AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

KKR vs LSG Highlights, IPL 2025: ಲಕ್ನೋ ವಿರುದ್ಧ ಕೆಕೆಆರ್​ಗೆ ವೀರೋಚಿತ ಸೋಲು

ಪೃಥ್ವಿಶಂಕರ
|

Updated on:Apr 08, 2025 | 7:32 PM

Kolkata Knight Riders vs Lucknow Super Giants Highlights in Kannada: ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಡುವಿನ ಪಂದ್ಯದಲ್ಲಿ ಲಕ್ನೋ ತಂಡವು ಕೆಕೆಆರ್ ತಂಡವನ್ನು 4 ರನ್‌ಗಳಿಂದ ಸೋಲಿಸಿತು. ಲಕ್ನೋ ಪರ ಆಕಾಶ್ ದೀಪ್ ಸಿಂಗ್ ಮತ್ತು ಶಾರ್ದೂಲ್ ಠಾಕೂರ್ ತಲಾ 2 ವಿಕೆಟ್ ಪಡೆದರು. ಮತ್ತೊಂದೆಡೆ, ಕೆಕೆಆರ್ ಪರ ನಾಯಕ ಅಜಿಂಕ್ಯ ರಹಾನೆ 61 ರನ್, ವೆಂಕಟೇಶ್ ಅಯ್ಯರ್ 45 ರನ್, ರಿಂಕು ಸಿಂಗ್ 38 ರನ್​ ಗಳಿಸಿದರಾದರೂ ತಂಡವನ್ನು ಗೆಲುವಿನ ದಡ ಮುಟ್ಟಿಸಲು ಸಾಧ್ಯವಾಗಲಿಲ್ಲ.

KKR vs LSG Highlights, IPL 2025: ಲಕ್ನೋ ವಿರುದ್ಧ ಕೆಕೆಆರ್​ಗೆ ವೀರೋಚಿತ ಸೋಲು
Lsg

ನಾಯಕ ಅಜಿಂಕ್ಯ ರಹಾನೆ ಅವರ ಅರ್ಧಶತಕ ಮತ್ತು ಕೊನೆಯಲ್ಲಿ ರಿಂಕು ಸಿಂಗ್ ಅವರ ಅದ್ಭುತ ಬ್ಯಾಟಿಂಗ್ ಹೊರತಾಗಿಯೂ, ಕೋಲ್ಕತ್ತಾ ನೈಟ್ ರೈಡರ್ಸ್, ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ನಾಲ್ಕು ರನ್‌ಗಳಿಂದ ಸೋಲನ್ನು ಎದುರಿಸಬೇಕಾಯಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ತಂಡ 20 ಓವರ್‌ಗಳಲ್ಲಿ ಮೂರು ವಿಕೆಟ್‌ಗಳಿಗೆ 238 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಕೆಕೆಆರ್ ನಿಗದಿತ ಓವರ್‌ಗಳಲ್ಲಿ ಏಳು ವಿಕೆಟ್‌ಗಳಿಗೆ 234 ರನ್‌ಗಳನ್ನು ಮಾತ್ರ ಗಳಿಸುವಲ್ಲಿ ಯಶಸ್ವಿಯಾಯಿತು. ಕೆಕೆಆರ್ ಪರ ರಹಾನೆ 35 ಎಸೆತಗಳಲ್ಲಿ ಎಂಟು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳ ಸಹಾಯದಿಂದ 61 ರನ್ ಗಳಿಸಿದರೆ, ರಿಂಕು 15 ಎಸೆತಗಳಲ್ಲಿ ಆರು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳ ಸಹಾಯದಿಂದ ಅಜೇಯ 38 ರನ್ ಗಳಿಸಿದರು.

