IND vs AFG: ಅಫ್ಘನ್ ವಿರುದ್ಧ 12ನೇ ಟೆಸ್ಟ್ ಶತಕ ಬಾರಿಸಿದ ಕನ್ನಡಿಗ ಕೆಎಲ್ ರಾಹುಲ್‌

KL Rahul's 12th Test Century: ಭಾರತ-ಅಫ್ಘಾನಿಸ್ತಾನ ಟೆಸ್ಟ್ ಜೂನ್ 6 ರಂದು ನ್ಯೂ ಚಂಡೀಗಢದಲ್ಲಿ ಆರಂಭವಾಯಿತು. ಎಂಟು ವರ್ಷಗಳ ನಂತರ ನಡೆಯುತ್ತಿರುವ ಈ ಪಂದ್ಯದಲ್ಲಿ ಭಾರತ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿತು. ಕನ್ನಡಿಗ ಕೆಎಲ್ ರಾಹುಲ್ ಮೊದಲ ದಿನವೇ ತಮ್ಮ 12ನೇ ಟೆಸ್ಟ್ ಶತಕ (164 ಎಸೆತ, 11 ಬೌಂಡರಿ) ಬಾರಿಸಿ ಮಿಂಚಿದರು. 68ನೇ ಟೆಸ್ಟ್‌ನಲ್ಲಿ ಅವರ ಈ ಸಾಧನೆ ಭಾರತ ತಂಡಕ್ಕೆ ಉತ್ತಮ ಆರಂಭ ನೀಡಿದೆ.

IND vs AFG: ಅಫ್ಘನ್ ವಿರುದ್ಧ 12ನೇ ಟೆಸ್ಟ್ ಶತಕ ಬಾರಿಸಿದ ಕನ್ನಡಿಗ ಕೆಎಲ್ ರಾಹುಲ್‌
Kl Rahul

Updated on: Jun 06, 2026 | 3:51 PM

ಭಾರತ ಮತ್ತು ಅಫ್ಘಾನಿಸ್ತಾನ (India vs Afghanistan) ನಡುವಿನ ಏಕೈಕ ಟೆಸ್ಟ್ ಪಂದ್ಯ ಜೂನ್ 6 ರ ಶನಿವಾರದಿಂದ ನ್ಯೂ ಚಂಡೀಗಢದ ಮಹಾರಾಜ ಯಾದವೇಂದ್ರ ಸಿಂಗ್ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಪ್ರಾರಂಭವಾಗಿದೆ. ಎಂಟು ವರ್ಷಗಳ ನಂತರ ಎರಡೂ ದೇಶಗಳ ನಡುವೆ ಈ ಟೆಸ್ಟ್ ಪಂದ್ಯ ನಡೆಯುತ್ತಿದ್ದು, ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ಬ್ಯಾಟಿಂಗ್‌ ಆಯ್ದುಕೊಂಡಿತು. ಅದರಂತೆ ತಂಡದ ಪರ ಆರಂಭಿಕನಾಗಿ ಕಣಕ್ಕಿಳಿದಿದ್ದ ಕನ್ನಡಿಗ ಕೆಎಲ್ ರಾಹುಲ್ (KL Rahul) ಟೆಸ್ಟ್ ಪಂದ್ಯದ ಮೊದಲ ದಿನವೇ ಭರ್ಜರಿ ಶತಕ ಬಾರಿಸಿದ್ದಾರೆ. ತಮ್ಮ ಟೆಸ್ಟ್ ವೃತ್ತಿಜೀವನದ 68 ನೇ ಪಂದ್ಯವನ್ನಾಡುತ್ತಿರುವ ರಾಹುಲ್ 12ನೇ ಟೆಸ್ಟ್ ಶತಕವನ್ನು ಬಾರಿಸಿದ್ದಾರೆ. ತಮ್ಮ ಶತಕದ ಇನ್ನಿಂಗ್ಸ್​ನಲ್ಲಿ 164 ಎಸೆತಗಳನ್ನು ಎದುರಿಸಿದ ರಾಹುಲ್ 11 ಬೌಂಡರಿಗಳ ಸಹಿತ ಶತಕದ ಗಡಿ ದಾಟಿದರು.

