ಅಭ್ಯಾಸ ಪಂದ್ಯದಲ್ಲಿ ಶತಕ ಬಾರಿಸಿ ಟೆಸ್ಟ್ ಪಂದ್ಯಗಳಿಗೆ ತಾನು ತಯಾರಾಗಿರುವ ಸಂದೇಶ ರವಾನಿಸಿದ ರಾಹುಲ್
ಈ ಪಂದ್ಯಕ್ಕೆ ಟೀಮಿನ ನಾಯಕತ್ವ ವಹಿಸಿರುವ ರೋಹಿತ್ ಟಾಸ್ ಗೆದ್ದು ಮೊದಲು ಮಾಡುವ ನಿರ್ಧಾರ ತೆಗೆದುಕೊಂಡರಾದರೂ ವೈಯಕ್ತಿಕವಾಗಿ ತಂಡಕ್ಕೆ ದೊಡ್ಡ ಕಾಣಿಕೆ ನೀಡದೆ ಕೇವಲ 9 ರನ್ ಗಳಿಸಿ ಔಟಾದರು ಮೂರನೇ ಕ್ರಮಾಂಕದಲ್ಲಿ ಆಡಿದ ಚೇತೇಶ್ವರ ಪೂಜಾರಾ 21 ರನ್ ಗಳಿಸಿದರೆ, ಕೊಹ್ಲಿ ಸ್ಥಾನದಲ್ಲಿ ಆಡಿದ ಟೆಸ್ಟ್ ಸ್ಪೆಷಲಿಸ್ಟ್ ಹನುಮ ವಿಹಾರಿ 24 ರನ್ ಗಳಿಸಿ ಔಟಾದರು.
ಚೆಸ್ಟರ್-ಲೀ-ಸ್ಟ್ರೀಟ್, ಇಂಗ್ಲೆಂಡ್: ಆಗಸ್ಟ್ 4 ರಿಂದ ಇಂಗ್ಲೆಂಡ್ ವಿರುದ್ಧ ಆರಂಭವಾಗಲಿರುವ ಟೆಸ್ಟ್ ಸರಣಿಯಲ್ಲಿ ಶುಭ್ಮನ್ ಗಿಲ್ ಅವರು ಗಾಯಗೊಂಡು ಸ್ದೇದೇಶಕ್ಕೆ ವಾಪಸ್ಸಾಗಿರವುದರಿಂದ ರೋಹಿತ್ ಶರ್ಮ ಅವರೊಂದಿಗೆ ಯಾರು ಇನ್ನಿಂಗ್ಸ್ ಆರಂಭಿಸಬೇಕೆಂಬ ಪ್ರಶ್ನೆಗೆ ಮಂಗಳವಾರ ಭಾಗಶಃ ಉತ್ತರ ಸಿಕ್ಕಂತಿದೆ. ಕೌಂಟಿ ಸೆಲೆಕ್ಟ್ ಇಲೆವೆನ್ ವಿರುದ್ಧ ಇಂದು ಚೆಸ್ಟರ್-ಲೀ-ಸ್ಟ್ರೀಟ್ನ ರಿವರ್ ಸೈಡ್ ಮೈದಾನಲ್ಲಿ ಆರಂಭವಾದ ಮೂರು ದಿನಗಳ ಪಂದ್ಯದಲ್ಲಿ ಕೆ ಎಲ್ ರಾಹುಲ್ ಅವರು ಆಕರ್ಷಕ ಶತಕ ಬಾರಿಸಿ ಆರಂಭ ಆಟಗಾರನ ಸ್ಥಾನಕ್ಕೆ ದಾವೆ ಹೂಡಿದ್ದಾರೆ. ಆದರೆ, ಟೆಸ್ಟ್ಗಳಲ್ಲಿ ಅವರು ಆರಂಭ ಆಟಗಾರನಾಗಿ ಆಡುವುದಿಲ್ಲ. ಗಿಲ್ಗಿಂತ ಮೊದಲು ಓಪನರ್ ಆಗಿ ಆಡುತ್ತಿದ್ದ ಮಾಯಾಂಕ್ ಅಗರ್ವಾಲ್ ರೋಹಿತ್ಗೆ ಉತ್ತಮ ಸಂಗಾತಿಯಾಗಬಹುದಾದರೂ, ನಾಯಕ ವಿರಾಟ್ ಕೊಹ್ಲಿ ಮತ್ತು ಹೆಡ್ ಕೋಚ್ ರವಿ ಶಾಸ್ತ್ರಿ ಅವರು ಒಲವು ರಾಹುಲ್ ಮೇಲಿರುವಂತಿದೆ. ಆದರೆ ಈ ಅಭ್ಯಾಸ ಪಂದ್ಯದಲ್ಲಿ ರಾಹುಲ್ 5ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದರು. ಹಾಗಾಗಿ, ರಾಹುಲ್ರನ್ನು ಆಡಿಸಿದರೂ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಮಾಡುವಂತೆ ಹೇಳಬಹದೇನೋ ಎಂಬ ಸಂದೇಹ ಮೂಡುತ್ತಿದೆ.
