AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Virat Kohli: ಕ್ರಿಕೆಟ್ ಬಳಿಕ ವಿರಾಟ್ ಕೊಹ್ಲಿ ಫುಲ್ ಟೈಮ್ ಅಧ್ಯಾತ್ಮ? ಸಿಕ್ಕಿತು ಹೊಸ ಸಾಕ್ಷಿ

ವಿರಾಟ್ ಕೊಹ್ಲಿ ಅವರು ಟೆಸ್ಟ್ ಕ್ರಿಕೆಟ್ ನಿಂದ ನಿವೃತ್ತಿಯಾದ ಬಳಿಕ ಪತ್ನಿ ಅನುಷ್ಕಾ ಶರ್ಮಾ ಜೊತೆ ವೃಂದಾವನಕ್ಕೆ ತೆರಳಿ ಆಧ್ಯಾತ್ಮಿಕ ಗುರುಗಳ ಆಶೀರ್ವಾದ ಪಡೆದಿದ್ದಾರೆ. ಈ ಭೇಟಿಯ ವಿಡಿಯೋ ಮತ್ತು ಫೋಟೋಗಳು ವೈರಲ್ ಆಗಿವೆ. ಕೊಹ್ಲಿ ಜಪಮಾಡುವಾಗ ಬಳಸುವ ಇಲೆಕ್ಟ್ರಾನಿಕ್ ಉಂಗುರವೂ ಗಮನ ಸೆಳೆದಿದೆ. ಕ್ರಿಕೆಟ್ ನಂತರ ಅವರು ಆಧ್ಯಾತ್ಮದ ಕಡೆ ಒಲಿಯುತ್ತಾರೆಯೇ ಎಂಬ ಚರ್ಚೆಗಳು ನಡೆಯುತ್ತಿವೆ.

Virat Kohli: ಕ್ರಿಕೆಟ್ ಬಳಿಕ ವಿರಾಟ್ ಕೊಹ್ಲಿ ಫುಲ್ ಟೈಮ್ ಅಧ್ಯಾತ್ಮ? ಸಿಕ್ಕಿತು ಹೊಸ ಸಾಕ್ಷಿ
ವಿರಾಟ್
ರಾಜೇಶ್ ದುಗ್ಗುಮನೆ
|

Updated on:May 16, 2025 | 10:04 AM

Share

ಟೀಂ ಇಂಡಿಯ ಬ್ಯಾಟರ್ ವಿರಾಟ್ ಕೊಹ್ಲಿ (Virat Kohli) ಅವರು ಇತ್ತೀಚೆಗೆ ಟೆಸ್ಟ್​ ಕ್ರಿಕೆಟ್​ಗೆ ನಿವೃತ್ತಿ ಘೋಷಣೆ ಮಾಡಿದರು. ಇದಾದ ಬೆನ್ನಲ್ಲೇ ಅವರು ಪತ್ನಿ ಅನುಷ್ಕಾ ಶರ್ಮಾ ಜೊತೆ ವೃಂದಾವನಕ್ಕೆ ತೆರಳಿ ಅಧ್ಯಾತ್ಮ ಗುರು ಪ್ರೇಮಾನಂದ ಮಹರಾಜ್ ಅವರಿಂದ ಆಶೀರ್ವಾದ ಪಡೆದರು. ಈ ಸಂದರ್ಭದ ವಿಡಿಯೋ ಹಾಗೂ ಫೋಟೋಗಳು ವೈರಲ್ ಆಗಿವೆ. ಹೀಗಿರುವಾಗಲೇ ಕೊಹ್ಲಿ ಅವರು ಕ್ರಿಕೆಟ್ ಬಳಿಕ ಅಧ್ಯಾತ್ಮದ ಕಡೆ ಸಂಪೂರ್ಣವಾಗಿ ಒಲಿಯುತ್ತಾರಾ ಎನ್ನುವುದು ಪ್ರಶ್ನೆ ಉದ್ಭಸಿವುಂತೆ ಮಾಡಿದೆ ಈ ವಿಡಿಯೋ.

ಅನುಷ್ಕಾ ಶರ್ಮಾ ಅವರು ಪ್ರೇಮಾನಂದ ಮಹಾರಾಜರ ಮಾತುಗಳನ್ನು ಕೇಳುವಾಗ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ. ವಿರಾಟ್ ಕೊಹ್ಲಿ ಕೂಡ ಶ್ರದ್ಧೆಯಿಂದ ಪ್ರೇಮಾನಂದ ಅವರ ಮಾತುಗಳನ್ನು ಕೇಳಿದ್ದಾರೆ. ಈ ವೇಳೆ ಅವರ ಕೈಯಲ್ಲಿ ಇಲೆಕ್ಟ್ರಾನಿಕ್ ಉಂಗುರ ಇತ್ತು. ಜಪ ಮಾಡುವಾಗ ಹೇಗೆ ಮಾಲೆಯನ್ನು ಹಿಡಿದುಕೊಳ್ಳಲಾಗುತ್ತದೆಯೋ ಅದರ ಬದಲು ಈ ಉಂಗುರ ಬಳಸಲಾಗುತ್ತದೆ. ಎಷ್ಟು ಬಾರಿ ಜಪ ಮಾಡಿದರು ಎಂಬುದನ್ನು ಎಣಿಸಲು ಇದು ಸಹಕಾರಿ ಆಗಲಿದೆ.