LIVE NEWS & UPDATES

The liveblog has ended.
  • 08 Apr 2025 07:27 PM (IST)

    ಲಕ್ನೋಗೆ ರೋಚಕ ಗೆಲುವು

    ಲಕ್ನೋ ತಂಡವು ಕೋಲ್ಕತ್ತಾ ತಂಡವನ್ನು 4 ರನ್‌ಗಳಿಂದ ಸೋಲಿಸಿತು. ಕೊನೆಯ ಓವರ್‌ನಲ್ಲಿ ಕೆಕೆಆರ್ ಗೆಲ್ಲಲು 24 ರನ್‌ಗಳು ಬೇಕಾಗಿದ್ದವು. ಈ ಓವರ್​ನಲ್ಲಿ ರಿಂಕು ಸಿಂಗ್ ಮತ್ತು ಹರ್ಷಿತ್ ರಾಣಾ ಕೇವಲ 19 ರನ್‌ಗಳಿಸಲಷ್ಟೇ ಶಕ್ತರಾದರು. ಟೂರ್ನಮೆಂಟ್‌ನಲ್ಲಿ ಲಕ್ನೋಗೆ ಮೂರನೇ ಗೆಲುವು

  • 08 Apr 2025 07:22 PM (IST)

    ರಿಂಕು ಸ್ಫೋಟಕ ಬ್ಯಾಟಿಂಗ್

    ಆವೇಶ್ ಖಾನ್ ಅವರ 19ನೇ ಮೊದಲ ಎರಡು ಎಸೆತಗಳಲ್ಲಿ ರಿಂಕು ಸಿಂಗ್ ಒಂದು ಸಿಕ್ಸರ್ ಮತ್ತು ಒಂದು ಬೌಂಡರಿ ಬಾರಿಸಿದರು. ಆದರೆ ಮುಂದಿನ ಮೂರು ಎಸೆತಗಳಲ್ಲಿ ಯಾವುದೇ ರನ್ ಗಳಿಸಲಿಲ್ಲ. ಕೊನೆಯ ಎಸೆತದಲ್ಲಿ ಫೋರ್ ಬಾರಿಸಿದರು. ಕೊನೆಯ ಓವರ್‌ನಲ್ಲಿ 24 ರನ್‌ಗಳು ಬೇಕಾಗಿವೆ.

  • 08 Apr 2025 07:11 PM (IST)

    ರಸೆಲ್ ಔಟ್

    ಆಂಡ್ರೆ ರಸೆಲ್ ಔಟ್. ಶಾರ್ದೂಲ್ ಠಾಕೂರ್ 7 ರನ್ ಗಳಿಸಿದ್ದ ರಸೆಲ್ ಅವರನ್ನು ಔಟ್ ಮಾಡಿದರು.

  • 08 Apr 2025 07:11 PM (IST)

    ವೆಂಕಟೇಶ್ ಅಯ್ಯರ್ ಔಟ್

    ಮತ್ತೊಂದು ವಿಕೆಟ್… ಆಕಾಶ್ ದೀಪ್ ಲಕ್ನೋಗೆ ದೊಡ್ಡ ಯಶಸ್ಸನ್ನು ತಂದುಕೊಟ್ಟರು. 45 ರನ್ ಗಳಿಸಿದ್ದ ಸೆಟ್ ಬ್ಯಾಟ್ಸ್‌ಮನ್ ವೆಂಕಟೇಶ್ ಅಯ್ಯರ್ ಔಟಾದರು. ಕೊನೆಯ 20 ಎಸೆತಗಳಲ್ಲಿ ಕೆಕೆಆರ್ 4 ವಿಕೆಟ್ ಕಳೆದುಕೊಂಡು ಕೇವಲ 28 ರನ್ ಗಳಿಸಿದೆ.

  • 08 Apr 2025 06:57 PM (IST)

    ರಹಾನೆ ಔಟ್

    13ನೇ ಓವರ್‌ನಲ್ಲಿ ಶಾರ್ದೂಲ್ ಠಾಕೂರ್ 11 ಎಸೆತಗಳನ್ನು ಎಸೆದು 5 ವೈಡ್‌ಗಳನ್ನು ಎಸೆದರು. ಆದರೆ ಅವರು ಆ ಓವರ್‌ನ ಕೊನೆಯ ಎಸೆತದಲ್ಲಿ ಅಜಿಂಕ್ಯ ರಹಾನೆ ಅವರ ವಿಕೆಟ್ ಪಡೆದರು. ರಹಾನೆ 35 ಎಸೆತಗಳಲ್ಲಿ 61 ರನ್ ಗಳಿಸಿದರು. ಕೋಲ್ಕತ್ತಾ ತಂಡ 3 ವಿಕೆಟ್ ನಷ್ಟಕ್ಕೆ 162 ರನ್ ಗಳಿಸಿದೆ.

