KL Rahul: ರೋಹಿತ್-ಕೊಹ್ಲಿ ಇಲ್ಲದಿದ್ರೆ ಏನಂತೆ: ಆಂಗ್ಲರಿಗೆ ಭಯ ಹುಟ್ಟಿಸಿದೆ ಈತನ ಬ್ಯಾಟಿಂಗ್

India vs England Test Series: ರಾಹುಲ್ ಅವರು ಇಂಗ್ಲೆಂಡ್‌ನಲ್ಲಿ ಸಾಕಷ್ಟು ಟೆಸ್ಟ್‌ಗಳನ್ನು ಆಡಿದ್ದಾರೆ ಮತ್ತು ರನ್‌ಗಳನ್ನು ಸಹ ಗಳಿಸಿದ್ದಾರೆ. ಇಂಗ್ಲೆಂಡ್ ಲಯನ್ಸ್ ವಿರುದ್ಧದ ಪಂದ್ಯಕ್ಕೆ ಭಾರತದ ಎ ತಂಡವನ್ನು ಆಯ್ಕೆ ಮಾಡಿದಾಗ, ಕೆಎಲ್ ರಾಹುಲ್ ಅವರ ಹೆಸರು ಅದರಲ್ಲಿ ಇರಲಿಲ್ಲ, ಆದರೆ ಇದಾದ ನಂತರ, ರಾಹುಲ್ ಸ್ವತಃ ಮುಂದೆ ಬಂದು ಇಂಗ್ಲೆಂಡ್ ಲಯನ್ಸ್ ವಿರುದ್ಧದ ಎರಡನೇ ಪಂದ್ಯವನ್ನು ಆಡಲು ಬಯಸುವುದಾಗಿ ಬಿಸಿಸಿಐಗೆ ತಿಳಿಸಿದರು.

KL Rahul: ರೋಹಿತ್-ಕೊಹ್ಲಿ ಇಲ್ಲದಿದ್ರೆ ಏನಂತೆ: ಆಂಗ್ಲರಿಗೆ ಭಯ ಹುಟ್ಟಿಸಿದೆ ಈತನ ಬ್ಯಾಟಿಂಗ್
Kohli Rahul And Rohit

Updated on: Jun 09, 2025 | 8:58 PM

ಬೆಂಗಳೂರು (ಜೂ. 09): ಭಾರತ vs ಇಂಗ್ಲೆಂಡ್ (India vs England) ಸರಣಿಗೂ ಮುನ್ನ, ಮೂರು ಹೆಸರುಗಳು ಹೆಚ್ಚು ಚರ್ಚೆಯಾಗುತ್ತಿವೆ. ಮೊದಲ ಎರಡು ಹೆಸರುಗಳು ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಮತ್ತು ಮೂರನೇ ಹೆಸರು ಶುಭ್​ಮನ್ ಗಿಲ್. ಆದರೆ ಏತನ್ಮಧ್ಯೆ ಮತ್ತೊಬ್ಬ ಭಾರತೀಯ ಬ್ಯಾಟ್ಸ್‌ಮನ್ ಈಗ ಸುದ್ದಿಯಲ್ಲಿದ್ದಾರೆ. ಈ ಆಟಗಾರ ಸರಣಿ ಆರಂಭಕ್ಕೂ ಮೊದಲು ಭಾರತೀಯರಿಗೆ ಬಲ ತುಂಬಿದ್ದರೆ ಅತ್ತ ಆಂಗ್ಲರಿಗೆ ನಡುಕ ಹುಟ್ಟಿಸಿದ್ದಾನೆ. ಇಂಗ್ಲಿಷ್ ಶಿಬಿರದಲ್ಲಿ ಕೋಲಾಹಲ ಉಂಟುಮಾಡಿದ್ದಾನೆ. ನಾವು ಇಲ್ಲಿ ಹೇಳಲು ಹೊರಟಿರುವುದು ಭಾರತ ಎ ಪರ ಆಡುತ್ತಿರುವ ಮತ್ತು ಇಂಗ್ಲೆಂಡ್ ಲಯನ್ಸ್ ಅನ್ನು ಸೋಲಿಸಿದ ಕೆಎಲ್ ರಾಹುಲ್ ಬಗ್ಗೆ.

