IND vs ENG 1st Test: 3ನೇ ಕ್ರಮಾಂಕದ ಮೇಲೆ ಎಲ್ಲರ ಕಣ್ಣು: ಕರುಣ್-ಸುದರ್ಶನ್ ಮಧ್ಯೆ ಯಾರಿಗೆ ಸ್ಥಾನ?

Karun Nair or Sai Sudarshan: ಈ ಹಿಂದೆ ಶುಭ್​ಮನ್ ಗಿಲ್ ಟೆಸ್ಟ್​ನಲ್ಲಿ ಮೂರನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದರು. ಆದರೀಗ ಗಿಲ್ 4ನೇ ಕ್ರಮಾಂಕದಲ್ಲಿ ಕಣಕ್ಕಿಳಿಯುವ ಕಾರಣ 3ನೇ ಸ್ಥಾನದಲ್ಲಿ ಯಾರು ಬರುತ್ತಾರೆ ಎಂಬುದು ಕುತೂಹಲ ಕೆರಳಿಸಿದೆ. ಸದ್ಯ ಮೂರನೇ ಸ್ಥಾನದಲ್ಲಿ ಆಡಲು ಟೀಮ್ ಇಂಡಿಯಾ ಇಬ್ಬರು ಪ್ರಬಲ ಆಟಗಾರರನ್ನು ಹೊಂದಿದೆ. ಅವರಲ್ಲಿ ಸಾಯಿ ಸುದರ್ಶನ್ ಮತ್ತು ಕರುಣ್ ನಾಯರ್ ಸೇರಿದ್ದಾರೆ.

IND vs ENG 1st Test: 3ನೇ ಕ್ರಮಾಂಕದ ಮೇಲೆ ಎಲ್ಲರ ಕಣ್ಣು: ಕರುಣ್-ಸುದರ್ಶನ್ ಮಧ್ಯೆ ಯಾರಿಗೆ ಸ್ಥಾನ?
Gill Sai Sudarshan And Karun Nair

Updated on: Jun 20, 2025 | 10:09 AM

ಬೆಂಗಳೂರು (ಜೂ. 20): ಭಾರತ ಮತ್ತು ಇಂಗ್ಲೆಂಡ್ (India vs England) ನಡುವಿನ ಐದು ಟೆಸ್ಟ್ ಪಂದ್ಯಗಳ ಸರಣಿಯ ಮೊದಲ ಪಂದ್ಯ ಜೂನ್ 20 ರಂದು ಲೀಡ್ಸ್‌ನ ಹೆಡಿಂಗ್ಲೆ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯಕ್ಕಾಗಿ ಇಂಗ್ಲೆಂಡ್ ಈಗಾಗಲೇ ತನ್ನ ಪ್ಲೇಯಿಂಗ್ ಹನ್ನೊಂದರ ತಂಡವನ್ನು ಘೋಷಿಸಿದೆ. ಮತ್ತೊಂದೆಡೆ, ಭಾರತ ತಂಡ ಇನ್ನೂ ತನ್ನ ಆಡುವ ಬಳಗವನ್ನು ಬಹಿರಂಗಪಡಿಸಿಲ್ಲ. ಟೆಸ್ಟ್ ಪಂದ್ಯಕ್ಕೂ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ, ನಾಯಕ ಶುಭ್​ಮನ್ ಗಿಲ್, ವಿರಾಟ್ ಕೊಹ್ಲಿ ನಿವೃತ್ತಿಯ ನಂತರ, ತಾನು ಸ್ವತಃ 4 ನೇ ಸ್ಥಾನದಲ್ಲಿ ಆಡಲಿದ್ದೇನೆ ಎಂದು ಹೇಳಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, 3 ನೇ ಸ್ಥಾನ ಈಗ ಖಾಲಿಯಾಗಿದೆ.

