AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2026: ಮುಂದಿನ ಸೀಸನ್​ಗು ಮುನ್ನ ಐದು ಆಟಗಾರರಿಗೆ ಬಿಗ್ ಶಾಕ್ ನೀಡಲು ಮುಂದಾದ ಫ್ರಾಂಚೈಸಿಗಳು

IPL 2026: ಐಪಿಎಲ್ 2025 ಸೀಸನ್ ಮುಗಿದಿದೆ. ಆರ್ಸಿಬಿ ಅಂತಿಮವಾಗಿ 18 ವರ್ಷಗಳಲ್ಲಿ ತನ್ನ ಮೊದಲ ಟ್ರೋಫಿಯನ್ನು ಗೆದ್ದುಕೊಂಡಿತು. ಆದಾಗ್ಯೂ, RCB ಯಿಂದ ಮಾತ್ರವಲ್ಲದೆ ಇತರ ತಂಡಗಳಿಂದಲೂ, ಅನೇಕ ಆಟಗಾರರು ತಮ್ಮ ಕಳಪೆ ಪ್ರದರ್ಶನದಿಂದ ಫ್ರಾಂಚೈಸಿಗಳನ್ನು ಮೆಚ್ಚಿಸಲು ವಿಫಲರಾದರು. ಸದ್ಯ ಈ 5 ವಿದೇಶಿ ಆಟಗಾರರು ಮುಂದಿನ ಸೀಸನ್ ಆಡುವುದು ಅನುಮಾನ ಎನ್ನಬಹುದು.

IPL 2026: ಮುಂದಿನ ಸೀಸನ್​ಗು ಮುನ್ನ ಐದು ಆಟಗಾರರಿಗೆ ಬಿಗ್ ಶಾಕ್ ನೀಡಲು ಮುಂದಾದ ಫ್ರಾಂಚೈಸಿಗಳು
Ipl 2026
Vinay Bhat
|

Updated on: Jun 09, 2025 | 7:19 PM

Share

ಬೆಂಗಳೂರು (ಜೂ. 09): ವರ್ಷಗಳು ಕಳೆದಂತೆ ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) ಟೂರ್ನಿಗೆ ಹೆಚ್ಚು ಹೆಚ್ಚು ವಿದೇಶಿ ಆಟಗಾರರು ಬರುತ್ತಿದ್ದಾರೆ. ಆ ಆಟಗಾರರಲ್ಲಿ ಕೆಲವರು ಯಶಸ್ಸು ಕಂಡರೆ ಇನ್ನೂ ಕೆಲವರು ದಯನೀಯವಾಗಿ ವಿಫಲರಾಗುತ್ತಾರೆ. ಇದಾದ ನಂತರ, ಐಪಿಎಲ್ ತಂಡಗಳು ಅವರ ಪ್ರದರ್ಶನದ ಆಧಾರದ ಮೇಲೆ ಅವರನ್ನು ತಂಡದಿಂದ ಕೈಬಿಡುತ್ತವೆ. ಈ ವರ್ಷ, ಕೆಲವು ಪ್ರಮುಖ ವಿದೇಶಿ ಆಟಗಾರರು ಐಪಿಎಲ್​ನಲ್ಲಿ ಕಳಪೆ ಪ್ರದರ್ಶನ ನೀಡಿದ್ದಾರೆ. ಇದರ ಆಧಾರದ ಮೇಲೆ, ಫ್ರಾಂಚೈಸಿಗಳು ಮುಂದಿನ ಋತುವಿಗು ಮೊದಲು ಅವರನ್ನು ಬಿಡುಗಡೆ ಮಾಡುವ ಸಾಧ್ಯತೆ ಹೆಚ್ಚಿದೆ. ಆ ಆಟಗಾರರ ಯಾರೆಲ್ಲ ಎಂಬುದನ್ನು ನೋಡೋಣ.

