‘ನಾನು ಶಾಹಿದ್ ಅಫ್ರಿದಿ ಅಲ್ಲ’; ಮತ್ತೆ ಐಪಿಎಲ್ ಆಡುವ ಬಗ್ಗೆ ರೈನಾ ಕೊಟ್ಟ ಉತ್ತರ ಸಖತ್ ವೈರಲ್
Legends League cricket: ಲೆಜೆಂಡ್ಸ್ ಲೀಗ್ ಕ್ರಿಕೆಟ್‌ನ ಪ್ರಸ್ತುತ ಸೀಸನ್ನಲ್ಲಿ, ಸುರೇಶ್ ರೈನಾ ಇಲ್ಲಿಯವರೆಗೆ 4 ಪಂದ್ಯಗಳನ್ನು ಆಡಿದ್ದು, ಅದರಲ್ಲಿ 71 ರನ್ ಬಾರಿಸಿದ್ದಾರೆ.
ಸದ್ಯ ಲೆಜೆಂಡ್ಸ್ ಲೀಗ್‌ನಲ್ಲಿ (Legends League cricket) ಇಂಡಿಯಾ ಮಹಾರಾಜಸ್ ಪರ ಆಡುತ್ತಿರುವ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಸುರೇಶ್ ರೈನಾ (Suresh Raina) ಮತ್ತೆ ಐಪಿಎಲ್ ಆಡುವ ಕುರಿತು ಅಚ್ಚರಿಯ ಹೇಳಿಕೆಯೊಂದನ್ನು ನೀಡಿದ್ದಾರೆ. ಲೆಜೆಂಡ್ಸ್ ಲೀಗ್ ಕ್ರಿಕೆಟ್‌ನಲ್ಲಿ ನಿನ್ನೆ ನಡೆದ ವರ್ಲ್ಡ್ ಜೈಂಟ್ಸ್ (World Giants) ಹಾಗೂ ಇಂಡಿಯಾ ಮಹಾರಾಜಸ್ (India Maharaja’s) ನಡುವಿನ ಪಂದ್ಯ ಮುಗಿದ ಬಳಿಕ ರೈನಾ ಅವರ ಬಳಿ ಮತ್ತೆ ಐಪಿಎಲ್ (IPL) ಆಡುವ ಬಗ್ಗೆ ಪ್ರಶ್ನೆ ಕೇಳಾಯಿತು. ಇದಕ್ಕೆ ಉತ್ತರಿಸಿದ ರೈನಾ ಇಡೀ ಪತ್ರಿಕಾಗೋಷ್ಠಿಯಲ್ಲಿ ನೆರೆದಿದ್ದವರೆಲ್ಲ ನಗೆಗಡಲಲ್ಲಿ ತೇಲುವಂತೆ ಮಾಡಿದರು. ವಾಸ್ತವವಾಗಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ತಮಾಷೆಯಾಗಿಯೇ ಉತ್ತರಿಸಿದ ರೈನಾ, ನಾನು ಶಾಹಿದ್ ಅಫ್ರಿದಿ (Shahid Afridi) ಅಲ್ಲ ಎಂದಿದ್ದಾರೆ.