  • 08 Apr 2025 06:47 PM (IST)

    ಸತತವಾಗಿ 5 ವೈಡ್‌ಗಳು

    13ನೇ ಓವರ್‌ನಲ್ಲಿ ಶಾರ್ದೂಲ್ ಠಾಕೂರ್ ಸತತ 5 ವೈಡ್ ಬಾಲ್‌ಗಳನ್ನು ಬೌಲ್ ಮಾಡಿದ್ದಾರೆ. 12 ಓವರ್‌ಗಳ ನಂತರ ಕೋಲ್ಕತ್ತಾದ ಸ್ಕೋರ್ 2 ವಿಕೆಟ್‌ಗಳ ನಷ್ಟಕ್ಕೆ 154 ರನ್ ಆಗಿದೆ.

  • 08 Apr 2025 06:41 PM (IST)

    ರಹಾನೆ 26 ಎಸೆತಗಳಲ್ಲಿ ಅರ್ಧಶತಕ

    ಅಜಿಂಕ್ಯ ರಹಾನೆ ಅದ್ಭುತ ಬ್ಯಾಟಿಂಗ್ ಮಾಡಿದ್ದಾರೆ. ಲಕ್ನೋ ವಿರುದ್ಧ 26 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು. 11 ಓವರ್‌ಗಳ ಅಂತ್ಯಕ್ಕೆ ಕೋಲ್ಕತ್ತಾ 2 ವಿಕೆಟ್‌ಗಳ ನಷ್ಟಕ್ಕೆ 136 ರನ್ ಗಳಿಸಿತು. ಈಗ ಗೆಲ್ಲಲು 54 ಎಸೆತಗಳಲ್ಲಿ 103 ರನ್‌ಗಳ ಅವಶ್ಯಕತೆಯಿದೆ.

  • 08 Apr 2025 06:38 PM (IST)

    10 ಓವರ್‌ಗಳ ನಂತರ ಕೋಲ್ಕತ್ತಾ ಸ್ಕೋರ್

    10 ಓವರ್‌ಗಳ ಆಟ ಮುಗಿದಿದೆ. ಕೋಲ್ಕತ್ತಾ 2 ವಿಕೆಟ್ ನಷ್ಟಕ್ಕೆ 129 ರನ್ ಗಳಿಸಿದೆ. ವೆಂಕಟೇಶ್ ಅಯ್ಯರ್ 13 ಎಸೆತಗಳಲ್ಲಿ 24 ರನ್ ಮತ್ತು 25 ಎಸೆತಗಳಲ್ಲಿ 47 ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ.

  • 08 Apr 2025 06:24 PM (IST)

    100 ರನ್ ದಾಟಿದ ಕೋಲ್ಕತ್ತಾ

    9 ಓವರ್‌ಗಳ ಆಟ ಮುಗಿದಿದೆ. ಕೋಲ್ಕತ್ತಾ 2 ವಿಕೆಟ್ ನಷ್ಟಕ್ಕೆ 116 ರನ್ ಗಳಿಸಿದೆ. ರಹಾನೆ 23 ಎಸೆತಗಳಲ್ಲಿ 42 ರನ್ ಗಳಿಸಿದರೆ, ವೆಂಕಟೇಶ್ ಅಯ್ಯರ್ 9 ಎಸೆತಗಳಲ್ಲಿ 17 ರನ್ ಗಳಿಸಿದ್ದಾರೆ.

  • 08 Apr 2025 06:16 PM (IST)

    ಸುನಿಲ್ ನರೈನ್ ಔಟ್

    ಕೋಲ್ಕತ್ತಾ ಎರಡನೇ ವಿಕೆಟ್ ಕಳೆದುಕೊಂಡಿದೆ. ದಿಗ್ವೇಶ್ ರಥಿ ಸುನಿಲ್ ನರೈನ್ ಅವರನ್ನ ಬೇಟೆಯಾಡಿದ್ದಾರೆ. ನರೈನ್ 13 ಎಸೆತಗಳಲ್ಲಿ 30 ರನ್ ಗಳಿಸಿದರು.

