IPL: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-18 ಮುಕ್ತಾಯಗೊಂಡಿದೆ. ಈ ಬಾರಿಯ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ. ಇದಕ್ಕೂ ಮುನ್ನ ಐಪಿಎಲ್ನಲ್ಲಿ ಚಾಂಪಿಯನ್ ಪಟ್ಟಕ್ಕೇರಿದ ತಂಡಗಳಲ್ಲಿ ಡೆಕ್ಕನ್ ಚಾರ್ಜರ್ಸ್ ತಂಡ ಕೂಡ ಒಂದು. ಅಂದರೆ 2009 ರಲ್ಲಿ ಡೆಕ್ಕನ್ ಚಾರ್ಜರ್ಸ್ ತಂಡ ಟ್ರೋಫಿ ಎತ್ತಿ ಹಿಡಿದರೂ, ಕೆಲವೇ ವರ್ಷಗಳಲ್ಲಿ ಈ ಫ್ರಾಂಚೈಸಿ ಐಪಿಎಲ್ನಿಂದ ಕಣ್ಮರೆಯಾಯಿತು.
ರಂಗು ರಂಗಿನ ಕ್ರಿಕೆಟ್ ಟೂರ್ನಿ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಶುರುವಾಗಿ 18 ವರ್ಷಗಳು ಕಳೆದಿವೆ. ಈ 18 ವರ್ಷಗಳಲ್ಲಿ ಐಪಿಎಲ್ನಲ್ಲಿ ಬರೋಬ್ಬರಿ 15 ತಂಡಗಳು ಕಣಕ್ಕಿಳಿದಿವೆ. ಈ ಹದಿನೈದು ತಂಡಗಳಲ್ಲಿ 3 ಟೀಮ್ಗಳು ಬ್ಯಾನ್ ಆದರೆ, 2 ಫ್ರಾಂಚೈಸಿಗಳನ್ನು ರದ್ದುಗೊಳಿಸಲಾಗಿದೆ. ಹಾಗಿದ್ರೆ ಐಪಿಎಲ್ನಿಂದ ಕಣ್ಮರೆಯಾದ ಆ 5 ತಂಡಗಳಾವುವು ಎಂದು ನೋಡೋಣ...
1 / 6
ಡೆಕ್ಕನ್ ಚಾರ್ಜರ್ಸ್: ಚೊಚ್ಚಲ ಐಪಿಎಲ್ನಲ್ಲಿ ಕಾಣಿಸಿಕೊಂಡ 8 ತಂಡಗಳಲ್ಲಿ ಡೆಕ್ಕನ್ ಚಾರ್ಜರ್ಸ್ ಕೂಡ ಒಂದು. ಹೈದರಾಬಾದ್ ಅನ್ನು ಪ್ರತಿನಿಧಿಸಿದ್ದ ಡೆಕ್ಕನ್ ಚಾರ್ಜರ್ಸ್ ತಂಡವು 2012ರವರೆಗೆ ಐಪಿಎಲ್ನಲ್ಲಿ ಕಣಕ್ಕಿಳಿದಿತ್ತು. ಆದರೆ 2012 ರಲ್ಲಿ ಒಪ್ಪಂದದ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಡೆಕ್ಕನ್ ಚಾರ್ಜರ್ಸ್ ಫ್ರಾಂಚೈಸಿಯನ್ನು ಐಪಿಎಲ್ ಆಡಳಿತ ಮಂಡಳಿಯು ವಜಾಗೊಳಿಸಿತು. ಇದಾದ ಬಳಿಕ ಹೈದರಾಬಾದ್ ಫ್ರಾಂಚೈಸಿಯನ್ನು ಖರೀದಿಸಿದ ಸನ್ ನೆಟ್ವರ್ಕ್ ಸಂಸ್ಥೆಯು ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ಪರಿಚಯಿಸಿದರು.
