IPL 2025, KKR vs LSG: ಐಪಿಎಲ್ 2025 ರಲ್ಲಿ ಇಂದು ಎರಡು ಪಂದ್ಯಗಳು ಏಕೆ?, ವಿಶೇಷ ಕಾರಣ ಇಲ್ಲಿದೆ ನೋಡಿ
KKR vs LSG and PBKS vs CSK, IPL 2025: ಐಪಿಎಲ್ನಲ್ಲಿ ಸಾಮಾನ್ಯವಾಗಿ ಒಂದೇ ದಿನ ಎರಡು ಪಂದ್ಯಗಳನ್ನು ಭಾನುವಾರ ಮತ್ತು ಕೆಲ ಶನಿವಾರದಂದು ಆಯೋಜಿಸಲಾಗುತ್ತದೆ. ಆದರೆ, ಏಪ್ರಿಲ್ 8 (ಮಂಗಳವಾರ) ರಂದು ಐಪಿಎಲ್ 2025 ಎರಡು ಪಂದ್ಯಗಳನ್ನು ಆಡಲಾಗುತ್ತಿದ್ದು, ಒಂದು ವಿಶಿಷ್ಟ ದಿನಕ್ಕೆ ಸಾಕ್ಷಿಯಾಗಿದೆ. ಮಧ್ಯಾಹ್ನ 3.30 ಕ್ಕೆ ಆರಂಭವಾಗಿರುವ ಕೆಕೆಆರ್-ಎಲ್ಎಸ್ಜಿ ಮತ್ತು ಸಂಜೆ 7 ಗಂಟೆಗೆ ಪಂಜಾಬ್ ಮತ್ತು ಚೆನ್ನೈ ಪಂದ್ಯ ನಡೆಯಲಿದೆ.

ಬೆಂಗಳೂರು (ಏ. 08): ಇಂಡಿಯನ್ ಪ್ರೀಮಿಯರ್ ಲೀಗ್ 2025 ರಲ್ಲಿ (Indian Premier League) ಇಂದು (ಏ. 9) ಎರಡು ಪಂದ್ಯಗಳನ್ನು ಆಯೋಜಿಸಲಾಗಿದೆ. ಮೊದಲ ಪಂದ್ಯ ಈಡನ್ ಗಾರ್ಡನ್ಸ್ ಸ್ಟೇಡಿಯಂನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಲಕ್ನೋ ಸೂಪರ್ ಜೇಂಟ್ಸ್ ನಡುವೆ ನಡೆಯುತ್ತಿದ್ದರೆ, ರಾತ್ರಿ ಆಯೋಜಿಸಲಾಗಿರುವ ದ್ವಿತೀಯ ಪಂದ್ಯ ಪಂಜಾಬ್ ಕಿಂಗ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿ ಆಗಲಿದೆ. ಐಪಿಎಲ್ನಲ್ಲಿ ಸಾಮಾನ್ಯವಾಗಿ ಒಂದೇ ದಿನ ಎರಡು ಪಂದ್ಯಗಳನ್ನು ಭಾನುವಾರ ಮತ್ತು ಕೆಲ ಶನಿವಾರದಂದು ಆಯೋಜಿಸಲಾಗುತ್ತದೆ. ಉಳಿದ ಎಲ್ಲಾ ವಾರದ ದಿನಗಳಲ್ಲಿ ಒಂದು ಪಂದ್ಯವನ್ನು ನಡೆಸಲಾಗುತ್ತದೆ.
ಆದಾಗ್ಯೂ, ಏಪ್ರಿಲ್ 8 (ಮಂಗಳವಾರ) ರಂದು ಐಪಿಎಲ್ 2025 ಎರಡು ಪಂದ್ಯಗಳನ್ನು ಆಡಲಾಗುತ್ತಿದ್ದು, ಒಂದು ವಿಶಿಷ್ಟ ದಿನಕ್ಕೆ ಸಾಕ್ಷಿಯಾಗಿದೆ. ಮಧ್ಯಾಹ್ನ 3.30 ಕ್ಕೆ ಆರಂಭವಾಗಿರುವ ಕೆಕೆಆರ್-ಎಲ್ಎಸ್ಜಿ ಮತ್ತು ಸಂಜೆ 7 ಗಂಟೆಗೆ ಪಂಜಾಬ್ ಮತ್ತು ಚೆನ್ನೈ ಪಂದ್ಯ ನಡೆಯಲಿದೆ.
