KL Rahul & Athiya Shetty: ರಾಹುಲ್- ಅಥಿಯಾ ದಂಪತಿಗಳಿಗೆ ಹೆಣ್ಣು ಮಗು ಜನನ
KL Rahul & Athiya Shetty Welcome Baby Girl: ಟೀಂ ಇಂಡಿಯಾ ಕ್ರಿಕೆಟಿಗ ಕೆ.ಎಲ್. ರಾಹುಲ್ ಮತ್ತು ಬಾಲಿವುಡ್ ನಟಿ ಅಥಿಯಾ ಶೆಟ್ಟಿ ದಂಪತಿಗಳು ಹೆಣ್ಣು ಮಗುವಿಗೆ ಪೋಷಕರಾಗಿದ್ದಾರೆ. ಅಥಿಯಾ ಶೆಟ್ಟಿ ಈ ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ರಾಹುಲ್ ಐಪಿಎಲ್ ನಲ್ಲಿ ಆಡುತ್ತಿದ್ದರೂ, ತಮ್ಮ ಮಗುವಿನ ನಿರೀಕ್ಷೆಯಿಂದಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ತೊರೆದಿದ್ದರು. ಈಗ ಅವರ ಮನೆಗೆ ಹೊಸ ಸದಸ್ಯೆಯ ಆಗಮನವಾಗಿದೆ.

ಟೀಂ ಇಂಡಿಯಾ ಕ್ರಿಕೆಟಿಗ ಹಾಗೂ ಕನ್ನಡಿಗ ಕೆಎಲ್ ರಾಹುಲ್ (KL Rahul) ಹಾಗೂ ಬಾಲಿವುಡ್ ನಟಿ ಅಥಿಯಾ ಶೆಟ್ಟಿ ದಂಪತಿಗಳು ಹೆಣ್ಣು ಮಗುವಿಗೆ ಪೋಷಕರಾಗಿದ್ದಾರೆ. ಸ್ವತಃ ಈ ವಿಚಾರವನ್ನು ಅಥಿಯಾ ಶೆಟ್ಟಿ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಮಾಹಿತಿ ನೀಡಿದ್ದಾರೆ. ವಾಸ್ತವವಾಗಿ ರಾಹುಲ್ ಐಪಿಎಲ್ಗಾಗಿ (IPL 2025) ಕೆಲವು ದಿನಗಳ ಹಿಂದೆ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೇರಿಕೊಂಡಿದ್ದರು. ಆದರೆ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದ ರಾಹುಲ್ ಭಾನುವಾರವಷ್ಟೇ ಡೆಲ್ಲಿ ತಂಡವನ್ನು ತೊರೆದು ಮನೆಗೆ ವಾಪಸ್ಸಾಗಿದ್ದರು. ಇದೀಗ ಈ ದಂಪತಿಗಳ ಮನೆಗೆ ಮಹಾಲಕ್ಷ್ಮೀಯ ಆಗಮನವಾಗಿದೆ ಎಂಬ ಸುದ್ದಿ ಹೊರಬಿದ್ದಿದೆ.
ಮಗಳ ಹೆಸರನ್ನು ಬಹಿರಂಗಪಡಿಸಿಲ್ಲ
ಒಂದೆಡೆ ರಾಹುಲ್ ಪ್ರತಿನಿಧಿಸುವ ಡೆಲ್ಲಿ ಕ್ಯಾಪಿಟಲ್ಸ್ ತಂಡ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ತನ್ನ ಮೊದಲ ಪಂದ್ಯವನ್ನು ಆಡುತ್ತಿದ್ದರೆ ಇತ್ತ ರಾಹುಲ್ ಮತ್ತು ಅಥಿಯಾ ತಮ್ಮ ಮಗಳ ಜನನದ ಸುದ್ದಿಯನ್ನು ಫೋಟೋದೊಂದಿಗೆ ಹಂಚಿಕೊಳ್ಳುವ ಮೂಲಕ ಸಿಹಿ ಸುದ್ದಿ ನೀಡಿದ್ದಾರೆ. ಆದರೆ, ರಾಹುಲ್ ಮತ್ತು ಅತಿಯಾ ತಮ್ಮ ಮಗಳ ಹೆಸರನ್ನು ಇನ್ನೂ ಬಹಿರಂಗಪಡಿಸಿಲ್ಲ. ಅಭಿಮಾನಿಗಳಲ್ಲದೆ, ಕ್ರಿಕೆಟ್ ಮತ್ತು ಚಲನಚಿತ್ರ ಜಗತ್ತಿನ ಪ್ರಸಿದ್ಧ ತಾರೆಯರು ಕೂಡ ಈ ಪೋಸ್ಟ್‌ಗೆ ಇಬ್ಬರನ್ನೂ ಅಭಿನಂದಿಸಿದ್ದಾರೆ.
