AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿರಾಟ್ ಕೊಹ್ಲಿ 10ನೇ ತರಗತಿ ಮಾರ್ಕ್ಸ್​ಕಾರ್ಡ್ ವೈರಲ್; ಪಡೆದ ಅಂಕ ಎಷ್ಟು?

ವಿರಾಟ್ ಕೊಹ್ಲಿ ಅವರ 10ನೇ ತರಗತಿಯ ಅಂಕಪಟ್ಟಿ ಇತ್ತೀಚೆಗೆ ವೈರಲ್ ಆಗಿದೆ. ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ ಬಳಿಕ ಈ ವಿಷಯ ಗಮನ ಸೆಳೆದಿದೆ. ಇಂಗ್ಲೀಷ್‌ನಲ್ಲಿ 83, ಹಿಂದಿಯಲ್ಲಿ 75 ಮತ್ತು ಸಾಮಾಜಿಕ ವಿಜ್ಞಾನದಲ್ಲಿ 81 ಅಂಕ ಪಡೆದಿದ್ದಾರೆ. ಗಣಿತ ಮತ್ತು ವಿಜ್ಞಾನದಲ್ಲಿ ಸಾಧಾರಣ ಅಂಕ ಗಳಿಸಿದ್ದರು.

ವಿರಾಟ್ ಕೊಹ್ಲಿ 10ನೇ ತರಗತಿ ಮಾರ್ಕ್ಸ್​ಕಾರ್ಡ್ ವೈರಲ್; ಪಡೆದ ಅಂಕ ಎಷ್ಟು?
ವಿರಾಟ್
ರಾಜೇಶ್ ದುಗ್ಗುಮನೆ
|

Updated on:May 16, 2025 | 2:30 PM

Share

ಕ್ರಿಕೆಟರ್ ವಿರಾಟ್ ಕೊಹ್ಲಿ (Virat Kohli) ಅವರು ಇತ್ತೀಚೆಗೆ ಟೆಸ್ಟ್ ಕ್ರಿಕೆಟ್​ಗೆ ಭಾವುಕ ವಿದಾಯ ಹೇಳಿದ್ದಾರೆ. ಅವರು ಇನ್ನು ಟೆಸ್ಟ್ ಆಡೋದಿಲ್ಲ ಎನ್ನುವ ವಿಚಾರ ಕೇಳಿಯೇ ಅಭಿಮಾನಿಗಳು ಬೇಸರ ಮಾಡಿಕೊಳ್ಳುತ್ತಿದ್ದಾರೆ. ಈ ಮಧ್ಯೆ ಅವರ ಕುರಿತ ಕುತೂಹಲಕಾರಿ ವಿಷಯಗಳು ಹೊರಕ್ಕೆ ಬೀಳುತ್ತಿವೆ. ವಿರಾಟ್ ಅವರು 10ನೇ ವರ್ಗದಲ್ಲಿ ಎಷ್ಟು ಮಾರ್ಕ್ಸ್ ತೆಗೆದಿದ್ದರು ಎಂಬುದಕ್ಕೆ ಸಂಬಂಧಿಸಿದಂತೆ ಫೋಟೋ ಒಂದು ವೈರಲ್ ಆಗಿದೆ. ಇದು ಎಲ್ಲರ ಗಮನ ಸೆಳೆದಿದೆ.

ವಿರಾಟ್ ಕೊಹ್ಲಿಗೆ ಚಿಕ್ಕ ವಯಸ್ಸಿನಿಂದಲೇ ಕ್ರಿಕೆಟ್ ಬಗ್ಗೆ ಆಸಕ್ತಿ. ಹೀಗಾಗಿ, ಅವರು ಆಟದ ಕಡೆ ಹೆಚ್ಚು ಗಮನ ಹರಿಸುತ್ತಿದ್ದರು. ಈ ಕಾರಣದಿಂದಲೇ ಅವರಿಗೆ 10ನೇ ತರಗತಿಯಲ್ಲಿ (ಸಿಬಿಎಸ್​ಇ) ಹೆಚ್ಚು ಅಂಕ ಪಡೆಯಲು ಸಾಧ್ಯವಾಗಿರಲಿಲ್ಲ. ಅವರು ಕ್ರಿಕೆಟ್​ ಜಗತ್ತಿನಲ್ಲಿ ಅಭಿಷಕ್ತ ದೊರೆಯಾಗಿದ್ದಾರೆ. ಆದರೆ, ಓದಿನಲ್ಲಿ ಅವರು ಹೆಚ್ಚು ಗಮನ ಸೆಳೆದಿರಲೇ ಇಲ್ಲ. ಅವರು ಸಾಮಾನ್ಯ ವಿದ್ಯಾರ್ಥಿ ಆಗಿದ್ದರು.

