತು ಲಯಕ್ಕೆ ಮರಳಿರುವ ವಿರಾಟ್ ಕೊಹ್ಲಿ ಮೇಲೆ ತಂಡದ ನಿರೀಕ್ಷೆ ಹೆಚ್ಚಿದೆ. ಯಾವುದೇ ರೀತಿಯ ಬೌಲಿಂಗ್ ದಾಳಿಯನ್ನು ಎದುರಿಸಬಲ್ಲ ಸಾಮರ್ಥ್ಯ ಇರುವ ಡುಪ್ಲೆಸಿ ಅವರಿಗೆ ವಿಕೆಟ್ ಕೀಪರ್ ಬ್ಯಾಟರ್ ದಿನೇಶ್ ಕಾರ್ತಿಕ್ ಅವರ ಬಲವಿದೆ. ಅನುಭವಿಗಳಾದ ಗ್ಲೆನ್ ಮ್ಯಾಕ್ಸ್‌ವೆಲ್ ಹಾಗೂ ಶಹ್ಬಾಜ್ ಅಹಮದ್ ಕೂಡ ತಂಡಕ್ಕೆ ಆಸರೆಯಾಗಿದ್ದಾರೆ.
ಆರ್ಸಿಬಿಯ ಬೌಲಿಂಗ್ ವಿಭಾಗದಲ್ಲಿ ಹರ್ಷಲ್ ಪಟೇಲ್ ಗೈರು ತಂಡವನ್ನು ಕಾಡುತ್ತಾ ಎಂಬುದು ನೋಡಬೇಕಿದೆ. ಮೊಹಮ್ಮದ್ ಸಿರಾಜ್ ದುಬಾರಿಯಾಗುತ್ತಿರುವುದು ಚಿಂತಿಸಬೇಕಾದ ಸಂಗತಿ. ಜೋಶ್ ಹ್ಯಾಸಲ್‌ವುಡ್ ತಂಡದ ಪ್ರಮುಖ ಬೌಲಿಂಗ್ ಅಸ್ತ್ರ. ಹಸರಂಗ, ಆಕಾಶ್‌ದೀಪ್ ಬೌಲಿಂಗ್ ವಿಭಾಗವನ್ನು ಬಲಿಷ್ಠಗೊಳಿಸಿದ್ದಾರೆ. ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಕಳೆದ ಪಂದ್ಯದಲ್ಲಿ ಬೌಲಿಂಗ್ ಮಾಡಿಲ್ಲ. ಅಗತ್ಯವಿದ್ದಲ್ಲಿ ಇವರು ಬೌಲಿಂಗ್ ವಿಭಾಗಕ್ಕೆ ಕೊಡುಗೆ ಸಲ್ಲಿಸುವ ಸಾಮರ್ಥ್ಯ ಹೊಂದಿದ್ದಾರೆ.
ರವೀಂದ್ರ ಜಡೇಜ ಮುಂದಾಳತ್ವದ ಚೆನ್ನೈಗೆ ಯಾವ ಪಂದ್ಯದಲ್ಲೂ ನಿರೀಕ್ಷಿತ ಸಾಮರ್ಥ್ಯ ತೋರಲು ಆಗಲಿಲ್ಲ. ಸತತ ಸೋಲಿನಿಂದಾಗಿ ತಂಡದ ಆತ್ಮವಿಶ್ವಾಸ ಕಳೆದುಹೋಗಿದೆ ಎಂದು ಕೋಚ್ ಸ್ಟೀಫನ್ ಫ್ಲೆಮಿಂಗ್ ಅವರೇ ಹೇಳಿಕೊಂಡಿದ್ದಾರೆ. ಆದ್ದರಿಂದ ಭರವಸೆಯಿಂದ ಆಡಲು ತಂಡ ಮುಂದಾಗಲಿದೆ. ಸ್ವತಃ ನಾಯಕನೇ ಎಲ್ಲ ವಿಭಾದಲ್ಲಿ ವಿಫಲವಾಗಿರುವುದು ಸಿಎಸ್ಕೆಗೆ ದೊಡ್ಡ ಹಿನ್ನಡೆಯಾಗಿದೆ.
ಉಭಯ ತಂಡಗಳ ಸಂಭಾವ್ಯ ಪ್ಲೇಯಿಂಗ್ XI:
ಆರ್ಸಿಬಿ– ಫಾಫ್ ಡುಪ್ಲೆಸಿಸ್ (ನಾಯಕ), ಅನುಜ್ ರಾವತ್, ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಶಹ್ಬಾಜ್ ಅಹ್ಮದ್, ದಿನೇಶ್ ಕಾರ್ತಿಕ್, ಜೋಶ್ ಹ್ಯಾಸಲ್‌ವುಡ್, ವನಿಂದು ಹಸರಂಗ, ಸಿದ್ಧಾರ್ಥ್ ಕೌಲ್, ಆಕಾಶ್ ದೀಪ್, ಮೊಹಮ್ಮದ್ ಸಿರಾಜ್.
ಸಿಎಸ್ಕೆ– ರವೀಂದ್ರ ಜಡೇಜಾ (ನಾಯಕ), ರಾಬಿನ್ ಉತ್ತಪ್ಪ, ರುತುರಾಜ್ ಗಾಯಕ್ವಾಡ್, ಮೊಯಿನ್ ಅಲಿ, ಅಂಬಟಿ ರಾಯುಡು, ಶಿವಂ ದುಬೆ, ಮಹೇಂದ್ರ ಸಿಂಗ್ ಧೋನಿ, ಡ್ವೇನ್ ಬ್ರಾವೋ, ಕ್ರಿಸ್ ಜೋರ್ಡಾನ್, ಮಹಿಷ್ ತೀಕ್ಷಣ, ರಾಜವರ್ಧನ್ ಹೆಂಗರ್ಗೆಕರ್.
Hardik Pandya: ಸೀನಿಯರ್ ಪ್ಲೇಯರ್ ಎಂಬ ಗೌರವ ಕೊಡದೆ ಶಮಿಗೆ ಮನಬಂದಂತೆ ಬೈದ ಹಾರ್ದಿಕ್ ಪಾಂಡ್ಯ
Kuldeep Sen: ಚೊಚ್ಚಲ ಪಂದ್ಯದಲ್ಲೇ ಮಿಂಚಿದ ಕ್ಷೌರಿಕನ ಮಗ: ಆರ್ಆರ್ ತಂಡದ ವೇಗಿ ಈಗ ಐಪಿಎಲ್ ಹೀರೋ