ಲಾಕಿ ಫರ್ಗುಸನ್: 33 ವರ್ಷದ ನ್ಯೂಜಿಲೆಂಡ್ ವೇಗಿ ಲಾಕಿ ಫರ್ಗುಸನ್ ಅವರನ್ನು ಪಂಜಾಬ್ ಕಿಂಗ್ಸ್ 2 ಕೋಟಿ ರೂ.ಗೆ ಖರೀದಿಸಿತು. ಆದರೆ, ಅವರು ಕಣಕ್ಕಿಳಿದಿದ್ದು ಕೇವಲ 4 ಪಂದ್ಯಗಳಲ್ಲಿ ಮಾತ್ರ. ಇದರಲ್ಲಿ 5 ವಿಕೆಟ್‌ಗಳನ್ನು ಮಾತ್ರ ಪಡೆಯಲು ಸಾಧ್ಯವಾಯಿತು. ಈ ಅವಧಿಯಲ್ಲಿ, ಫರ್ಗುಸನ್ ತುಂಬಾ ದುಬಾರಿ ಕೂಡ ಆದರು. 9.17 ರ ಎಕಾನಮಿ ದರದಲ್ಲಿ ರನ್‌ಗಳನ್ನು ಬಿಟ್ಟುಕೊಟ್ಟರು. ಪಂದ್ಯಾವಳಿಯ ಮಧ್ಯದಲ್ಲಿ ಇಂಜುರಿಗೆ ತುತ್ತಾದರು. ಫರ್ಗುಸನ್ ಈವರೆಗೆ 49 ಐಪಿಎಲ್ ಪಂದ್ಯಗಳಲ್ಲಿ 51 ವಿಕೆಟ್‌ಗಳನ್ನು ಪಡೆದಿದ್ದಾರೆ. ಕಳೆದ ವರ್ಷ, 7 ಪಂದ್ಯಗಳಲ್ಲಿ 9 ವಿಕೆಟ್‌ಗಳನ್ನು ಪಡೆದರು. ಅವರ ಪ್ರದರ್ಶನ ನಿರಂತರವಾಗಿ ಕುಸಿಯುತ್ತಿವ ಕಾರಣದಿಂದಾಗಿ ಐಪಿಎಲ್ ವೃತ್ತಿಜೀವನ ಅಪಾಯದಲ್ಲಿದೆ.

ಮೊಯೀನ್ ಅಲಿ: ಇಂಗ್ಲೆಂಡ್ ಆಲ್ ರೌಂಡರ್ ಮೊಯೀನ್ ಅಲಿ ತಮ್ಮ ವೃತ್ತಿಜೀವನದ ಅಂತಿಮ ಹಂತದಲ್ಲಿದ್ದಾರೆ. ಅವರನ್ನು ಕೋಲ್ಕತ್ತಾ ನೈಟ್ ರೈಡರ್ಸ್ 2 ಕೋಟಿ ರೂ.ಗೆ ಖರೀದಿಸಿತು. ಅವರಿಗೆ ಈಗ 37 ವರ್ಷ. ಮೊಯೀನ್ ಈ ಋತುವಿನಲ್ಲಿ ಕೇವಲ 4 ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ 5 ರನ್ ಗಳಿಸಿ 3 ವಿಕೆಟ್ ಪಡೆದಿದ್ದಾರೆ. ಮುಂದಿನ ವರ್ಷ ಅವರು ಕೋಲ್ಕತ್ತಾ ತಂಡದಿಂದ ಹೊರಗುಳಿಯುವುದು ಬಹುತೇಕ ಖಚಿತ.

ಇದನ್ನೂ ಓದಿ
Image
ಹೆನ್ರಿಕ್ ಕ್ಲಾಸೆನ್ ದಿಢೀರ್ ನಿವೃತ್ತಿ ಹೊಂದಲು ಕಾರಣವೇನು?
Image
ನಾನು ಔಟೇ ಅಲ್ಲ... ಅಂಪೈರ್​ ಜೊತೆ ಅಶ್ವಿನ್ ವಾಗ್ವಾದ
Image
ಕಾಲ್ತುಳಿತ: ಹೈಕೋರ್ಟ್ ಮೆಟ್ಟಿಲೇರಿದ ಡಿಎನ್ಎ,ಸರ್ಕಾರದ ವಿರುದ್ಧ ಗಂಭೀರ ಆರೋಪ
Image
ಟೀಮ್ ಇಂಡಿಯಾ ವೇಳಾಪಟ್ಟಿಯಲ್ಲಿ ಮಹತ್ವದ ಬದಲಾವಣೆ

ಫಾಫ್ ಡು ಪ್ಲೆಸಿಸ್: 40 ವರ್ಷದ ದಕ್ಷಿಣ ಆಫ್ರಿಕಾದ ಆಟಗಾರ ಕೂಡ ತಮ್ಮ ಐಪಿಎಲ್ ವೃತ್ತಿಜೀವನದ ಅಂತಿಮ ಹಂತದಲ್ಲಿದ್ದಾರೆ. ಈ ಋತುವಿಗಾಗಿ ಡು ಪ್ಲೆಸಿಸ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ 2 ಕೋಟಿ ರೂ.ಗೆ ಖರೀದಿಸಿತು. ಡು ಪ್ಲೆಸಿಸ್ 5 ಪಂದ್ಯಗಳಲ್ಲಿ 33 ಸರಾಸರಿ ಮತ್ತು 134.15 ಸ್ಟ್ರೈಕ್ ರೇಟ್‌ನಲ್ಲಿ 165 ರನ್ ಗಳಿಸಿದ್ದಾರೆ. ಡು ಪ್ಲೆಸಿಸ್ ಅವರ ವಯಸ್ಸನ್ನು ಗಮನಿಸಿದರೆ, ಭವಿಷ್ಯದಲ್ಲಿ ಅವರಿಗೆ ಆಡುವುದು ಕಷ್ಟಕರವೆಂದು ತೋರುತ್ತದೆ.

