ತ್ರಿಕೋನ ಸರಣಿಗೆ ಟೀಂ ಇಂಡಿಯಾ ಪ್ರಕಟ; ನಾಲ್ವರಿಗೆ ಗೇಟ್ಪಾಸ್, 3 ಹೊಸ ಬೌಲರ್‌ಗಳಿಗೆ ಅವಕಾಶ
India Women's Cricket Team Announced: ಶ್ರೀಲಂಕಾದಲ್ಲಿ ನಡೆಯಲಿರುವ ತ್ರಿಕೋನ ಸರಣಿಗೆ ಭಾರತೀಯ ಮಹಿಳಾ ಕ್ರಿಕೆಟ್ ತಂಡವನ್ನು ಆಯ್ಕೆ ಮಾಡಲಾಗಿದೆ. ಹರ್ಮನ್‌ಪ್ರೀತ್ ಕೌರ್ ನಾಯಕಿಯಾಗಿರುವ 15 ಸದಸ್ಯರ ತಂಡದಲ್ಲಿ ಮೂವರು ಹೊಸ ಆಟಗಾರ್ತಿಯರಿಗೆ ಅವಕಾಶ ನೀಡಲಾಗಿದೆ. ಶಫಾಲಿ ವರ್ಮಾ ಸೇರಿದಂತೆ ನಾಲ್ವರು ಆಟಗಾರ್ತಿಯರನ್ನು ತಂಡದಿಂದ ಕೈಬಿಡಲಾಗಿದೆ. ವಿಶ್ವಕಪ್ ಸಿದ್ಧತೆಗಳನ್ನು ಗಮನದಲ್ಲಿಟ್ಟುಕೊಂಡು ಈ ತಂಡವನ್ನು ಆಯ್ಕೆ ಮಾಡಲಾಗಿದೆ.

ಶ್ರೀಲಂಕಾದಲ್ಲಿ ನಡೆಯಲಿರುವ ಏಕದಿನ ತ್ರಿಕೋನ ಸರಣಿಗೆ (Tri-Series) ಭಾರತೀಯ ಮಹಿಳಾ ತಂಡವನ್ನು ಬಿಸಿಸಿಐ (BCCI) ಪ್ರಕಟಿಸಿದೆ. ಭಾರತ ಮತ್ತು ಶ್ರೀಲಂಕಾ ಜೊತೆಗೆ ದಕ್ಷಿಣ ಆಫ್ರಿಕಾ ತಂಡ ಕೂಡ ಈ ಸರಣಿಯಲ್ಲಿ ಭಾಗವಹಿಸಲಿದೆ. ಇದಕ್ಕಾಗಿ ಮಂಡಳಿಯು 15 ಸದಸ್ಯರ ಮಹಿಳಾ ತಂಡವನ್ನು (India Women’s Cricket Team) ಘೋಷಿಸಿದೆ. ವಿಶ್ವಕಪ್‌ನ ಸಿದ್ಧತೆಗಳನ್ನು ಗಮನದಲ್ಲಿಟ್ಟುಕೊಂಡು, ಮಂಡಳಿಯು ಮೊದಲ ಬಾರಿಗೆ 3 ಹೊಸ ಆಟಗಾರ್ತಿಯರಿಗೆ ಅವಕಾಶ ನೀಡಿದೆ. ಅದೇ ಸಮಯದಲ್ಲಿ, ನಾಲ್ವರು ಆಟಗಾರ್ತಿಯರನ್ನು ತಂಡದಿಂದ ಕೈಬಿಡಲಾಗಿದೆ. ಇವರಲ್ಲಿ ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ ಕೂಡ ಸೇರಿದ್ದಾರೆ. ಆದರೆ, ಐರ್ಲೆಂಡ್ ವಿರುದ್ಧದ ತವರು ಸರಣಿಯಲ್ಲಿ ವಿಶ್ರಾಂತಿ ಪಡೆದಿದ್ದ ತಂಡದ ನಿಯಮಿತ ನಾಯಕಿ ಹರ್ಮನ್‌ಪ್ರೀತ್ ಕೌರ್ ಮತ್ತೆ ತಂಡಕ್ಕೆ ಮರಳಿದ್ದಾರೆ.