ಇಂಗ್ಲೆಂಡ್ ತಲುಪಿದ ಕೂಡಲೇ ಕೆಎಲ್ ರಾಹುಲ್ ಅಲರ್ಟ್

ಇಂಗ್ಲೆಂಡ್ ಸರಣಿಗೆ ಸ್ವಲ್ಪ ದಿನದ ಮೊದಲು, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದರು. ಇದು ಟೀಮ್ ಇಂಡಿಯಾಕ್ಕೆ ದೊಡ್ಡ ಹಿನ್ನಡೆ ಆಗಿರುವುದು ಖಚಿತ. ಮತ್ತೊಂದೆಡೆ ಶುಬ್​ಮನ್ ಗಿಲ್ ಮೊದಲ ಬಾರಿಗೆ ಟೆಸ್ಟ್ ನಾಯಕತ್ವ ವಹಿಸಲಿದ್ದಾರೆ. ಹೀಗಾಗಿ ಇವರ ಮೇಲೆ ಬೆಟ್ಟದಷ್ಟು ನಿರೀಕ್ಷೆಗಳಿವೆ. ಇಂಗ್ಲೆಂಡ್ ಸರಣಿಗೆ ಆಯ್ಕೆಯಾದ ಭಾರತೀಯ ತಂಡದಲ್ಲಿ ಕೆಎಲ್ ರಾಹುಲ್ ಕೆಲವೇ ಕೆಲವು ಅನುಭವಿ ಆಟಗಾರರಲ್ಲಿ ಒಬ್ಬರು.

ರಾಹುಲ್ ಅವರು ಇಂಗ್ಲೆಂಡ್‌ನಲ್ಲಿ ಸಾಕಷ್ಟು ಟೆಸ್ಟ್‌ಗಳನ್ನು ಆಡಿದ್ದಾರೆ ಮತ್ತು ರನ್‌ಗಳನ್ನು ಸಹ ಗಳಿಸಿದ್ದಾರೆ. ಇಂಗ್ಲೆಂಡ್ ಲಯನ್ಸ್ ವಿರುದ್ಧದ ಪಂದ್ಯಕ್ಕೆ ಭಾರತದ ಎ ತಂಡವನ್ನು ಆಯ್ಕೆ ಮಾಡಿದಾಗ, ಕೆಎಲ್ ರಾಹುಲ್ ಅವರ ಹೆಸರು ಅದರಲ್ಲಿ ಇರಲಿಲ್ಲ, ಆದರೆ ಇದಾದ ನಂತರ, ರಾಹುಲ್ ಸ್ವತಃ ಮುಂದೆ ಬಂದು ಇಂಗ್ಲೆಂಡ್ ಲಯನ್ಸ್ ವಿರುದ್ಧದ ಎರಡನೇ ಪಂದ್ಯವನ್ನು ಆಡಲು ಬಯಸುವುದಾಗಿ ಬಿಸಿಸಿಐಗೆ ತಿಳಿಸಿದರು. ನಂತರ ಅವರಿಗೆ ಅವಕಾಶ ಸಿಕ್ಕಿತು ಮತ್ತು ರಾಹುಲ್ ಅದರ ಸಂಪೂರ್ಣ ಪ್ರಯೋಜನವನ್ನು ಪಡೆದರು.

ಇದನ್ನೂ ಓದಿ
IPL 2026ಕ್ಕೂ ಮುನ್ನ ಐದು ಆಟಗಾರರಿಗೆ ಬಿಗ್ ಶಾಕ್ ನೀಡಲು ಮುಂದಾದ ಫ್ರಾಂಚೈಸಿ
ಹೆನ್ರಿಕ್ ಕ್ಲಾಸೆನ್ ದಿಢೀರ್ ನಿವೃತ್ತಿ ಹೊಂದಲು ಕಾರಣವೇನು?
ನಾನು ಔಟೇ ಅಲ್ಲ... ಅಂಪೈರ್​ ಜೊತೆ ಅಶ್ವಿನ್ ವಾಗ್ವಾದ
ಕಾಲ್ತುಳಿತ: ಹೈಕೋರ್ಟ್ ಮೆಟ್ಟಿಲೇರಿದ ಡಿಎನ್ಎ,ಸರ್ಕಾರದ ವಿರುದ್ಧ ಗಂಭೀರ ಆರೋಪ