KL Rahul & Athiya Shetty blessed with a Baby Girl 🤍
– Congratulations to both of them. pic.twitter.com/RThsfMGTlS
— Johns. (@CricCrazyJohns) March 24, 2025
ಮೇಲೆ ಹೇಳಿದಂತೆ ಕೆಎಲ್ ರಾಹುಲ್ ಐಪಿಎಲ್ 2025 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ತಮ್ಮ ಮೊದಲ ಪಂದ್ಯವನ್ನು ಆಡಬೇಕಿತ್ತು. ಆದರೆ ಅದಕ್ಕೂ ಒಂದು ದಿನ ಮೊದಲು ಅವರು ಮೊದಲ ಮಗುವಿನ ಅಗಮನಕ್ಕಾಗಿ ಮನೆಗೆ ವಾಪಸ್ಸಾಗಿದ್ದರು. ಅಥಿಯಾ ಇಷ್ಟರಲ್ಲೇ ಮಗುವಿನ ಜನ್ಮ ನೀಡುವ ನಿರೀಕ್ಷೆ ಇದ್ದ ಕಾರಣ ರಾಹುಲ್ ತಕ್ಷಣ ಮನೆಗೆ ಮರಳಲು ತಂಡದ ಆಡಳಿತ ಮಂಡಳಿಯ ಅನುಮತಿ ಕೇಳಿದ್ದರು. ಫ್ರಾಂಚೈಸಿ ಕೂಡ ಅದಕ್ಕೆ ಒಪ್ಪಿಗೆ ಸೂಚಿಸಿತ್ತು.
IPL 2025: ಇದ್ದಕ್ಕಿದ್ದಂತೆ ಡೆಲ್ಲಿ ತಂಡ ತೊರೆದು ಮನೆಗೆ ಮರಳಿದ ರಾಹುಲ್; ಮತ್ತೆ ಮರಳುವುದು ಯಾವಾಗ?
ರಾಹುಲ್ ಯಾವಾಗ ಹಿಂತಿರುಗುತ್ತಾರೆ?
ಮಗಳ ಜನನದ ನಂತರ, ರಾಹುಲ್ ಮುಂದಿನ ಕೆಲವು ದಿನಗಳವರೆಗೆ ತಮ್ಮ ಕುಟುಂಬದೊಂದಿಗೆ ಸಮಯ ಕಳೆಯಲಿದ್ದಾರೆ. ಅವರು ಐಪಿಎಲ್‌ಗೆ ಯಾವಾಗ ಮರಳುತ್ತಾರೆ ಎಂಬುದು ಸದ್ಯಕ್ಕೆ ಸ್ಪಷ್ಟವಾಗಿಲ್ಲ, ಆದರೆ ಮಾರ್ಚ್ 30 ರಂದು ದೆಹಲಿ ಕ್ಯಾಪಿಟಲ್ಸ್ ವಿರುದ್ಧದ ಎರಡನೇ ಪಂದ್ಯದಲ್ಲಿ ಅವರು ಮರಳುವ ನಿರೀಕ್ಷೆಯಿದೆ. ದೆಹಲಿಯ ಮುಂದಿನ ಪಂದ್ಯ ವಿಶಾಖಪಟ್ಟಣದಲ್ಲಿಯೇ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ನಡೆಯಲಿದೆ. ಈ ಪಂದ್ಯದಲ್ಲಿ ರಾಹುಲ್ ಹಿಂತಿರುಗದಿದ್ದರೆ, ಏಪ್ರಿಲ್ 5 ರಂದು ನಡೆಯಲಿರುವ ತಂಡದ ಮೂರನೇ ಪಂದ್ಯದಲ್ಲಿ ಅವರು ಖಂಡಿತವಾಗಿಯೂ ಆಡಲಿದ್ದಾರೆ. ದೆಹಲಿ ತನ್ನ ಮೂರನೇ ಪಂದ್ಯವನ್ನು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಆಡಲಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:39 pm, Mon, 24 March 25