AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL ನಲ್ಲಿ ಇಲ್ಲ ಚಾನ್ಸ್​: ವಿದೇಶಿ ತಂಡದತ್ತ ಮುಖ ಮಾಡಿದ RCB ಮಾಜಿ ಆಟಗಾರ

ಟೀಮ್ ಇಂಡಿಯಾ ಪರ ವಿಕೆಟ್ ಕೀಪರ್ ಬ್ಯಾಟರ್ ಆಗಿ ಕಾಣಿಸಿಕೊಂಡಿದ್ದ ಕೆಎಸ್ ಭರತ್ ಅವರನ್ನು ಈ ಬಾರಿ ಐಪಿಎಲ್​ನ ಯಾವುದೇ ಫ್ರಾಂಚೈಸಿ ಖರೀದಿಸಿಲ್ಲ. ಈ ಹಿಂದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ 7 ಪಂದ್ಯಗಳನ್ನಾಡಿದ್ದ ಭರತ್ ಒಂದು ಅರ್ಧಶತಕದೊಂದಿಗೆ ಒಟ್ಟು 191 ರನ್ ಕಲೆಹಾಕಿದ್ದರು. ಆದರೆ ಈ ಬಾರಿ ಅವರ ಖರೀದಿಗೆ ಯಾವುದೇ ಫ್ರಾಂಚೈಸಿ ಆಸಕ್ತಿ ತೋರಲಿಲ್ಲ.

IPL ನಲ್ಲಿ ಇಲ್ಲ ಚಾನ್ಸ್​: ವಿದೇಶಿ ತಂಡದತ್ತ ಮುಖ ಮಾಡಿದ RCB ಮಾಜಿ ಆಟಗಾರ
Ks Bharat
ಝಾಹಿರ್ ಯೂಸುಫ್
|

Updated on: Mar 15, 2025 | 9:04 AM

Share

2021 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ವಿಕೆಟ್ ಕೀಪರ್ ಬ್ಯಾಟರ್ ಆಗಿ ಕಾಣಿಸಿಕೊಂಡಿದ್ದ ಶ್ರೀಕರ್ ಭರತ್ ಅವರು ಈ ಬಾರಿಯ ಐಪಿಎಲ್ ಮೆಗಾ ಹರಾಜಿನಲ್ಲಿ ಬಿಕರಿಯಾಗದೇ ಉಳಿದಿದ್ದಾರೆ. ಯಾವುದೇ ತಂಡ ಖರೀದಿಸದಿರುವ ಕಾರಣ ಇದೀಗ ಕೆಎಸ್​ ಭರತ್ ವಿದೇಶಿ ಕ್ರಿಕೆಟ್ ಕ್ಲಬ್​ ಪರ ಕಣಕ್ಕಿಳಿಯಲು ಮುಂದಾಗಿದ್ದಾರೆ.

ಇಂಗ್ಲೆಂಡ್‌ನ ಪ್ರತಿಷ್ಠಿತ ಸರ್ರೆ ಚಾಂಪಿಯನ್‌ಶಿಪ್‌ನಲ್ಲಿ ಡಲ್ವಿಚ್ ಕ್ರಿಕೆಟ್ ಕ್ಲಬ್ ಪರ ಆಡಲು ಕೆಎಸ್ ಭರತ್ ಒಪ್ಪಂದ ಮಾಡಿಕೊಂಡಿದ್ದು, ಅದರಂತೆ ಏಪ್ರಿಲ್​ನಲ್ಲಿ ನಡೆಯಲಿರುವ ಈ ಟೂರ್ನಿಗಾಗಿ ಅವರು ತೆರಳಲಿದ್ದಾರೆ.

ಸರ್ರೆ ಚಾಂಪಿಯನ್‌ಶಿಪ್‌ ಎಂಬುದು ಸ್ಪರ್ಧಾತ್ಮಕ ಕ್ರಿಕೆಟ್. ಇಲ್ಲಿನ ಕ್ರಿಕೆಟ್ ಮೈದಾನಗಳ ಪರಿಸ್ಥಿತಿಗಳು ಭಾರತೀಯ ಪಿಚ್‌ಗಳಿಗಿಂತ ಸಂಪೂರ್ಣವಾಗಿ ಭಿನ್ನವಾಗಿವೆ. ಅಂತಹ ಪರಿಸ್ಥಿತಿಯಲ್ಲಿ, ಭರತ್ ತನ್ನ ತಂತ್ರವನ್ನು ಬದಲಾಯಿಸಲು ಮತ್ತು ಹೊಸ ಅನುಭವಗಳನ್ನು ಪಡೆಯಲು ಅವಕಾಶವನ್ನು ಪಡೆಯಲಿದ್ದಾರೆ. ಈ ಮೂಲಕ ಮತ್ತೊಮ್ಮೆ ಟೀಮ್ ಇಂಡಿಯಾದ ಕದ ತಟ್ಟುವ ಇರಾದೆಯಲ್ಲಿದ್ದಾರೆ.