ಇಂದು ಎರಡು ಐಪಿಎಲ್ 2025 ಪಂದ್ಯಗಳು ಏಕೆ?:
ಐಪಿಎಲ್ 2025 ವೇಳಾಪಟ್ಟಿಯನ್ನು ಆರಂಭದಲ್ಲಿ ಘೋಷಿಸಿದಾಗ, ಏಪ್ರಿಲ್ 8 ರಂದು ನಡೆಯಬೇಕಿದ್ದ ಏಕೈಕ ಪಂದ್ಯವೆಂದರೆ ಪಿಬಿಕೆಎಸ್ vs ಸಿಎಸ್‌ಕೆ ಮುಲ್ಲನ್‌ಪುರದಲ್ಲಿ 7.30 ಕ್ಕೆ ಈ ಪಂದ್ಯ ಆರಂಭವಾಗಲಿದೆ ಎಂದು ಪ್ರಕಟವಾಗಿತ್ತು. ಕೆಕೆಆರ್ vs ಎಲ್‌ಎಸ್‌ಜಿ ಪಂದ್ಯ ಈಡನ್ ಗಾರ್ಡನ್ಸ್‌ನಲ್ಲಿ ಏಪ್ರಿಲ್ 6 (ಭಾನುವಾರ) ಮಧ್ಯಾಹ್ನ 3.30 ಕ್ಕೆ ಪಂದ್ಯ ನಡೆಯಬೇಕಿತ್ತು. ಆದರೆ, ಈ ಪಂದ್ಯವನ್ನು ನಂತರ ಏಪ್ರಿಲ್ 8 ರಂದು ಮಧ್ಯಾಹ್ನ 3.30 ಕ್ಕೆ ಮುಂದೂಡಬೇಕಾಯಿತು. ರಾಮ ನವಮಿ ಆಚರಣೆಯಿಂದಾಗಿ ಪಂದ್ಯಕ್ಕೆ ಸಾಕಷ್ಟು ಭದ್ರತೆ ಒದಗಿಸಲು ಸಾಧ್ಯವಾಗುವುದಿಲ್ಲ ಎಂದು ಪೊಲೀಸರು ಬಂಗಾಳ ಕ್ರಿಕೆಟ್ ಸಂಘಕ್ಕೆ (CAB) ತಿಳಿಸಿದ್ದರಿಂದ, ಬಿಸಿಸಿಐ ಪಂದ್ಯದ ದಿನಾಂಕವನ್ನು ಬದಲಾಯಿಸಿತು.
ಏಪ್ರಿಲ್ 6 ರಂದು, ರಾಮ ನವಮಿಯ ಸಂದರ್ಭದಲ್ಲಿ, ಕೋಲ್ಕತ್ತಾದಲ್ಲಿ ಅನೇಕ ಮೆರವಣಿಗೆಗಳನ್ನು ನಡೆಸಲಾಯಿತು. ಪೊಲೀಸ್ ಆಡಳಿತವು ಆ ವಿಚಾರದಲ್ಲಿ ಹೆಚ್ಚಿನ ಗಮನ ಹರಿಸಬೇಕಾಗಿತ್ತು. ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಯಿಂದಾಗಿ, ಪಂದ್ಯದ ಸಮಯದಲ್ಲಿ ಪೊಲೀಸರಿಗೆ ಭದ್ರತೆ ಒದಗಿಸಲು ಸಾಧ್ಯವಾಗಲಿಲ್ಲ. ಇದರಿಂದಾಗಿ ಪಂದ್ಯದ ದಿನಾಂಕವನ್ನು ಬದಲಾಯಿಸಲಾಯಿತು. ಅದಕ್ಕಾಗಿಯೇ ಭಾನುವಾರ ಡಬಲ್ ಹೆಡರ್ ಬದಲಿಗೆ ಒಂದು ಪಂದ್ಯವಿತ್ತು ಮತ್ತು ಇಂದು ಎರಡು ಪಂದ್ಯಗಳಿವೆ.
