
ಟೀಂ ಇಂಡಿಯ ಬ್ಯಾಟರ್ ವಿರಾಟ್ ಕೊಹ್ಲಿ (Virat Kohli) ಅವರು ಇತ್ತೀಚೆಗೆ ಟೆಸ್ಟ್ ಕ್ರಿಕೆಟ್ಗೆ ನಿವೃತ್ತಿ ಘೋಷಣೆ ಮಾಡಿದರು. ಇದಾದ ಬೆನ್ನಲ್ಲೇ ಅವರು ಪತ್ನಿ ಅನುಷ್ಕಾ ಶರ್ಮಾ ಜೊತೆ ವೃಂದಾವನಕ್ಕೆ ತೆರಳಿ ಅಧ್ಯಾತ್ಮ ಗುರು ಪ್ರೇಮಾನಂದ ಮಹರಾಜ್ ಅವರಿಂದ ಆಶೀರ್ವಾದ ಪಡೆದರು. ಈ ಸಂದರ್ಭದ ವಿಡಿಯೋ ಹಾಗೂ ಫೋಟೋಗಳು ವೈರಲ್ ಆಗಿವೆ. ಹೀಗಿರುವಾಗಲೇ ಕೊಹ್ಲಿ ಅವರು ಕ್ರಿಕೆಟ್ ಬಳಿಕ ಅಧ್ಯಾತ್ಮದ ಕಡೆ ಸಂಪೂರ್ಣವಾಗಿ ಒಲಿಯುತ್ತಾರಾ ಎನ್ನುವುದು ಪ್ರಶ್ನೆ ಉದ್ಭಸಿವುಂತೆ ಮಾಡಿದೆ ಈ ವಿಡಿಯೋ.
ಅನುಷ್ಕಾ ಶರ್ಮಾ ಅವರು ಪ್ರೇಮಾನಂದ ಮಹಾರಾಜರ ಮಾತುಗಳನ್ನು ಕೇಳುವಾಗ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ. ವಿರಾಟ್ ಕೊಹ್ಲಿ ಕೂಡ ಶ್ರದ್ಧೆಯಿಂದ ಪ್ರೇಮಾನಂದ ಅವರ ಮಾತುಗಳನ್ನು ಕೇಳಿದ್ದಾರೆ. ಈ ವೇಳೆ ಅವರ ಕೈಯಲ್ಲಿ ಇಲೆಕ್ಟ್ರಾನಿಕ್ ಉಂಗುರ ಇತ್ತು. ಜಪ ಮಾಡುವಾಗ ಹೇಗೆ ಮಾಲೆಯನ್ನು ಹಿಡಿದುಕೊಳ್ಳಲಾಗುತ್ತದೆಯೋ ಅದರ ಬದಲು ಈ ಉಂಗುರ ಬಳಸಲಾಗುತ್ತದೆ. ಎಷ್ಟು ಬಾರಿ ಜಪ ಮಾಡಿದರು ಎಂಬುದನ್ನು ಎಣಿಸಲು ಇದು ಸಹಕಾರಿ ಆಗಲಿದೆ.
ಕೇವಲ ಆಶ್ರಮದಲ್ಲಿ ಮಾತ್ರವಲ್ಲ, ಇತ್ತೀಚೆಗೆ ಕೊಹ್ಲಿ ಹಾಗೂ ಅನುಷ್ಕಾ ಕಾರಿನಿಂದ ಹೊರ ಬರುವಾಗ ಇದೇ ಯಂತ್ರವನ್ನು ಹಿಡಿದಿದ್ದರು. ಕೊಹ್ಲಿ ಆಗಲೂ ಜಪ ಮಾಡುತ್ತಿದ್ದರೇ ಎನ್ನುವ ಪ್ರಶ್ನೆ ಮೂಡಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆದಿದೆ. ‘ಕೊಹ್ಲಿ ಅವರು ಆಧ್ಯಾತ್ಮದ ಕಡೆ ಒಲಿದರೇ’ ಎನ್ನುವ ಪ್ರಶ್ನೆಯನ್ನು ಅನೇಕರು ಕೇಳುತ್ತಿದ್ದಾರೆ.
Virat holding a Jaap counting machine in his hand is the cutest thing you’ll see 💕 pic.twitter.com/o1DuhON86K
— Virat Kohli Fan Club (@Trend_VKohli) May 15, 2025
ಸೋಮವಾರ (ಮೇ 12) ಕೊಹ್ಲಿ ಟೆಸ್ಟ್ ಕ್ರಿಕೆಟ್ಗೆ ನಿವೃತ್ತಿ ಘೋಷಣೆ ಮಾಡಿದರು. 123 ಟೆಸ್ಟ್ ಪಂದ್ಯಗಳನ್ನು ಕೊಹ್ಲಿ ಆಡಿದ್ದು, 9,230 ರನ್ಗಳನ್ನು ಅವರು ಪೇರಿಸಿದ್ದಾರೆ. 46.85 ಎವರೇಜ್ ಇದ್ದು, 30 ಶತಕಗಳನ್ನು ಒಳಗೊಂಡಿದೆ. ಕ್ಯಾಪ್ಟನ್ ಆಗಿ 68 ಟೆಸ್ಟ್ಗಳನ್ನು ಆಡಿದ್ದು, ಇದರಲ್ಲಿ 40 ವಿನ್ ಆಗಿವೆ. ಕ್ಯಾಪ್ಟನ್ ಆಗಿ ಯಾರೊಬ್ಬರೂ ಈ ಸಾಧನೆ ಮಾಡಿಲ್ಲ ಅನ್ನೋದು ವಿಶೇಷ. ಅವರು ಇನ್ನೂ 2-3 ವರ್ಷ ಟೆಸ್ಟ್ ಆಡಬಹುದಿತ್ತು ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ:ಆರ್ಸಿಬಿಗೆ ಎಂಟ್ರಿಕೊಟ್ಟ ವಿರಾಟ್ ಕೊಹ್ಲಿ; ವಿಡಿಯೋ
ಇತ್ತೀಚೆಗೆ ಕೊಹ್ಲಿ ಬಗ್ಗೆ ಮಾತನಾಡಿದ್ದ ರವಿ ಶಾಸ್ತ್ರಿ, ‘ನಿವೃತ್ತಿ ಘೋಷಿಸುವುದಕ್ಕೂ ಒಂದು ವಾರ ಮೊದಲ ನಾನು ಕೊಹ್ಲಿ ಬಳಿ ಮಾತನಾಡಿದ್ದೆ. ಅವರು ಸ್ಪಷ್ಟವಾಗಿದ್ದರು. ಎಲ್ಲವನ್ನೂ ನೀಡಿದ ತೃಪ್ತಿ ಅವರಿಗೆ ಇದೆ. ಅವರಲ್ಲಿ ಯಾವುದೇ ವಿಷಾದ ಇಲ್ಲ’ ಎಂದಿದ್ದಾರೆ. ಕೊಹ್ಲಿ ಸದ್ಯ ಆರ್ಸಿಬಿ ಬಳಗ ಸೇರಿಕೊಂಡಿದ್ದು, ಬೆಂಗಳೂರಿನಲ್ಲಿ ಪ್ರ್ಯಾಕ್ಟಿಸ್ ಮಾಡುತ್ತಿದ್ದಾರೆ.
ಇನ್ನಷ್ಟು ಕ್ರಿಕೆಟ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 10:01 am, Fri, 16 May 25