  • 08 Apr 2025 06:15 PM (IST)

    ಕೋಲ್ಕತ್ತಾ ಸ್ಫೋಟಕ ಆರಂಭ

    ಸುನಿಲ್ ನರೈನ್ ಮತ್ತು ಅಜಿಂಕ್ಯ ರಹಾನೆ ಅದ್ಭುತ ಬ್ಯಾಟಿಂಗ್ ಮಾಡಿದ್ದಾರೆ. ನರೈನ್ 12 ಎಸೆತಗಳಲ್ಲಿ 30 ರನ್ ಗಳಿಸಿದರೆ, ರಹಾನೆ 15 ಎಸೆತಗಳಲ್ಲಿ 35 ರನ್ ಗಳಿಸಿದರು. ಕೋಲ್ಕತ್ತಾ ತಂಡ ಸ್ಫೋಟಕ ಆರಂಭ ಪಡೆದು ಮೊದಲ 6 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 89 ರನ್ ಗಳಿಸಿದೆ.

  • 08 Apr 2025 06:15 PM (IST)

    50 ರನ್ ದಾಟಿದ ಕೆಕೆಆರ್

    ಸುನಿಲ್ ನರೈನ್ ಸ್ಫೋಟಕ ಬ್ಯಾಟಿಂಗ್ ಮೂಲಕ ಕೇವಲ 10 ಎಸೆತಗಳಲ್ಲಿ 26 ರನ್ ಗಳಿಸಿದ್ದಾರೆ. ಇದರೊಂದಿಗೆ, ಕೋಲ್ಕತ್ತಾ 4 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 60 ರನ್ ಗಳಿಸಿದೆ.

  • 08 Apr 2025 06:14 PM (IST)

    ಕೋಲ್ಕತ್ತಾಗೆ ಮೊದಲ ಆಘಾತ

    ಕೋಲ್ಕತ್ತಾ ತಂಡವು ಮೊದಲ ವಿಕೆಟ್ ಕಳೆದುಕೊಂಡಿದೆ. ಕ್ವಿಂಟನ್ ಡಿ ಕಾಕ್ 9 ರನ್ ಗಳಿಸಿದ ನಂತರ ಆಕಾಶ್ ದೀಪ್​ಗೆ ಬಲಿಯಾದರು.

  • 08 Apr 2025 05:49 PM (IST)

    ಕೋಲ್ಕತ್ತಾ ಸ್ಫೋಟಕ ಆರಂಭ

    ಕೋಲ್ಕತ್ತಾ ತಂಡ ಸ್ಫೋಟಕ ಆರಂಭವನ್ನೇ ಪಡೆದುಕೊಂಡಿದೆ. ಮೊದಲ 2 ಓವರ್‌ಗಳಲ್ಲಿ ಕೇವಲ 31 ರನ್ ಗಳಿಸಿದೆ. ಸುನಿಲ್ ನರೈನ್ 6 ಎಸೆತಗಳಲ್ಲಿ 15 ರನ್ ಮತ್ತು ಕ್ವಿಂಟನ್ ಡಿ ಕಾಕ್ 6 ಎಸೆತಗಳಲ್ಲಿ 9 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ.

  • 08 Apr 2025 05:48 PM (IST)

    ಆಕಾಶ್‌ದೀಪ್ ಕಳಪೆ ಬೌಲಿಂಗ್

    ಆಕಾಶ್ ದೀಪ್ ಮೊದಲ ಓವರ್‌ನಲ್ಲಿ ಕಳಪೆ ಬೌಲಿಂಗ್ ಮಾಡಿ 7 ಹೆಚ್ಚುವರಿ ರನ್‌ಗಳನ್ನು ನೀಡಿದರು. ಅವರು ಇಡೀ ಓವರ್‌ನಲ್ಲಿ 16 ರನ್‌ಗಳನ್ನು ನೀಡಿದರು.