Tilkar Varma: ತಿಲಕ್ ವರ್ಮಾರನ್ನು ಅರ್ಧದಲ್ಲೇ ಕಳುಹಿಸಿದ್ದು ಏಕೆ?: ಕೊನೆಗೂ ಸತ್ಯ ಹೇಳಿದ ಹಾರ್ದಿಕ್ ಪಾಂಡ್ಯ
ಈ ಹಿಂದೆ ಏಪ್ರಿಲ್ 6 ರಂದು ಪಂದ್ಯವನ್ನು ಕೋಲ್ಕತ್ತಾದಿಂದ ಗುವಾಹಟಿಗೆ ಸ್ಥಳಾಂತರಿಸಲಾಗುವುದು ಎಂದು ವರದಿಗಳಾಗಿದ್ದವು. ಆದರೆ ಕೆಕೆಆರ್ ತನ್ನ ಪಂದ್ಯವನ್ನು ತವರು ಮೈದಾನದಲ್ಲಿ ಆಡಲು ನಿರ್ಧರಿಸಿತು. ಇದಾದ ನಂತರ, ಮಂಡಳಿಯು ವೇಳಾಪಟ್ಟಿಯನ್ನು ಬದಲಾಯಿಸಿ ಏಪ್ರಿಲ್ 8 ಕ್ಕೆ ಪಂದ್ಯವನ್ನು ನಿಗದಿಪಡಿಸಿತು.
ಟಾಸ್ ಗೆದ್ದ ಕೆಕೆಆರ್:
ಸದ್ಯ ಆರಂಭವಾಗಿರುವ ಇಂದಿನ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದ ಕೆಕೆಆರ್ ನಾಯಕ ಅಜಿಂಕ್ಯ ರಹಾನೆ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಹೀಗಾಗಿ ಲಕ್ನೋ ಮೊದಲು ಬ್ಯಾಟಿಂಗ್ ಮಾಡುತ್ತಿದೆ.
ಕೆಕೆಆರ್ ಪ್ಲೇಯಿಂಗ್ XI: ಕ್ವಿಂಟನ್ ಡಿ ಕಾಕ್, ಸುನಿಲ್ ನರೈನ್, ಅಜಿಂಕ್ಯ ರಹಾನೆ (ನಾಯಕ), ವೆಂಕಟೇಶ್ ಅಯ್ಯರ್, ರಿಂಕು ಸಿಂಗ್, ಆಂಡ್ರೆ ರಸೆಲ್, ಸ್ಪೆನ್ಸರ್ ಜಾನ್ಸನ್, ರಮಣದೀಪ್ ಸಿಂಗ್, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ, ವೈಭವ್ ಅರೋರಾ
ಎಲ್‌ಎಸ್‌ಜಿ ಪ್ಲೇಯಿಂಗ್ XI: ಮಿಚೆಲ್ ಮಾರ್ಷ್, ಐಡೆನ್ ಮಾರ್ಕ್‌ರಾಮ್, ನಿಕೋಲಸ್ ಪೂರನ್, ರಿಷಭ್ ಪಂತ್ (ನಾಯಕ), ಆಯುಷ್ ಬಡೋನಿ, ಡೇವಿಡ್ ಮಿಲ್ಲರ್, ಅಬ್ದುಲ್ ಸಮದ್, ಶಾರ್ದೂಲ್ ಠಾಕೂರ್, ಆಕಾಶದೀಪ್, ಅವೇಶ್ ಖಾನ್, ದಿಗ್ವೇಶ್ ರಾಠಿ
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