Viral Video: ಅಭಿಮಾನಿಗಳನ್ನು ನೋಡಿ ದಂಗಾದ ರೋಹಿತ್ ಶರ್ಮಾ..!
Rohit Sharma: ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ಇತ್ತೀಚೆಗೆ ವೆಸ್ಟ್ ಇಂಡೀಸ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯನ್ನು 4-1 ರಿಂದ ಗೆದ್ದುಕೊಂಡಿತ್ತು.
ಭಾರತದಲ್ಲಿ ಸ್ಟಾರ್ ಕ್ರಿಕೆಟಿಗರಿಗೆ ಇರುವ ಕ್ರೇಜ್ ಹೇಳತೀರದು. ತಮ್ಮ ನೆಚ್ಚಿನ ಆಟಗಾರನನ್ನು ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿರುವ ಹಲವು ವಿಡಿಯೋಗಳನ್ನು ನೀವು ಕೂಡ ನೋಡಿರುತ್ತೀರಿ. ಇದೀಗ ಅಂತಹದ್ದೇ ವಿಡಿಯೋವೊಂದು ವೈರಲ್ ಆಗಿದೆ. ಈ ಬಾರಿ ರೋಹಿತ್ ಶರ್ಮಾ (Rohit Sharma) ಅಭಿಮಾನಿಗಳದ್ದು ಎಂಬುದಷ್ಟೇ ವ್ಯತ್ಯಾಸ. ಭಾರತ ತಂಡದ ನಾಯಕ ರೋಹಿತ್ ಶರ್ಮಾ ಸೋಮವಾರ ಮುಂಬೈನ ಹೋಟೆಲ್ನಲ್ಲಿದ್ದರು. ಈ ವಿಷಯ ಗೊತ್ತಾಗುತ್ತಿದ್ದಂತೆ ಹಿಟ್ಮ್ಯಾನ್ನನ್ನು ನೋಡಲು ಅಭಿಮಾನಿಗಳು ಹೋಟೆಲ್ನತ್ತ ಆಗಮಿಸಿದ್ದಾರೆ. ಹೀಗೆ ಬಂದ ಅಭಿಮಾನಿಗಳಿಂದಾಗಿ ರಸ್ತೆ ಕೂಡ ಬ್ಲಾಕ್ ಆಗಿದೆ. ಅಷ್ಟೇ ಅಲ್ಲದೆ ಇದರಿಂದಾಗಿ ಅಲ್ಲಿನ ಭದ್ರತಾ ಸಿಬ್ಬಂದಿ ಪರಿಸ್ಥಿತಿ ನಿಭಾಯಿಸಲು ಹರಸಾಹಸ ಪಡಬೇಕಾಯಿತು.
ಇನ್ನೇನು ಕಾರ್ಯಕ್ರಮ ಮುಗಿಸಿ ರೋಹಿತ್ ಶರ್ಮಾ ಹೊರಡಬೇಕಿದ್ದಾಗ ಅಭಿಮಾನಿಗಳನ್ನು ನೋಡಿ ದಂಗಾದರು. ಸಾವಿರಾರು ಸಂಖ್ಯೆಯಲ್ಲಿ ಸೇರಿದ ಅಭಿಮಾನಿಗಳ ನಡುವೆ ಹೋಗಲು ಹೆದರಿದ ಹಿಟ್ಮ್ಯಾನ್ ಮತ್ತೆ ಹೋಟೆಲ್ಗೆ ಹಿಂತಿರುಗಿದರು. ಇದೀಗ ರೋಹಿತ್ ಶರ್ಮಾ ಅಭಿಮಾನಿಗಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಹಿಟ್ಮ್ಯಾನ್ ಅಭಿಮಾನಿಗಳ ಈ ಕ್ರೇಜ್ ಅನ್ನು ಸೋಷಿಯಲ್ ಮೀಡಿಯಾದಲ್ಲಿ ಕೊಂಡಾಡುತ್ತಿದ್ದಾರೆ.
Massive crowd gathers outside the hotel to see Rohit Sharma. pic.twitter.com/hUhrS2bT8j
— Mufaddal Vohra (@mufaddal_vohra) August 16, 2022
ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ಇತ್ತೀಚೆಗೆ ವೆಸ್ಟ್ ಇಂಡೀಸ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯನ್ನು 4-1 ರಿಂದ ಗೆದ್ದುಕೊಂಡಿತ್ತು. ಇದೀಗ ಜಿಂಬಾಬ್ವೆ ಸರಣಿಯಿಂದ ಹೊರಗುಳಿದಿರುವ ಹಿಟ್ಮ್ಯಾನ್ ಏಷ್ಯಾಕಪ್ ಮೂಲಕ ಮತ್ತೆ ಟೀಮ್ ಇಂಡಿಯಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಲ್ಲದೆ ಈ ಪ್ರಮುಖ ಟೂರ್ನಿಗಾಗಿ ಶೀಘ್ರದಲ್ಲೇ ಅಭ್ಯಾಸವನ್ನೂ ಕೂಡ ಆರಂಭಿಸಲಿದ್ದಾರೆ.
ಏಷ್ಯಾ ಕಪ್ಗೆ ಭಾರತ ತಂಡ ಹೀಗಿದೆ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್ , ಯುಜ್ವೇಂದ್ರ ಚಹಾಲ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್ ಅರ್ಷದೀಪ್ ಸಿಂಗ್ ಮತ್ತು ಅವೇಶ್ ಖಾನ್.
ಮೀಸಲು ಆಟಗಾರರು: ಶ್ರೇಯಸ್ ಅಯ್ಯರ್, ಅಕ್ಷರ್ ಪಟೇಲ್, ದೀಪಕ್ ಚಹಾರ್.