Tilkar Varma: ತಿಲಕ್ ವರ್ಮಾರನ್ನು ಅರ್ಧದಲ್ಲೇ ಕಳುಹಿಸಿದ್ದು ಏಕೆ?: ಕೊನೆಗೂ ಸತ್ಯ ಹೇಳಿದ ಹಾರ್ದಿಕ್ ಪಾಂಡ್ಯ
Hardik Pandya Post Match presentation: ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ನಿಧಾನಗತಿಯ ಇನ್ನಿಂಗ್ಸ್ ನಿಂದಾಗಿ ಕೊನೆಗೆ ನಿವೃತ್ತಿ ಹೊಂದಿದ ಅವಮಾನಕ್ಕೆ ತಿಲಕ್ ವರ್ಮಾ ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ ಸೇಡು ತೀರಿಸಿಕೊಂಡರು. ಇದೇವೇಳೆ ತಿಲಕ್ ನಿವೃತ್ತಿ ಹೊಂದಿದ ನಂತರ ಭುಗಿಲೆದ್ದ ವಿವಾದಕ್ಕೆ ಮುಂಬೈ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ ಪ್ರತಿಕ್ರಿಯಿಸಿದ್ದಾರೆ.

ಬೆಂಗಳೂರು (ಏ. 08): ತಿಲಕ್ ವರ್ಮಾ (Tilak Varma) ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಅದ್ಭುತ ಕಮ್ಬ್ಯಾಕ್ ಮಾಡಿದರು. ಈ ಪಂದ್ಯದಲ್ಲಿ, ಅವರು ಕೇವಲ 29 ಎಸೆತಗಳಲ್ಲಿ 193 ಸ್ಟ್ರೈಕ್ ರೇಟ್‌ನಲ್ಲಿ 56 ರನ್‌ಗಳ ಇನ್ನಿಂಗ್ಸ್ ಆಡಿದರು. ಮುಂಬೈ ಗೆದ್ದಿಲ್ಲವಾದರೂ ತಂಡವನ್ನು ಗೆಲುವಿನ ಅಂಚಿಗೆ ತಂದಿಟ್ಟರು. ತಿಲಕ್ 18ನೇ ಓವರ್‌ನಲ್ಲಿ ಔಟಾದರು ಮತ್ತು ಮುಂಬೈ ತಂಡವು ಪಂದ್ಯವನ್ನು 12 ರನ್‌ಗಳಿಂದ ಸೋತಿತು. ತಿಲಕ್ ಅವರ ಆಟಕ್ಕೆ ಸಾಕಷ್ಟು ಪ್ರಶಂಸೆ ಕೇಳಿಬರುತ್ತಿದೆ. ಆದರೆ, ಹಿಂದಿನ ಪಂದ್ಯದಲ್ಲಿ ಅವರ ನಿಧಾನಗತಿಯ ಇನ್ನಿಂಗ್ಸ್ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದ್ದವು. ಪಂದ್ಯದ ಮಧ್ಯದಲ್ಲಿ ಅವರನ್ನು ನಿವೃತ್ತಿ ಮಾಡಲಾಯಿತು. ಇದೊಂದು ರೀತಿಯ ಅವಮಾನ ಎಂದು ಹೇಳಬಹುದು. ಆದರೀಗ ಆರ್ಸಿಬಿ ವಿರುದ್ಧ ಸೋತ ನಂತರ ಹಾರ್ದಿಕ್ ಪಾಂಡ್ಯ ಸತ್ಯವನ್ನು ಬಹಿರಂಗ ಪಡಪಸಿದ್ದಾರೆ.
ತಿಲಕ್ ನಿವೃತ್ತಿ ಹೊಂದಲು ಕಾರಣವೇನು?:
ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ನಿಧಾನಗತಿಯ ಇನ್ನಿಂಗ್ಸ್ ನಿಂದಾಗಿ ಕೊನೆಗೆ ನಿವೃತ್ತಿ ಹೊಂದಿದ ಅವಮಾನಕ್ಕೆ ತಿಲಕ್ ವರ್ಮಾ ಸೇಡು ತೀರಿಸಿಕೊಂಡರು. ಅವರು ವಾಂಖೆಡೆಯಲ್ಲಿ ತಮ್ಮ ಬ್ಯಾಟ್‌ನಿಂದ ಎಲ್ಲಾ ಟೀಕಾಕಾರರಿಗೆ ಉತ್ತರಿಸಿದರು. ಈ ಮಧ್ಯೆ, ತಂಡದ ನಾಯಕ ಹಾರ್ದಿಕ್ ಪಾಂಡ್ಯ ನಿವೃತ್ತಿ ಹೊಂದಿದ ನಂತರ ಭುಗಿಲೆದ್ದ ವಿವಾದಕ್ಕೆ ಪ್ರತಿಕ್ರಿಯಿಸಿದ್ದಾರೆ. ಬೆಂಗಳೂರು ವಿರುದ್ಧದ ಪಂದ್ಯದ ನಂತರ, ತಿಲಕ್ ಕಳೆದ ಪಂದ್ಯದಲ್ಲಿ ಬೆರಳಿನ ಗಾಯದಿಂದ ಆಡುತ್ತಿದ್ದರು ಎಂದು ಅವರು ಬಹಿರಂಗಪಡಿಸಿದರು.