ಇದನ್ನೂ ಓದಿ
Image
IPL 2025: RCB ನೂತನ ಜೆರ್ಸಿ ಫೋಟೋ ಇಲ್ಲಿದೆ
Image
15 ಭರ್ಜರಿ ಸಿಕ್ಸ್​: ವಿಶ್ವ ದಾಖಲೆಯ ಸೆಂಚುರಿ ಸಿಡಿಸಿದ ಎಬಿ ಡಿವಿಲಿಯರ್ಸ್
Image
ಈ ಸಲನೂ RCB ಕಪ್ ಗೆಲ್ಲದಿರಲಿ, ಅದಕ್ಕಾಗಿ ನಾನು ಪ್ರಾರ್ಥಿಸುವೆ..!
Image
ಗಂಭೀರ್ ಅವರ ಒಂದು ದೃಢ ನಿರ್ಧಾರ ಚಾಂಪಿಯನ್ಸ್ ಟ್ರೋಫಿಯ ಚಿತ್ರಣ ಬದಲಿಸಿತು

ಏಕೆಂದರೆ ಐಪಿಎಲ್ ಬಳಿಕ ಭಾರತ ತಂಡವು ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ ಆಡಲಿದೆ. ಅದಕ್ಕೂ ಮುನ್ನ ಸರ್ರೆ ಚಾಂಪಿಯನ್​ಶಿಪ್​ನಲ್ಲಿ ಮಿಂಚುವ ಮೂಲಕ ಆಯ್ಕೆಗಾರರ ಗಮನ ಸೆಳೆಯುವ ಇರಾದೆಯಲ್ಲಿದ್ದಾರೆ.

ಈ ಮೂಲಕ ಮತ್ತೆ ಭಾರತ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯುವ ವಿಶ್ವಾಸದಲ್ಲಿದ್ದಾರೆ. ಇದಕ್ಕೂ ಮುನ್ನ ಅವರು ಟೀಮ್ ಇಂಡಿಯಾ ಪರ 7 ಟೆಸ್ಟ್ ಪಂದ್ಯಗಳನ್ನಾಡಿದ್ದರು. ಈ ವೇಳೆ 12 ಇನಿಂಗ್ಸ್ ಆಡಿದ್ದ ಭರತ್ ಕಲೆಹಾಕಿದ್ದು ಕೇವಲ 221 ರನ್​ಗಳು ಮಾತ್ರ. ಹೀಗಾಗಿ ಅವರನ್ನು ಕೈ ಬಿಟ್ಟು ಯುವ ವಿಕೆಟ್ ಕೀಪರ್ ಬ್ಯಾಟರ್ ಧ್ರುವ್ ಜುರೇಲ್​ಗೆ ತಂಡದಲ್ಲಿ ಸ್ಥಾನ ನೀಡಲಾಗಿತ್ತು.

ಇದನ್ನೂ ಓದಿ: IPL 2025: RCB ಸ್ಟೆಡಿನಾ? ಕಂಬ್ಯಾಕ್​ಗೆ ಜಸ್​ಪ್ರೀತ್ ಬುಮ್ರಾ ರೆಡಿ

ಇದೀಗ ಕೆಎಸ್ ಭರತ್ ಭಾರತ ತಂಡದಿಂದ ಹೊರಬಿದ್ದು 1 ವರ್ಷ ಕಳೆದಿದೆ. ಇತ್ತ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲೂ ಅವಕಾಶ ವಂಚಿತರಾಗಿದ್ದಾರೆ. ಹೀಗಾಗಿ ವಿದೇಶಿ ಕ್ಲಬ್ ಪರ ಕಣಕ್ಕಿಳಿಯುವ ಮೂಲಕ ಕಂಬ್ಯಾಕ್ ಮಾಡುವ ಇರಾದೆಯಲ್ಲಿದ್ದಾರೆ ಕೆಎಸ್​ ಭರತ್.

ಕೆಎಸ್​ ಭರತ್ ಐಪಿಎಲ್​ ಪ್ರದರ್ಶನ:

ಕೆಎಸ್ ಭರತ್ ಆರ್​ಸಿಬಿ ಪರ 8 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ ಒಂದು ಅರ್ಧಶತಕ ಸೇರಿದಂತೆ ಒಟ್ಟು 191 ರನ್ ಕಲೆಹಾಕಿದ್ದಾರೆ. ಇನ್ನು 2022 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ 2 ಪಂದ್ಯಗಳನ್ನಾಡಿದ್ದ ಭರತ್ ಕೇವಲ 8 ರನ್​ ಮಾತ್ರ ಗಳಿಸಿದ್ದರು. ಇದಾಗ್ಯೂ 2023 ರಲ್ಲಿ ಗುಜರಾತ್ ಟೈಟಾನ್ಸ್ ತಂಡವು ಅವರನ್ನು ಖರೀದಿಸಿತ್ತು. ಆದರೆ ಜಿಟಿ ಪರ ಕಣಕ್ಕಿಳಿಯಲು ಅವಕಾಶ ಸಿಕ್ಕಿರಲಿಲ್ಲ. ಇನ್ನು ಈ ಬಾರಿಯ ಐಪಿಎಲ್​ನ ಮೆಗಾ ಹರಾಜಿನಲ್ಲಿ ಬಿಕರಿಯಾಗದೇ ಉಳಿದಿದ್ದಾರೆ.

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