IPL 2026: ಮುಂದಿನ ಸೀಸನ್​ಗು ಮುನ್ನ ಐದು ಆಟಗಾರರಿಗೆ ಬಿಗ್ ಶಾಕ್ ನೀಡಲು ಮುಂದಾದ ಫ್ರಾಂಚೈಸಿಗಳು

ಮೊದಲ ಇನ್ನಿಂಗ್ಸ್‌ನಲ್ಲಿ ಶತಕ ಮತ್ತು ಇಂಗ್ಲೆಂಡ್ ಲಯನ್ಸ್ ವಿರುದ್ಧ ಅರ್ಧಶತಕ

ಈ ಪಂದ್ಯದಲ್ಲಿ ಆರಂಭಿಕನಾಗಿ ಕೆಎಲ್ ರಾಹುಲ್ ಅದ್ಭುತ ಶತಕ ಗಳಿಸಿದರು. ಅವರು 168 ಎಸೆತಗಳಲ್ಲಿ 116 ರನ್ ಗಳಿಸುವ ಮೂಲಕ ಅದ್ಭುತ ಇನ್ನಿಂಗ್ಸ್ ಆಡಿದರು ಮತ್ತು ಈ ಸಮಯದಲ್ಲಿ ಅವರು 15 ಬೌಂಡರಿ ಮತ್ತು ಒಂದು ಸಿಕ್ಸರ್ ಬಾರಿಸಿದರು. ಇದಾದ ನಂತರ, ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿಯೂ ರಾಹುಲ್ 64 ಎಸೆತಗಳಲ್ಲಿ 51 ರನ್ ಗಳಿಸಿದರು. ಈ ಸಮಯದಲ್ಲಿ, ಅವರ ಬ್ಯಾಟ್‌ನಿಂದ ಒಂಬತ್ತು ಬೌಂಡರಿಗಳು ಬಂದವು.

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಕೆಎಲ್ ರಾಹುಲ್ ಅಂಕಿ ಅಂಶ

ಈಗ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯಗಳಲ್ಲಿ ಕೆಎಲ್. ರಾಹುಲ್ ಅವರ ಅಂಕಿಅಂಶಗಳು ಕೂಡ ಅದ್ಭುತವಾಗಿದೆ. ಇಂಗ್ಲೆಂಡ್ ವಿರುದ್ಧದ 13 ಪಂದ್ಯಗಳಲ್ಲಿ ರಾಹುಲ್ 955 ರನ್ ಗಳಿಸಿದ್ದು, ಸಾವಿರ ರನ್‌ಗಳ ಸಮೀಪದಲ್ಲಿದ್ದಾರೆ. ಈ ಸಮಯದಲ್ಲಿ ರಾಹುಲ್ ಅವರ ಸರಾಸರಿ 39.79 ಆಗಿದ್ದು, ಅವರು ಮೂರು ಶತಕಗಳು ಮತ್ತು ಎರಡು ಅರ್ಧಶತಕಗಳನ್ನು ಗಳಿಸಿದ್ದಾರೆ. ರಾಹುಲ್ ಆಂಗ್ಲರ ನಾಡಲ್ಲಿ ಇದುವರೆಗೆ 9 ಟೆಸ್ಟ್ ಪಂದ್ಯಗಳನ್ನು ಆಡುವ ಮೂಲಕ 614 ರನ್ ಗಳಿಸಿದ್ದಾರೆ. ಅವರ ಸರಾಸರಿ 34.11. ರಾಹುಲ್ ಇಲ್ಲಿಯವರೆಗೆ ಇಂಗ್ಲೆಂಡ್‌ನಲ್ಲಿ ಎರಡು ಶತಕಗಳು ಮತ್ತು ಒಂದು ಅರ್ಧಶತಕವನ್ನು ಗಳಿಸಿದ್ದಾರೆ. ಸದ್ಯ ರಾಹುಲ್ ಫಾರ್ಮ್ ಗಮನಿಸಿದರೆ ಈ ಬಾರಿ ಈ ಸಂಖ್ಯೆ ಇನ್ನಷ್ಟು ಹೆಚ್ಚಾಗುವುದು ಖಚಿತ ಎನ್ನಬಹುದು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