2 / 6
ಕೊಚ್ಚಿ ಟಸ್ಕರ್ಸ್ ಕೇರಳ: 2011 ರಲ್ಲಿ ಪರಿಚಯಿಸಲಾದ ಹೊಸ ತಂಡಗಳ ಪಟ್ಟಿಯಲ್ಲಿ ಕೊಚ್ಚಿ ಟಸ್ಕರ್ಸ್ ಕೇರಳ ಕೂಡ ಒಂದು. ಆದರೆ ಮೊದಲ ಸೀಸನ್ನಲ್ಲೇ ಫ್ರ್ಯಾಂಚೈಸ್ ಶುಲ್ಕದ ಭಾಗವಾಗಿರುವ ಶೇಕಡಾ 10 ರಷ್ಟು ಬ್ಯಾಂಕ್ ಗ್ಯಾರಂಟಿಯನ್ನು ಪಾವತಿಸಲು ಕೊಚ್ಚಿ ಟಸ್ಕರ್ಸ್ ಕೇರಳ ತಂಡದ ಮಾಲೀಕರು ವಿಫಲರಾದರು. ಹೀಗಾಗಿ ಕೊಚ್ಚಿ ಟಸ್ಕರ್ಸ್ ಕೇರಳ ತಂಡವನ್ನು ಐಪಿಎಲ್ನಿಂದ ನಿಷೇಧಿಸಲಾಯಿತು.
3 / 6
ಪುಣೆ ವಾರಿಯರ್ಸ್ ಇಂಡಿಯಾ: 2011 ರಲ್ಲಿ ಐಪಿಎಲ್ಗೆ ಎಂಟ್ರಿ ಕೊಟ್ಟ ಮತ್ತೊಂದು ತಂಡವೆಂದರೆ ಪುಣೆ ವಾರಿಯರ್ಸ್ ಇಂಡಿಯಾ. ಸಹಾರಾ ಗ್ರೂಪ್ ಸ್ಪೋರ್ಟ್ಸ್ ಲಿಮಿಟೆಡ್ ಒಡೆತನದಲ್ಲಿದ್ದ ಈ ಫ್ರಾಂಚೈಸಿ 2013 ರಲ್ಲಿ ಹಣಕಾಸಿನ ಸಮಸ್ಯೆಗಳನ್ನು ಎದುರಿಸಿದರು. ಹೀಗಾಗಿ 2013ರ ಬಳಿಕ ಪುಣೆ ವಾರಿಯರ್ಸ್ ಇಂಡಿಯಾ ಫ್ರಾಂಚೈಸಿಯನ್ನು ಬಿಸಿಸಿಐ ರದ್ದುಗೊಳಿಸಿತು.
4 / 6
ಗುಜರಾತ್ ಲಯನ್ಸ್: 2016 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ಐಪಿಎಲ್ನಿಂದ ಅಮಾನತುಗೊಂಡ ಪರಿಣಾಮ ಗುಜರಾತ್ ಲಯನ್ಸ್ ತಂಡವನ್ನು ಪರಿಚಯಿಸಲಾಯಿತು. ಅದರಂತೆ ಐಪಿಎಲ್ನಲ್ಲಿ ತಾತ್ಕಾಲಿಕವಾಗಿ ಕಾಣಿಸಿಕೊಂಡಿದ್ದ ಗುಜರಾತ್ ಲಯನ್ಸ್ ಫ್ರಾಂಚೈಸಿಯನ್ನು CSK ಮತ್ತು RR ತಂಡಗಳ ಮರಳುವಿಕೆಯೊಂದಿಗೆ ಟೂರ್ನಿಯಿಂದ ಕೈ ಬಿಡಲಾಯಿತು.
5 / 6
ರೈಸಿಂಗ್ ಪುಣೆ ಸೂಪರ್ ಜೈಂಟ್ಸ್: ಸಿಎಸ್ಕೆ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು 2 ವರ್ಷಗಳ ಕಾಲ ಬ್ಯಾನ್ ಆಗಿದ್ದರಿಂದ ಆ ತಂಡಗಳ ಸ್ಥಾನದಲ್ಲಿ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ತಂಡವನ್ನು ಕಣಕ್ಕಿಳಿಸಲಾಗಿತ್ತು. ಪ್ರಸ್ತುತ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮಾಲೀಕ ಸಂಜೀವ್ ಗೊಯೆಂಕಾ ಅವರ ಒಡೆತನದಲ್ಲಿದ್ದ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ಫ್ರಾಂಚೈಸಿಯನ್ನು CSK ಮತ್ತು RR ತಂಡಗಳ ಮರಳುವಿಕೆಯೊಂದಿಗೆ ಕೈ ಬಿಡಲಾಯಿತು.