  • 08 Apr 2025 05:48 PM (IST)

    ಕೋಲ್ಕತ್ತಾ ಬ್ಯಾಟಿಂಗ್ ಆರಂಭ

    ಕೋಲ್ಕತ್ತಾ ತಂಡವು ಗುರಿಯನ್ನು ಬೆನ್ನಟ್ಟಲು ಹೊರಟಿದೆ. ಕ್ವಿಂಟನ್ ಡಿ ಕಾಕ್ ಮತ್ತು ಸುನಿಲ್ ನರೈನ್ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

  • 08 Apr 2025 05:16 PM (IST)

    239 ರನ್ ಗುರಿ

    ಕೊನೆಯ ಓವರ್‌ನಲ್ಲಿ ಅದ್ಭುತ ಬೌಲಿಂಗ್ ಮಾಡಿದ ವೈಭವ್ ಅರೋರಾ 20ನೇ ಓವರ್‌ನಲ್ಲಿ ಕೇವಲ 11 ರನ್‌ಗಳನ್ನು ನೀಡಿದರು. ಈ ಮೂಲಕ ಲಕ್ನೋ ಸೂಪರ್ ಜೈಂಟ್ಸ್ ಮೊದಲ ಇನ್ನಿಂಗ್ಸ್ ನಲ್ಲಿ 3 ವಿಕೆಟ್ ನಷ್ಟಕ್ಕೆ 238 ರನ್ ಗಳಿಸಿತು. ಈಗ ಕೋಲ್ಕತ್ತಾ ಗೆಲ್ಲಲು 239 ರನ್ ಗಳಿಸಬೇಕಾಗಿದೆ.

  • 08 Apr 2025 04:54 PM (IST)

    ಮಾರ್ಷ್ ಔಟ್

    ಆಂಡ್ರೆ ರಸೆಲ್ 16ನೇ ಓವರ್‌ನಲ್ಲಿ ಕೇವಲ 8 ರನ್‌ಗಳನ್ನು ನೀಡಿ ಮಾರ್ಷ್ ಅವರ ವಿಕೆಟ್ ಪಡೆದರು. ಲಕ್ನೋ ತಂಡ 2 ವಿಕೆಟ್ ನಷ್ಟಕ್ಕೆ 178 ರನ್ ಗಳಿಸಿದೆ.

  • 08 Apr 2025 04:46 PM (IST)

    150 ರನ್ ದಾಟಿದ ಲಕ್ನೋ

    ಲಕ್ನೋ ಬ್ಯಾಟ್ಸ್‌ಮನ್‌ಗಳು ವೇಗವಾಗಿ ರನ್ ಗಳಿಸುತ್ತಿದ್ದಾರೆ. ವರುಣ್ ಚಕ್ರವರ್ತಿ ವಿರುದ್ಧದ 14ನೇ ಓವರ್‌ನಲ್ಲಿ ಮಾರ್ಷ್ ಮತ್ತು ಪೂರನ್ 16 ರನ್ ಗಳಿಸಿದರು. ಇದರೊಂದಿಗೆ ಲಕ್ನೋ 1 ವಿಕೆಟ್ ನಷ್ಟಕ್ಕೆ 155 ರನ್ ಗಳಿಸಿದೆ. ಮಾರ್ಷ್ 44 ಎಸೆತಗಳಲ್ಲಿ 79 ರನ್ ಮತ್ತು ಪೂರಣ್ 12 ಎಸೆತಗಳಲ್ಲಿ 20 ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ.

  • 08 Apr 2025 04:32 PM (IST)

    ಜಾನ್ಸನ್ ದುಬಾರಿ ಓವರ್

    12ನೇ ಓವರ್ ನಲ್ಲಿ ಕೋಲ್ಕತ್ತಾ ನಾಯಕ ಅಜಿಂಕ್ಯ ರಹಾನೆ ಚೆಂಡನ್ನು ಸ್ಪೆನ್ಸರ್ ಜಾನ್ಸನ್ ಗೆ ಹಸ್ತಾಂತರಿಸಿದರು. ಆದರೆ ಈ ಓವರ್‌ನಲ್ಲಿ ಅವರು 16 ರನ್‌ಗಳನ್ನು ನೀಡಿದರು. ಲಕ್ನೋ ತಂಡ 1 ವಿಕೆಟ್ ನಷ್ಟಕ್ಕೆ 122 ರನ್ ಗಳಿಸಿದೆ.

  • 08 Apr 2025 04:32 PM (IST)

    100 ರನ್ ದಾಟಿದ ಲಕ್ನೋ

    11 ಓವರ್‌ಗಳ ಆಟ ಮುಗಿದಿದೆ. ಲಕ್ನೋ ತಂಡ 1 ವಿಕೆಟ್ ನಷ್ಟಕ್ಕೆ 106 ರನ್ ಗಳಿಸಿದೆ. ಮಿಚೆಲ್ ಮಾರ್ಷ್ 36 ಎಸೆತಗಳಲ್ಲಿ 54 ರನ್ ಮತ್ತು ನಿಕೋಲಸ್ ಪೂರನ್ 2 ಎಸೆತಗಳಲ್ಲಿ 2 ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ.

