9 ಸಿಕ್ಸ್, 19 ಫೋರ್​: ಕುಸಾಲ್ ಸಿಡಿಲಬ್ಬರಕ್ಕೆ ಬೌಲರ್​ಗಳು ತತ್ತರ

13ನೇ ಓವರ್​ ವೇಳೆ ಕ್ರೀಸ್​ಗೆ ಆಗಮಿಸಿದ ಕುಸಾಲ್ ಮೆಂಡಿಸ್ ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದರು. ಮೈದಾನದ ಮೂಲೆ ಮೂಲೆಗೂ ಚೆಂಡನ್ನು ತಲುಪಿಸಿದ ಲಂಕಾ ಬ್ಯಾಟರ್ ಅಫ್ಘಾನ್ ಬೌಲರ್​ಗಳ ಬೆಂಡೆತ್ತಿದರು. ಪರಿಣಾಮ ಕುಸಾಲ್ ಮೆಂಡಿಸ್ ಬ್ಯಾಟ್​ನಿಂದ ಕೇವಲ 59 ಎಸೆತಗಳಲ್ಲಿ ಶತಕ ಮೂಡಿಬಂತು.

9 ಸಿಕ್ಸ್, 19 ಫೋರ್​: ಕುಸಾಲ್ ಸಿಡಿಲಬ್ಬರಕ್ಕೆ ಬೌಲರ್​ಗಳು ತತ್ತರ
Kusal Mendis
Follow us
TV9 Web
| Updated By: ಝಾಹಿರ್ ಯೂಸುಫ್

Updated on: Oct 03, 2023 | 6:51 PM

ಗುವಾಹಟಿಯ ಬರ್ಸಾಪರಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಅಫ್ಘಾನಿಸ್ತಾನ್ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಶ್ರೀಲಂಕಾದ ಕುಸಾಲ್ ಮೆಂಡಿಸ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಅಫ್ಘಾನಿಸ್ತಾನ್ ಲಂಕಾ ತಂಡವನ್ನು ಬ್ಯಾಟಿಂಗ್​ಗೆ ಆಹ್ವಾನಿಸಿತು.

ಅದರಂತೆ ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕರಾದ ಪಾತುಮ್ ನಿಸ್ಸಂಕಾ (30) ಹಾಗೂ ದಿಮುತ್ ಕರುಣರತ್ನೆ (8) ಬೇಗನೆ ವಿಕೆಟ್ ಒಪ್ಪಿಸಿದ್ದರು. ಆದರೆ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಕುಸಾಲ್ ಮೆಂಡಿಸ್ ಅದ್ಭುತ ಇನಿಂಗ್ಸ್ ಕಟ್ಟಿದರು.

ಮೆಂಡಿಸ್ ಮಿಂಚಿಂಗ್:

13ನೇ ಓವರ್​ ವೇಳೆ ಕ್ರೀಸ್​ಗೆ ಆಗಮಿಸಿದ ಕುಸಾಲ್ ಮೆಂಡಿಸ್ ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದರು. ಮೈದಾನದ ಮೂಲೆ ಮೂಲೆಗೂ ಚೆಂಡನ್ನು ತಲುಪಿಸಿದ ಲಂಕಾ ಬ್ಯಾಟರ್ ಅಫ್ಘಾನ್ ಬೌಲರ್​ಗಳ ಬೆಂಡೆತ್ತಿದರು. ಪರಿಣಾಮ ಕುಸಾಲ್ ಮೆಂಡಿಸ್ ಬ್ಯಾಟ್​ನಿಂದ ಕೇವಲ 59 ಎಸೆತಗಳಲ್ಲಿ ಶತಕ ಮೂಡಿಬಂತು.

ಶತಕದ ಬಳಿಕ ಆಕ್ರಮಣಕಾರಿ ಬ್ಯಾಟಿಂಗ್ ಮುಂದುವರೆಸಿದ ಕುಸಾಲ್ ಮೆಂಡಿಸ್ 87 ಎಸೆತಗಳಲ್ಲಿ 19 ಫೋರ್​ ಹಾಗೂ 9 ಸಿಕ್ಸ್​ಗಳೊಂದಿಗೆ 158 ರನ್ ಬಾರಿಸಿದರು. ಆ ಬಳಿಕ ರಿಟೈರ್ಡ್​ ಆಗಿ ನಿರ್ಗಮಿಸಿದರು.

ಕುಸಾಲ್ ಮೆಂಡಿಸ್ ನಿರ್ಗಮನದ ಬಳಿಕ ಪಂದ್ಯದ ಮೇಲೆ ಹಿಡಿತ ಸಾಧಿಸಿದ ಅಫ್ಘಾನ್ ಬೌಲರ್​ಗಳು ಶ್ರೀಲಂಕಾ ತಂಡವನ್ನು 46.2 ಓವರ್​ಗಳಲ್ಲಿ 294 ರನ್​ಗಳಿಗೆ ಆಲೌಟ್ ಮಾಡುವಲ್ಲಿ ಯಶಸ್ವಿಯಾದರು.

ಅಫ್ಘಾನಿಸ್ತಾನ ತಂಡ: ಹಶ್ಮತುಲ್ಲಾ ಶಾಹಿದಿ (ನಾಯಕ), ರಹಮಾನುಲ್ಲಾ ಗುರ್ಬಾಝ್, ಇಬ್ರಾಹಿಂ ಝದ್ರಾನ್, ರಿಯಾಜ್ ಹಸನ್, ರಹಮತ್ ಷಾ, ನಜೀಬುಲ್ಲಾ ಝದ್ರಾನ್, ಮೊಹಮ್ಮದ್ ನಬಿ, ಇಕ್ರಮ್ ಅಲಿಖಿಲ್, ಅಜ್ಮತುಲ್ಲಾ ಒಮರ್​ಝೈ, ರಶೀದ್ ಖಾನ್, ಮುಜೀಬ್ ಉರ್ ರಹಮಾನ್, ನೂರ್ ಅಹ್ಮದ್, ಫಝಲ್ಹಕ್ ಫಾರೂಖಿ, ಅಬ್ದುಲ್ ರಹಮಾನ್, ನವೀನ್ ಉಲ್ ಹಕ್.

ಇದನ್ನೂ ಓದಿ: ICC ODI World Cup 2023 Jerseys: 10 ತಂಡಗಳ ಹೊಸ ಜೆರ್ಸಿ ಅನಾವರಣ

ಶ್ರೀಲಂಕಾ ತಂಡ: ದಸುನ್ ಶಾನಕ (ನಾಯಕ), ಕುಸಾಲ್ ಮೆಂಡಿಸ್ (ಉಪನಾಯಕ), ಪಾತುಮ್ ನಿಸ್ಸಾಂಕ, ಕುಸಾಲ್ ಪೆರೆರಾ (ವಿಕೆಟ್ ಕೀಪರ್), ದಿಮುತ್ ಕರುಣಾರತ್ನೆ, ಚರಿತ್ ಅಸಲಂಕಾ, ಧನಂಜಯ ಡಿ ಸಿಲ್ವಾ, ಸದೀರ ಸಮರವಿಕ್ರಮ (ವಿಕೆಟ್ ಕೀಪರ್), ದುಶನ್ ಹೇಮಂತ, ಮಹೀಶ್ ತೀಕ್ಷಣ , ದುನಿತ್ ವೆಲ್ಲಲಾಗೆ, ಕಸುನ್ ರಜಿತ, ದಿಲ್ಶನ್ ಮಧುಶಂಕ, ಮತೀಶ ಪತಿರಾಣ, ಲಹಿರು ಕುಮಾರ.