ಇದನ್ನೂ ಓದಿ
Image
ಮತ್ತೆ ಮೂವರು ವಿದೇಶಿ ಆಟಗಾರರು ಐಪಿಎಲ್​ಗೆ ಅಲಭ್ಯ
Image
ಶತ್ರು ದೇಶದ ಆಟಗಾರನನ್ನು ತಂಡಕ್ಕೆ ಸೇರಿಸಿಕೊಂಡ ಡೆಲ್ಲಿ
Image
ದ್ವಿತೀಯಾರ್ಧ ಮುಗಿಸಲು ನಿಯಮ ಬದಲಿಸಿದ ಬಿಸಿಸಿಐ
Image
ಇಂಗ್ಲೆಂಡ್ ಪ್ರವಾಸಕ್ಕೆ 2 ವಿಭಿನ್ನ ತಂಡಗಳ ಆಯ್ಕೆ

ವಿರಾಟ್ ಕೊಹ್ಲಿ ಅವರು ಇಂಗ್ಲಿಷ್, ಹಿಂದಿ ಹಾಗೂ ಸಾಮಾಜಿಕ ವಿಜ್ಞಾನದಲ್ಲಿ ಒಳ್ಳೆಯ ಅಕ ಪಡೆದಿದ್ದರು. ಇಂಗ್ಲಿಷ್​ನಲ್ಲಿ ವಿರಾಟ್​ಗೆ 83 ಅಂಕ ಸಿಕ್ಕಿದ್ದವು. ಇದು ಒಂದು ವಿಷಯದಲ್ಲಿ ಪಡೆದ ಗರಿಷ್ಠ ಅಂಕ. ಹಿಂದಿಯಲ್ಲಿ 75, ಸಾಮಾಜಿಕ ವಿಜ್ಞಾನದಲ್ಲಿ 81 ಅಂಕವನ್ನು ಅವರು ಪಡೆದಿದ್ದಾರೆ. ಗಣಿತ ಹಾಗೂ ವಿಜ್ಞಾನದಲ್ಲಿ ಕೊಹ್ಲಿ ಅಷ್ಟು ಬ್ರಿಲಿಯಂಟ್ ಇರಲಿಲ್ಲ.

ಗಣಿತದಲ್ಲಿ ಕೊಹ್ಲಿ 51 ಅಂಕ ಪಡೆದುಕೊಂಡಿದ್ದರು. ವಿಜ್ಞಾನದಲ್ಲಿ 55 ಅಂಕ ಪಡೆದುಕೊಂಡಿದ್ದರು. ಇಂಟ್ರೊಡಕ್ಷನರಿ ಐಟಿ ವಿಷಯದಲ್ಲಿ ಇವರಿಗೆ 74 ಅಂಕ ಸಿಕ್ಕಿತ್ತು. ಎಲ್ಲಾ ವಿಷಯಗಳಲ್ಲೂ ಕೊಹ್ಲಿ ಪಾಸ್ ಆಗಿದ್ದರು ಅನ್ನೋದು ವಿಶೇಷ. ಈ ಮೂಲಕ ಕೊಹ್ಲಿಯ ಪರ್ಸಂಟೇಜ್ ಕೇವಲ 70ರ ಆಸುಪಾಸಿನಲ್ಲಿ ಇತ್ತು.

ಅನೇಕರು ಕೊಹ್ಲಿ ಮಾರ್ಕ್ಸ್​ಕಾರ್ಡ್​ನ ಹಂಚಿಕೊಂಡಿದ್ದಾರೆ. ‘ಅಂಕ ಕೇವಲ ಹಾಳೆಯಲ್ಲಿನ ಸಂಖ್ಯೆ. ನಿಜವಾದ ಮೌಲ್ಯ ಪರಿಶ್ರಮ ಮತ್ತು ಸಮರ್ಪಣೆಯಲ್ಲಿದೆ. ಸಂಪೂರ್ಣವಾಗಿ ಒಪ್ಪುತ್ತೇನೆ’ ಎಂದು ಕೆಲವರು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಕ್ರಿಕೆಟ್ ಬಳಿಕ ವಿರಾಟ್ ಕೊಹ್ಲಿ ಫುಲ್ ಟೈಮ್ ಅಧ್ಯಾತ್ಮ? ಸಿಕ್ಕಿತು ಹೊಸ ಸಾಕ್ಷಿ

ವಿರಾಟ್ ಕೊಹ್ಲಿ ಅವರು 14 ವರ್ಷಗಳ ಕಾಲ ಟೆಸ್ಟ್ ಆಡಿದ್ದಾರೆ. ಸದ್ಯ ಅವರು ಐಪಿಎಲ್​ ಸಿದ್ಧತೆಯಲ್ಲಿ ಇದ್ದಾರೆ. ಮೇ 17ರಂದು ಆರ್​ಸಿಬಿ vs ಕೋಲ್ಕತ್ತ ಪಂದ್ಯ ಬೆಂಗಳೂರಿನಲ್ಲಿ ನಡೆಯುತ್ತಿದೆ.

ಇನ್ನಷ್ಟು ಕ್ರಿಕೆಟ್  ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 12:53 pm, Fri, 16 May 25