  • 08 Apr 2025 04:32 PM (IST)

    ಮಾರ್ಷ್ ಅರ್ಧಶತಕ

    ಮಿಚೆಲ್ ಮಾರ್ಷ್ ಮತ್ತೊಂದು ಅರ್ಧಶತಕ ಗಳಿಸಿದ್ದಾರೆ. ಇದಕ್ಕಾಗಿ ಅವರು 35 ಎಸೆತಗಳನ್ನು ಎದುರಿಸಿದರು. ಈ ಋತುವಿನಲ್ಲಿ ಇದು ಅವರ ನಾಲ್ಕನೇ ಅರ್ಧಶತಕ.

  • 08 Apr 2025 04:31 PM (IST)

    ಮಾರ್ಕ್ರಾಮ್ ಔಟ್

    ಕೋಲ್ಕತ್ತಾ ತಂಡವು ತನ್ನ ಮೊದಲ ಯಶಸ್ಸನ್ನು ಪಡೆದುಕೊಂಡಿದೆ. ಹರ್ಷಿತ್ ರಾಣಾ ಐಡೆನ್ ಮಾರ್ಕ್ರಾಮ್ ವಿಕೆಟ್ ಪಡೆದರು. ಮಾರ್ಕ್ರಾಮ್ 28 ಎಸೆತಗಳಲ್ಲಿ 47 ರನ್ ಗಳಿಸಿ ಔಟಾದರು.

  • 08 Apr 2025 04:22 PM (IST)

    10 ಓವರ್ ಪೂರ್ಣ

    ವರುಣ್ ಚಕ್ರವರ್ತಿ ಇಂದು ಅದ್ಭುತವಾಗಿ ಬೌಲಿಂಗ್ ಮಾಡಿದ್ದಾರೆ. 10ನೇ ಓವರ್‌ನಲ್ಲಿ ಅವರು ಕೇವಲ 7 ರನ್‌ಗಳನ್ನು ನೀಡಿದರು. ಅದೇ ಸಮಯದಲ್ಲಿ, ಅವರು ತಮ್ಮ 3 ಓವರ್‌ಗಳಲ್ಲಿ ಕೇವಲ 16 ರನ್‌ಗಳನ್ನು ನೀಡಿದ್ದಾರೆ. ಲಕ್ನೋ ತಂಡ 10 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 95 ರನ್ ಗಳಿಸಿತು. ಏಡನ್ ಮಾರ್ಕ್ರಾಮ್ ಮತ್ತು ಮಿಚೆಲ್ ಮಾರ್ಷ್ ಕ್ರೀಸ್‌ನಲ್ಲಿದ್ದಾರೆ.

  • 08 Apr 2025 04:01 PM (IST)

    ಪವರ್‌ಪ್ಲೇ ಮುಕ್ತಾಯ

    ಪವರ್ ಪ್ಲೇ ಮುಗಿದಿದೆ. ಲಕ್ನೋ ತಂಡಕ್ಕೆ ಮಿಚೆಲ್ ಮಾರ್ಷ್ ಮತ್ತು ಐಡೆನ್ ಮಾರ್ಕ್ರಾಮ್ ಮೊದಲ 6 ಓವರ್‌ಗಳಲ್ಲಿ ಉತ್ತಮ ಆರಂಭ ನೀಡಿದರು. ಲಕ್ನೋ ತಂಡ ಯಾವುದೇ ವಿಕೆಟ್ ನಷ್ಟವಿಲ್ಲದೆ 59 ರನ್ ಗಳಿಸಿದೆ.

  • 08 Apr 2025 04:01 PM (IST)

    ಎರಡನೇ ಓವರ್‌ನಲ್ಲಿ 12 ರನ್‌

    ಎರಡನೇ ಓವರ್‌ನಲ್ಲಿ ಸ್ಪೆನ್ಸರ್ ಜಾನ್ಸನ್ ಎಸೆತದಲ್ಲಿ ಮಾರ್ಕ್ರಮ್ ಒಂದು ಬೌಂಡರಿ ಬಾರಿಸಿದರೆ, ಮಾರ್ಷ್ ಒಂದು ದೊಡ್ಡ ಸಿಕ್ಸರ್ ಬಾರಿಸಿದರು. ಈ ಓವರ್‌ನಲ್ಲಿ 12 ರನ್‌ಗಳು ಬಂದವು.