ನಾನು ಶಾಹಿದ್ ಅಫ್ರಿದಿ ಅಲ್ಲ; ಸುರೇಶ್ ರೈನಾ
ಲೆಜೆಂಡ್ಸ್ ಲೀಗ್‌ನಲ್ಲಿ ವರ್ಲ್ಡ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ರೈನಾ 49 ರನ್‌ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರು. ಆದರೆ ಒಂದೇ ಒಂದು ರನ್ಗಳಿಂದ ಅರ್ಧತಕ ವಂಚಿತರಾದರು. ಪಂದ್ಯದ ಬಳಿಕ, ಮತ್ತೆ ನೀವು ಐಪಿಎಲ್‌ಗೆ ಹಿಂತಿರುಗುತ್ತೀರಾ ಎಂದು ಕೇಳಲಾಯಿತು. ಈ ಬಗ್ಗೆ ತಮಾಷೆಯಾಗಿ ಉತ್ತರಿಸಿದ ರೈನಾ, “ನಾನು ಶಾಹಿದ್ ಅಫ್ರಿದಿ ಅಲ್ಲ, ಅವರು ನಿವೃತ್ತಿ ಘೋಷಿಸಿದ ಬಳಿಕ ಮತ್ತೆ ಅಂತಾರಾಷ್ಟ್ರೀಯ ತಂಡಕ್ಕೆ ಎಂಟ್ರಿಕೊಡುತ್ತಾರೆ. ಆದರೆ ನಾನು ಈಗಾಗಲೇ ನಿವೃತ್ತಿ ಘೋಷಿಸಿದ್ದೇನೆ ಎಂದು ಸುರೇಶ್ ರೈನಾ ಹೇಳಿದ್ದಾರೆ. ಇದೀಗ ಶಾಹಿದ್ ಅಫ್ರಿದಿ ವಿರುದ್ಧ ವ್ಯಂಗ್ಯವಾಡಿರುವ ಸುರೇಶ್ ರೈನಾ ಅವರ ಹೇಳಿಕೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
IND vs AUS: ಸಚಿನ್ ದಾಖಲೆ ಸರಿಗಟ್ಟುವ ತವಕದಲ್ಲಿ ಕಿಂಗ್ ಕೊಹ್ಲಿ; ಏಕದಿನದಲ್ಲೂ ಬರುತ್ತಾ ಶತಕ?
‘Suresh Raina Hu, Shahid Afridi Nahin’
Hilarious Reply From Mr. IPL ?@ImRaina #legendsleaguecricket #LLC2023 pic.twitter.com/GpV9uEa0wx
— Vaibhav Bhola ?? (@VibhuBhola) March 15, 2023
3 ಸಿಕ್ಸರ್, 2 ಬೌಂಡರಿ
ವರ್ಲ್ಡ್ ಜೈಂಟ್ಸ್ ವಿರುದ್ಧ ಉತ್ತಮ ಬ್ಯಾಟಿಂಗ್ ಮಾಡಿದ ರೈನಾ ಕೇವಲ 1 ರನ್‌ನಿಂದ ಅರ್ಧಶತಕ ವಂಚಿತರಾದರು. ತಮ್ಮ ಇನ್ನಿಂಗ್ಸ್ನಲ್ಲಿ ಕೇವಲ 41 ಎಸೆತಗಳನ್ನು ಎದುರಿಸಿದ ರೈನಾ, 3 ಸಿಕ್ಸರ್ ಮತ್ತು 2 ಬೌಂಡರಿ ಒಳಗೊಂಡಂತೆ 49 ರನ್ ಗಳಿಸಿದರು. ಆದರೂ ರೈನಾ ಅವರ ಇನ್ನಿಂಗ್ಸ್ ತಂಡಕ್ಕೆ ಗೆಲುವು ತಂದುಕೊಡಲು ಸಾಧ್ಯವಾಗಲಿಲ್ಲ.
4 ಪಂದ್ಯಗಳಲ್ಲಿ 71 ರನ್
ಲೆಜೆಂಡ್ಸ್ ಲೀಗ್ ಕ್ರಿಕೆಟ್‌ನ ಪ್ರಸ್ತುತ ಸೀಸನ್ನಲ್ಲಿ, ಸುರೇಶ್ ರೈನಾ ಇಲ್ಲಿಯವರೆಗೆ 4 ಪಂದ್ಯಗಳನ್ನು ಆಡಿದ್ದು, ಅದರಲ್ಲಿ 71 ರನ್ ಬಾರಿಸಿದ್ದಾರೆ. ವರ್ಲ್ಡ್ ಜೈಂಟ್ಸ್ ವಿರುದ್ಧ 49 ರನ್ ಗಳಿಸಿದ್ದು ರೈನಾ ಅವರ ಅತಿ ದೊಡ್ಡ ಸ್ಕೋರ್ ಆಗಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:07 pm, Thu, 16 March 23