ಇದನ್ನೂ ಓದಿ
Image
ಮತ್ತೆ ಮೂವರು ವಿದೇಶಿ ಆಟಗಾರರು ಐಪಿಎಲ್​ಗೆ ಅಲಭ್ಯ
Image
ಶತ್ರು ದೇಶದ ಆಟಗಾರನನ್ನು ತಂಡಕ್ಕೆ ಸೇರಿಸಿಕೊಂಡ ಡೆಲ್ಲಿ
Image
ದ್ವಿತೀಯಾರ್ಧ ಮುಗಿಸಲು ನಿಯಮ ಬದಲಿಸಿದ ಬಿಸಿಸಿಐ
Image
ಇಂಗ್ಲೆಂಡ್ ಪ್ರವಾಸಕ್ಕೆ 2 ವಿಭಿನ್ನ ತಂಡಗಳ ಆಯ್ಕೆ

ಕೇವಲ ಆಶ್ರಮದಲ್ಲಿ ಮಾತ್ರವಲ್ಲ, ಇತ್ತೀಚೆಗೆ ಕೊಹ್ಲಿ ಹಾಗೂ ಅನುಷ್ಕಾ ಕಾರಿನಿಂದ ಹೊರ ಬರುವಾಗ ಇದೇ ಯಂತ್ರವನ್ನು ಹಿಡಿದಿದ್ದರು. ಕೊಹ್ಲಿ ಆಗಲೂ ಜಪ ಮಾಡುತ್ತಿದ್ದರೇ ಎನ್ನುವ ಪ್ರಶ್ನೆ ಮೂಡಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆದಿದೆ. ‘ಕೊಹ್ಲಿ ಅವರು ಆಧ್ಯಾತ್ಮದ ಕಡೆ ಒಲಿದರೇ’ ಎನ್ನುವ ಪ್ರಶ್ನೆಯನ್ನು ಅನೇಕರು ಕೇಳುತ್ತಿದ್ದಾರೆ.

ಸೋಮವಾರ (ಮೇ 12) ಕೊಹ್ಲಿ ಟೆಸ್ಟ್ ಕ್ರಿಕೆಟ್​ಗೆ ನಿವೃತ್ತಿ ಘೋಷಣೆ ಮಾಡಿದರು. 123 ಟೆಸ್ಟ್ ಪಂದ್ಯಗಳನ್ನು ಕೊಹ್ಲಿ ಆಡಿದ್ದು, 9,230 ರನ್​ಗಳನ್ನು ಅವರು ಪೇರಿಸಿದ್ದಾರೆ. 46.85 ಎವರೇಜ್ ಇದ್ದು, 30 ಶತಕಗಳನ್ನು ಒಳಗೊಂಡಿದೆ.  ಕ್ಯಾಪ್ಟನ್ ಆಗಿ 68 ಟೆಸ್ಟ್​ಗಳನ್ನು ಆಡಿದ್ದು, ಇದರಲ್ಲಿ 40 ವಿನ್ ಆಗಿವೆ. ಕ್ಯಾಪ್ಟನ್ ಆಗಿ ಯಾರೊಬ್ಬರೂ ಈ ಸಾಧನೆ ಮಾಡಿಲ್ಲ ಅನ್ನೋದು ವಿಶೇಷ. ಅವರು ಇನ್ನೂ 2-3 ವರ್ಷ ಟೆಸ್ಟ್ ಆಡಬಹುದಿತ್ತು ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ:ಆರ್​​ಸಿಬಿಗೆ ಎಂಟ್ರಿಕೊಟ್ಟ ವಿರಾಟ್ ಕೊಹ್ಲಿ; ವಿಡಿಯೋ

ಇತ್ತೀಚೆಗೆ ಕೊಹ್ಲಿ ಬಗ್ಗೆ ಮಾತನಾಡಿದ್ದ ರವಿ ಶಾಸ್ತ್ರಿ, ‘ನಿವೃತ್ತಿ ಘೋಷಿಸುವುದಕ್ಕೂ ಒಂದು ವಾರ ಮೊದಲ ನಾನು ಕೊಹ್ಲಿ ಬಳಿ ಮಾತನಾಡಿದ್ದೆ. ಅವರು ಸ್ಪಷ್ಟವಾಗಿದ್ದರು. ಎಲ್ಲವನ್ನೂ ನೀಡಿದ ತೃಪ್ತಿ ಅವರಿಗೆ ಇದೆ. ಅವರಲ್ಲಿ ಯಾವುದೇ ವಿಷಾದ ಇಲ್ಲ’ ಎಂದಿದ್ದಾರೆ.  ಕೊಹ್ಲಿ ಸದ್ಯ ಆರ್​ಸಿಬಿ ಬಳಗ ಸೇರಿಕೊಂಡಿದ್ದು, ಬೆಂಗಳೂರಿನಲ್ಲಿ ಪ್ರ್ಯಾಕ್ಟಿಸ್ ಮಾಡುತ್ತಿದ್ದಾರೆ.

ಇನ್ನಷ್ಟು ಕ್ರಿಕೆಟ್  ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 10:01 am, Fri, 16 May 25

ಪೊಲೀಸಪ್ಪನ ಜತೆ ಓಡಿಹೋಗಿದ್ದ ಮೋನಿಕಾಳ ಅಸಲಿಯತ್ತು ಬಯಲು
ಪೊಲೀಸಪ್ಪನ ಜತೆ ಓಡಿಹೋಗಿದ್ದ ಮೋನಿಕಾಳ ಅಸಲಿಯತ್ತು ಬಯಲು
ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?