Heinrich Klaasen: ಹೆನ್ರಿಕ್ ಕ್ಲಾಸೆನ್ ದಿಢೀರ್ ನಿವೃತ್ತಿ ಹೊಂದಲು ಕಾರಣವೇನು?: ಶಾಕಿಂಗ್ ವಿಚಾರ ಬಹಿರಂಗ

ಗ್ಲೆನ್ ಮ್ಯಾಕ್ಸ್‌ವೆಲ್: ತಮ್ಮ ಆಟದ ಶೈಲಿಯಿಂದ ನಿರಂತರವಾಗಿ ಟೀಕೆಗೆ ಗುರಿಯಾಗಿರುವ ಗ್ಲೆನ್ ಮ್ಯಾಕ್ಸ್‌ವೆಲ್, ಐಪಿಎಲ್ ವೃತ್ತಿಜೀವನವನ್ನು ಸಹ ಅಪಾಯಕ್ಕೆ ಸಿಲುಕಿಸಿದ್ದಾರೆ. ಪಂಜಾಬ್ ಕಿಂಗ್ಸ್ ಅವರನ್ನು 4.2 ಕೋಟಿ ರೂ.ಗೆ ಖರೀದಿಸುವ ಮೂಲಕ ಅವರಿಗೆ ಅವಕಾಶ ನೀಡಿತು. ಆದರೆ, ಅವರು ಸಂಪೂರ್ಣವಾಗಿ ವಿಫಲರಾದರು. ಮ್ಯಾಕ್ಸ್‌ವೆಲ್ 7 ಪಂದ್ಯಗಳಲ್ಲಿ 8 ಸರಾಸರಿ ಮತ್ತು 97.96 ಸ್ಟ್ರೈಕ್ ರೇಟ್‌ನಲ್ಲಿ ಕೇವಲ 48 ರನ್ ಗಳಿಸಿದರು. ಬೌಲಿಂಗ್‌ನಲ್ಲಿ, ಅವರು ಕೇವಲ 4 ವಿಕೆಟ್‌ಗಳನ್ನು ಪಡೆಯಲು ಸಾಧ್ಯವಾಯಿತು. ವೀರೇಂದ್ರ ಸೆಹ್ವಾಗ್‌ನಂತಹ ಅನುಭವಿ ಆಟಗಾರರು ಮ್ಯಾಕ್ಸ್‌ವೆಲ್ ಅವರನ್ನು ಟೀಕಿಸಿದ್ದಾರೆ. ಅವರ ಕಳಪೆ ಪ್ರದರ್ಶನವನ್ನು ನೋಡಿದರೆ, ಪಂಜಾಬ್ ತಂಡ ಅವರನ್ನು ಬಿಡುಗಡೆ ಮಾಡುವುದು ಖಚಿತ.

ಲಿಯಾಮ್ ಲಿವಿಂಗ್‌ಸ್ಟೋನ್: ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಂಜಾಬ್‌ನ ಮಾಜಿ ಬ್ಯಾಟ್ಸ್‌ಮನ್ ಲಿಯಾಮ್ ಲಿವಿಂಗ್‌ಸ್ಟೋನ್ ಅವರನ್ನು 8.75 ಕೋಟಿ ರೂ.ಗೆ ಖರೀದಿಸಿತು. ಆದರೆ, ಅವರು RCB ನಿರೀಕ್ಷೆಗಳನ್ನು ಪೂರೈಸಲು ವಿಫಲರಾದರು. ಲಿವಿಂಗ್‌ಸ್ಟೋನ್ 7 ಪಂದ್ಯಗಳಲ್ಲಿ ಕೇವಲ 87 ರನ್ ಗಳಿಸಿದರು. ಅವರ ಸರಾಸರಿ 17.40 ಮತ್ತು ಸ್ಟ್ರೈಕ್ ರೇಟ್ 127.94. ಬೌಲಿಂಗ್‌ನಲ್ಲಿ ಕೇವಲ 2 ವಿಕೆಟ್‌ಗಳನ್ನು ಪಡೆಯಲು ಸಾಧ್ಯವಾಯಿತು. ಮುಂದಿನ ಋತುವಿನ ಮೊದಲು RCB ತಂಡ ಅವರನ್ನು ಬಿಡುಗಡೆ ಮಾಡಬಹುದು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