ರೋಹಿತ್ ಜೊತೆ ಇಂದು ಇನ್ನಿಂಗ್ಸ್ ಆರಂಭಿಸಿದ ಮಾಯಾಂಕ್ 28 ರನ್ ಗಳಿಸಿದರು.
ರಿಷಭ್ ಪಂತ್ ಸೋಂಕಿಗೊಳಗಾಗಿರುವುದರಿಂದ ಮೊದಲ ಟೆಸ್ಟ್ ಆರಂಭವಾಗುವ ಹೊತ್ತಿಗೆ ಅವರು ಚೇತರಿಸಿಕೊಂಡರೆ, ನಿಸ್ಸಂದೇಹವಾಗಿ ಅವರೇ ಮೊದಲ ಆದ್ಯತೆಯ ವಿಕೆಟ್ಕೀಪರ್ ಆಗಿರುತ್ತಾರೆ. ಟೀಮ್ ಮ್ಯಾನೇಜ್ಮೆಂಟ್ಗೆ ಮತ್ತೊಬ್ಬ ರೆಗ್ಯುಲರ್ ವಿಕೆಟ್ಕೀಪರ್ ವೃದ್ಧಿಮಾನ್ ಸಹಾ ಅವರನ್ನು ಆಡಿಸುವ ಉದ್ದೇಶವಿದ್ದಂತಿಲ್ಲ. ಈಗ ನಡೆಯುತ್ತಿರುವ ಪಂದ್ಯದಲ್ಲಿ ವಿಕೆಟ್ ಕಾಯುವ ಕೆಲಸವನ್ನು ರಾಹುಲ್ ನಿರ್ವಹಿಸುತ್ತಿದ್ದಾರೆ. ಒಂದು ಪಕ್ಷ ಪಂತ್ ರಿಕವರ್ ಆಗದಿದ್ದರೆ, ಮೊದಲ ಟೆಸ್ಟ್ನಲ್ಲಿ ರಾಹುಲ್ ವಿಕೆಟ್ಕೀಪರ್-ಬ್ಯಾಟ್ಸ್ಮನ್ ರೂಪದಲ್ಲಿ ಆಡಬಹುದು ಮತ್ತು ಮಾಯಾಂಕ್ ಆರಂಭಿಕ ಬ್ಯಾಟ್ಸ್ಮನ್ ಸ್ಥಾನದಲ್ಲಿ ಆಡುವುದು ಖಾತ್ರಿಯಾಗುತ್ತದೆ.