ಶೆಫಾಲಿ ಸೇರಿದಂತೆ ನಾಲ್ವರು ಆಟಗಾರ್ತಿಯರು ಔಟ್
ಬಿಸಿಸಿಐ ಪ್ರಕಟಿಸಿದ ತಂಡದಿಂದ ಟೀಂ ಇಂಡಿಯಾದ ನಾಲ್ವರು ಸ್ಟಾರ್ ಆಟಗಾರ್ತಿಯರನ್ನು ಕೈಬಿಡಲಾಗಿದೆ. ಇದರಲ್ಲಿ ಪ್ರಮುಖ ವೇಗದ ಬೌಲರ್‌ಗಳಾದ ರೇಣುಕಾ ಸಿಂಗ್ ಠಾಕೂರ್, ಟೈಟಾಸ್ ಸಾಧು ಮತ್ತು ಪೂಜಾ ವಸ್ತ್ರಕರ್ ಅವರ ಹೆಸರುಗಳು ಸೇರಿವೆ. ಮೂವರು ಬೌಲರ್‌ಗಳು ಪ್ರಸ್ತುತ ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಕಾರಣ ಅವರನ್ನು ಏಕದಿನ ತ್ರಿಕೋನ ಸರಣಿಯಿಂದ ಹೊರಗಿಡಲಾಗಿದೆ.
ಈ ಮೂವರನ್ನು ಹೊರತುಪಡಿಸಿ, ತಂಡದ ಸ್ಫೋಟಕ ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ ಅವರನ್ನು ಮತ್ತೊಮ್ಮೆ ಕಡೆಗಣಿಸಲಾಗಿದೆ. ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಅದ್ಭುತವಾಗಿ ಬ್ಯಾಟಿಂಗ್ ಮಾಡಿದ್ದ ಶಫಾಲಿ 9 ಇನ್ನಿಂಗ್ಸ್‌ಗಳಲ್ಲಿ 152 ರ ಸ್ಟ್ರೈಕ್ ರೇಟ್‌ನಲ್ಲಿ 304 ರನ್ ಗಳಿಸಿದ್ದರು. ಈ ಮೂಲಕ ಪಂದ್ಯಾವಳಿಯಲ್ಲಿ ನಾಲ್ಕನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿಯೂ ಆಗಿದ್ದರು. ಇಷ್ಟೆಲ್ಲಾ ಆದರೂ ಅವರಿಗೆ ತಂಡದಲ್ಲಿ ಸ್ಥಾನ ಸಿಗಲಿಲ್ಲ.
ಮೂವರು ಹೊಸ ಬೌಲರ್‌ಗಳಿಗೆ ಅವಕಾಶ
ವಿಶ್ವಕಪ್‌ಗಾಗಿನ ಸಿದ್ಧತೆಗಳನ್ನು ಗಮನದಲ್ಲಿಟ್ಟುಕೊಂಡು, ಬಿಸಿಸಿಐ ಮೊದಲ ಬಾರಿಗೆ ತಂಡದಲ್ಲಿ 3 ಹೊಸ ಬೌಲರ್‌ಗಳನ್ನು ಆಯ್ಕೆ ಮಾಡಿದೆ. ಇದರಲ್ಲಿ ಮೊದಲ ಹೆಸರು ವೇಗದ ಬೌಲರ್ ಕಾಶ್ವಿ ಗೌತಮ್. ಅವರು ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರು. ಡಬ್ಲ್ಯೂಪಿಎಲ್ 2025 ರ ಸೀಸನ್‌ನಲ್ಲಿ ಗುಜರಾತ್ ಜೈಂಟ್ಸ್ ಪರ ಕಾಶ್ವಿ 9 ಪಂದ್ಯಗಳಲ್ಲಿ 11 ವಿಕೆಟ್‌ಗಳನ್ನು ಕಬಳಿಸಿದ್ದರು. ಈ ಮೂಲಕ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಕೂಡ ಎನಿಸಿಕೊಂಡಿದ್ದರು. ಅವರಲ್ಲದೆ, 20 ವರ್ಷದ ಎಡಗೈ ಸ್ಪಿನ್ನರ್ ಎನ್ ಶ್ರೀ ಚರಣಿ ಕೂಡ ಮೊದಲ ಬಾರಿಗೆ ತಂಡದಲ್ಲಿ ಅವಕಾಶ ಪಡೆದಿದ್ದಾರೆ.