ಈ ಹಿಂದೆ ಶುಭ್​ಮನ್ ಗಿಲ್ ಟೆಸ್ಟ್​ನಲ್ಲಿ ಮೂರನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದರು. ಆದರೀಗ ಗಿಲ್ 4ನೇ ಕ್ರಮಾಂಕದಲ್ಲಿ ಕಣಕ್ಕಿಳಿಯುವ ಕಾರಣ 3ನೇ ಸ್ಥಾನದಲ್ಲಿ ಯಾರು ಬರುತ್ತಾರೆ ಎಂಬುದು ಕುತೂಹಲ ಕೆರಳಿಸಿದೆ. ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಕೂಡ ಗಿಲ್ ಅವರು ಸ್ಪಷ್ಟನೆ ನೀಡದಿರುವುದು ವಿಶೇಷವಾಗಿದೆ. ಸದ್ಯ ಮೂರನೇ ಸ್ಥಾನದಲ್ಲಿ ಆಡಲು ಟೀಮ್ ಇಂಡಿಯಾ ಇಬ್ಬರು ಪ್ರಬಲ ಆಟಗಾರರನ್ನು ಹೊಂದಿದೆ. ಅವರಲ್ಲಿ ಸಾಯಿ ಸುದರ್ಶನ್ ಮತ್ತು ಕರುಣ್ ನಾಯರ್ ಸೇರಿದ್ದಾರೆ.

ಸಾಯಿ ಸುದರ್ಶನ್ ಐಪಿಎಲ್ 2025 ರಲ್ಲಿ ಅದ್ಭುತ ಪ್ರದರ್ಶನ

ಇದನ್ನೂ ಓದಿ
ಇಂದಿನಿಂದ ಲೀಡ್ಸ್​ನಲ್ಲಿ ಭಾರತ- ಇಂಗ್ಲೆಂಡ್ ಮೊದಲ ಟೆಸ್ಟ್
ವಿದರ್ಭ ತಂಡ ತೊರೆಯಲು ನಿರ್ಧರಿಸಿದ ಕರುಣ್, ಜಿತೇಶ್
ಐಪಿಎಲ್ ಪ್ರತಿ ವರ್ಷ ಬರುತ್ತದೆ; ಪತ್ರಿಕಾಗೋಷ್ಠಿಯಲ್ಲಿ ಗಿಲ್ ಮಾತು
ಭಾರತ- ಇಂಗ್ಲೆಂಡ್‌ ನಡುವಿನ ಲೀಡ್ಸ್​ ಟೆಸ್ಟ್​ಗೆ ಮಳೆಯ ಆತಂಕ

23 ವರ್ಷದ ಯುವ ಬ್ಯಾಟ್ಸ್‌ಮನ್ ಸಾಯಿ ಸುದರ್ಶನ್ ಕೆಲವು ಸಮಯದಿಂದ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ ಮತ್ತು ಅವರ ಬ್ಯಾಟ್‌ನಿಂದ ಸಾಕಷ್ಟು ರನ್‌ಗಳು ಬರುತ್ತಿವೆ. ಅವರ ಸಾಮರ್ಥ್ಯವನ್ನು ನೋಡಿದರೆ, ಅವರಿಗೆ ಮೊದಲ ಬಾರಿಗೆ ಭಾರತೀಯ ಟೆಸ್ಟ್ ತಂಡದಲ್ಲಿ ಅವಕಾಶ ಸಿಕ್ಕಿದೆ. ಐಪಿಎಲ್ 2025 ರಲ್ಲಿ ಅದ್ಭುತ ಪ್ರದರ್ಶನ ನೀಡಿದ ಇವರು ತಮ್ಮ ಆಟದ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದರು. ಅವರು 15 ಪಂದ್ಯಗಳಲ್ಲಿ ಒಟ್ಟು 759 ರನ್‌ಗಳನ್ನು ಗಳಿಸಿದರು, ಇದರಲ್ಲಿ ಒಂದು ಶತಕ ಮತ್ತು 6 ಅರ್ಧಶತಕಗಳು ಅವರ ಬ್ಯಾಟ್‌ನಿಂದ ಬಂದವು. ಅಷ್ಟೇ ಅಲ್ಲದೆ ಆರೆಂಜ್ ಕ್ಯಾಪ್ ಗೆದ್ದರು. ಇದಲ್ಲದೆ, ಅವರು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 1957 ರನ್‌ಗಳನ್ನು ಗಳಿಸಿದ್ದಾರೆ.