  • 08 Apr 2025 03:41 PM (IST)

    ಲಕ್ನೋ ಬ್ಯಾಟಿಂಗ್ ಆರಂಭ

    ಆರಂಭಿಕ ಜೋಡಿ ಐಡೆನ್ ಮಾರ್ಕ್ರಾಮ್ ಮತ್ತು ಮಿಚೆಲ್ ಮಾರ್ಷ್ ಇನ್ನಿಂಗ್ಸ್ ಆರಂಭಿಸಿದರು. ವೈಭವ್ ಅರೋರಾ ಅವರ ಮೂರನೇ ಎಸೆತದಲ್ಲಿ, ಮಾರ್ಕ್ರಾಮ್ ಸಿಂಗಲ್ ಗಳಿಸಿ ತಮ್ಮ ಮತ್ತು ತಂಡದ ಖಾತೆಯನ್ನು ತೆರೆದರು.

  • 08 Apr 2025 03:33 PM (IST)

    ಕೆಕೆಆರ್ ತಂಡ

    ಕ್ವಿಂಟನ್ ಡಿ ಕಾಕ್, ಸುನಿಲ್ ನರೈನ್, ಅಜಿಂಕ್ಯ ರಹಾನೆ (ನಾಯಕ), ವೆಂಕಟೇಶ್ ಅಯ್ಯರ್, ರಿಂಕು ಸಿಂಗ್, ಆಂಡ್ರೆ ರಸೆಲ್, ಸ್ಪೆನ್ಸರ್ ಜಾನ್ಸನ್, ರಮಣದೀಪ್ ಸಿಂಗ್, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ, ವೈಭವ್ ಅರೋರಾ

  • 08 Apr 2025 03:32 PM (IST)

    ಎಲ್‌ಎಸ್‌ಜಿ ತಂಡ

    ಮಿಚೆಲ್ ಮಾರ್ಷ್, ಐಡೆನ್ ಮಾರ್ಕ್‌ರಾಮ್, ನಿಕೋಲಸ್ ಪೂರನ್, ರಿಷಭ್ ಪಂತ್ (ನಾಯಕ), ಆಯುಷ್ ಬಡೋನಿ, ಡೇವಿಡ್ ಮಿಲ್ಲರ್, ಅಬ್ದುಲ್ ಸಮದ್, ಶಾರ್ದೂಲ್ ಠಾಕೂರ್, ಆಕಾಶದೀಪ್, ಅವೇಶ್ ಖಾನ್, ದಿಗ್ವೇಶ್ ರಾಠಿ

  • 08 Apr 2025 03:02 PM (IST)

    ಟಾಸ್ ಗೆದ್ದ ಕೆಕೆಆರ್ ಬೌಲಿಂಗ್ ಆಯ್ಕೆ

    ಟಾಸ್ ಗೆದ್ದ ಕೆಕೆಆರ್ ನಾಯಕ ಅಜಿಂಕ್ಯ ರಹಾನೆ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಹೀಗಾಗಿ ಲಕ್ನೋ ಮೊದಲು ಬ್ಯಾಟಿಂಗ್ ಮಾಡಲಿದೆ.