“ತಿಲಕ್ ಇಂದು ಅದ್ಭುತ ಬ್ಯಾಟಿಂಗ್ ಮಾಡಿದರು. ಕಳೆದ ಪಂದ್ಯದಲ್ಲಿ ಅನೇಕ ವಿಷಯಗಳು ಸಂಭವಿಸಿತು. ಜನರು ಅವರ ಬಗ್ಗೆ ಸಾಕಷ್ಟು ಮಾತನಾಡಿದರು, ಆದರೆ ಪಂದ್ಯದ ಹಿಂದಿನ ದಿನ ಅವರು ತುಂಬಾ ತೀವ್ರವಾಗಿ ಗಾಯಗೊಂಡಿದ್ದಾರೆಂದು ಜನರಿಗೆ ತಿಳಿದಿಲ್ಲ. ಇದು ಯುದ್ಧತಂತ್ರದ ನಿರ್ಧಾರವಾಗಿತ್ತು. ಅವರಿಗೆ ಬೆರಳಿನ ಗಾಯದಿಂದ ಆಟವಾಡಲು ಸಾಧ್ಯವಾಗುತ್ತಿರಲಿಲ್ಲ, ಹೀಗಾಗಿ ಆ ಸಂದರ್ಭ ಹೊಸ ಆಟಗಾರ ಬಂದು ದೊಡ್ಡ ಹೊಡೆತಗಳನ್ನು ಹೊಡೆದರೆ ಉತ್ತಮ ಎಂದು ಕೋಚ್ ಭಾವಿಸಿದ್ದರು” ಎಂದು ಹಾರ್ದಿಕ್ ಹೇಳಿದರು.
MI vs RCB IPL 2025: ಆರಾಮವಾಗಿ ಗೆಲ್ಲುತ್ತಿದ್ದ ಮುಂಬೈಗೆ ಶಾಕ್ ಕೊಟ್ಟಿದ್ದು ಆರ್‌ಸಿಬಿಯ ಈ ಒಂದು ನಿರ್ಧಾರ
ತಿಲಕ್ರಿಂದ ನಿಧಾನಗತಿಯ ಇನ್ನಿಂಗ್ಸ್:
ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ತಿಲಕ್ ವರ್ಮಾ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿದರು. ಒಂದೊಂದು ರನ್ ಗಳಿಸಲು ಪರದಾಡಿದರು. 204 ರನ್‌ಗಳ ಗುರಿಯನ್ನು ಬೆನ್ನಟ್ಟಿದಾಗ, ಅವರು 23 ಎಸೆತಗಳಲ್ಲಿ ಕೇವಲ 25 ರನ್ ಗಳಿಸಲು ಸಾಧ್ಯವಾಯಿತಷ್ಟೆ. ಆದ್ದರಿಂದ, 19 ನೇ ಓವರ್‌ನಲ್ಲಿ ನಿವೃತ್ತರಾದ ನಂತರ ಅವರನ್ನು ಔಟ್ ಎಂದು ಹೇಳಲಾಯಿತು. ಲಕ್ನೋ ವಿರುದ್ಧದ ಸೋಲಿನ ನಂತರ, ಮುಂಬೈ ಇಂಡಿಯನ್ಸ್‌ನ ಮುಖ್ಯ ಕೋಚ್ ಮಹೇಲ ಜಯವರ್ಧನೆ, ತಿಲಕ್ ವರ್ಮಾ ಅವರನ್ನು ನಿವೃತ್ತಿಗೊಳಿಸಿ ಅವರನ್ನು ಮರಳಿ ಕರೆಸಿಕೊಳ್ಳುವ ನಿರ್ಧಾರ ತಮ್ಮದಾಗಿತ್ತು ಎಂದು ಹೇಳಿದರು.
ಅವರ ಪ್ರಕಾರ, ಇದನ್ನು ಒಂದು ತಂತ್ರದ ಭಾಗವಾಗಿ ಮಾಡಲಾಗಿದೆ. ಪಂದ್ಯದ ಪರಿಸ್ಥಿತಿಯನ್ನು ಪರಿಗಣಿಸಿ, ಅವರು ತಿಲಕ್ ವರ್ಮಾ ಅವರನ್ನು ಮರಳಿ ಕರೆದರು. ಫುಟ್ಬಾಲ್ ಪಂದ್ಯದಂತೆ, ಮ್ಯಾನೇಜರ್ ತನ್ನ ಬದಲಿ ಆಟಗಾರನನ್ನು ಕೊನೆಯ ಕ್ಷಣದಲ್ಲಿ ಮೈದಾನಕ್ಕೆ ಕರೆತರುತ್ತಾನೆ, ಅದೇ ರೀತಿಯಲ್ಲಿ ಕ್ರಿಕೆಟ್‌ನಲ್ಲೂ ಹೊಸ ಪ್ರಯೋಗ ಮಾಡಲು ಪ್ರಯತ್ನಿಸಿದೆ ಎಂದು ಹೇಳಿದರು. ಆದರೆ, ಫಲಿತಾಂಶ ಅವರ ಪರವಾಗಿ ಆಗಲಿಲ್ಲ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