IND vs ENG 1st Test Weather: ಇಂದಿನಿಂದ ಲೀಡ್ಸ್​ನಲ್ಲಿ ಭಾರತ- ಇಂಗ್ಲೆಂಡ್ ಮೊದಲ ಟೆಸ್ಟ್: ಪಿಚ್​ಗಿಂತ ವೇಗವಾಗಿ ಬದಲಾಗುತ್ತೆ ಇಲ್ಲಿನ ಹವಾಮಾನ

ಇಂಗ್ಲೆಂಡ್ ವಿರುದ್ಧ ತ್ರಿಶತಕ ಸಿಡಿಸಿದ್ದ ಕರುಣ್ ನಾಯರ್

ಕರುಣ್ ನಾಯರ್ ದೇಶೀಯ ಕ್ರಿಕೆಟ್‌ನಲ್ಲಿ ಸಾಕಷ್ಟು ರನ್ ಗಳಿಸಿದ್ದಾರೆ. ನಂತರ ಅವರು ಐಪಿಎಲ್ 2025 ರಲ್ಲಿ ಅನೇಕ ಅದ್ಭುತ ಇನ್ನಿಂಗ್ಸ್‌ಗಳನ್ನು ಆಡಿದರು. ಇರೀಗ ಕರುಣ್ ಅವರು 8 ವರ್ಷಗಳ ನಂತರ ಭಾರತೀಯ ಟೆಸ್ಟ್ ತಂಡಕ್ಕೆ ಮರಳಿದ್ದಾರೆ. ಅವರು 2017 ರಲ್ಲಿ ತಮ್ಮ ಕೊನೆಯ ಟೆಸ್ಟ್ ಪಂದ್ಯವನ್ನು ಆಡಿದರು. ಇಂಗ್ಲೆಂಡ್ ವಿರುದ್ಧದ ಟೆಸ್ಟ್‌ನಲ್ಲಿ ಅವರು ತ್ರಿಶತಕವನ್ನೂ ಗಳಿಸಿದ್ದಾರೆ. ಇವರಿಗೆ ಸಾಕಷ್ಟು ಅನುಭವವಿದೆ, ಇದು ಭಾರತ ತಂಡಕ್ಕೆ ಉಪಯುಕ್ತವಾಗಿದೆ. ಅವರು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 8470 ರನ್‌ಗಳನ್ನು ಗಳಿಸಿದ್ದಾರೆ. ಇದಲ್ಲದೆ, ಅವರು ಲಿಸ್ಟ್-ಎ ಕ್ರಿಕೆಟ್‌ನಲ್ಲಿ 3128 ರನ್‌ಗಳನ್ನು ಗಳಿಸಿದ್ದಾರೆ.

ಕರುಣ್ ನಾಯರ್ ಅವರ ಅನುಭವವನ್ನು ಪರಿಗಣಿಸಿದರೆ, ನಾಯಕ ಶುಭ್​ಮನ್ ಗಿಲ್ ಅವರನ್ನು ಮೊದಲ ಟೆಸ್ಟ್ ಪಂದ್ಯದಲ್ಲಿ 3 ನೇ ಸ್ಥಾನದಲ್ಲಿ ಆಡಿಸಬಹುದು. ಇದಲ್ಲದೆ, ಸಾಯಿ ಸುದರ್ಶನ್ ಮಧ್ಯಮ ಕ್ರಮಾಂಕದಲ್ಲಿ ಅವಕಾಶ ಪಡೆಯುವ ಸಂಭವ ಕೂಡ ಇದೆ. ಸ್ಟಾರ್ ಬ್ಯಾಟ್ಸ್‌ಮನ್ ಕೆಎಲ್ ರಾಹುಲ್ ಅವರೊಂದಿಗೆ ಯಶಸ್ವಿ ಜೈಸ್ವಾಲ್ ಆರಂಭಿಕರಾಗಿ ಕಾಣಿಸಿಕೊಳ್ಳುವುದನ್ನು ಕಾಣಬಹುದು. ಉಳಿದಂತೆ ತಂಡ ಹೇಗಿರಲಿದೆ ಎಂಬುದು ಟಾಸ್ ಪ್ರಕ್ರಿಯೆ ವೇಳೆ ತಿಳಿಯಲಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