Published On - Apr 08,2025 3:02 PM

Follow us
ಸಿದ್ದರಾಮಯ್ಯ ಏನು ಮಾಡುತ್ತಾರೋ ಎಂಬ ಭಯವಂತೂ ಇದೆ: ನಾಡಗೌಡ
ಸಿದ್ದರಾಮಯ್ಯ ಏನು ಮಾಡುತ್ತಾರೋ ಎಂಬ ಭಯವಂತೂ ಇದೆ: ನಾಡಗೌಡ
ದೆವ್ವದ ಹಾಡಿಗೆ ಭಯಬಿದ್ದ ಸರಿಗಮಪ ಮನೋಜ್; ಇಲ್ಲಿದೆ ಫನ್ನಿ ವಿಡಿಯೋ
ದೆವ್ವದ ಹಾಡಿಗೆ ಭಯಬಿದ್ದ ಸರಿಗಮಪ ಮನೋಜ್; ಇಲ್ಲಿದೆ ಫನ್ನಿ ವಿಡಿಯೋ
14 ವರ್ಷದ ವೈಭವ್​ನ 11 ರಾಕೆಟ್ ಸಿಕ್ಸ್​ಗಳು: ವಿಡಿಯೋ ವೀಕ್ಷಿಸಿ
14 ವರ್ಷದ ವೈಭವ್​ನ 11 ರಾಕೆಟ್ ಸಿಕ್ಸ್​ಗಳು: ವಿಡಿಯೋ ವೀಕ್ಷಿಸಿ
VIDEO: ಅತ್ಯಂತ ಕೆಟ್ಟ ದಾಖಲೆ: ಒಂದೇ ಓವರ್​ನಲ್ಲಿ 30 ರನ್ ಚಚ್ಚಿದ ವೈಭವ್
VIDEO: ಅತ್ಯಂತ ಕೆಟ್ಟ ದಾಖಲೆ: ಒಂದೇ ಓವರ್​ನಲ್ಲಿ 30 ರನ್ ಚಚ್ಚಿದ ವೈಭವ್
ಬೆಂಗಳೂರು ವಿಮಾನ ನಿಲ್ದಾಣ ರಸ್ತೆಯಲ್ಲಿ ಸರಣಿ ಅಪಘಾತ, 4 ಕಾರುಗಳು ಜಖಂ
ಬೆಂಗಳೂರು ವಿಮಾನ ನಿಲ್ದಾಣ ರಸ್ತೆಯಲ್ಲಿ ಸರಣಿ ಅಪಘಾತ, 4 ಕಾರುಗಳು ಜಖಂ
ಸ್ತ್ರೀಯರು ಗರ್ಭಾವಸ್ಥೆಯಲ್ಲಿ ನೀತಿಕತೆಗಳನ್ನು ಯಾಕೆ ಕೇಳಬೇಕು?
ಸ್ತ್ರೀಯರು ಗರ್ಭಾವಸ್ಥೆಯಲ್ಲಿ ನೀತಿಕತೆಗಳನ್ನು ಯಾಕೆ ಕೇಳಬೇಕು?
ಮೇಷ ರಾಶಿಯವರಿಗಿಂದು ಐದು ರಾಶಿಗಳ ಶುಭ ಫಲ: ಉಳಿದ ರಾಶಿಗಳ ಫಲಾಫಲವೂ ಇಲ್ಲಿದೆ
ಮೇಷ ರಾಶಿಯವರಿಗಿಂದು ಐದು ರಾಶಿಗಳ ಶುಭ ಫಲ: ಉಳಿದ ರಾಶಿಗಳ ಫಲಾಫಲವೂ ಇಲ್ಲಿದೆ
ಕಾಲು ನೋವಿದ್ದರೂ ವೈಭವ್ ಶತಕಕ್ಕೆ ದ್ರಾವಿಡ್ ಸಂಭ್ರಮ ನೋಡಿ
ಕಾಲು ನೋವಿದ್ದರೂ ವೈಭವ್ ಶತಕಕ್ಕೆ ದ್ರಾವಿಡ್ ಸಂಭ್ರಮ ನೋಡಿ
ಪದ್ಮ ಭೂಷಣ ಪ್ರಶಸ್ತಿ ಪಡೆಯಲು ಬಂದ ಬಾಲಯ್ಯ ಗತ್ತು ಹೇಗಿತ್ತು ನೋಡಿ..
ಪದ್ಮ ಭೂಷಣ ಪ್ರಶಸ್ತಿ ಪಡೆಯಲು ಬಂದ ಬಾಲಯ್ಯ ಗತ್ತು ಹೇಗಿತ್ತು ನೋಡಿ..
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಕೊಪ್ಪಳದ 96 ವರ್ಷದ ಭೀಮವ್ವ ಶಿಳ್ಳೆಕ್ಯಾತರ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಕೊಪ್ಪಳದ 96 ವರ್ಷದ ಭೀಮವ್ವ ಶಿಳ್ಳೆಕ್ಯಾತರ