ಈ ಪಂದ್ಯಕ್ಕೆ ಟೀಮಿನ ನಾಯಕತ್ವ ವಹಿಸಿರುವ ರೋಹಿತ್ ಟಾಸ್ ಗೆದ್ದು ಮೊದಲು ಮಾಡುವ ನಿರ್ಧಾರ ತೆಗೆದುಕೊಂಡರಾದರೂ ವೈಯಕ್ತಿಕವಾಗಿ ತಂಡಕ್ಕೆ ದೊಡ್ಡ ಕಾಣಿಕೆ ನೀಡದೆ ಕೇವಲ 9 ರನ್ ಗಳಿಸಿ ಔಟಾದರು ಮೂರನೇ ಕ್ರಮಾಂಕದಲ್ಲಿ ಆಡಿದ ಚೇತೇಶ್ವರ ಪೂಜಾರಾ 21 ರನ್ ಗಳಿಸಿದರೆ, ಕೊಹ್ಲಿ ಸ್ಥಾನದಲ್ಲಿ ಆಡಿದ ಟೆಸ್ಟ್ ಸ್ಪೆಷಲಿಸ್ಟ್ ಹನುಮ ವಿಹಾರಿ 24 ರನ್ ಗಳಿಸಿ ಔಟಾದರು. ಸೋಜಿಗದ ಸಂಗತಿಯೆಂದರೆ ಪೂಜಾರಾ ಮತ್ತು ಹನಮ ಇಬ್ಬರೂ ಸ್ಪಿನ್ನರ್ಗಳಿಗೆ ವಿಕೆಟ್ ಒಪ್ಪಿಸಿದರು.
ಭಾರತದ ಸ್ಕೋರ್ 107/4 ಆಗಿದ್ದಾಗ ರಾಹುಲ್ರನ್ನು ಜೊತೆಗೂಡಿದ ಆಲ್ರೌಂಡರ್ ರವೀಂದ್ರ ಜಡೇಜಾ 5 ನೇ ವಿಕೆಟ್ಗೆ 127 ರನ್ ಜೊತೆಯಾಟದಲ್ಲಿ ಪಾಲ್ಗೊಂಡರು. ಸೆಲೆಕ್ಟ್ ಇಲೆವೆನ್ ಬೌಲರ್ಗಳನ್ನು ಲೀಲಾಜಾಲವಾಗಿ ಎದುರಿಸಿ ಆಡಿದ ಕನ್ನಡಿಗ 150 ಎಸೆತಗಳಲ್ಲಿ 11 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ 101 ರನ್ ಗಳಿಸಿ ನಿವೃತ್ತರಾದರು.
ರಾಹುಲ್ ಔಟಾದ ನಂತರ ರನ್ ಗಳಿಕೆಯ ವೇಗವನ್ನು ಹೆಚ್ಚಿಸಿದ ಜಡೇಜಾ ತಮ್ಮ ಅರ್ಧ ಶತಕವನ್ನು ಪೂರೈಸಿದರು. 146 ಎಸೆತಗಳನ್ನಾಡಿದ ಅವರು 5 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡ 75 ರನ್ ಬಾರಿಸಿ ಔಟಾದರು. ದಿನದಾಟ ಮುಗಿದಾಗ ಭಾರತದ ಸ್ಕೋರ್ 306/9 ಆಗಿತ್ತು.
.@imjadeja departs after a fine knock of 75 off 146 deliveries in the three-day warm-up game in Durham.#TeamIndia pic.twitter.com/bvKX888ZeF
— BCCI (@BCCI) July 20, 2021
ಸೆಲೆಕ್ಟ್ ಕೌಂಟಿ ಪರ ವೇಗದ ಬೌಲರ್ ಕ್ರೇಗ್ ಮೈಲ್ಸ್ 42 ರನ್ಗೆ 3 ವಿಕೆಟ್ ಪಡೆದು ಯಶಸ್ವೀ ಬೌಲರ್ ಎನಿಸಿಕೊಂಡರೆ, ಲಿಂಡನ್ ಜೇಮ್ಸ್ ಮತ್ತು ಲಿಯಾಮ್ ಪ್ಯಾಟರ್ಸನ್ ತಲಾ 2 ವಿಕೆಟ್ ಪಡೆದರು.
ಇದನ್ನೂ ಓದಿ: Rohit Sharma: ಭಾರತ ತಂಡದ ಅಭ್ಯಾಸ ಪಂದ್ಯ: ಟೀಮ್ ಇಂಡಿಯಾಗೆ ರೋಹಿತ್ ಶರ್ಮಾ ನಾಯಕ..!