AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ranji Trophy: 304 ರನ್​ಗೆ ಕರ್ನಾಟಕ ಆಲೌಟ್: 100 ರನ್​ಗು ಮೊದಲೇ ಸರ್ವಿಸಸ್ 4 ವಿಕೆಟ್ ಪತನ

Karnataka vs Services: ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ತಂಡದ ಆರಂಭ ಚೆನ್ನಾಗಿರಲಿಲ್ಲ. ಓಪನರ್​ಗಳಾದ ನಾಯಕ ಮಯಾಂಕ್ ಅಗರ್ವಾಲ್ ಮತ್ತು ಸಮರ್ಥ್ ಆರ್ ತಲಾ 8 ರನ್​ಗೆ ನಿರ್ಗಮಿಸಿದರು.

Ranji Trophy: 304 ರನ್​ಗೆ ಕರ್ನಾಟಕ ಆಲೌಟ್: 100 ರನ್​ಗು ಮೊದಲೇ ಸರ್ವಿಸಸ್ 4 ವಿಕೆಟ್ ಪತನ
ಸಾಂದರ್ಭಿಕ ಚಿತ್ರ
TV9 Web
| Updated By: Vinay Bhat|

Updated on:Dec 15, 2022 | 11:25 AM

Share

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿಯ (Ranji Trophy) ಪಂದ್ಯದಲ್ಲಿ ಸರ್ವಿಸಸ್ ವಿರುದ್ಧ ಕರ್ನಾಟಕ (Karnataka vs Services) ತಂಡ ಬೊಂಬಾಟ್ ಆಟ ಪ್ರದರ್ಶಿಸುತ್ತಿದೆ. ಮೊದಲು ಬ್ಯಾಟ್ ಮಾಡಿದ ರಾಜ್ಯ ತಂಡ ಮೊದಲ ಇನ್ನಿಂಗ್ಸ್​ನಲ್ಲಿ ನಿಕಿನ್ ಜೋಸ್ ಹಾಗೂ ಶರತ್ ಬಿಆರ್ (Sharath BR) ಅವರ ಅರ್ಧಶತಕದ ನೆರವಿನಿಂದ 304 ರನ್ ಕಲೆಹಾಕಿತು. ಇದೀಗ ಸರ್ವಿಸಸ್ ತನ್ನ ಮೊದಲ ಇನ್ನಿಂಗ್ಸ್ ಶುರು ಮಾಡಿದ್ದು 100 ರನ್​ ಆಗುವ ಹೊತ್ತಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.

ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ತಂಡದ ಆರಂಭ ಚೆನ್ನಾಗಿರಲಿಲ್ಲ. ಓಪನರ್​ಗಳಾದ ನಾಯಕ ಮಯಾಂಕ್ ಅಗರ್ವಾಲ್ ಮತ್ತು ಸಮರ್ಥ್ ಆರ್ ತಲಾ 8 ರನ್​ಗೆ ನಿರ್ಗಮಿಸಿದರು. ನಂತರ ಜೊತೆಯಾದ ವಿಶಾಲ್ ಓನತ್ ಮತ್ತು ನಿಕಿನ್ ಜೋಸ್ ತಂಡಕ್ಕೆ ಆಸರೆಯಾಗಿ ನಿಂತರು. ಈ ಜೋಡಿ 84 ರನ್​ಗಳ ಕಾಣಿಕೆ ನೀಡಿತು. ವಿಶಾಲ್ 79 ಎಸೆತಗಳಲ್ಲಿ 33 ರನ್ ಗಳಿಸಿದರು. ಅನುಭವಿ ಮನೀಶ್ ಪಾಂಡೆ 10 ರನ್ ಹಾಗೂ ಶ್ರೇಯಸ್ ಗೋಪಾಲ್ ಸೊನ್ನೆ ಸುತ್ತಿದ್ದು ತಂಡಕ್ಕೆ ಹಿನ್ನಡೆ ಆಯಿತು.

ಐಪಿಎಲ್​ ತಂಡವನ್ನೇ ಖರೀದಿಸುವ ಸಾಮರ್ಥ್ಯ ಹೊಂದಿರುವ ಮೆಸ್ಸಿ ಎಷ್ಟು ಸಾವಿರ ಕೋಟಿಯ ಒಡೆಯ ಗೊತ್ತಾ?