ತವರಿನಲ್ಲಿ 3ನೇ ಟೆಸ್ಟ್ ಶತಕ

ವಿದೇಶಿ ನೆಲಗಳಲ್ಲಿ ನೀರು ಕುಡಿದಷ್ಟೇ ಸುಲಭವಾಗಿ ಟೆಸ್ಟ್ ಶತಕಗಳನ್ನು ಬಾರಿಸುವ ರಾಹುಲ್​ಗೆ ತವರು ನೆಲದಲ್ಲಿ ಇದು ಮೂರನೇ ಟೆಸ್ಟ್ ಶತಕವಾಗಿದೆ. ಅಂದರೆ ರಾಹುಲ್ ಉಳಿದ 9 ಟೆಸ್ಟ್ ಶತಕಗಳನ್ನು ವಿದೇಶಿ ನೆಲದಲ್ಲಿ ಬಾರಿಸಿದ್ದಾರೆ. ಆದಾಗ್ಯೂ ರಾಹುಲ್ ಅವರ ಶತಕದಲ್ಲಿ ಅಫ್ಘನ್ ನಾಯಕನ ಕೊಡುಗೆಯೂ ಇದೆ. ವಾಸ್ತವವಾಗಿ ರಾಹುಲ್ 16 ರನ್ ಬಾರಿಸಿ ಆಡುತ್ತಿದ್ದಾಗ ಇನ್ನಿಂಗ್ಸ್​ನ 11 ನೇ ಓವರ್‌ನ ಮೊದಲ ಚೆಂಡನ್ನು ಕಟ್ ಮಾಡಲು ಪ್ರಯತ್ನಿಸಿದರು. ಆದರೆ ಚೆಂಡು ಅವರ ಬ್ಯಾಟ್‌ನ ಅಂಚನ್ನು ತಾಗಿ ವಿಕೆಟ್‌ಕೀಪರ್‌ಗೆ ಹೋಯಿತು. ಅಫ್ಘನ್ ಆಟಗಾರರು ಕೂಡಲೇ ಔಟ್​ಗೆ ಮನವಿ ಮಾಡಿದರು. ಆದರೆ ಅಂಪೈರ್ ಔಟ್ ನೀಡಲಿಲ್ಲ. ಇತ್ತ ಅಫ್ಘನ್ ವಿಕೆಟ್ ಕೀಪರ್ ಹಾಗೂ ಸ್ಲಿಪ್​ನಲ್ಲಿ ನಿಂತಿದ್ದ ಆಟಗಾರರು ಡಿಆರ್‌ಎಸ್ ತೆಗೆದುಕೊಳ್ಳುವಂತೆ ನಾಯಕನ ಬಳಿ ಮನವಿ ಮಾಡಿದರು. ಆದರೆ ನಾಯಕ ಡಿಆರ್​ಎಸ್ ತೆಗೆದುಕೊಳ್ಳಲಿಲ್ಲ. ಇದರಿಂದ ಜೀವದಾನ ಪಡೆದ ರಾಹುಲ್ ಶತಕದ ಇನ್ನಿಂಗ್ಸ್ ಆಡಿದರು.

ಶತಕ ಬಾರಿಸಿ ಔಟ್

ಆದಾಗ್ಯೂ ಶತಕ ಬಾರಿಸಿದ ಬಳಿಕ ರಾಹುಲ್ ಹೆಚ್ಚು ಹೊತ್ತು ಕ್ರಿಸ್​ನಲ್ಲಿ ಉಳಿಯಲು ಸಾಧ್ಯವಾಗಲಿಲ್ಲ. ಶತಕ ಬಾರಿಸಿದ ನಂತರದ ಎಸೆತದಲ್ಲೇ ರಾಹುಲ್ ಶಾರ್ಟ್​ ಕವರ್​ನಲ್ಲಿ ನಿಂತಿದ್ದ ಫಿಲ್ಡರ್​ಗೆ ಕ್ಯಾಚಿತ್ತು ನಿರ್ಗಮಿಸಿದರು. ಕಳೆದ 12 ತಿಂಗಳಲ್ಲಿ ರಾಹುಲ್ ಶತಕ ಬಾರಿಸಿದ ಕೂಡಲೇ ವಿಕೆಟ್ ಒಪ್ಪಿಸುತ್ತಿರುವುದು ಇದು ಮೂರನೇ ಬಾರಿ, ಇದು ಕಳವಳಕಾರಿಯಾಗಿದೆ.

ಕೊನೆಯ ಮೂರು ಟೆಸ್ಟ್ ಶತಕಗಳು

  • ಇಂಗ್ಲೆಂಡ್ ವಿರುದ್ಧ – 100 ರನ್ ಬಾರಿಸಿ ಔಟ್
  • ವೆಸ್ಟ್ ಇಂಡೀಸ್ ವಿರುದ್ಧ – 100 ರನ್ ಬಾರಿಸಿ ಔಟ್
  • ಅಫ್ಘಾನಿಸ್ತಾನ ವಿರುದ್ಧ – 100 ರನ್ ಬಾರಿಸಿ ಔಟ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:22 pm, Sat, 6 June 26

pruthvi Shankar

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Follow Us