T20 World Cup 2025: ಸತತ 2ನೇ ಬಾರಿಗೆ ಟಿ20 ವಿಶ್ವಕಪ್ ಗೆದ್ದ ಭಾರತ ವನಿತಾ ಪಡೆ
ಡೆಲ್ಲಿ ಕ್ಯಾಪಿಟಲ್ಸ್ ಪರ ಎರಡು ಪಂದ್ಯಗಳನ್ನು ಆಡಿದ ಶ್ರೀ ಚರಣಿ 4 ವಿಕೆಟ್‌ಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಈ ಇಬ್ಬರಲ್ಲದೆ ಎಡಗೈ ಸ್ಪಿನ್ನರ್ ಶುಚಿ ಉಪಾಧ್ಯಾಯ ಕೂಡ ಮೊದಲ ಬಾರಿಗೆ ತಂಡವನ್ನು ಸೇರಿಕೊಂಡಿದ್ದಾರೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ನಡೆದ ಮಹಿಳಾ ಏಕದಿನ ಟ್ರೋಫಿಯಲ್ಲಿ ಅವರು ಅದ್ಭುತ ಪ್ರದರ್ಶನ ನೀಡಿದ್ದರು. ಪಂದ್ಯಾವಳಿಯಲ್ಲಿ ಮೂರನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದ ಶುಚಿ 3.48 ರ ಎಕಾನಮಿ ಮತ್ತು 15.44 ರ ಸರಾಸರಿಯಲ್ಲಿ 18 ವಿಕೆಟ್‌ಗಳನ್ನು ಪಡೆದಿದ್ದರು.
🚨 𝗡𝗘𝗪𝗦 🚨
India’s squad (Senior Women) for Women’s Tri-Nation ODI series against Sri Lanka and South Africa announced.
All The Details 🔽 #TeamIndia https://t.co/lcHoriAOSc pic.twitter.com/zYBYCaj43D
— BCCI Women (@BCCIWomen) April 8, 2025
ತ್ರಿಕೋನ ಸರಣಿಗೆ ಭಾರತ ತಂಡ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉಪನಾಯಕಿ), ಪ್ರತೀಕಾ ರಾವಲ್, ಹರ್ಲೀನ್ ಡಿಯೋಲ್, ಜೆಮಿಮಾ ರಾಡ್ರಿಗಸ್, ರಿಚಾ ಘೋಷ್ (ವಿಕೆಟ್ ಕೀಪರ್), ಯಾಸ್ತಿಕಾ ಭಾಟಿಯಾ (ವಿಕೆಟ್ ಕೀಪರ್), ದೀಪ್ತಿ ಶರ್ಮಾ, ಅಮನ್‌ಜೋತ್ ಕೌರ್, ಕಾಶ್ವೀ ಗೌತಮ್, ಸ್ನೇಹ ರಾಣಾ, ಅರುಂಧತಿ ರೆಡ್ಡಿ, ತೇಜಲ್ ಹಸಬ್ನಿಸ್, ಎನ್ ಶ್ರೀ ಚರಣಿ, ಶುಚಿ ಉಪಾಧ್ಯಾಯ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:14 pm, Tue, 8 April 25