ಇದನ್ನೂ ಓದಿ
Image
IND vs BAN: 3 ಜೀವದಾನ ಸಿಕ್ಕರೂ ಶತಕ ಸಿಡಿಸದ ಶ್ರೇಯಸ್; ಆದರೂ ಎರಡೆರಡು ದಾಖಲೆ ಸೃಷ್ಟಿ..!
Image
INDW vs AUSW: ಬ್ಯಾಟಿಂಗ್-ಬೌಲಿಂಗ್​ನಲ್ಲಿ ಮಿಂಚಿದ ಆಸೀಸ್: ಭಾರತೀಯ ಮಹಿಳೆಯರಿಗೆ ಎರಡನೇ ಸೋಲು
Image
FIFA World Cup 2022: ಸೆಮೀಸ್​ನಲ್ಲಿ ಮೊರಕ್ಕೊಗೆ ಸೋಲು: ಫಿಫಾ ಫೈನಲ್​ನಲ್ಲಿ ಫ್ರಾನ್ಸ್-ಅರ್ಜೆಂಟೀನಾ ಸೆಣೆಸಾಟ
Image
Kane Williamson: ನ್ಯೂಜಿಲ್ಯಾಂಡ್ ಟೆಸ್ಟ್ ತಂಡದ ನಾಯಕತ್ವದಿಂದ ಕೆಳಗಿಳಿದ ಕೇನ್ ವಿಲಿಯಮ್ಸನ್

ನಿಕಿನ್ ಜೋಶ್ ಕೂಡ 83 ಎಸೆತಗಳಲ್ಲಿ 62 ರನ್ ಬಾರಿಸಿ ಔಟಾದರು. ಹೀಗೆ 133 ರನ್​ಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಸಂದರ್ಭ ತಂಡಕ್ಕೆ ಆಧಾರವಾಗಿದ್ದು ಶರತ್ ಬಿಆರ್ ಹಾಗೂ ಕೃಷ್ಣಪ್ಪ ಗೌತಮ್. ಶತಕದ ಜೊತೆಯಾಟ ಆಡಿದ ಈ ಜೋಡಿ ತಂಡದ ಮೊತ್ತವನ್ನು 200ರ ಗಡಿ ದಾಟಿಸಿತು. ಶರತ್ 115 ಎಸೆತಗಳಲ್ಲಿ 77 ರನ್ ಸಿಡಿಸಿದರೆ, ಗೌತಮ್ 52 ಎಸೆತಗಳಲ್ಲಿ 48 ರನ್​ಗೆ ಔಟಾಗುವ ಮೂಲಕ ಅರ್ಧಶತಕ ವಂಚಿತರಾದರು. ರೋನಿತ್ ಮೋರೆ 41 ಬಾಲ್​ಗಳಲ್ಲಿ 26 ರನ್​ಗಳ ಕಾಣಿಕೆ ನೀಡಿದರು. ಅಂತಿಮವಾಗಿ ಕರ್ನಾಟಕ 74.4 ಓವರ್​ಗಳಲ್ಲಿ 304 ರನ್​ಗೆ ಆಲೌಟ್ ಆಯಿತು. ಸರ್ನಿಸಸ್ ಪರ ದಿವೇಶ್ ಪಥಾನಿಯ 5 ಹಾಗೂ ಪುಲ್ಕಿತ್ ನರಂಗ್ 3 ವಿಕೆಟ್ ಪಡೆದು ಮಿಂಚಿದರು.

ಇತ್ತ ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿರುವ ಸರ್ವಿಸಸ್ ತಂಡ ಮೊದಲ ಓವರ್​ನಲ್ಲೇ ಎರಡು ವಿಕೆಟ್ ಕಳೆದುಕೊಂಡು ಆಘಾತಕ್ಕೆ ಸಿಲುಕಿತು. ಶುಭಂ ರೋಹಿಲ 8 ರನ್​ಗೆ ಹಾಗೂ ಗೌಲತ್ ರಾಹುಲ್ ಸಿಂಗ್ ಸೊನ್ನೆ ಸುತ್ತಿದರು. ಅನ್ಶುಲ್ ಗುಪ್ತಾ ಕೂಡ ಖಾತೆ ತೆರೆಯದೆ ಪೆವಿಲಿಯನ್ ಸೇರಿಕೊಂಡರು. ದೇವೆಂದರ್ 6 ರನ್​ಗೆ ನಿರ್ಗಮಿಸಿದರು. ಈ ಮೂಲಕ 100 ರನ್​ಗೂ ಮೊದಲೇ ಸರ್ವಿಸಸ್ ತಂಡ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ತಂಡಕ್ಕೆ ಇದೀಗ ರವಿ ಚೌಹಾಣ್ ಹಾಗೂ ನಾಯಕ ರಜತ್ ಪಲಿವಾಲ್ ಆಸರೆಯಾಗಿ ನಿಂತಿದ್ದಾರೆ. ಕರ್ನಾಟಕ ಪರ ವಿದ್ವತ್ ಕಾವೇರಪ್ಪ 3 ವಿಕೆಟ್ ಪಡೆದುಕೊಂಡಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:25 am, Thu, 15 December 22

ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